Tuesday, November 10, 2015

ಎರಡು ಮಣಿಪುರಿ ಕವಿತೆ




ಮೂಲ : ಅರಂಬಮ್ ಓಂಗ್ಬಿ ಮೆಮ್‌ಚೌಬಿ
ಇಂಗ್ಲಿಷ್‌ಗೆ : ಜೊಯ್‌ಚಂದ್ರ ಸಿಂಗ್

೧ 
ಒಂದು ಪತಂಗ
 
ಅಕಸ್ಮಾತ್
ಬೆಂಕಿಯ ಬಳಿ ತೆರಳಿ
ಸತ್ತ ಸಾವಿರ ಪತಂಗಗಳಲ್ಲಿ
ಒಂದೇ ಒಂದು ಮತ್ತೆ ಜೀವ ಪಡೆದರೆ
ಸತ್ಯ ಮತ್ತು ಸೌಂದರ್ಯದ ಹಿಂಬಾಲಕರಾದ
ಎಷ್ಟೋ ಪತಂಗಗಳ
ಜೀವ ಉಳಿಸಬಹುದಾಗಿತ್ತು..
***

೨ 
ಒಂಟಿಯಾಗಿರಲು ಬಿಡಿ
 
ದಯವಿಟ್ಟು ನನಗೆ
ಮನುಷ್ಯರ ಭಾಷೆ ಕಲಿಸದಿರಿ
ನನ್ನ ದನಿ ಭ್ರಷ್ಟಗೊಳ್ಳಬಹುದು
ನಿಮ್ಮ ಹೊನ್ನ ದಿರಿಸ
ನನಗೆ ತೋರಿಸದಿರಿ
ನನ್ನ ಬಣ್ಣ ಕಳಂಕಗೊಳ್ಳಬಹುದು
ನಿಮ್ಮ ಬಳಿ ನನ್ನ ಸೆಳೆಯದಿರಿ
ನನ್ನ ದೇಹ ಈ ಬಣ್ಣದಲ್ಲೇ ಇರಲಿ
ಏಕಾಂಗಿಯಾಗಿರಲು ಬಿಡಿ ನನ್ನನ್ನು
ಕುಳ್ಳನ ಹಾಗೆ..
***

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...