Sunday, November 08, 2015

ವಲ್ಲಿ ಕ್ವಾಡ್ರಸ್ ಎರಡು ಕವಿತೆಗಳು




1
ಇಲಿ ಮತ್ತು ಕಲೆ



ನಿನ್ನೆ ಮುಂಜಾನೆ
ಆಫೀಸಿಗೆ ಹೋಗೋ ಅವಸರಕ್ಕೆ
ಟಯರಲ್ಲಿ; ಅಡಿಗೆ ಬಿದ್ದು ಚಚ್ಚಿಕೊಂಡ
ರಸ್ತೆಯಲಿ ಸತ್ತಿದ್ದ
ಇಲಿಯ ನೆತ್ತರು
ದಪ್ಪಗೊಂಡಿತ್ತು

ಇಂದು ರಸ್ತೆಯ ಅದೇ ಜಾಗದಲಿ
ಸತ್ತ ಇಲಿ ಕಾಣ್ಲಿಲ್ಲ
ಬೆಕ್ಕು ತಿಂದಿರಬೇಕು
ಆದ್ರೆ ಬೆಕ್ಕೆಲ್ಲಿ ಸತ್ತಿರ್ಬೋದು
ನಾಯಿ ತಿಂದಿರ್ಬೋದು
ಮುಂದಿನ ಗೇರು ಹಾಕಿದೆ

ನಾಯಿಯನು ಹುಲಿ
ಹುಲಿಯನು ಯಾರು ತಿಂದಿರ್ಬೋದು
ಯಾರಿಗೆ ಯಾರು ಕೊಲ್ಬೋದೆಂಬುದು
ಸಂಕಪಾಶಣ ಇಡೋಮುಂಚೆ
ಮನುಶ್ಯನೆಂಬವ್ನು ಆಲೋಚಿಸಿದ್ನಾ?
ಜೀವ ಹೆಣ ಸತ್ತ ಹೆಣಗಳನ್ನು ಅರ್ಥೈಸಬಲ್ಲವೇ?

ರಸ್ತೆಯ ಸಿಗ್ನಲಲ್ಲಿ ನಿಂತಂತೆ
ಹುಡುಗನೊಬ್ಬ ಒಂದು ಕೈಯಲಿ ದಿನಪತ್ರಿಕೆ
ಇನ್ನೊಂದು ಕೈಯಲಿ ಕೊಳಕು ಬಟ್ಟೆಹಿಡಿದು
ಒಂದೋ ಮಾರ್ತಾನೆ ಇಲ್ವಾ ಗಾಡಿ ಒರೆಸ್ತಾನೆ
ನಾನು ಮೆತ್ತಗೆ ಹೇಳ್ತೇನೆ;
’ಕಲೆಗಳನ್ನು ಒರೆಸಿ ತೆಗೆಯಬಲ್ಲೆಯಾ?’
***
[ಕೊಂಕಣಿ ಮೂಲ: - ವಲ್ಲಿ ಕ್ವಾಡ್ರಸ್, ಅಜೆಕಾರ್]

2.

ಕೊಲೆ

ಕೊಂದವ್ರು ನಾವಲ್ಲ
ಅಯ್ಯೋ ದೇವ್ರೆ
ನಾವ್ ಕೊಲೆಗಡುಕ್ರಾ
ನೀವ್ ಸಿಸಿಟಿವಿ ನೋಡಿ
ನಾವ್ ಚೂರಿ ಕೈಯಲ್ಲಿ ಹಿಡ್‍ದದ್ದು ಮಾತ್ರ
ಅದೂ ಕೈಯಲ್ಲಿ
ಇರಿದಿದ್ದು ಚೂರಿ
ನಮಗ್ಯಾಕಪ್ಪಾ ಬೇಕು ಕೊಲೆ
ಯಾರೊ ಅಂದವ್ರು
ಆ ಚೂರಿಗೂ ಬಾಯಾರಿಕೆಯಾಯ್ತು
ಹೋಗಿ ಅವ್ರ ಬೆನ್ನಿನ ರಗ್ತ ಕುಡ್ಸಿ ಅಂತಾ
ಯೋಚ್ಸಿದ್ದೂ ನಾವಲ್ಲ
ಅಬ್ಬಬ್ಬಾ ದೇವ್ರೆ
ಈ ಊರಲ್ಲಿ ಚೂರಿಗೂ ಶಿಕ್ಶೆ ಇದ್ಯಾ?
ಕೊಂಡೋಗಿ ಇದನ್ನಾ
ಮೊದ್ಲು ಒಂದ್ ಈರುಳ್ಳಿ ಕೊಯ್ಲಿಯಾ?
 ***

 [ಕೊಂಕಣಿ ಮೂಲ: - ವಲ್ಲಿ ಕ್ವಾಡ್ರಸ್, ಅಜೆಕಾರ್]


ವಲ್ಲಿ ಕ್ವಾಡ್ರಸ್ : 27 ಪುಸ್ತಕಗಳನ್ನು ಬರೆದಿರುವ ಪ್ರಕಟಿಸಿರುವ ಕೊಂಕಣಿ ಲೇಖಕ. ಅದರಲ್ಲಿ ಮೂರು ಕವನ ಸಂಕಲನಗಳು ,  ಮೂರು ಕಥಾ ಸಂಕಲನಗಳು ಸೇರಿವೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಅವರಿಗೆ ಸಂದಿದೆ. ತಮ್ಮ ಬರಹಗಳನ್ನು ಕೊಂಕಣಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.







[ಕೊಂಕಣಿ ಮೂಲ: - ವಲ್ಲಿ ಕ್ವಾಡ್ರಸ್, ಅಜೆಕಾರ್]

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...