Monday, November 23, 2015

ಧಾರವಾಡದಲ್ಲಿ 29 ರಂದು 'ಯುವ ಕಾವ್ಯ : ಓದು - ಮಾತು' -2


ಸಮಾನಾಸಕ್ತ ಸಾಹಿತ್ಯಾಭಿರುಚಿಯ ಗೆಳೆಯರು ಅನೌಪಚಾರಿಕ ಕೂಡುತ್ತಿರುವ ವಿಚಾರ ನಿಮ್ಮ ಗಮನಕ್ಕಿರುವ ಸಂಗತಿಯೇ ಆಗಿದೆ. ತಿಂಗಳಿಗೆ ಒಂದೆರಡು ಬಾರಿಯಾದರೂ ಆಪ್ತ ಮನಸಿನವರೆಲ್ಲ ಹಿರಿಕಿರಿಯರೆನ್ನದೆ ಒಂದೆಡೆ ಕಲೆಯಬೇಕು ಎಂಬುದೇ ಈ ಕೂಡುವಿಕೆಯ ಹಿಂದಿರುವ ತುಡಿತ. ನಮ್ಮ ವಿಚಾರ ಮತ್ತು ಬರೆಹ ಹಂಚಿಕೊಳ್ಳಲು ಈ ಕೂಡುವಿಕೆಯೇ ವೇದಿಕೆಯಾಗಬೇಕೆಂಬ ಮಾತನ್ನು ಮುಂದಿಟ್ಟುಕೊಂಡು ಧಾರವಾಡದಲ್ಲಿ ಗೆಳೆಯರೆಲ್ಲ ನವೆಂಬರ್ 14 ರಂದು ಸೇರಿದಾಗ ಯುವ ಕವಿಗಳ ಕಾವ್ಯದ ಓದು, ಕಾವ್ಯದ ಕುರಿತಾಗಿ ಸುರುವಾದ ಮಾತು ಕೂಡಿದವರಲ್ಲಿ ವಿಭಿನ್ನ ಸಂವೇದನೆಯ ಹುಟ್ಟಿಗೆ ಕಾರಣವಾಗಿತ್ತು. ಯುವ ಗೆಳೆಯರು ಈ ಸೇರುವಿಕೆಯನ್ನು ತುಂಬ ಇಷ್ಟಪಟ್ಟರು. 

ಈ ಬಾರಿ ಮತ್ತೆ ಇದೇ ರವಿವಾರ 29 ರಂದು ಸಾಯಂಕಾಲ 5.00 ಗಂಟೆಗೆ ಧಾರವಾಡದ ಆಲೂರ ವೆಂಕಟರಾಯ ಭವನದಲ್ಲಿ ಸೇರುವುದೆಂದು ನಿರ್ಧರಿಸಲಾಗಿದೆ. ಕಳೆದ ಬಾರಿ ತಪ್ಪಿಸಿಕೊಂಡವರು ಈ ಬಾರಿ ಜೊತೆಯಾಗುತ್ತೀರಿ ತಾನೆ?
ಬನ್ನಿ

ಈ ಸಲ 'ಯುವ ಕಾವ್ಯ : ಓದು- ಮಾತು' ನಲ್ಲಿ ಕವಿಯೂ ನಾಟಕ ನಿರ್ದೇಶಕನೂ ಆಗಿರುವ ಮಹಾದೇವ ಹಡಪದ, ಬಿ. ಶ್ರೀನಿವಾಸ, ಗವಿಸಿದ್ದ ಹೊಸಮನಿ ಇವರು ತಮಗಿಷ್ಟವಾದ ತಮ್ಮ ಸಮಕಾಲೀನ ನಾಲ್ಕು ಜನ ಯುವಕವಿಗಳ ನಾಲ್ಕು ಕವಿತೆ ವಾಚನ ಮಾಡಿ ತಮ್ಮದೊಂದು ಕವಿತೆ ಓದುವರು. ಆಮೇಲೆ ಕಾವ್ಯದ ಕುರಿತು ಮಾತು.

'ಯುವ ಕಾವ್ಯ : ಓದು - ಮಾತು' ಇದಕ್ಕೆ ನೀವೂ ಸಾಕ್ಷಿಯಾಗಿ. ಬನ್ನಿ ಮುಖತಃ ಮಾತಿಗೆ ಸಿಕ್ಕೋಣ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...