Friday, November 13, 2015

ರಂಗಮ್ಮ ಹೊದೇಕಲ್ ಒಂದಿಷ್ಟು ಹನಿಗಳು...!



1
ಸುಟ್ಟಷ್ಟೂ ಕಸುವು'
ಹೂವಿಗಲ್ಲ!
ಗಟ್ಟಿ ಎದೆಗೆ!!

2
ಆಕಾಶವನ್ನು
ನಂಬಿಯೂ
ಮೋಡ ಕಣ್ಣೀರಾಗುತ್ತದೆ!

3

ಭೂಮಿಯ
ನಂಬುಗೆ
ಹುಸಿಯಾಗುವುದಿಲ್ಲ
ಮೋಡ ಸಾಂತ್ವನವಾಗುತ್ತವೆ!


4

ಅವ್ವಾ...
ನಿನ್ನೊಡಲ ಕೆಂಡವೇ
ನನ್ನ ದಾರಿಯ ಕಂದೀಲು!

5

ಆ ಕತ್ತಲಲ್ಲಿ
ನಕ್ಷತ್ರವೊಂದು ಜಾರಿಬಿತ್ತು!


6


ಸಂತೆಗೆ ಒಪ್ಪುವ ಭಾಷೆ
ನನಗೊಗ್ಗದ್ದಕ್ಕೆ
ಯಾರನ್ನು ದೂರಲಿ!


7

ಖಾಲಿ
ಎದೆಯೊಳಗೂ
ಒಂದಿಷ್ಟು ನಕ್ಷತ್ರಗಳಿವೆ!


8

ಅಕ್ಷರಗಳಿಗೂ
ಜೀವವಿದೆ
ಎಷ್ಟಂತ ಹಿಂಸಿಸುವುದು!

9

ನನ್ನ ಕೈ ದೀಪ
ಊರ ಬೆಳಗದಿದ್ದರೇನು!
ನನ್ನ ಕಾಲ್ದಾರಿ
ಕತ್ತಲೆಗೆ ಬೀಳದಿರಲಿ!!

-ರಂಗಮ್ಮ ಹೊದೇಕಲ್ ತುಮಕೂರು ಜಿಲ್ಲೆಯವರಾದ ರಂಗಮ್ಮ ಹೊದೆಕಲ್ಲ ಶಿಕ್ಷಕಿ. ಕವಿಯತ್ರಿ. ಶೈನಾ ಪತ್ರಿಕೆಯ ಸಹಸಂಪಾದಕಿ ಮತ್ತು ಸಹಭಾಗಿ. ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ


1 comment:

  1. ಇನ್ನಾದರೂ ಪ್ರಕಟವಾಗಲಿ ರಂಗಮಕ್ಕನ ಸಂಕಲನ.

    ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...