Thursday, November 12, 2015

ಹನಿಗಳು
1
ಚಿತ್ರ ತೋರಿಸುವ 
ಡಬ್ಬಿಗೂ
ಸುಳ್ಳಿನ ಗುಂಗು
***

 
2
ಸುಳ್ಳನ್ನು ಬಿತ್ತಿ
ಸುಳ್ಳನ್ನು ಬೆಳೆದರು
ಪರಿಣಾಮ
ಸುಳ್ಳು ದಿನೇ ದಿನೇ
ಸುಳ್ಳಿನ ಯಜಮಾನನ್ನು
ನುಂಗಿತು
***


3
ಕ್ಯಾಮರಾ, ಮೈಕ್
ಗಳಿಗೂ
ಹಸಿವು ಇದೆ ಎಂದು
ಖಾತ್ರಿಯಾಯಿತು
***


4
ಛೋಟಾ ಪೆಟ್ಟಿಗೆ
ದನದ ಮಾಂಸ
ತಿಂದಾಯಿತು
ಈಗ
ಹುಲಿಯನ್ನು ತಿನ್ನುತ್ತಿದೆ
***


5
ಛೋಟಾ ಪೆಟ್ಟಿಗೆ
ಜನರಿಗೆ ವ್ಯಾಕರಣ ಕಲಿಸಿತು
ನಪುಂಸಕ, ಚಮಚಾ,
ಸರ್ಕಾರಿ ಸಾಹಿತಿ
ಗಡಿಪಾರು.....
ಶಬ್ಧಗಳನ್ನು
ವ್ಯಾಪಾರಮಾಡಿತು


***

ನಾಗರಾಜ್ ಹರಪನಹಳ್ಳಿ ಕವಿಯೂ ಪತ್ರಕರ್ತರೂ ಆಗಿರುವ ನಾಗರಾಜ್ ಹರಪನಹಳ್ಳಿ ಹುಟ್ಟಿದ್ದು ಹರಪನಹಳ್ಳಿ. ಬೆಳೆದದ್ದು ಮೈದೂರು,  ಚಿಗಟೇರಿ, ಕೊಟ್ಟೂರು, ಧಾರವಾಡಗಳಲ್ಲಿ. (ಅವರ ಅಪ್ಪನ ಊರು   ಭರಮಣ್ಣ ನಾಯಕನ ದುರ್ಗಾ(ಚಿತ್ರದುರ್ಗ), ಅವ್ವನ ಊರು ಚಾಮರಾಜ ನಗರ ಜಿಲ್ಲೆಯ ಮಂಗಲ ಗ್ರಾಮ.)  ಬದುಕು ಕಂಡುಕೊಂಡಿದ್ದು ಕಾರವಾರದಲ್ಲಿ. ಧಾರವಾಡದ ಕರ್ನಾಟಕ ಕಾಲೇಜನಲ್ಲಿ ಪದವಿ , ಕ.ವಿ.ವಿ.ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಓದು. ಕಳೆದ 18 ವರ್ಷಗಳಿಂದ ನಾಡಿನ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಜನವಾಹಿನಿ, ಕನ್ನಡ ಜನಾಂತರಂಗ, ಈಟಿವಿ ಕನ್ನಡ ಹೀಗೆ ಪಟ್ಟಿ ಬೆಳೆಯುತ್ತದೆ. ಸದ್ಯ ಉದಯವಾಣಿ, ಲೋಕದರ್ಶನ ಪತ್ರಿಕೆಗಳ ಹಾಗೂ ಈನಾಡು ಇಂಡಿಯಾ ವೆಬ್‍ಸೈಟ್‍  ವರದಿಗಾರ. ಬಂಡಾಯ ಮತ್ತು ಪ್ರೀತಿ ಅವರ ಕವಿತೆಗಳ ಸ್ಥಾಯಿ ಭಾವ
 
nagraj242@gmail.com
9448408633


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...