Tuesday, November 10, 2015

ಕೋಟೆಗೆ ನರಬಲಿ ನೀಡಿದ ಕೆಂಪೇಗೌಡ


ಫೇಸ್ ಬುಕ್ : ಖಡಕ್ ಮಾತು




ಡಾ. ವಡ್ಡಗೆರೆ ನಾಗರಾಜಯ್ಯ







"ಗೌಡ" ಎಂಬುದು ಗಾಂವ್+ಮುಖಂಡ ಅಥವಾ ಗ್ರಾಮ+ ಮುಖಂಡ ಎಂಬ ಶಬ್ಧ ಸಂಯೋಜನೆಯ ವ್ಯುತ್ಪತ್ತಿ. ಗೌಡರು ಲಾಗಾಯ್ತಿನಿಂದಲೂ ಭೂಮಾಲೀಕರು. ದಲಿತರನ್ನು ತಮ್ಮ ಹೊಲಗದ್ದೆಗಳಲ್ಲಿ ಜೀತದಾಳುಗಳನ್ನಾಗಿ ನೇಮಿಸಿಕೊಂಡು, ದಲಿತರ ಹೆಣ್ಣುಮಕ್ಕಳ ಕಣ್ಣೀರು ಈ ಗೌಡರ ಎದೆಯ ಮೇಲೆ ಹರಿದಾಗ ಮಾತ್ರ ಅವರಿಗೆ ಆನಂದ.

ಗ್ರಾಮೀಣ ಪ್ರದೇಶಗಳಲ್ಲಿ ಗೌಡರು ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯ ಕಾವಲುಗಾರರು. ಬೇರೆ ಕೆಲವು ಮೇಲ್ ಜಾತಿಗಳೂ ಇದಕ್ಕೆ ಭಿನ್ನವಲ್ಲ. ಇಂದು "ಗೌಡ" ಎಂಬ ಶಬ್ಧ ಪಾರಂಪರಿಕ ಫ್ಯೂಡಲಿಸಂನ ಹಾಗೂ ಗೌಡಾಳಿಕೆಯ ದರ್ಪದ ಸಂಕೇತ. ,

ಮಹಿಳೆಯರ, ಆದಿವಾಸಿಗಳ ಹಾಗೂ ಅಲೆಮಾರಿಗಳ ವಿರುದ್ಧ ಭೂಮಾಲೀಕ ಗೌಡಾಳಿಕೆ ಮತ್ತು ದರ್ಪ-ದೌರ್ಜನ್ಯಗಳು ಇಂದಿಗೂ ಕಮ್ಮಿಯಾಗಿಲ್ಲ. ಪುರು಼ಷಾಧಿಪತ್ಯದ ಊಳಿಗಮಾನ್ಯ ವ್ಯವಸ್ಥೆಯ ಪೋಷಕನಾಗಿದ್ದ ಕೆಂಪೇಗೌಡ ತನ್ನ ಸೊಸೆಯಾದ ಲಕ್ಷ್ಮಮ್ಮನ್ನು ಕೋಟೆಗೆ ನರಬಲಿ ನೀಡಿದ. ಮೂಢನಂಬಿಕೆ, ಅಂಧಶ್ರದ್ಧೆ, ಕಂದಾಚಾರಗಳ ಪಾಲಕನಾದ ಕೆಂಪೇಗೌಡನ ಹೆಸರು ಮಾತ್ರದಿಂದಲೇ ಪುಳಕಗೊಳ್ಳುವ ಗೌಡರು ದಲಿತರ ಮತ್ತು ಮಹಿಳೆಯರ ನೆಲೆಯಿಂದ ಯೋಚಿಸುವಂತಾಗಲಿ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...