Monday, November 23, 2015

ಧಾರ್ಮಿಕ ಅಸಹಿಷ್ಣುತೆಗೆ ಪ್ರತಿಭಟನೆ: ಡಾ.ಆರ್.ಕೆ. ಮಣಿಪಾಲರಿಂದ ಅಕಾಡಮಿ ಪ್ರಶಸ್ತಿ ವಾಪಸ್

 

 

ಧಾರ್ಮಿಕ ಅಸಹಿಷ್ಣುತೆಗೆ ಪ್ರತಿಭಟನೆ: ಡಾ.ಆರ್.ಕೆ. ಮಣಿಪಾಲರಿಂದ ಅಕಾಡಮಿ ಪ್ರಶಸ್ತಿ ವಾಪಸ್

ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣುತೆಯನ್ನು ಪ್ರತಿಭಟಿಸಿ ಉಡುಪಿಯ ಹಿರಿಯ ಲೇಖಕ, ಸಂಶೋಧಕ, ಕವಿ ಡಾ.ಆರ್.ಕೆ. ಮಣಿಪಾಲ ತನಗೆ ದೊರೆತ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.


ಆರ್ಕೆ ಮಣಿಪಾಲ ಎಂದೇ ಖ್ಯಾತರಾದ ಇವರ ‘ವಿಮರ್ಶೆಯ ಸವಾಲು’ ಕೃತಿಗೆ ಅಕಾಡಮಿಯು 2008ರಲ್ಲಿ ಗ್ರಂಥ ಪ್ರಶಸ್ತಿ ಹಾಗೂ ಐದು ಸಾವಿರ ರೂ. ನಗದು ಬಹುಮಾನವನ್ನು ಪ್ರದಾನ ಮಾಡಿತ್ತು. ಈ ಪ್ರಶಸ್ತಿಯನ್ನು ಅವರು ಅ.30ರಂದು ಅಕಾಡಮಿಗೆ ವಾಪಸು ಮಾಡಿದ್ದು, ಜೊತೆಗೆ ಐದು ಸಾವಿರ ರೂ.ಗಳ ಚೆಕ್ ಹಿಂದಿರುಗಿಸಿದ್ದಾರೆ. 

 

ದೇಶದಲ್ಲಿ ಧಾರ್ಮಿಕ ಸಹಿಷ್ಣುತೆ, ಅಭಿವ್ಯಕ್ತಿ ಸ್ವಾತಂತ್ರ, ಆಹಾರ ಸ್ವಾತಂತ್ರಗಳಿಗೆ ತೀವ್ರ ಧಕ್ಕೆಯಾಗಿದ್ದು, ಸ್ವಾಯತ್ತ ಸಂಸ್ಥೆಯಾಗಿರುವ ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡಮಿಗಳು ಇದರ ವಿರುದ್ಧ ಈವರೆಗೆ ಖಂಡನಾ ಹೇಳಿಕೆ ನೀಡಿಲ್ಲ. ಇದರಿಂದ ರೋಸಿ ಹೋಗಿ ನಾನು ಪ್ರಶಸ್ತಿಯನ್ನು ವಾಪಸು ಮಾಡಿದ್ದೇನೆ ಎಂದು ಆರ್.ಕೆ.ಮಣಿಪಾಲ ಪತ್ರಿಕೆಗೆ ತಿಳಿಸಿದ್ದಾರೆ. 

 

ವೈಜ್ಞಾನಿಕ ವಿಮರ್ಶಕ, ಸ್ಥಳನಾಮ ವಿಜ್ಞಾನಿಯಾಗಿರುವ ಆರ್.ಕೆ.ಮಣಿಪಾಲ ಈವರೆಗೆ ಒಟ್ಟು 30ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಇವರು ಮಂಡಿಸಿದ್ದ ‘ತುಳುನಾಡಿನ ಸ್ಥಳನಾಮಗಳು’ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ. ಇವರು ಮಣಿಪಾಲ ಪದವಿ ಪೂರ್ವ ಕಾಲೇಜಿನಲ್ಲಿ 35ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...