Thursday, November 26, 2015

ರೇಣುಕಾ ನಿಡಗುಂದಿ ಕವಿತೆಕಾಗದದ ದೋಣಿಗೂ
ಮಳೆ ನೀರಿಗೂ
ಅಂಟಿಲ್ಲದ ನಂಟು
ಹಾಗೇ ಒಂದು ಚೆಲ್ಲಾಟ
ಇದಕೂ ಒಂದು ಮುದ್ದಾಟ

ಗುರಿ ಸಾಗುವ
ದಡ ಮುಟ್ಟುವ
ಹಂಗಿಲ್ಲದ ದೋಣಿ
ಸುಮ್ಮನೇ ಸಾಗುತ್ತದೆ
ನೀರು ಹೊತ್ತೊಯ್ದತ್ತ..
ಗಾಳಿ ತೇಲಿಸಿದತ್ತ..

ಮುಳುಗಿತೋ
ಇಲ್ಲಾ ತೇಲಿತೋ
ಅದಕಿಲ್ಲ ದೀರ್ಘಾಯುಷ್ಯದ ಚಿಂತೆ
ವಿಷಾದವಿಲ್ಲ
ಹಾಗೇ ವಿನಾಕಾರಣದ.
ನಿಟ್ಟುಸಿರುಗಳಿಗೆ..

ಗಾಳಿ ಬೀಸುತ್ತಿದೆ
ಮಳೆ ಹೊಯ್ಯುತ್ತಿದೆ
ಕಾಗದದ ದೋಣಿ
ಸಾಗುತ್ತಿದೆ
ಹಗುರವಾಗಿ
ಅನಂತ ನಿರಾಳದಲ್ಲಿ....!!!

ರೇಣುಕಾ ನಿಡಗುಂದಿ ಧಾರವಾಡದಲ್ಲಿ ಹುಟ್ಟಿದ್ದು ಕಳೆದ ಮೂರು ದಶಕದಿಂದಲೂ ದೆಹಲಿಯಲ್ಲಿ ವಾಸವಾಗಿದ್ದಾರೆ. ಖಾಸಗೀ ಕಂಪನಿಯೊಂದರಲ್ಲಿ ಕಾರ್ಯದರ್ಶಿಯಾಗಿ ಉದ್ಯೋಗ ಮಾಡುತ್ತಿದ್ದಾರೆ. ದೆಹಲಿ ಕರ್ನಾಟಕ ಸಂಘದ ಆಡಳಿತ ಮಂಡಳಿಯಲ್ಲಿ  ಜಂಟಿಕಾರ್ಯದರ್ಶಿಯಾಗಿ, ಸಂಘದ ಮುಖವಾಣಿಅಭಿಮತ ಸಂಪಾದಕ ಬಳಗದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದಾರೆ.  ಡಾ.ಪುರುಷೋತ್ತಮ ಬಿಳಿಮಲೆಯವರ ಸಂಪಾದಕತ್ವದಲ್ಲಿ " ರಾಜಧಾನಿಯಲ್ಲಿ ಕರ್ನಾಟಕ" ಪುಸ್ತಕವನ್ನು ಸಂಪಾದಿಸುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಕಥೆ, ಕವನ, ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ, ಮಾಸಿಕಗಳಲ್ಲಿ ಪ್ರಕಟಗೊಂಡಿವೆ.  ಮೊದಲ ಕವನ ಸಂಕಲನ " ಕಣ್ಣ ಕಣಿವೆಕೆಂಡಸಂಪಿಗೆ ವೆಬ್ಪೋರ್ಟಲ್ ನಲ್ಲಿ ಬರೆಯುತ್ತಿದ್ದ ಯಮುನಾತೀರೆ ಅಂಕಣ ಬರಹಗಳ  "ದಿಲ್ಲಿ ಡೈರಿಯ ಪುಟ", ಅಮೃತಾ ಪ್ರೀತ್ಂ ಸಂಗಾತಿ ಇಮರೋಜ್ ಕುರಿತು ಬರೆದ ಬರಹ, ಅನುವಾದಿಸಿದ ಕವಿತೆ ಅಮೃತಾ ನೆನಪುಗಳು” ಅವರ ಪ್ರಕಟಿತ ಕೃತಿಗಳಾಗಿವೆ. ಮನಸೇ" ದ್ವೈಮಾಸಿಕದಲ್ಲಿ ರಾಜಧಾನಿ ಮೇಲ್ ಅಂಕಣ ಬರೆಯುತ್ತಿದ್ದಾರೆ

raynuka@gmail.com


09717461669

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...