Friday, November 13, 2015

ಮಕ್ಕಳ ದಿನಾಚರಣೆಗಾಗಿ ಮಕ್ಕಳ ಸಂದರ್ಶನ
ವಾರ್ತಾಭಾರತಿಇಂದು ನೆಹರು ಹುಟ್ಟಿದ ದಿನ ಈ ದಿನವನ್ನು ದೇಶ ಮಕ್ಕಳ ದಿನಾಚರಣೆಯಾಗಿ ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಿಕೆಯು ನಾಡಿನ ವಿವಿಧ ಜಿಲ್ಲೆಗಳ ಪ್ರಾಥಮಿಕ ಶಾಲಾ ಮಕ್ಕಳ ಸಂದರ್ಶನವನ್ನು ನಡೆಸಿತು. ವಿವಿಧ ಜಿಲ್ಲೆಗಳ ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಪತ್ರಿಕೆ ಐದು ಪ್ರಶ್ನೆಗಳನ್ನು ಕೇಳಿವೆ. 1. ಶಾಲೆ ನಿನಗೆ ಇಷ್ಟವೋ? ಇಷ್ಟವಿಲ್ಲವೋ? ಇಷ್ಟವಿದ್ದರೆ ಯಾಕೆ ಇಷ್ಟ? ಇಷ್ಟವಿಲ್ಲದಿದ್ದರೆ ಯಾಕೆ ಇಷ್ಟವಿಲ್ಲ?

 2. ದೊಡ್ಡವನಾದ ಬಳಿಕ ನಿನಗೆ ಏನಾಗಬೇಕು ಎಂದು ಇಷ್ಟ?
3. ಟಿ.ವಿ. ನೋಡೋದು ಇಷ್ಟವೋ, ಕತೆ ಪುಸ್ತಕ ಓದೋದು ಇಷ್ಟವೋ?
4. ಆಟ ಆಡೋದು ಇಷ್ಟವೋ, ಪಾಠ ಕೇಳೋದು ಇಷ್ಟವೋ? ನಿನಗೆ ಯಾವ ಆಟ ಇಷ್ಟ?
5. ನೀನು ದೇಶದ ಪ್ರಧಾನಿಯಾದರೆ ಏನು ಮಾಡುವೆ?
ಮಕ್ಕಳ ಭಾವ ಚಿತ್ರ ಸಹಿತ, ಅವರ ಮುಗ್ಧ ಉತ್ತರ ನಿಮ್ಮ ಮುಂದಿವೆ....


ಹೆಸರು: ಅಂತಃಕರಣ
ತಂದೆ: ಸರ್ಜಾಶಂಕರ್ ಹರಳಿಮಠ
ತಾಯಿ: ಪ್ರತಿಮಾ ಕೆ.
ಸೇಕ್ರೇಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆ, ಶಿವಮೊಗ್ಗ
6ನೆ ತರಗತಿ
ವಯಸ್ಸು: 11 ವರ್ಷ

1. ಶಾಲೆ ನಿನಗೆ ಇಷ್ಟವೋ? ಇಷ್ಟವಿಲ್ಲವೋ?
ಇಷ್ಟವಿದ್ದರೆ ಯಾಕೆ ಇಷ್ಟ? ಇಷ್ಟವಿಲ್ಲದಿದ್ದರೆ ಯಾಕೆ ಇಷ್ಟವಿಲ್ಲ?

* ನನಗೆ ಶಾಲೆಯೆಂದರೆ ಬಹಳ ಬಹಳ ಇಷ್ಟ. ಯಾಕೆಂದರೆ ಅಲ್ಲಿ ನಾನು ನನ್ನ ಗೆಳೆಯ ಗೆಳತಿಯರ ಜೊತೆ ಕೂಡಿ ಆಟವಾಡಬಹುದು, ಮಾತನಾಡಬಹುದು, ಓದಬಹುದು ಹಾಗೇ ಇನ್ನಿತರ ಚಟುವಟಿಕೆಗಳನ್ನು ಮಾಡಬಹುದು. ಅಲ್ಲಿ ನಾನು ನಮ್ಮ ಶಿಕ್ಷಕರಿಂದ ಹೊಸ ಹೊಸ ವಿಷಯಗಳನ್ನು ಕಲಿಯಬಹುದು.

2. ದೊಡ್ಡವನಾದ ಬಳಿಕ ನಿನಗೆ ಏನಾಗಬೇಕೆಂದು ಇಷ್ಟ?
* ದೊಡ್ಡವನಾದ ಮೇಲೆ ನನಗೆ ಕ್ರೀಡಾ ಬರಹಗಾರನಾಗಬೇಕೆಂದು ಇಷ್ಟ.

3. ಟಿವಿ ನೋಡೋದು ಇಷ್ಟವೋ?, ಕತೆ ಪುಸ್ತಕ ಓದೋದು ಇಷ್ಟವೋ?
* ಕತೆ ಪುಸ್ತಕ ಮತ್ತು ಟೀವಿ ನೊಡುವುದು ಎರಡೂ ಇಷ್ಟ. ಯಾಕೆಂದರೆ ಟೀವಿಯಲ್ಲಿ ನನ್ನಿಷ್ಟದ ಕ್ರೀಡಾ ಕಾರ್ಯಕ್ರಮಗಳು ಮತ್ತು ಕಾರ್ಟೂನ್‌ಗಳನ್ನು ನೋಡಬಹುದು. ಕಥೆ ಪುಸ್ತಕಗಳನ್ನು ಓದುವುದರ ಮೂಲಕ ನಾವು ಹೆಚ್ಚು ಹೆಚ್ಚು ಜ್ಞಾನ ಪಡೆಯಬಹುದು ಮತ್ತು ನಾವೂ ಕಥೆಗಳನ್ನು ಬರೆಯಬಹುದು.

4. ಆಟ ಆಡೋದು ಇಷ್ಟವೋ?, ಪಾಠ ಕೇಳೋದು ಇಷ್ಟವೋ?, ನಿನಗೆ ಯಾವ ಆಟ ಇಷ್ಟ?
* ಆಟ ಆಡುವುದು ಮತ್ತು ಪಾಠ ಕೇಳುವುದು ಎರಡೂ ನನಗೆ ಇಷ್ಟ. ನನಗೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್ ಮತ್ತು ಫುಟ್ಬಾಲ್ ಇಷ್ಟ. ಗ್ರಾಮೀಣ ಆಟಗಳಲ್ಲಿ ಕಬಡ್ಡಿ, ರಾಜ ರಾಣಿ, ಕಳ್ಳ ಪೊಲೀಸ್, ಕಣ್ಣಾ ಮುಚ್ಚಾಲೆ ಆಟಗಳು ಇಷ್ಟ.

5. ನೀನು ದೇಶದ ಪ್ರಧಾನಿಯಾದರೆ ಏನು ಮಾಡುವೆ?
* ನಾನು ದೇಶದ ಪ್ರಧಾನಿಯಾದರೆ ಮೊದಲಿಗೆ ಭಾರತವನ್ನು ಸ್ವಚ್ಛ ದೇಶವನ್ನಾಗಿ ಮಾಡಿ ಅಲ್ಲಲ್ಲಿ ಕೊಳಕು ಮಾಡುವವರಿಗೆ ದಂಡ ವಿಧಿಸುವೆ. ರಸ್ತೆಯ ನಿಯಮಗಳನ್ನು ಕಡ್ಡಾಯ ಮಾಡುವೆ. ಜೊತೆಗೆ ಬಡವ, ಭಿಕ್ಷುಕರೆಲ್ಲರಿಗೂ ಉದ್ಯೋಗಾವಕಾಶ ಕಲ್ಪಿಸಿ ಅವರು ದುಡಿದು ಉಣ್ಣುವ ಹಾಗೆ ಮಾಡುವೆ. ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ಪ್ರೊತ್ಸಾಹಿಸಿ ವಿಜ್ಞಾನದಲ್ಲಿಯೂ ಭಾರತ ಮುಂದುವರಿವ ಹಾಗೆ ಸಂಶೋಧನಾ ಕೇಂದ್ರಗಳನ್ನು ಕಟ್ಟುವೆ. ಮರಗಿಡಗಳು ನಾಶ ಆಗದಂತೆ ಪ್ರತಿ ಮನೆಯಲ್ಲಿಯೂ ಒಂದೊಂದು ಸಸಿ ನೆಡುವ ಯೋಜನೆಯನ್ನು ಮಾಡುವೆ. ಜೊತೆಗೆ ಖಾಲಿ ಜಾಗಗಳಲ್ಲಿ ಮರಗಳನ್ನು ಬೆಳೆಸುವೆ. ದೇಶದ ಪ್ರಗತಿಗಾಗಿ ಭಾರತದ ಪ್ರತಿಯೊಬ್ಬ ನಾಗರಿಕರಿಗೂ ಭಾರತವನ್ನು ಹೇಗೆ ಬೆಳೆಸೆಬಹುದೆಂಬ ಸಲಹೆ ಕೇಳಿ ಸೂಕ್ತವಾದುದನ್ನು ಜಾರಿಗೆ ತರುವೆ.

ಮೊಹಮ್ಮದ್ ಫಾಝಿಲ್
ತಂದೆ : ಎನ್.ಅಬ್ದುಲ್ ಹಮೀದ್
ತಾಯಿ : ರಝಿಯಾ
ಎನ್.ಐ ಕಂಪೌಂಡ್ ಹೊಸಂಗಡಿ 6 ನೇ ತರಗತಿ ವಯಸ್ಸು : 12
ಮಿಲಾಗ್ರೀಸ್ ಪ್ರೈಮೆರಿ ಶಾಲೆ , ಮಂಗಳೂರು

1. ಇಷ್ಟ , ಯಾಕೆಂದರೆ ಶಾಲೆಯಲ್ಲಿ ಎಲ್ಲಾ ಧರ್ಮದವರಿದ್ದು ಓಚಿದೇ ತಾಯಿಯ ಮಕ್ಕಳ ಹಾಗೇ ಇರುತ್ತೇವೆ. 2. ಈ ದೇಶದ ಪ್ರಧಾನಿಯಾಗಬೇಕೆಂಬ ಕನಸು. 3. ಟಿ.ವಿ ನೋಡೂವುದು ಇಷ್ಟ 4. ಫುಟಬಾಲ್(ಕಾಲ್ಚೆಂಡು) ಇಷ್ಟ .

5. ದೇಶದಲ್ಲಿ ಕೋಮುವಾದವನ್ನು ಅಳಿಸಿ ಜಾತ್ಯಾತೀತತೆಯನ್ನು ಉಳಿಸಿಕೊಂಡು ದೇಶದ ಸಂವಿಧಾನವನ್ನು ಕಾಪಾಡಿಕೊಳ್ಳುತ್ತೇನೆ.

 
 ವೆನ್ನಿಲಾ ಎಲ್.ವಿ. (10)
5ನೆ ತರಗತಿ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,  ಹೊಸಪೇಟೆ, ಕೋಲಾರ.
ತಂದೆ - ಯಲ್ಲಪ್ಪ  ತಾಯಿ-ಲಲಿತ

 1. 
 ಶಾಲೆ ನಿನಗೆ ಇಷ್ಟವೋ? ಇಷ್ಟವಿಲ್ಲವೋ? ಇಷ್ಟವಿದ್ದರೆ ಯಾಕೆ? ಇಷ್ಟವಿಲ್ಲದಿದ್ದರೆ ಯಾಕೆ ಇಷ್ಟವಿಲ್ಲ?
ವೆನ್ನಿಲಾ: ಶಾಲೆ ಅಂದ್ರೆ ಇಷ್ಟ, ಯಾಕಂದ್ರೆ ಪಾಠ ಕಲಿಸುತ್ತಾರೆ, ಆಟ ಆಡಬಹುದು, ಮೇಡಂ ಮುದ್ದು ಮಾಡುತ್ತಾರೆ, ದಿನಾ ಫ್ರೆಂಡ್ಸ್ ಜೊತೆ ಸೇರಿ ಆಟ ಆಡಬಹುದು.

 2. ದೊಡ್ಡವಳಾದ ಮೇಲೆ ನಿನಗೆ ಏನಾಗಬೇಕೆಂದು ಇಷ್ಟ? ವೆನ್ನಿಲಾ: ನಾನು ಟೀಚರ್ ಆಗಬೇಕೆಂದು ಇಷ್ಟ, ಏಕೆಂದರೆ ನಾನು ಸಹ ಹೆಚ್ಚು ಮಕ್ಕಳಿಗೆ ವಿದ್ಯೆ ಕಲಿಸಬಹುದು, ಹೆಚ್ಚು ವಿದ್ಯೆ ಕಲಿತರೆ ದೇಶಕ್ಕೆ ಒಳ್ಳೇದು ಮಾಡಬಹುದು. ಸಮಾಜದಲ್ಲಿ ಎಲ್ಲರೂ ಗೌರವ ಕೊಡುತ್ತಾರೆ.

3. ಟಿ.ವಿ. ನೋಡೋದು ಇಷ್ಟವೋ? ಕಥೆ ಪುಸ್ತಕ ಓದೋದು ಇಷ್ಟವೋ?
ವೆನ್ನಿಲಾ: ಟಿ.ವಿ. ನೋಡೋದು ಇಷ್ಟ, ಅದ್ರಲ್ಲಿ ಡ್ಯಾನ್ಸ್, ಹಾಡುಗಳ ಸ್ಪರ್ಧೆಗಳು ನೋಡಬಹುದು. ಅವು ಚೆನ್ನಾಗಿರುತ್ತೆ, ಧಾರಾವಾಹಿ ಕೂಡ ಚೆನ್ನಾಗಿರುತ್ತೆ.

4. ಆಟ ಆಡೋದು ಇಷ್ಟವೋ ಪಾಠ ಕೇಳೋದು ಇಷ್ಟವೋ? ನಿನಗೆ ಯಾವ ಆಟ ಇಷ್ಟ? ವೆನ್ನಿಲಾ: ಆಟ ಆಡುವುದು ಇಷ್ಟ, ಅದರಲ್ಲೂ ಕೊಕ್ಕೊ, ಕಬ್ಬಡಿ ಆಟ ತುಂಬ ಇಷ್ಟ.

  5. ನೀನು ದೇಶದ ಪ್ರಧಾನಿಯಾದರೆ ಏನು ಮಾಡುವೆ? ವೆನ್ನಿಲಾ: ದೇಶದ ಎಲ್ಲ ಜನರಿಗೂ ಅನ್ನ ನೀಡುತ್ತೇನೆ, ಕುಡಿಯುವ ನೀರು ಮಾರಾಟ ನಿಲ್ಲಿಸಿ ಎಲ್ಲರಿಗೂ ಉಚಿತವಾಗಿ ನೀರು ಕೊಡುತ್ತೇನೆ. ಮನೆ ಇಲ್ಲದ ಬಡವರಿಗೆ ಮನೆ ಕಟ್ಟಿ ಕೊಡುತ್ತೇನೆ, ಮನೆ ಬಾಡಿಗೆ ಕಟ್ಟೋದು ನಿಲ್ಲಿಸುವೆ.
 
ತಖೀ ಉರ್ ರೆಹಮಾನ್
5ನೇ ತರಗತಿ ಬಿಷಪ್ ಸಾರ್ಜೆಂಟ್ ಪಬ್ಲಿಕ ಶಾಲೆ ಸಿ.ಎಸ್.ಐ.ಲೇಔಟ್-ಬಿ.ಹೆಚ್.ರಸ್ತೆ - ತುಮಕೂರು ನಗರ
ತಂದೆ:ಹಬೀಬ್ ಉರ್ ರೆಹಮಾನ, ತಾಯಿ:ಹುಸ್ನಾ ಆರಾ

(1)ಸ್ಕೂಲ್ ಹೋಗುವುದು ಇಷ್ಟ. ಸ್ನೇಹಿತರು ಜೊತೆಗೆ ಆಟ ಆಡಬಹುದು.
(2) ಡಿ.ಸಿ. ಅಥವಾ ಎಸ್.ಪಿ ಅಂತಹ ಪೊಲೀಸ್ ಅಧಿಕಾರಿಯಾಗಲು ಇಷ್ಟ
(3)ಎರಡು ಇಷ್ಟ, ಟಿವಿಯಲ್ಲಿ ಕಾರ್ಟೂನ್ ಇಷ್ಟ
(4)ಪಾಠದೊಂದಿಗೆ ಆಟ-ಮೊದಲು ಓದು ನಂತರ ಆಟ (5) ಇಷ್ಟವಿಲ್ಲ- ಟಿ.ವಿ.ಯಲ್ಲಿ ಏನೇನೋ ತೋರಿಸುತ್ತಾರೆ.


ಹೆಸರು: ಬಿ.ದಿವಿತ್ ಂುು. ರೈ

 ತಂದೆ: ಉದಯಕುಮಾರ್ ರೈ
 ತಾಯಿ: ಪ್ರತಿಮಾ ರೈ
ಶಾಲೆ: ಸರ್ಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಹಾರಾಡಿ, ಪುತ್ತೂರು
 ತರಗತಿ: 4ನೇ
ವಯಸ್ಸು: 9 ವರ್ಷ


 
1. ನನಗೆ ಶಾಲೆ ತುಂಬಾ ಇಷ್ಟ.
   ಅಲ್ಲಿ ಒಳ್ಳೆಯ ಗೆಳೆಯರು ಇದ್ದಾರೆ. ನೆಚ್ಚಿನ ಶಿಕ್ಷಕರು ಇದ್ದಾರೆ. ಸಮಯವನ್ನು ಖುಷಿಯಿಂದ ಕಳೆಯಬಹುದು.

2. ಅಟೋಮೊಬೈಲ್ ಇಂಜಿನಿಯರ್ ಆಗಲು ಇಷ್ಟ

3. ಟಿ.ವಿ ನೋಡಲು ಇಷ್ಟ. ಆದರೆ ನೋಡಲು ಅವಕಾಶವಿಲ್ಲ(ನಮ್ಮ ಮನೆಯಲ್ಲಿ ಟಿ.ವಿ ಇಲ್ಲ)

4. ಆಟ ಆಡುವುದು ಇಷ್ಟ. ಆದರೆ ಪಾಠ ಕಲಿತರೆ ತಾನೆ ಆಟ ಆಡಲು ಅವಕಾಶ

5. ಪ್ರಧಾನಿ ಆಗಲು ಇಷ್ಟವಿಲ್ಲ. ಒಂದು ವೇಳೆ ಆದರೆ ಎಲ್ಲಾ ಶಾಲೆಯಲ್ಲಿ ಮಕ್ಕಳಿಗೆ ಆಟವಾಡಲು ಮೈದಾನ ಮಾಡಿಸುತ್ತೇನೆ. ಮಕ್ಕಳಿಗೆ ಹೊಡೆಯುವ ಶಿಕ್ಷಕರನ್ನು ವಜಾ ಮಾಡಿಸುತ್ತೇನೆ. 


 
ಹೆಸರು: ಕೀರ್ತಿಕಾ
ತಂದೆಯ ಹೆಸರು: ನಾಗೇಶ್
ತಾಯಿಯ ಹೆಸರು: ಮಾಲಿನಿ
ವಯಸ್ಸು: 11 ವರ್ಷ
ಶಾಲೆಯ ಹೆಸರು: ಸ.ಹಿ.ಪ್ರಾ.ಶಾಲೆ, ಪಾಲೆತ್ತಡ್ಕ
ತರಗತಿ: 5ನೇ ತರಗತಿ

ಪ್ರಶ್ನೆ: ಶಾಲೆ ನಿನಗೆ ಇಷ್ಟವೋ? ಇಷ್ಟವಿಲ್ಲವೋ? ಇಷ್ಟವಿದ್ದರೆ ಯಾಕೆ ಇಷ್ಟ? ಇಷ್ಟವಿಲ್ಲದಿದ್ದರೆ ಯಾಕೆ ಇಷ್ಟವಿಲ್ಲ?
ಉತ್ತರ: ಇಷ್ಟ. ಯಾಕೆಂದರೆ ಶಾಲೆಯಲ್ಲಿ ನಮಗೆ ಚೆನ್ನಾಗಿ ಕಲಿಸಿ ಕೊಡುವುದರಿಂದ ನಾವು ಹೆಚ್ಚಿನ ಜ್ಞಾನವನ್ನು ಸಂಪಾದಿಸುತ್ತೇವೆ. ಶಾಲೆಯಲ್ಲಿ ಜಾತಿ ಬೇದ ಮರೆತು ಎಲ್ಲರೂ ಒಂದೇ ಎನ್ನುವ ಬಾವನೆಯನ್ನು ಕಲಿಯುತ್ತೇವೆ.

ಪ್ರಶ್ನೆ: ದೊಡ್ಡವನಾದ ಬಳಿಕ ನಿನಗೆ ಏನಾಗಬೇಕು ಎಂದು ಇಷ್ಟ?
ಉತ್ತರ: ಟೀಚರ್

ಪ್ರಶ್ನೆ: ಟಿ.ವಿ. ನೋಡೋದು ಇಷ್ಟವೋ, ಕತೆ ಪುಸ್ತಕ ಓದೋದು ಇಷ್ಟವೋ?
ಉತ್ತರ: ಕಥೆ ಪುಸ್ತಕ ಓದುವುದು ಇಷ್ಟ

4. ಆಟ ಆಡೋದು ಇಷ್ಟವೋ, ಪಾಠ ಕೇಳೋದು ಇಷ್ಟವೋ? ನಿನಗೆ ಯಾವ ಆಟ ಇಷ್ಟ?
ಉತ್ತರ: ಪಾಠ ಕೇಳೋದು ಇಷ್ಟ. ಕುಂಟೆಬಿಲ್ಲೆ ಆಟ ಇಷ್ಟ.

ಪ್ರಶ್ನೆ: ನೀನು ದೇಶದ ಪ್ರಧಾನಿಯಾದರೆ ಏನು ಮಾಡುವೆ?
ಉತ್ತರ: ಸ್ವಚ್ಛ ಬಾರತ, ಹಸಿವು ಮುಕ್ತ ದೇಶ, ಅನಕ್ಷರತೆ ಇಲ್ಲವಾಗಿಸುವುದು. ಉಚಿತ ಹಾಗೂ ಕಡ್ಡಾಯ ಶಿಕ್ಷಣ ಯೋಜನೆಯೊಂದಿಗೆ ಜಾತಿ-ಬೇದವಿಲ್ಲದೆ ಸ್ತ್ರೀ-ಪುರುಷ ಸಮಾನತೆಯಿಂದ ಬಾಳೋಕೆ ಸಹಕರಿಸುವೆ.
  

ಹೆಸರು: ರಶಾ ನಫೀಸ್ ತಂದೆ: ನಫೀಸ್ ಪಾಷ
ತಾಯಿ: ಫರ್ಹಾನ್ ಬೇಗಂ
ಸಿದ್ದಗಂಗಾ ಶಾಲೆ, ದಾವಣಗೆರೆ
2ನೆ ತರಗತಿ
ವಯಸ್ಸು: 8 ವರ್ಷ

1. ಶಾಲೆ ನಿನಗೆ ಇಷ್ಟವೋ? ಇಷ್ಟವಿಲ್ಲವೋ?
 ಇಷ್ಟವಿದ್ದರೆ ಯಾಕೆ ಇಷ್ಟ? ಇಷ್ಟವಿಲ್ಲದಿದ್ದರೆ ಯಾಕೆ ಇಷ್ಟವಿಲ್ಲ?
* ಶಾಲೆಗೆ ಹೋಗುವುದು ನನಗೆ ಇಷ್ಟ. ಶಾಲೆಯಲ್ಲಿ ಓದುವುದಕ್ಕೆ ಇಷ್ಟ. 

2. ದೊಡ್ಡವನಾದ ಬಳಿಕ ನಿನಗೆ ಏನಾಗಬೇಕು ಎಂದು ಇಷ್ಟ?
* ಟೀಚರ್ ಆಗೋದು ಇಷ್ಟ. 

3. ಟಿವಿ ನೋಡೋದು ಇಷ್ಟವೋ?, ಕತೆ ಪುಸ್ತಕ ಓದೋದು ಇಷ್ಟವೋ?
* ಎರಡೂ ಇಷ್ಟ. 

4. ಆಟ ಆಡೋದು ಇಷ್ಟವೋ?, ಪಾಠ ಕೇಳೋದು ಇಷ್ಟವೋ? ನಿನಗೆ ಯಾವ ಆಟ ಇಷ್ಟ?
  * ಆಟ ಆಡುವುದು ಮತ್ತು ಪಾಠ ಕೇಳುವುದು ಎರಡೂ ಇಷ್ಟ. 

5. ನೀನು ದೇಶದ ಪ್ರಧಾನಿಯಾದರೆ ಏನು ಮಾಡುವೆ?
* ಊರು ಊರು ತಿರುಗಾಡುವೆ. ದುಡ್ಡು ಖರ್ಚು ಮಾಡುವೆ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...