Sunday, November 01, 2015

ಫೇಸ್ ಬುಕ್ ನ ಬ್ರಾಹ್ಮಣರ ದ್ವಿಮುಖ ನೀತಿ ಮತ್ತು ನಾನು

ಶೀಲಾ ಭಟ್

ಫೇಸ್ ಬುಕ್ : ಖಡಕ್ ಮಾತು


ಇನ್ನು ಇವತ್ತು ಬೆಳಿಗ್ಗೆ ತೆಗೆದುಕೊಂಡ ತೀರ್ಮಾನ. ಕಳೆದ ವರ್ಷ ಪ್ರೇಮಲತಾರವರ ಪ್ರಕರಣದ ಬಗ್ಗೆ ಬಹಳ ಅಗ್ರೆಸಿವ್ ಆಗಿ ಪೋಸ್ಟ್ ಹಾಕುವುದರೊಂದಿಗೆ ನನ್ನ ಪ್ರತಿಭಟನೆ ಆರಂಭವಾಗಿತ್ತು. ನಾನು ಮೊದಲ ಕೆಲವು ದಿನಗಳಲ್ಲೇ ಹೇಳಿದ್ದೆ ನ್ಯಾಯಾಂಗದಿಂದ ನಿರೀಕ್ಷೆಗಳಿಲ್ಲವೆಂದು. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಮ್ಮ ಕಡೆಯ ಕೆಲವರಿಗೆ ಮಾರುದ್ದ ಜಾಗಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಿ ೨೦- ೫೦ ವರ್ಷ ಕಾದಾಡುವ ಚಟವಿದೆ. ಅಮಾಯಕರನ್ನು ನ್ಯಾಯಾಂಗದಲ್ಲಿ ಹೇಗೆ ಬಲಿ ಹಾಕಬಹುದು ಎಂಬುದನ್ನು ವರ್ಷಾನುಗಟ್ಟಲೆ ನ್ಯಾಯಾಲಯದಲ್ಲಿ ಕುಳಿತು ಅಭ್ಯಾಸ ಮಾಡಿ ಬಲಿ ಹಾಕಿರುವ ನಿದರ್ಶನಗಳಿವೆ.

ಇನ್ನು ಇದೊಂದು ಪ್ರಭಾವಿ ಮಠ ಹಾಗೂ ಅದರಲ್ಲೇ ಪಳಗಿದ ರಕ್ತ. ನನ್ನ ನಿರೀಕ್ಷೆಗಳು ೫ ಜನ ನ್ಯಾಯಾಧೀಶರು, ಈಗ ಒಬ್ಬ ಅಡ್ವೊಕೇಟ್ ಜನರಲ್ ಗಳ ರಾಜೀನಾಮೆಗಳಲ್ಲಿ ನಿಜವಾದರೂ ಬಹುಜನ, ಬಹುರೀತಿಯ ಒತ್ತಡ ಹೇರಿದ್ದರ ಪರಿಣಾಮವಷ್ಟೆ ಇತ್ತೀಚಿನ ಚಾರ್ಜ್ ಶೀಟ್. ಇನ್ನೂ ಬೇಸರವಾಗುವ ಸಂಗತಿ ಯಾರ ಮನೆ ಮಗಳು ಏನಾದರೆ ನಂಗೇನು? ಹೌದು, ಈ ರೀತಿ ನಡೀತಿತ್ತು ಎಂದು ಹೇಳಿದವರಿಗೆ ತಮ್ಮ ಮನೆದೇ ಮಾನ ತೆಗೆಯುತ್ತಾ ಇದ್ದಾನಲ್ಲ ಎಂಬ ಮೂದಲಿಕೆ, ಬಹಿಷ್ಕಾರ (೨೨ನೆಯ ಶತಮಾನದಲ್ಲೂ) ಗ್ಯಾರಂಟಿಯಾಗಿದೆ. ಈ ಬಹಿಷ್ಕಾರಕ್ಕೆ ಹೆದರಿ ಸುಮ್ಮನಿರುವವರು, ವಹಿಸಿಕೊಂಡುಬರುವವರು ಒಂದೆಡೆ. ನಾವು ಬ್ರಾಹ್ಮಣರು ಎಂಬ ಕೊಂಬು ಉಳಿದ ಎಲ್ಲ ದೌರ್ಜನ್ಯಗಳಿಗೆ ಬಳಸುತ್ತಲೇ, ಕ್ರಿಶ್ಚಿಯನ್ ಸಂಸ್ಥೆಯಿಂದ ಹಣ ಪಡೆದು ಸೇವಾಕಾರ್ಯ ಮಾಡುತ್ತೇನೆನ್ನುವುದು, ಮತ್ತೆ ಅದೇ ಕ್ರಿಶ್ಚಿಯನ್ ಸಮುದಾಯ ಹಿಂದೂ ಧರ್ಮ ಒಡೆಯಲು ಮಾಡುತ್ತಿರುವ ಸಂಚು ಎಂದು ಬೊಬ್ಬೆ ಹೊಡೆಯುವುದು, ತಾವು ಮಠಕ್ಕೆ ಕೊಟ್ಟ ದುಡ್ಡು ಏನಾಯಿತು ಎಂದು ಕೇಳುವುದಿರಲಿ, ತಾವೇ ನಂಬಿದ ಬ್ರಾಹ್ಮಣ್ಯದ ಗರಿಮೆ ಪಕ್ಕಕ್ಕೆತ್ತಿಟ್ಟು ಕೈ ಮುಟ್ಟಿ ಚಾ ಕೊಡದಿದ್ದರೂ ಬೆಂಗಳೂರಿಗೆ ಬಂದು ಒಟ್ಟಿಗೆ ಕುಳಿತು ಫೋಟೊ ತೆಗೆಸಿಕೊಳ್ಳುತ್ತಿರುವ ಅವಕಾಶವಾದ ಬಹಳ ನೋವುಂಟು ಮಾಡಿದೆ. 

ಇದೇ ಸಮಯದಲ್ಲಿ ಇದಕ್ಕಾಗಿ ಹುಟ್ಟಿಕೊಂಡ ಬ್ರಾಹ್ಮಣರ ವೇದಿಕೆಗಳು, ಪೇಜುಗಳು, ಗುಂಪುಗಳು ನನ್ನನ್ನು ಒಂದು ಮಾತು ಸಹ ಕೇಳದೆ ಸೇರಿಸಿಕೊಂಡಿವೆ. ಅದು ನನ್ನ ಗೌರವವೆಂದು ಇಲ್ಲಿಯವರೆಗೆ ಭಾವಿಸಿದ್ದೆ. ಆದ್ರೆ ಅದರಲ್ಲಿ ಸೋ ಕಾಲ್ಡ್ ಬ್ರಾಹ್ಮಣರು ಬಳಸುವ ಶಬ್ದಗಳು, ವಾಕ್ಯಗಳು, ಅವರ ಪೂರ್ವಾಗ್ರಹಗಳು ಸಹ ಬೇಸರ ತಂದಿವೆ. ಜೊತೆಗೆ ಧರ್ಮ, ದೇವರು, ಸನ್ಯಾಸ, ಅಧ್ಯಾತ್ಮ ಇವೆಲ್ಲ ಮೈಲಿಗೆಯಾದ, ದಾರಿತಪ್ಪಿಹೋದ ಆತಂಕದಿಂದಲೂ ನಾನು ಈ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದೆ. ಈಗ ನನ್ನ ಅಡ್ರಿನಲ್ ಗ್ರಂಥಿ ಹಾಗೂ ಅಲ್ಲಿನ ಮಣಿಪೂರ ಚಕ್ರ ಸುತ್ತಲಿನ ಋಣಾತ್ಮಕ ತರಂಗಗಳ ಪ್ರಭಾವಕ್ಕೆ ಒಳಗಾಗುತ್ತಿದೆ. ಇನ್ನು ಸಾಕು. ಬ್ರಾಹ್ಮಣರ ಬಹಿಷ್ಕಾರ, ಸಂಬಂಧಿಕರ ತಿರಸ್ಕಾರ ಯಾವುದಕ್ಕೂ ನನ್ನ ಜೀವನದಲ್ಲಿ ಬೆಲೆ ಇಲ್ಲ. 

ಇನ್ನು ಮೇಲೆ ಈ ಬ್ರಾಹ್ಮಣರ ದ್ವಿಮುಖ ನೀತಿಗೆ ಟಾಟಾ ಹೇಳಿ, ನನ್ನ ಧಾರ್ಮಿಕ, ಆಧ್ಯಾತ್ಮಿಕ ಬದುಕಿಗಷ್ಟೆ ಸೀಮಿತವಾಗುತ್ತಿದ್ದೇನೆ. ಆದ್ದರಿಂದ ಸಂಬಂಧ ಪಟ್ಟ ಎಲ್ಲ ಬ್ರಾಹ್ಮಣರ, ಹಿಂದೂಗಳ, ಜಾಗೃತಿ, ಸಂರಕ್ಷಣಾ ವೇದಿಕೆ, ಪೇಜು ಹಾಗೂ ಗುಂಪುಗಳಿಂದ ನೀವಾಗಿಯೇ ಮುಕ್ತಗೊಳಿಸಬೇಕೆಂದು ಕೇಳಿಕೊಳ್ಳುತ್ತೇನೆ. ಸಾಧ್ಯವಾದಷ್ಟು ಬೇಗ ನೊಂದ ಮಹಿಳೆಯರಿಗೆ ನ್ಯಾಯ ಸಿಗಲಿ, ಬ್ರಾಹ್ಮಣರ ಮರ್ಯಾದೆಯನ್ನು ಪೀಠಾಧಿಪತಿಯೇ ಪೊಲೀಸ್, ಕೋರ್ಟ್ ಗೆ ಹೋಗಿ ತೆಗೆದಿದ್ದಾಗಿದೆ. ಕೊನೆ ಪಕ್ಷ ಭಾರತೀಯ ನ್ಯಾಯಾಂಗ ಮತ್ತು ಅದರ ಅಂಗಗಳಾದರೂ ತಮ್ಮ ಮಾನ ಉಳಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ಅದರೊಂದಿಗೆ ಈ ಪ್ರಕರಣದ ಕುರಿತು ಅಪ್ಪಿ ತಪ್ಪಿಯೂ ಯೋಚನೆ ಮಾಡದ, ಪ್ರತಿಕ್ರಿಯೆ ನೀಡದ ತೀರ್ಮಾನ ಘೋಷಿಸಿ ಮಂಗಳ ಹಾಡುತ್ತಿದ್ದೇನೆ.

4 comments:

 1. vishwa manava naguvatta..nimma hejjeyonde alla..ellara hejjeyagali..shubhavagali

  ReplyDelete
 2. ನಿಮ್ಮ ತೀರ್ಮಾನ ಅಷ್ಟು ಸರಿ ಇಲ್ಲ ಎಂಬುದು ನನ್ನ ನಂಬಿಕೆ. ಕುವೆಂಪು ಹೇಳುತ್ತಾರೆ ನಾವು ವ್ಯವಸ್ಥೆಯಿಂದ ದೂರವಾಗಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ವ್ಯವಸ್ಥೆ ಒಳಗಿದ್ದರೆ ಮಾತ್ರ ನಿಜವಾದ ಬದಲಾವಣೆ ಸಾಧ್ಯ ಅಂತ. ನೀವು ಕೂಡ ವ್ಯವಸ್ಥೆಯ ಭಾಗವಾಗಿಯೇ ನಿಮ್ಮ ನಿರ್ಧಾರ ದಾಖಲಿಸಿದ್ದೀರಿ. ಅದೇ ನಿಜವಾದ ಬದಲಾವಣೆ....

  ReplyDelete
 3. ಬದುಕು ದಯನೀಯವಾದಾಗ ಮಾತ್ರ ಭಟ್ಟಂಗಿಯಾಗಬೇಕಾಗುತ್ತದೆ. ಅದರವಶ್ಯಕತೆಯಿಲ್ಲದಿರುವಾಗ ಬದುಕನ್ನು ಬರೆಯಲು ಹುಡುಕಬೇಕಾದ್ದಿಲ್ಲ. ಸರಿಯಾದ ನಿರ್ಧಾರ. ಒಳ್ಳೆಯದಾಗಲಿ.

  ReplyDelete
 4. ಎಲ್ಲ ಜಾತಿಯಲ್ಲೂ ಇರುವ ಕೊಳಕರಂತೆ ಬ್ರಾಹ್ಮಣರಲ್ಲೂ ಇದ್ದಾರೆ, ಇರುತ್ತಾರೆ. ಆದರೆ ಅಷ್ಟೇ ಒಳ್ಳೆಯವರೂ . ಸಾತ್ವಿಕರೂ ಇದ್ದಾರೆ. ಎರಡನ್ನೂ ಗಮನಿಸಿ., ಎಷ್ಟುಭಾಗಹೊರಗೆ ಮತ್ತು ಎಷ್ಟುಭಾಗ ಒಳಗೆ ನಿಲ್ಲಬೇಕೆಂಬ ನಿಲುವನ್ನು ಖಚಿತಗೊಳಿಸಿಕೊಳ್ಳಿ. ಒಳ್ಳೆಯದಾಗಲಿ.

  ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...