Wednesday, November 16, 2016

'ದಲಿತ ಪ್ರಜ್ಞೆಯ ದನಿ ಜ್ಯೋತಿಬಾ ಫುಲೆ : ಮುಖಪುಟ ಯಾವುದಿರಲಿ ?ನಮ್ಮ ಪ್ರಕಾಶನದ ಹೊಸ ಪುಸ್ತಕ 'ದಲಿತ ಪ್ರಜ್ಞೆಯ ದನಿ ಜ್ಯೋತಿಬಾ ಫುಲೆ' ಗೆಳೆಯರಾದ ಜೆ. ಅರುಣಕುಮಾರ ಅವರು ಮೂರು ಮುಖಪುಟ ಮಾಡಿದ್ದಾರೆ. ಇದರಲ್ಲಿ ನಿಮಗೆ ಯಾವುದು ಇಷ್ಟವಾಯಿತು ?
ಭಾರತೀ ದೇವಿ. ಪಿ : ಎರಡು ಕವಿತೆಗಳು
Image result for ಭಾರತೀ ದೇವಿ. ಪಿ


ಇಡಿಯ ಸೂತಕ

Image result for abstract art on peace


ಕಲಸು ಮೇಲೋಗರ
ಇಲ್ಲಿ ಪೂರ್ಣದಿಂದ ಪೂರ್ಣ ಕಳೆದು
ಪೂರ್ಣವೇ ಉಳಿಯುವುದಿಲ್ಲ
ಚೂರಾಗಿರುವುದು ಇಡಿಯಾಗಲು ಹಂಬಲಿಸುತ್ತಾ
ಬಯಸಿ ಬಯಸಿ
ಕೊನೆಗೂ ಚೂರಾಗಿಯೇ ಉಳಿದು
ಚೂರುಗಳಲ್ಲೇ ನೂರನ್ನು ತೋರಿಸುತ್ತದೆ

ಒಂದೆತ್ತಿ ಒಂದಿಳಿಸಿ
ಬಾವುಟ ಹಾರಿಸಿ, ಬಲೂನು ಚುಚ್ಚುವ
ನಿಶಾನೆಗಳ ಬೀಸಾಟದಲ್ಲಿ
ಚಿಂದಿ ಚಿತ್ರಾನ್ನವಾಗುವ
ನೂರು ಬಟ್ಟೆಗಳು
ಅವುಗಳ ಮೇಲಿನ
ಅಳಿಸಲಾಗದ ಕಲೆಗಳು
ಒಂದಾಗದೆ ಎರಡಾಗುವಂತೆ ನೂರಾಗುವಂತೆ
ನೂಕುತ್ತವೆ

ಈ ಅಗಾಧ ಸಮುದ್ರದ ಅಸಂಖ್ಯ ಹನಿಗಳು
ಬಿಡಿ ಬಿಡಿ ಉಪ್ಪಿನ ಕಣಗಳಾಗಿ
ಪಾದದ ಅಡಿ ಚುರ್ರೆನ್ನಿಸಿ
ಎಬ್ಬಿಸುತ್ತವೆ
ಬೆರೆತು, ಕರಗಿ ಅಸಂಖ್ಯ
ರುಚಿಗಳಿಗಾಗಿ ಪೈಪೋಟಿ ನಡೆಸುತ್ತವೆ

ಇಡಿ ಇಡಿ ಎಂಬ
ಮಡಿಯ ಸೂತಕದಿಂದ
ಮೈಲಿಗೆಯಾಗಿರುವ ಬಟ್ಟೆಗಳು
ಎತ್ತಿ ಒಗೆಯುವ
ಒರಟು ಕೈಗಳಿಗಾಗಿ ಕಾಯುತ್ತಿವೆ.....
***


ಚಹರೆ

Image result for abstract art on peace


ಒಂದು ಸೋಲ ಮುಂದೆ
ಒಂದು ಗೆಲುವ ಹಿಂದೆ
ನೀರಗೆರೆಯ ಚಹರೆ ಬರೆದು
ಅವಕ್ಕೆ ಕೈ ಕಾಲು, ಕಣ್ಣು, ಮೂಗು ಕಿವಿಗಳಿಗಿಂತೆ ಹೆಚ್ಚಾಗಿ
ಮೊಲೆ, ತುರುಬು, ನಿತಂಬ, ಜಘನಗಳ
ಕುರುಹಂಟಿಸಿ
ಪಂಚೇಂದ್ರಿಯಗಳ ಬಿಕರಿಗಿಡಲಾಗಿದೆ

ಗೊಣಗಿದ್ದನ್ನೇ ಗೊಣಗಿ
ಒದರಿದ್ದನ್ನೇ ಒದರಿ
ಸೋತು ಸೊಪ್ಪಾದ ನಾಲಗೆಗಳು
ಹಿಂದೆ ನೆನದದ್ದನ್ನೇ ನೆನೆದು ನೆನೆದು
ಪಾಚಿ ಕಟ್ಟಿದ ದೇಹಗಳು
ಚರ‍್ಮ ಸುಡುವ ಅಂಜಿಕೆಯಲ್ಲಿ
ಸೂರ್ಯ ಶಾಖಕ್ಕೆ ಮೈಯೊಡ್ಡದಾಗಿವೆ

ದೇಹವನ್ನೇ ದೀವವಾಗಿಸಿ
ನಾಚ್ ನಡೆಸುತ್ತಿರುವ ಆತ್ಮಗಳು
ಕಳಚಿಕೊಳ್ಳದೇ ತೊಟ್ಟು ತೊಟ್ಟು
ಭಾರವಾಗಿ, ಆರ್ದ್ರವಾಗಿ
ನಿತ್ರಾಣವಾಗಿ ಧರೆಗುರುಳುತ್ತಿವೆಯೇ ಹೊರತು
ಜಿಗಿಯುವಷ್ಟು ನೆಗೆಯುವಷ್ಟು ಲಘುವಾಗದಾಗಿವೆ
***

ಬೀದಿಯಲ್ಲಿ ನಿಂತ ಭಾರತಇದು ಮೋದಿ ಭಾರತ. ಬೀದಿಯಲ್ಲಿ ನಿಂತಿರುವ ಭಾರತ

ಕೇಂದ್ರ ಸರ್ಕಾರ ಕಪ್ಪುಹಣದ ಕುಳಗಳ ರಕ್ಷಕನಂತಿದೆ!

Image result for ಟಿ ಕೆ ದಯಾನಂದ

ಟಿ ಕೆ ದಯಾನಂದ

ಜಗತ್ತಿನ ಮೂಲೆಮೂಲೆಯ ದೇಶಗಳ ಜರ್ನಲಿಸ್ಟ್ ಗಳು ಒಟ್ಟು ಸೇರಿ ಬಯಲಿಗೆಳೆದ" ಪನಾಮಾ ಪೇಪರ್ಸ್ ಲಿಸ್ಟ್ " ನೆನಪಿದೆಯ ? ದೇಶಕ್ಕೆ ಟ್ಯಾಕ್ಸ್ ವಂಚಿಸಿ ಪನಾಮಾ ದೇಶದ ಮೊಸಾಕ್ ಪೊನ್ಸೇಕ ಎಂಬ ತೆರಿಗೆಗಳ್ಳ ಸಂಸ್ಥೆಯೊಂದರ ಮೂಲಕ ಕಪ್ಪುಹಣವನ್ನು ಪ್ರೊಟೆಕ್ಟ್ ಮಾಡಿಕೊಳ್ಳುತ್ತಿದ್ದ ದೊಡ್ಡಜನರೆಲ್ಲ ದಾಖಲೆ ಸಮೇತ ಬಟಾಬಯಲಾದರು. ಇದರಲ್ಲಿ ಇಂಡಿಯಾದ 500ಕ್ಕೂ ಹೆಚ್ಚು ಮಂದಿ ಸಾಕ್ಷಿ ಸಮೇತ ಸಿಕ್ಕುಬಿದ್ದರು. ಇವರಲ್ಲಿ ಬಾಲಿವುಡ್ ನಟ ನಟಿಯರು, ಬ್ಯುಸಿನೆಸ್ ಟೈಕೂನ್ ಗಳು, ಕಾರ್ಪೊರೇಟ್ ದೈತ್ಯರೂ ಸೇರಿದ್ದರು.
ಎಲ್ಲ ದೇಶಗಳಂತೆ ಪನಾಮಾ ಪೇಪರ್ಸ್ ಲಿಸ್ಟ್ ನಲ್ಲಿದ್ದವರ ಮೇಲೆ ಇಂಡಿಯಾದ ಮೋದಿ ಸರ್ಕಾರವೂ ತನಿಖೆ ಶುರು ಮಾಡಲು ಹೊರಡ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ, ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯುನಿಟ್, ಫಾರಿನ್ ಟ್ಯಾಕ್ಸ್ & ರಿಸರ್ಚ್ ಏಜೆನ್ಸಿಗಳನ್ನು ಸೇರಿಸಿ " ಮಲ್ಟಿ ಏಜೆನ್ಸಿ ಇನ್ವೆಸ್ಟಿಗೇಷನ್ ಟೀಂ" ಒಂದನ್ನು ರಚಿಸಲಾಯಿತು.
ಈ ಟೀಂ ಸಾಲದೆಂಬಂತೆ ಸುಪ್ರೀಂಕೋರ್ಟ್ ಕಪ್ಪುಹಣದ ತನಿಖೆಗಾಗಿ ನೇಮಿಸಿದ "ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ" ಪನಾಮಾ ಪೇಪರ್ಸ್ ಲಿಸ್ಟ್ ನಲ್ಲಿ ಬಯಲಾದ ಇಂಡಿಯನ್ ಟ್ಯಾಕ್ಸ್ ಕಳ್ಳ-ಕಳ್ಳಿಯರನ್ನ ಹಿಡಿದು ಶಿಕ್ಷಿಸಲು ಇನ್ನೊಂದು ತನಿಖಾತಂಡವನ್ನು ರೂಪಿಸಿತು. ಈ ತಂಡದಲ್ಲಿ " ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ, ರೆವಿನ್ಯೂ ಇಂಟೆಲಿಜೆನ್ಸ್, ಫೈನಾನ್ಷಿಯಲ್ ಫ್ರಾಡ್ ಮಾನಿಟರಿ ವಿಂಗ್ ಗಳಿದ್ದವು.
ಇವೆರಡು ಸೆಂಟ್ರಲ್ ಮಟ್ಟದ ಅತ್ಯುನ್ನತ ಅಧಿಕಾರ ಹೊಂದಿರುವ ಇನ್ವೆಸ್ಟಿಗೇಷನ್ ತಂಡಗಳೆರಡರ ಕೈಯಲ್ಲೂ ಪನಾಮಾದೇಶದಲ್ಲಿ ಕದ್ದು ಹೂಡಿಕೆಯಾದ ಇಂಡಿಯನ್ ತೆರಿಗೆಗಳ್ಳರ ಅಕ್ರಮಗಳ ಬಗ್ಗೆ ಸಾವಿರಾರು ಪುಟಗಳಷ್ಟು ಅಧಿಕೃತ ದಾಖಲೆಗಳಿದ್ದವು. ಅಕೌಂಟ್ ನಂಬರ್, ಕದ್ದ ತೆರಿಗೆಹಣವನ್ನು ಬಂಡವಾಳ ಹೂಡಿದ ಕಳ್ಳಕಂಪನಿಯ ಇಂಡಿಯನ್ ಮಾಲೀಕರ ಹೆಸರಲ್ಲಿದ್ದ ರಿಜಿಸ್ಟ್ರೇಷನ್ ದಾಖಲೆಗಳು ಪ್ರತಿಯೊಂದೂ ಇವೆರಡು ತನಿಖಾತಂಡಗಳ ಕೈಯಲ್ಲಿದ್ದವು.. ಇಷ್ಟೆಲ್ಲ ಆಗಿ ಇವತ್ತಿಗೆ ಹತ್ತತ್ತಿರ ವರ್ಷವಾಗುತ್ತ ಬಂತು..
ಇದೇ ಪನಾಮಾ ಹಗರಣ ಜಗತ್ತಿನ ತುಂಬೆಲ್ಲ ಕೋಲಾಹಲವೆಬ್ಬಿಸಿ ಐಸ್ ಲೆಂಡ್ ದೇಶದ ಅಧ್ಯಕ್ಷನೇ ಪದವಿ ಕಳೆದುಕೊಂಡ, ಸ್ಪೇನ್ ದೇಶದಲ್ಲಿ ಮಂತ್ರಿಗಳೇ ಪದಚ್ಯುತರಾದರು, ಹಾಂಗ್ ಕಾಂಗ್, ವೆನಿಜುವೆಲಾದ ಖ್ಯಾತ ಜರ್ನಲಿಸ್ಟ್ ಗಳೇ ಕೆಲಸ ಕಳೆದುಕೊಂಡರು, ಮತ್ತು ಇವರೆಲ್ಲರೂ ಸಾರ್ವಜನಿಕವಾಗಿ ಛೀಮಾರಿಗೊಳಗಾಗಿ, ಜನರೆದುರು ತಲೆ ಎತ್ತಿಕೊಂಡು ತಿರುಗಲೂ ಭಯಪಡುವಂತಾಯಿತು. ಹಂಗಾದ್ರೆ ನಮ್ ಇಂಡಿಯಾದಲ್ಲಿ ಏನಾಯ್ತು..
ಇಲ್ಲಿ ಉಲ್ಟಾ ಆಯ್ತು. ಭ್ರಷ್ಟಾಚಾರದ ಬಗ್ಗೆ ಪುಂಗಿ ಊದುವ ದೇಶಭಕ್ತರ ಸರ್ಕಾರದವರು ಇದ್ದಕ್ಕಿದ್ದಂತೆ ಮೂರ್ಛೆರೋಗ ಬಂದವರಂತೆ ಮಲಗಿಬಿಟ್ಟರು. ಪನಾಮಾ ಪೇಪರ್ಸ್ ಹಗರಣದಲ್ಲಿ ಇನ್ವಾಲ್ವ್ ಆದ ಯಾವೊಬ್ಬ ಟ್ಯಾಕ್ಸ್ ಕಳ್ಳನ ಮೇಲೂ ಮೋದಿ ಸರ್ಕಾರ ಮುಗಿಬೀಳಲೇ ಇಲ್ಲ, ಯಾವೊಬ್ಬನ ಅಕೌಂಟನ್ನೂ ಜಪ್ತಿ ಮಾಡಲಿಲ್ಲ, ಯಾವೊಬ್ಬನನ್ನೂ ಒದ್ದು ಜೈಲಿಗೆ ಹಾಕಲಿಲ್ಲ, ಯಾವ ಕಂಪನಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಿಲ್ಲ, ಯಾರೊಬ್ಬರಿಗೂ ಮೂರುಪೈಸೆಯಷ್ಟು ದಂಡವನ್ನೂ ವಿಧಿಸಲಿಲ್ಲ.. ಇಲ್ಲಿಯತನಕ ದಾಖಲೆಸಮೇತ ಸಿಕ್ಕಿಬಿದ್ದ ಈ ಟ್ಯಾಕ್ಸ್ ವಂಚಕರು ಸಣ್ಣ ತನಿಖೆಯೂ ಇಲ್ಲದೆ ರಾಜಾರೋಷವಾಗಿ ಬಂಗಲೆಗಳಲ್ಲಿ ಆರಾಮಾಗಿದ್ದಾರೆ.
ಕೈಯಲ್ಲಿ ಅಧಿಕೃತ ದಾಖಲೆಗಳಿದ್ದರೂ ಟ್ಯಾಕ್ಸ್ ಕಳ್ಳರನ್ನು ಮುಟ್ಟಲು ಧೈರ್ಯವಿಲ್ಲದ ದೇಶಭಕ್ತರ ಸರ್ಕಾರ.. ಕಪ್ಪುಹಣದ ವಿರುದ್ದ ಸಮರ ಸಾರಿದ್ದೇವೆ ಅಂದರೆ.. ಪ್ರೈಮರಿ ಸ್ಕೂಲ್ ಮಕ್ಕಳೂ ನಗುತ್ತವಷ್ಟೆ.. ಅಂದ್ಹಾಗೆ ಒಂದ್ಸಲ ದುಡ್ಡು ಚೇಂಜ್ ಮಾಡಿಕೊಂಡ ಮೇಲೆ ಬೆರಳಿಗೆ ಶಾಯಿ ಗುರುತು ಕಡ್ಡಾಯವಂತೆ.., ಶಾಯಿ ಗುರುತು ಇರೋರಿಗೆ ಮತ್ತೊಮ್ಮೆ ಹಣ ಬದಲಾವಣೆಗೆ ಅವಕಾಶ ನಿರಾಕರಿಸಲಾಗಿದೆಯಂತೆ ನಿಜವೇ? ಬಲ್ಲವರು ತಿಳಿಸಿ.

ರಡ್ಡಿಯ ತುಂಡುಗುಣಿತದ ಮದುವೆಯಲ್ಲಿ ಬಿಜೆಪಿಗಳ ಜಾತ್ರೆ


ಸಂಸ್ಕೃತಿ ಪ್ರತಿಪಾದಕರ ನಗ್ನರೂಪ

Like
Comment

WE WANT TO BUILD UP SOLIDARITY!

SILENCED: Rationalists Dr Narendra Dabolkar, Govind Pansare and M M Kalburgi were murdered in cold blood by fascist elements

Dakshinayan Abhiyan, an initiative taken by Padma Shri Dr Ganesh Devy, is organising a convention to bring rationalist and liberals together to preserve the freedom of speech and thought guaranteed by the constitution. The convenor of the three-day convention starting Friday, November 18 is social activist Datta Nayak. Among the eminent delegates will be the family members of the three rationalists murdered by fundamentalist elements and noted RTI activist Prashant Bushan
By Our Special Correspondent
ALL is not lost – yet. There are enough people at the top, middle and bottom echelons of our multiracial, multi-religious, multicultural society to warm the heart and keep the flame of democracy alive. Enough regrettable things have happened in recent years to make smart people pause in disquietude, memories of the lessons of history abroad and at home flooding the mind. One stout defender of freedom of speech and equality in pursuit of happiness for all is quiet author and linguistics professor Dr Ganesh Devy.
Dr Devy was in Panjim to contribute towards the final touches of the forthcoming mega conference – Abhivyakti: Dakshinayan Rasthriya Parishad scheduled at Ravindra Bhavan, Margao from November 18-20. It will witness a host of literary and intellectual personalities speaking on coming together in solidarity in the face of political tyranny. Dakshinayan Abhiyan has been formed by various authors and like-minded people in Goa supporting the cause of right to freedom of speech.
Dr Devy, now based in Dharwad, has seen life and times in Gujarat as a professor of English at the Maharaja Sayajirao University. Apart being a linguistics scholar with several books to his credit, he is a critic and activist and founder-director of Bhasha Research & Publications Center, Vadodara. Along with many others, he returned his Sahitya Academy Award last year to protest the cold-blooded killing of intellectuals and rationalists in India.
At a media meet in Panjim recently, Dr Ganesh Devy said that the climate in India has become such that people are living in fear. This does not auger well for the country. Perhaps if like-minded people come together to express their feelings and thoughts it could be a catalyst, a positive force. He rued the fact that those who speak in the late Mahatma Gandhi’s name have actually turned Gujarat into the very antithesis of what Gandhiji valued the most. In his opinion, “Gujarat is no longer Mahatma Gandhi’s Gujarat.” Today’s Gujarat is a ghetto state with large sections living fearfully in “allotted” areas. It is not in the interests of the rest of India to become like Gujarat!
He hoped the forthcoming Abhivyakti: Dakshinayan Rashtriya Parishad will prove to be an initiative in the right direction, and inculcate genuinely progressive thinking among the young generation. Interestingly, Dr Devy quipped, “We should not want any ‘terrible beauty’ in India,” referring to the infamous Easter 1916 Irish freedom uprising against English tyranny in which millions of young people lost their lives in a civil war of sorts, and inspired William Butler Yeats to write his famous poem Easter, 1916: beginning “I have met them at close of day…” and concluding “A terrible beauty is born.”
Endorsing his sentiments was Goa Dakshinayan Abhiyan convenor Datta Naik. He said the gathering of almost 1,000 people sprang up almost spontaneously. He added, “It is a collective desire to forge a new solidarity between all progressive forces. It is a struggle for the freedom of creative expression that foregrounds tolerance and dialogue. It is an attempt to deepen rational thinking as being pivotal to society that is genuinely equal, just and respectful of diversity.” The event has logged 300 delegates from Goa and other parts of India. It will begin with a sankalp yatra to Lohia Maidan where a public meeting will be addressed by Hameed Dabholkar, Medha Pansare, Vijay Kalburgi, Prashant Naik, Atamjit Singh, K Satchidanandan, Dhanaji Gurav, Uttam Parmar, K Neela, Manan Kumar Mandal and others.
On November 19, the inaugural session at Ravindra Bhavan will see Dr Ganesh Devy, Leela Samson, Berzwada Wilson speaking, and there will be discussions (Yogendra Yadav on “India at Crossroads” and one with Raosaheb Kasbe), cultural evenings of poetry reading, singing, and much else. There will be a media session on “Media: Freedom & Promiscuity” with familiar communications and media stalwarts – Amol Palekar, Rajdeep Sardessai, Nikhil Wagle and others.
The concluding session will be based on an action plan to fight communalism presided over by Prabhakar Timble with Annad Karandikar, Harsha Badkar and Prashant Bhushan as participants. Entry fee for delegates is `1,000 while students may participate freely on presentation of ID cards.
Needless to say, this multidimensional event promises to be the most exciting ever to sow the seeds of new, more progressive ways of thinking, to eventually bear sweeter fruit in a long-term perspective. Anybody who wants to belong and be counted as a progressive force must make time for it!

ನ 18,19, 20 ಗೋವಾದಲ್ಲಿ ನಡೆವ ರಾಷ್ಟ್ರೀಯ ಅಭಿವ್ಯಕ್ತಿ ಸಮಾವೇಶ ಆಮಂತ್ರಣ
Tuesday, November 15, 2016

ಶಾಯಿ : ಚಿನಕುರುಳಿದೇಶ(ಸಂಘಿ)ಭಕ್ತ :- ಇವತ್ತಿನಿಂದ ಕರೆನ್ಸಿ ಬದಲಾವಣೆಗಾಗಿ ಬ್ಯಾಂಕಿಗೆ ಹೋದವರ ಕೈಗೆ ಶಾಯಿ ಹಾಕಲಾಗುತ್ತೆ..
ಜನ ಸಾಮಾನ್ಯ. :- ಹೌದಾ.. ಹಾಗಾದರೆ ಕೈಗೆ ಶಾಯಿ ಹಾಕುವುದರ ಜೊತೆಗೆ ಒಂದು ಮತದಾನದ ಅವಕಾಶವನ್ನೂ ಕೊಟ್ಟರೆ ಒಳ್ಳೆಯದಲ್ಲವೇ..
ಭಕ್ತ :- ಅದ್ಯಾಕೆ
ಜನ :- ಆಗ ನಮಗೆ ಹೊಸ ಕರೆನ್ಸಿ ಜೊತೆಗೆ ಬಾರತಕ್ಕೆ ಹೊಸ #ಪ್ರಧಾನಮಂತ್ರಿಯೂ ಸಿಗಬಹುದಲ್ವಾ...
ಭಕ್ತ. :- ಹ್ಙಾಂಂ....

-Hmk Kinya

ಪಿ ಮಹಮ್ಮದ್ ಕಾರ್ಟೂನ್


No automatic alt text available.
ಈ ಸಾವು ನ್ಯಾಯವೆ? Image may contain: text and one or more people

ಗೀತಾ ವಸಂತ : ಎರಡು ಕವಿತೆಗಳು


Image result for ಗೀತಾ ವಸಂತ
ಬೀಜ

Image result for abstract art music


ಈ ಬೋಳುಗುಡ್ಡಗಳ
ನಿಟ್ಟುಸಿರ ಊರಿನಲಿ
ಉರಿವಸೂರ್ಯನ ಅವಚಿಕೊಂಡ
ಮಂಕು ಬೂದಿಯಂಥ ಮೋಡ
ಮಳೆಗೂ
ಕೊಚ್ಚಿಹೋಗುವ ಕಸುವಿಲ್ಲ
ಪಾಂಡುವಿನಂತೆ ನಿರ್ವೀರ್ಯ.

ಕುಂತಿಯಂತೆ ಕುಂತ ಭೂಮಿ
ಕಳ್ಳಬಸಿರಿನ ಕರ್ಣರ ಕೂಡ
ನಡುರಾತ್ರಿಯಲಿ ಪಿಸುಮಾತು
ಹಗಲಿಡೀ ಹರಗಿಟ್ಟ ಮಾನ
ಗರ್ಭದೊಳಗೆ
ಮೊಳೆತೇಳದ ಜೊಳ್ಳುಬೀಜ.

ಒಳಗೆ ತಿದಿಯೊತ್ತುತ್ತ
ಮಾರ್ದನಿಗೊಳ್ಳುತಿದೆ
ಗುಡ್ಡಗಳ ನಿಟ್ಟುಸಿರು
ಗುಹೆಗರ್ಭದ ನಗ್ನಸಾಧಕನ
ದಗ್ಧಭಾವ
ಸೋಕುತಿದೆ ಝಳವಾಗಿ
ಮೂಡುತಿದೆ ಕಣ್ಣ ಪಾಪೆಯಲಿ
ಭಗ್ನಪ್ರತಿಮೆಯ ಭಂಗಿ.

ಇದೆಯಂತೆ ಇದೇ ಗುಡ್ಡಗಳಲಿ
ಉಜ್ಜೀವಿಸುವ ಸಂಜೀವಿನಿ
ಪೊದೆಗಳಲಿ ಕತ್ತೆತ್ತಿ
ಬುಸುಗುಡುವ ಹಾವಿನ ನೆತ್ತಿ
ಸವರಿ ಸಾವಿನ ಕತ್ತಿ
ಯಿಂದ ಪಾರಾಗಬೇಕು
ಜೀವರಸ ಕುಡಿದು ಮತ್ತೇರಿ
ಹುಟ್ಟಬೇಕು ಮತ್ತೆಮತ್ತೆ.

ಕಂಪಿಸುತಿದೆ ಸಂತನ
ತಂಬೂರಿ ದನಿಗೆ ಪರಾಗ
ಸ್ಪರ್ಷಕೆ ಕಾದ ಪುಷ್ಪಗರ್ಭ.
ಸ್ಖಲಿಸುತಿವೆ ಗುಡ್ಡಗುಡ್ಡಗಳೆ
ಮೀಟಿದಂತೆ ನರನಾಡಿ
ವಿರಾಗದೆದೆಯಲಿ ಸಂಚರಿಸಿದೆ
ಹೊಸತೊಂದು ರಾಗ.

ತಂಬೂರಿಯ ಸೋರೆಬುರುಡೆಯೆ
ಮೊಳೆತು ಚಿಗಿತೇಳುತಿದೆ
ಬಳ್ಳಿ ಬಳ್ಳಿಯಲಿ ಹಸಿರುಕ್ಕಿ ಹೂತು
ಗೆಣ್ಣುಗೆಣ್ಣಿಗೆ ಮಿಡಿಗಾಯಿ ಜೋತು
ಹಣ್ಣಾಗುವುದನೆ ಕಾದಿದೆ ಹಕ್ಕಿ
ಸೃಷ್ಟಿಬೀಜವ ಆಯಲಿಕ್ಕೆ.
***ದಿಗಂಬರ

Image result for abstract art bahubali

ಕನಸಲ್ಲಿ ಸುಳಿದವನು
ಗೊಮ್ಮಟನಿರಬಹುದೆ ಗೆಳತಿ
ವಿಶಾಲಭುಜ ಹರವಾದ ಎದೆ
ಪ್ರಮಾಣಬದ್ಧ ಪುರುಷಶಿಲ್ಪ
ತೊಡೆಗಳಿಗೆ ತಳುಕುಹಾಕಿದ ಬಳ್ಳಿ
ಚಿಗಿತು ಹಸಿ ಹಸಿರಾಗಿ
ಬೆಟ್ಟದ ಬೋಳುನೆತ್ತಿಯಲಿ
ಅರಳಿದ ಜೀವಪುಷ್ಪ

ಕೈಯಲ್ಲಿ ಕೊಳಲಿತ್ತೆ
ಕೊರಳಲ್ಲಿ ಹಾವಿತ್ತೆ
ಮುಖತುಂಬ ಹುಣ್ಣಿಮೆ ಸೂಸುವ
ಬುದ್ಧನ ಮಂದಸ್ಮಿತವಿತ್ತೆ
ಕಣ್ಣೊಳಗೆ ತುಳುಕುವ
ಮಹಾವೀರನ ಕಾರುಣ್ಯವಿತ್ತೆ
ಅಥವಾ ಹಾವುಗೊಲ್ಲನ
ಹಸೀ ತುಂಟತನವಿತ್ತೆ
ಯಾರಿರಬಹುದೆ ಅವನು ಅಕ್ಕಾ?

ನಿನ್ನ ಕನಸಿನ ಗೊರವ
ನನ್ನ ಕನಸಿಗಿಳಿದನೆ ಮತ್ತೆ?
ನೀಟಾದ ಮಾಟ ಮೂಗಿನ ಮೇಲೆ
ಕೊನರಿದ ಕುಡಿಹುಬ್ಬು
ಕಣ್ಣ ಕಣಿವೆಯ ನಿಗೂಢ ಆಳ
ರೆಪ್ಪೆಗಳ ಸರ್ಪಗಾವಲಿನ
ಒಳಗೆ ಬೆಳಕಿನ ಮಣಿ
ಮಣಿತೊಲಗೆ ಮಿಡುಕುವ
ಮಾಯಾಜಗತ್ತು.

ಇದೇನು ಮುಖವೊ ಮಂಡಲವೋ
ಯಾವ ಶುಭ ದರುಶನದ
ಸೂಚನೆಯೊ ಕಾಣೆ ಕೆಳದಿ

ಬಾಯೊಳಗೆ ಬ್ರಹ್ಮಾಂಡ
ಅನ್ನಯಜ್ಞಕ್ಕೆ ಉಸಿರ ಆಜ್ಯ
ಹಾವುಏಣಿಯಾಟದ ಉನ್ಮತ್ತನೋಟದಲಿ
ಅರಳಿದ ನಂದನದ ತೋಟ
ಬಾಲಹಿಡಿದು ಸರಕ್ಕನೆ ಮೇಲೇರಿದರೆ
ಹೆಡೆಯ ನೆರಳಲ್ಲಿ ಸಮಾಧಿ

ಹಣೆಯ ಶಿಖರದ
ತುತ್ತ ತುದಿಯಲಿ ನೆತ್ತಿ
ಮೀರಿ ಹಾರಲಾಗದ ಪ್ರಾಣಪಕ್ಷಿ
ಮನದ ಹುದುಲಲಿ ಸಿಕ್ಕಿ
ಸುಳಿಯುತಿದೆ ಸುತ್ತಿಸುತ್ತಿ
ಕತ್ತೆತ್ತಿ ಕರೆಯುತಿದೆ ಕೋಟಿಸೂರ್ಯರ ಲೋಕ
ಬೆಟ್ಟದ ಹಂಗುಹರಿದು
ಹಾರಿಬಿಡುವನೆ ಆ ಜಂಗಮ
ಸೂತ್ರಕಳಚಿದ ಪಟದಂತೆ ಮೇಲೇರಿ
ಚಿಕ್ಕೆಯಾಗುವನೆ

ಮೊದಲೇ ದಿಗಂಬರನೀಗ
ಪೊರೆಕಳಚುತ್ತಿದ್ದಾನೆ
ಕರಗುತಿದೆ ಪುರುಷ ಶಿಲ್ಪ
ಅದು ಅವನೋ ಅವಳೋ
ಮನುಜನೋ ಪಕ್ಷಿಯೋ
ಅಕ್ಷಿಪಟಲದಾಚೆ ಮಾಟವಿಲ್ಲದ ನೋಟ
ಹಾರಿಹೋಗುವ ಮುನ್ನ ಅರೆಘಳಿಗೆ
ತಾಳುವಂತೆ ಹೇಳಬೇಕು ಅವಗೆ
ಕುಂಭ ಬೇಯುವವರೆಗೆ.
***

ಡಿ 18 ದೆಹಲಿ :ಜಾನಪದ ಕಲಾ ಪ್ರದರ್ಶನ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣಕಾರ್ಟೂನ್ : ಕಾಲದ ಬದಲಾವಣೆಗಳು


ಕೃಪೆ :  ಹಿಂದು

ಪಿ. ಚಂದ್ರಿಕಾ : ಎರಡು ಕವಿತೆಗಳುImage result for ಪಿ. ಚಂದ್ರಿಕಾ


ಮಗ

Image result for abstract art on son


ಇವನು ಈಗ ಬೆಳೆದಿದ್ದಾನೆ
ಇವನ ಪುಟ್ಟ ಬಟ್ಟೆಗಳ ತೆಗೆದು ಮತ್ತೆ ಮಡಚಿಡುತ್ತೇನೆ!
ನೆಟ್ಟ ಗಿಡ ಮರವಾಗುವುದು ಯಾರಿಗಿಷ್ಟವಿಲ್ಲ?
ಆದರೂ ಅನ್ನಿಸುತ್ತದೆ ಇವನು ಬೆಳೆಯಲೇ ಬಾರದಿತ್ತು.
ಪುಟ್ಟ ಕಣ್ಣುಗಳ ಒಳಗೆ ಉಳಿದ ಮುಗ್ಧತೆಗೆ
ಅಡ್ಡಿಯಾಗುತ್ತಿರುವ ಚಿಗುರು ಗಡ್ಡ ಮೀಸೆ,
ಅಸಂಖ್ಯ ಪ್ರಶ್ನೆಗಳ ಇವನ
ಮಾತು ಈಗೀಗ ಕಡಿಮೆಯಾದರೂ,
ಕೇಳುವ ಒಂದು ಪ್ರಶ್ನೆಗೂ ನನ್ನಲ್ಲಿ ಉತ್ತರವಿಲ್ಲ.
ಬೆರಳುಗಳ ಮಡಚಿ ಹೇಳಿಕೊಟ್ಟ ಲೆಕ್ಕಕ್ಕೆ
ಇನ್ನೊಂದು ಲೆಕ್ಕ ಸೇರಿಸಿದಾಗ ತಬ್ಬಿಬ್ಬುಗೊಂಡ ನನ್ನನ್ನು ನೋಡಿ
ನಗುತ್ತಾ ಹೇಳುತ್ತಾನೆ,
’ನಿನಗೆ ಇಷ್ಟು ಸಣ್ಣದೂ ತಿಳಿಯುವುದಿಲ್ಲವಾ?’
ಹೊಕ್ಕಳಬಳ್ಳಿ ಕತ್ತರಿಸಿಕೊಂಡು
ನೆತ್ತರಲ್ಲಾಡಿದವ,
ಇಷ್ಟಿಷ್ಟು ಬೆಳೆದವ,
ಅತ್ತವ, ನಕ್ಕವ, ಹಟ ಮಾಡಿದವ,
ಗುರುತೇ ಹಿಡಿಯದಷ್ಟು ಎತ್ತರಕ್ಕೆ
ಬೆಳೆದ ಅನ್ನಿಸಿದಾಗೆಲ್ಲಾ,
ಟಿವಿಯ ಮೇಲೆ ಷೋಪೀಸ್‌ನ ಹಾಗೆ ಇಟ್ಟಿರುವ
ಇವನ ಮೊದಲ ಶೂಗಳನ್ನು ತೆಗೆಯುತ್ತೇನೆ.
’ಇದರಲ್ಲಿ ನನ್ನ ಒಂದು ಬೆರಳೂ ತೂರುವುದಿಲ್ಲ’
ಕಿಸಕ್ಕನೆ ನಗುತ್ತಾನೆ.
ಅಂಗಾಲ ಮೃದುತ್ವ ಅದರೊಳಗೆ ಕೈ ಆಡಿಸಿದಾಗ ಸಿಗುತ್ತದೆ,
ತಟ್ಟಡಿಯ ನೆನಪುಗಳು,
ಕೈಬೆರಳ ಆಸರೆ,
ಪುಟ್ಟ ತೋಳಿನ ಆಲಿಂಗನ,
ಕಥೆಗೆ ಹೂಂಗುಡುತಾ ನಿದ್ದೆಗೆ ಜಾರುವ
ಚಂದದ ಸುಖ
ದಿನ ಕಳೆದಂತೆ ಇಲ್ಲವಾದಾಗ,
ನೀರು ಚೆಲ್ಲದ ಹಾಗೆ ಮುದ್ದು ತುಟಿಗಳಲ್ಲಿ ಹೀರುತ್ತಿದ್ದ
ಇವನ ಕೊಳವೆಯ ಲೋಟವ ತೆಗೆಯುತ್ತೇನೆ...
ಹರಡಿಕೊಂಡಿದ್ದೇನೆ ಸುತ್ತಾ ಸಣ್ಣ ಪುಟ್ಟ ವಸ್ತುಗಳನ್ನು,
ಕಣ್ಣಿಟ್ಟು ಕಾಯುತ್ತೇನೆ
ಬೆಳೆದ ಇವನ ಮುಗ್ಧ ನಗು
ಎದೆಯಿಂದ ಜಾರಿ ಹೋಗದ ಹಾಗೆ!ಮೊದಲಗಿತ್ತಿ

Image result for abstract art on she

ಕಾಲಿಗೆ ಮದರಂಗಿ ಬಣ್ಣ ಕೊಡು
ಬಣ್ಣ ಕೊಡು ಏ ಭೂಮಿ,
ಕೆಬ್ಬೆ ಮಣ್ಣಿನ ತುಂಬಾ ಮಳೆ ಸುರಿದ ಜೌಗು,
ಹೆಜ್ಜೆ ಇಟ್ಟಲ್ಲೆಲ್ಲಾ ತೂರುವ ಕೆಸರು,
ಕಣ ಕಣದಿಂದಾದ ಮಣ್ಣ ದೇಹದ ಪುಳಕ,
ಕಾಲಿಗೆ ಮದರಂಗಿ ಬಣ್ಣ ಕೊಡು
ಬಣ್ಣ ಕೊಡು ಏ ಭೂಮಿ.

ನಾವು ಜೀವಕೆ ಪೂರ್ಣ,
ನಾವು ಭಾವಕೆ ಪೂರ್ಣ,
ನೀರ ಮಮತೆಯಲದ್ದಿ
ಗಾಳಿ ಗಂಧವ ಹೊದ್ದ
ಸಕಲಾತಿ ಸಮತೆಯು ಕೂಸುಗಳು.
ಇಲ್ಲಿ ಹುಳ, ಅಲ್ಲಿ ಹಾವು,
ಒಂದೊಂದು ಹಿಂಡು ನವಿಲು,
ಮುಂಗುಸಿ, ಕಾಡುಹಂದಿ
ಯಾರು ಯಾರಿಗೆ ಜೀವಾಧಾರ?
ಬಂದ ಬೆಳೆಯ ಕಾಯಲು
ಕವಣೆ ಕಲ್ಲನು ಕಟ್ಟಿ ತೂರಿ ಬಿಡುವಾಗ ರೊಯ್ಯ ರೊಯ್ಯನೆ
ಕಾಲಿಗೆ ಮದರಂಗಿ ಬಣ್ಣ ಕೊಡು
ಬಣ್ಣ ಕೊಡು ಏ ಭೂಮಿ

ಹದ ಬಂದು ಒಡಲು ಜೀಕಿ ಫಲವಾಗಿ
ಆಲ ಬೇಲದ ತುಂಬಾ ಮೂಲವಾಗಿದೆ ಸಹನೆ
ಬಿತ್ತಷ್ಟನೇ ಕೊಡುವಳೇ ಆ ತಾಯಿ ದಾನೇ?
ತೊಪ್ಪೆ, ಗಂಜಲ ಮೈಯ ವಾಸನೆಯ ಜೊತೆಯೆ ಬೆರೆತು,
ಬಿಸಿಲು ಮಳೆಗೆ ನೆನೆದು ನೆನೆದು,
ಸಾರವ ಹೀರಿ ನೆಟ್ಟ ಗಿಡ ನೆಡದ ಗಿಡ
ಎಲ್ಲವೂ ಸೊಂಪಾಗಿ ಬೆಳೆದು
ಉಸಿರು ಮಿಡಿಯುತ್ತವೆ!

ಕಂಪ್ಯೂಟರ್ ಮೇಲೆ ಓಡುವ ಕೈ
’ಇಷ್ಟು ಕೊಟ್ಟಿಗೆ ಗೊಬ್ಬರ, ಇಷ್ಟು ಯೂರಿಯಾ ಹಾಕು...’
ಅನ್ನವಾಗುವ ಮಣ್ಣೆ ವಿಷವುಂಡು ಫಲ ಕೊಟ್ಟೆ,
ಫಲ ಕೊಟ್ಟೂ ನಿಶ್ಫಲವಾದೆ!
ಕಲಿಸಿದೆ ನಿಲುವ ದೃಢತೆ ಹುಲ್ಲಿಗೆ,
ಕಾಲಿಗೆ ಮದರಂಗಿ ಬಣ್ಣ ಕೊಡು
ಬಣ್ಣ ಕೊಡು ಏ ಭೂಮಿ...            

ನಮ್ಮ ಎರಡು ಹೊಸ ಪುಸ್ತಕಗಳು


ಮರುಮುದ್ರಣಕ್ಕೆ ಸಿದ್ದವಾಗಿರುವ ನಮ್ಮ ಪ್ರಕಾಶನದ ಮತ್ತೆರಡು ಪುಸ್ತಕಗಳುಸಾವಿನ ಸುತ್ತ ತಾಯ್ತನದ ಕವಚ: ಪ್ಲಾಜಾ ಡಿ ಮೆಯೊ

ಡಾ. ಎಚ್. ಎಸ್. ಅನುಪಮಾಳೆದ ತಿಂಗಳು ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ಸುತ್ತಾಡುವಾಗ ಓವರ್ ಬ್ರಿಡ್ಜ್‌ಗಳ ತಳಭಾಗದಲ್ಲಿ ಸಾವಿರಾರು ಭಾವಚಿತ್ರಗಳು ಅಂಟಿಸಲ್ಪಟ್ಟಿದ್ದು ಗಮನಕ್ಕೆ ಬಂತು. ಮುಖ್ಯ ಚೌಕ ಪ್ಲಾಜಾ ಡಿ ಮೇಯೊ ಬಳಿ ಕುತೂಹಲಕರ ಸಂಗತಿಯೊಂದು ಎದುರಾಯಿತು. ಪ್ರತಿ ಗುರುವಾರ ಮಧ್ಯಾಹ್ನ 3.30ಕ್ಕೆ ಅಮ್ಮಂದಿರು ಅಲ್ಲಿ ಸೇರುತ್ತಾರೆ; ವಿಶ್ವಾದ್ಯಂತ ನಡೆವ ಮಾನವ ಹಕ್ಕು ಉಲ್ಲಂಘನೆಗಳನ್ನು ಪ್ರತಿಭಟಿಸುತ್ತಾರೆ; ಕಳೆದ 40 ವರ್ಷಗಳಿಂದ ಇದು ನಡೆಯುತ್ತಿರುವುದರಿಂದ ಚೌಕಕ್ಕೆ `ಅಮ್ಮಂದಿರ ಚೌಕ' ಎಂಬ ಹೆಸರು ಬಂದಿದೆ ಎಂದು ಗೈಡ್ ಚುಟುಕಾಗಿ ಹೇಳಿದಳು. ತಮ್ಮ ಹೆಮ್ಮೆಯ ಸ್ಮಾರಕಗಳ ತೋರಿಸುತ್ತಿದ್ದವಳಿಗೆ ಇದು ಕಹಿಗುಳಿಗೆಯಂತೆ ಕಂಡಿರಬೇಕು, ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತ ಅವಳ ಪ್ರಸನ್ನತೆ ಮಾಯವಾಯಿತು. ಆ ಕಡೆಯಿಂದ ಟುಪಾಕ್ ಅಮಾರು ಸಂಘಟನೆಯ ಬುಡಕಟ್ಟು ಮಹಿಳೆ ಮಿಲಾಗ್ರಿಸ್ ಸಾಲಾ ಬಿಡುಗಡೆಗಾಗಿ ಆಗ್ರಹ ಕೇಳಿಬರತೊಡಗಿತ್ತು.

`ಮದರ್ಸ್ ಆಫ್ ಪ್ಲಾಜಾ ಡಿ ಮೆಯೊ' ಅಹಿಂಸಾತ್ಮಕ ಹಾಗೂ ಪರಾಯ ಹೋರಾಟದ ಮಾದರಿ ಸಂಘಟನೆ. ಅದು ಸಾವಿನ ಸುತ್ತ ಹೆಣೆಯಲಾದ ತಾಯ್ತನದ ವರ್ತುಲ. ಅಧ್ಯಕ್ಷೀಯ ಭವನ `ಕಾಸಾ ರೋಸಾಡಾ' (ಪಿಂಕ್ ಹೌಸ್) ಎದುರು ಪ್ರತಿವಾರ ಮಹಿಳೆಯರು ಕಲೆತು ಆಳುವವರ ಹಿಂಸಾತ್ಮಕ ನಡೆಗಳನ್ನು ಪ್ರಶ್ನಿಸುವ ಜಾಗ. ತಾಯ್ತನಕ್ಕೆ ಹೊಸ ವ್ಯಾಖ್ಯೆ ಬರೆದ ಸ್ಥಳ.
ಸಾಂಪ್ರದಾಯಿಕ ನೈತಿಕ-ಧಾರ್ಮಿಕ-ನ್ಯಾಯಿಕ ವ್ಯವಸ್ಥೆಯಿಂದಾಗಲೀ, ಆಳುವ ಪ್ರಭುತ್ವದಿಂದಾಗಲೀ ತಮಗೆ ಸಿಗಬೇಕಾದ ನ್ಯಾಯ ಸಿಗುವುದಿಲ್ಲ ಎನಿಸಿದಾಗಲೆಲ್ಲ ಮಹಿಳೆಯರು ತಮ್ಮದೇ ನ್ಯಾಯವ್ಯವಸ್ಥೆಯನ್ನು ಅನ್ವೇಷಿಸಿಕೊಂಡಿದ್ದಾರೆ. ಅಂಥ ನ್ಯಾಯಹೋರಾಟಕ್ಕಾಗಿ ಅಮಾಯಕ ತಾಯಂದಿರ ದುಃಖಾರ್ತ ಘಳಿಗೆಯಲ್ಲಿ `ಮದರ್ಸ್ ಆಫ್ ಪ್ಲಾಜಾ ಡಿ ಮೇಯೊ' ರೂಪುಗೊಂಡಿತು. ಅರ್ಜೆಂಟೀನಾ ಚರಿತ್ರೆಯಲ್ಲಿ 1976ರಿಂದ 1983ರವರೆಗಿನ ಏಳೆಂಟು ವರ್ಷಗಳ ಅರಾಜಕತೆ `ಡಟರ್ಿ ವಾರ್' ಎಂದು ಗುರುತಿಸಲ್ಪಡುತ್ತದೆ. ಜೀವಗಳು ಹರಣವಾದ, ಕುಟುಂಬಗಳು ಛಿದ್ರಗೊಂಡ, ಮಾನವೀಯತೆ ಕ್ಷೀಣಿಸಿದ ಅವಧಿ ಅದು. ಆಗ `ರಾಷ್ಟ್ರೀಯ ಪುನನರ್ಿಮರ್ಾಣ ಪ್ರಕ್ರಿಯೆ'ಯನ್ನು ಶುರುಮಾಡಿದ ಸೇನಾಡಳಿತ ದಿಟ್ಟ ದನಿಗಳನ್ನು ಶಾಶ್ವತವಾಗಿ ಇಲ್ಲವಾಗಿಸಿತು. ಒಂದು ವರ್ಷದಲ್ಲಿ ಹಲವಾರು ಕಾರ್ಯಕರ್ತರು, ಅದರಲ್ಲೂ ಸಮಾಜವಾದಿ ಒಲವಿದ್ದ ವೈದ್ಯ, ವಕೀಲ, ವಿದ್ಯಾಥರ್ಿ, ನಾಗರಿಕರು ಇದ್ದಕ್ಕಿದ್ದಂತೆ ಕಾಣೆಯಾದರು. ದುಃಖತಪ್ತ ತಾಯಂದಿರು ತಮ್ಮ ಮಕ್ಕಳು ಎಲ್ಲಿ ಹೋದರೆಂದು, ಯಾರನ್ನು ಕೇಳುವುದೆಂದು ತಿಳಿಯದೇ ಕಂಗೆಟ್ಟರು.

ಆಗ ಮಗ-ಸೊಸೆಯನ್ನು ಕಳೆದುಕೊಂಡ ಅರ್ಜಿಸೆನಾ ವಿನ್ಸೆಂಟಿ ಎಂಬಾಕೆ ಹತ್ತಾರು ತಾಯಂದಿರೊಂದಿಗೆ ಮೇ ಸ್ಕ್ವೇರ್ ಕಡೆ ಹೊರಟರು. ಭಿನ್ನ ಹಿನ್ನೆಲೆಗಳ ಅವರೆಲ್ಲ ದುಃಖವನ್ನು ಸಾಮೂಹಿಕವಾಗಿ ಹಂಚಿಕೊಳ್ಳಲು, ಪರಸ್ಪರ ಚಚರ್ಿಸಲು ಒಗ್ಗೂಡಿದರು. ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಅರಿವು ಆಗಲೇ ಅವರಿಗೆ ದೊರೆತದ್ದು. ಪೊಲೀಸರೇ ಕಾರ್ಯಕರ್ತರನ್ನು ಗುರುತಿಸಿ, ಅಪಹರಿಸಿ ಅನಾಮಿಕ ಸ್ಥಳಗಳಿಗೆ ಒಯ್ದಿದ್ದರು. ಭಯಾನಕ ಹಿಂಸೆ ನೀಡಿ, ಕೊಂದು ದೂರದ ಗ್ರಾಮೀಣ ಪ್ರದೇಶಗಳಲ್ಲಿ, ಗುರುತಿಲ್ಲದ ಸಾಮೂಹಿಕ ಗೋರಿಗಳಲ್ಲಿ ಹುಗಿದಿದ್ದರು. ನಾಪತ್ತೆಯಾದ ಗರ್ಭಿಣಿ ಹೆಂಗಸರು ಹಿಂಸಾಕೇಂದ್ರಗಳಲ್ಲಿ ಹೆತ್ತ ಮಕ್ಕಳನ್ನು ಯಾರ್ಯಾರಿಗೋ ದತ್ತು ಕೊಟ್ಟು ಬಾಣಂತಿಯರನ್ನೂ ಕೊಲ್ಲಲಾಗಿತ್ತು. ದತ್ತು ಕೊಟ್ಟ 256 ಎಳೆಗೂಸುಗಳು ನಾಪತ್ತೆಯಾಗಿದ್ದವು. ಕರುಳು ಕತ್ತರಿಸುವ ದುಃಖ, ಒತ್ತರಿಸಿ ಬರುವ ಅಸಹಾಯಕ ಸಿಟ್ಟು, ಆಳುವವರ ಕಣ್ಣಿಗೆ ಬೀಳುವುದೆ ಅಪಾಯಕಾರಿ ಎನ್ನುವಂತೆ ಮಾಡಿದ್ದ ಮಿಲಿಟರಿ ಆಡಳಿತ - ಮುಂದೇನು ಮಾಡುವುದು? ವಾರದಿಂದ ವಾರಕ್ಕೆ ನೂರಾರು ಮಹಿಳೆಯರು ಸೇರಿಕೊಂಡಾಗ ತಮ್ಮ ಬಲದ ಅರಿವಾಯಿತು. ಪ್ರತಿವಾರ ಮೆರವಣಿಗೆ, ಪ್ರದರ್ಶನ ನಡೆಸಿ ಪ್ರಭುತ್ವದ ಹಿಂಸೆಯನ್ನು ಖಂಡಿಸಿದರು. ಹಿಂಸೆಯನ್ನು ಕಂಡೂ ಸುಮ್ಮನಿರುವ ನಿಲರ್ಿಪ್ತಿಯನ್ನು ವಿರೋಧಿಸಿದರು. ಅರ್ಜೆಂಟೀನಾದ ಮಾನವಹಕ್ಕು ಉಲ್ಲಂಘನೆಯನ್ನು ಹೊರ ಜಗತ್ತಿಗೆ ತಿಳಿಸಿದರು. ಸಕರ್ಾರ ಅವರನ್ನು ಹುಚ್ಚು ಹೆಂಗಸರು ಎಂದು ಬಣ್ಣಿಸಿತು!


`ನಾಪತ್ತೆಯಾದವರ' ಸಂಖ್ಯೆ ಬೆಳೆಯುತ್ತ ಹೋದಂತೆ ನಾಪತ್ತೆಯಾದವರ ಕತೆಗಳೂ ಬೆಳೆದವು. 1977ರಲ್ಲಿ ಮಾನವ ಹಕ್ಕು ದಿನಾಚರಣೆಯಂದು ಕಾಣೆಯಾದವರ ಭಾವಚಿತ್ರ, ಹೆಸರುಗಳಿರುವ ಪತ್ರಿಕೆ ಪ್ರಕಟಿಸಿ ತಾಯಂದಿರು ಮಾಧ್ಯಮದ ಗಮನ ಸೆಳೆದರು. ಆದರೆ ಅದೇ ರಾತ್ರಿ ಈ ಸಂಘಟನೆ ಶುರುಮಾಡಿದವರಲ್ಲಿ ಒಬ್ಬರಾದ ಮಹಿಳೆ ಅಜéುಸೆನಾರನ್ನು ಅವರ ಮನೆಯಿಂದ ಅಪಹರಿಸಿ ಎಸ್ಮಾ ಕ್ಯಾಂಪಿಗೆ ಒಯ್ಯಲಾಯಿತು. ಹಾಗೆ ಅಪಹರಿಸಲ್ಪಟ್ಟವರನ್ನು ಬರ್ಬರವಾಗಿ ಹಿಂಸಿಸಿ, ಮಾದಕ ದ್ರವ್ಯ ನೀಡಿ ಪ್ರಜ್ಞೆ ತಪ್ಪಿಸಿ, ಬಟ್ಟೆ ಬಿಚ್ಚಿ, ಸಮುದ್ರ ಮಧ್ಯೆ ಬಿಸಾಡಲಾಗುತ್ತಿತ್ತು.

1978ರಲ್ಲಿ ಅರ್ಜೆಂಟೀನಾವು ಫುಟ್ಬಾಲ್ ವಿಶ್ವಕಪ್ ಆಯೋಜಿಸಿತು. ಇದೇವೇಳೆ ಸಂಘಟನೆಯ ಮತ್ತಿಬ್ಬರು - ಎಸ್ತರ್ ಮತ್ತು ಮಾರಿಯಾ ನಾಪತ್ತೆಯಾದರು. ಇಬ್ಬರು ಫ್ರೆಂಚ್ ಸನ್ಯಾಸಿನಿಯರಾದ ಲಿಯೊನಿ ಡುಕೆ ಮತ್ತವರ ಸೋದರಿ ಸೇರಿದಂತೆ ಹಲವರು ನಾಪತ್ತೆಯಾದರು. ಕೆಲವರ ದೇಹ ಅಟ್ಲಾಂಟಿಕ್ ತೀರದಲ್ಲಿ ವಿಕಾರಗೊಂಡು ಬಂದು ಬಿದ್ದರೆ ಮತ್ತೆ ಕೆಲವರ ದೇಹ ಪತ್ತೆಯಾಗಲೇ ಇಲ್ಲ. ಫ್ರಾನ್ಸ್ ಆ ನನ್ಗಳ ಪತ್ತೆ ತಿಳಿಸಲು ಒತ್ತಾಯಿಸಿ ವಿಶ್ವಸಂಸ್ಥೆಯ ತನಕ ವಿಷಯ ಕೊಂಡೊಯ್ದಿತು. ಮಿಲಿಟರಿ ಆಡಳಿತದ ವಿರುದ್ಧ ಒತ್ತಡ ಬೆಳೆದು ಅವರು ಒಂಭತ್ತು ಸಾವಿರ ಜನರನ್ನು ಅಪಹರಿಸಿದ್ದಾಗಿ ಒಪ್ಪಿಕೊಂಡರು. ಆದರೆ ಅಮ್ಮಂದಿರು ಅಪಹೃತರ ಸಂಖ್ಯೆ 30 ಸಾವಿರಕ್ಕೂ ಮಿಕ್ಕಿದೆ ಎಂದು ದಾಖಲೆ ಒದಗಿಸಿದರು.

ಪಾಪದ ಕೊಡ ತುಂಬಿತು. 1983ರಲ್ಲಿ ಅಂತೂ ಮಿಲಿಟರಿ ಆಳ್ವಿಕೆ ಕೊನೆಗೊಂಡು ಜನಪ್ರಿಯ ಸಕರ್ಾರ ಅಧಿಕಾರಕ್ಕೆ ಬಂತು.
ಆಗಲಾದರೂ ಸರ್ಕಾರ ತಮ್ಮ ಮಕ್ಕಳ ಕುರಿತ ಮಾಹಿತಿ ನೀಡಬಹುದೆಂದು ಅಮ್ಮಂದಿರು ಭಾವಿಸಿದರು. ಸರ್ಕಾರ ರಾಷ್ಟ್ರೀಯ ಆಯೋಗವೊಂದನ್ನು ರಚಿಸಿ ತನಿಖೆ, ಡಿಎನ್ಎ ಹೋಲಿಕೆ ಶುರುಮಾಡಿತು. ಮಿಲಿಟರಿಯ ಹಲವು ಉನ್ನತ ಅಧಿಕಾರಿಗಳು ಶಿಕ್ಷಿಸಲ್ಪಟ್ಟರು. ದತ್ತು ಕೊಟ್ಟ 31 ಮಕ್ಕಳು ತಂತಮ್ಮ ಕುಟುಂಬ ಸೇರಿದವು. ಕೆಲವು ಮಕ್ಕಳು ಸಾಕು ತಾಯ್ತಂದೆಯರು ಹಾಗೂ ಮೂಲ ಪಾಲಕರಿಂದ ಜಂಟಿಯಾಗಿ ಬೆಳೆಸಲ್ಪಟ್ಟವು.

2005ರಲ್ಲಿ ಗುರುತಿಸದ ಗೋರಿಗಳಲ್ಲಿದ್ದ ದೇಹವನ್ನು ಫೋರೆನ್ಸಿಕ್ ತಜ್ಞರು ಪರೀಕ್ಷೆಗೊಳಪಡಿಸಿದಾಗ ನಾಪತ್ತೆಯಾಗಿದ್ದ ಸಂಘಟನೆಯ ಮೂವರು ಮಹಿಳೆಯರ ಶವ ಪತ್ತೆಯಾಯಿತು. ಅಜéುಸೆನಾ ದೇಹವನ್ನು ಸುಟ್ಟು ಬೂದಿಯನ್ನು ಮೇ ಚೌಕದಲ್ಲಿ ಸಮಾಧಿ ಮಾಡಲಾಯಿತು. `ನನ್ನಮ್ಮ ಹುಟ್ಟಿದ್ದು ಈ ಸಾರ್ವಜನಿಕ ಸ್ಥಳದಲ್ಲಿ. ಅವಳು ಬದುಕಿರುವುದು ಇಲ್ಲಿಯೇ. ಅದಕ್ಕೇ ಅವಳ ಅಂತಿಮ ಅವಶೇಷಗಳು ಇಲ್ಲಿಯೇ ಇರಲಿ' ಎಂದು ಅವರ ಮಗಳು ಹೇಳಿದಳು. ಸಂಘಟನೆಯು ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯಿತು.

ನಂತರ

ಬಹುಪಾಲು ಸಂಘಟನೆಗಳಿಗೆ ಆಗುವಂತೆ ಇಲ್ಲೂ ಆಯಿತು. 1986ರ ಹೊತ್ತಿಗೆ ಈ ಗುಂಪು ಒಡೆಯಿತು. ಒಂದು ಭಾಗವು ತಮ್ಮ ಮಕ್ಕಳ ಮಾಹಿತಿ, ಅಂತಿಮ ಅವಶೇಷಗಳನ್ನು ಪಡೆಯಲಷ್ಟೇ ಪ್ರಯತ್ನಿಸಿತು. ಅಧ್ಯಕ್ಷರಿಗೆ ಹತ್ತಿರದವರಾಗಿ ಒಂದು ಪತ್ರಿಕೆ, ರೇಡಿಯೊ ಕೇಂದ್ರ ಹಾಗೂ ವಿಶ್ವವಿದ್ಯಾಲಯ ಶುರು ಮಾಡಿತು. ಸ್ಲಂವಾಸಿಗಳಿಗೆ ಮನೆ ಕಟ್ಟಿಕೊಡುವ ಸರ್ಕಾರಿ ಕಾರ್ಯಕ್ರಮದ ಸಂಚಾಲಕರಾಗಿ ಮಾತೆಯರು ಧನಸಹಾಯ ಪಡೆದರು. 2006ರ ಜನವರಿ 26ರಂದು ನಡೆಯುವುದು ತಮ್ಮ ಕೊನೆಯ ವಾರ್ಷಿಕ ಪ್ರದರ್ಶನವೆಂದೂ, `ಶತ್ರುವು ಸರ್ಕಾರಿ ಕಚೇರಿಯೊಳಗಿಲ್ಲ' ಎಂದೂ ಅದು ಘೋಷಿಸಿತು.
ಅಂದಹಾಗೆ ನಮ್ಮ ಗೈಡ್ ಈ ಗುಂಪಿನ ಮೊಮ್ಮಗಳು.

ಸಂಘಟನೆಯ ಮತ್ತೊಂದು ಭಾಗ ತಮ್ಮ ಮಕ್ಕಳ ರಾಜಕೀಯ ಅಜೆಂಡಾ ಮುಂದುವರೆಸಲು ನಿರ್ಧರಿಸಿತು. ಈ ಕ್ರಾಂತಿಕಾರಕ ಗುಂಪು ಸರ್ಕಾರದ ಸಹಾಯಧನ, ಪರಿಹಾರ ನಿರಾಕರಿಸಿ ಅರ್ಜೆಂಟೀನಾದ ರಾಜಕೀಯ ಸಂಸ್ಕೃತಿಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕೆಂದು ಬಯಸಿತು. ಅವರಿಗೆ ಕ್ಯೂಬಾ ಕ್ರಾಂತಿಯನ್ನು ಆದರ್ಶವಾಗಿಟ್ಟುಕೊಂಡಿದ್ದ ತರುಣರ ಗುಂಪಿನ ಬೆಂಬಲ ದೊರೆಯಿತು. ಈ ತಾಯಂದಿರು ನ್ಯೂಯಾರ್ಕ್ ವರ್ಲ್ಡ್ ಟ್ರೇಡ್ ಸೆಂಟರ್ ಮೇಲಿನ ಉಗ್ರಗಾಮಿಗಳ ದಾಳಿಂುನ್ನು `ಅಮೆರಿಕದಿಂದ ಅನ್ಯಾಯಕ್ಕೊಳಗಾದ ನಾಗರಿಕ ಗುಂಪುಗಳ ಹತಾಶ ಪ್ರಯತ್ನ' ಎಂದು ಬಣ್ಣಿಸಿ ವಿವಾದಕ್ಕೊಳಗಾದರು.

`ಮೊದಲು ಏಕಾಂಗಿಯಾಗಿ ಅಳುತ್ತಿದ್ದೆವು. ಈಗ ಸಾಮೂಹಿಕವಾಗಿ ದುಃಖಿಸುವುದು ಕಲಿತಿದ್ದೇವೆ'

ಈ ಸಂಘಟನೆ ಹಲವು ದೇಶಗಳ ಅಮ್ಮಂದಿರನ್ನು ಪ್ರಭಾವಿಸಿತು. ನಾನಾಕಾರಣಗಳಿಗಾಗಿ ಆಳುವವರ ಹಿಂಸೆಗೆ ಮಕ್ಕಳನ್ನು ಕಳಕೊಂಡವರ ಹೋರಾಟ ಮಾದರಿಗಳನ್ನೂ ಸೃಷ್ಟಿಸಿತು. ಅಂಥವುಗಳಲ್ಲಿ ಕೆಲ ಸಂಘಟನೆಗಳಿವು:
 ಇರಾನಿನ ಜೈಲುಗಳಲ್ಲಿ ರಾಜಕೀಯ ಬಂದಿಗಳ ಸಾಮೂಹಿಕ ಹತ್ಯೆಯನ್ನು ವಿರೋಧಿಸಿ 1981ರಿಂದ ಶುರುವಾದ ಸಂಘಟನೆ ಮದರ್ಸ್ ಆಫ್ ಕಾವರಾನ್. ಪ್ರತಿ ತಿಂಗಳ ಮೊದಲ ಶುಕ್ರವಾರ ಕಾವರಾನಿನ ಸಾಮೂಹಿಕ ಗೋರಿಯ ಬಳಿ ಅವರ ಪ್ರದರ್ಶನ. ಈ ಗುಂಪು 2009ರಿಂದ ಇರಾನಿನಲ್ಲಿ ಶುರುವಾದ `ಮೌರ್ನಿಂಗ್ ಮದರ್ಸ್' ಅಥವಾ `ಮದರ್ಸ್ ಆಫ್ ಲಾಲೇಹ್ ಪಾಕರ್್' ಜೊತೆ ಸೇರಿತು. 2009ರ ಅಧ್ಯಕ್ಷೀಯ ಚುನಾವಣೆ ವೇಳೆ ಸಂಗಾತಿ-ಮಕ್ಕಳನ್ನು ಕಳೆದುಕೊಂಡ ಮಹಿಳೆಯರು ಪ್ರತಿ ಶನಿವಾರ ಸಂಜೆ 7 ರಿಂದ 8ರ ತನಕ ಟೆಹ್ರಾನಿನ ಲಾಲೇಹ್ ಪಾಕರ್ಿನಲ್ಲಿ ಕಪ್ಪುಬಟ್ಟೆ ಧರಿಸಿ ತಮ್ಮವರ ಸಾವು, ಬಂಧನ, ನಾಪತ್ತೆಗೆ ಸಕರ್ಾರ ಉತ್ತರದಾಯಿತ್ವ ಹೊಂದಿದೆಯೆಂದು ಪ್ರತಿಪಾದಿಸಿ ನ್ಯಾಯ ಕೇಳುತ್ತಾರೆ. ಮರಣದಂಡನೆ ರದ್ದುಗೊಳಿಸಲು ಆಗ್ರಹಿಸುತ್ತಾರೆ. ನೊಬೆಲ್ ವಿಜೇತೆ ಶಿರೀನ್ ಎಬಾಡಿ ಈ ಗುಂಪಿನವರು.

 1988ರ ಜನವರಿಯಲ್ಲಿ ಜೆರುಸಲೇಂನ ಇಸ್ರೇಲಿ ಮಹಿಳೆಯರಿಂದ ಶುರುವಾದ `ವಿಮೆನ್ ಇನ್ ಬ್ಲಾಕ್' ಕಪ್ಪು ಉಡುಗೆಯ ಮಹಿಳೆಯರ ಯುದ್ಧವಿರೋಧಿ ಸಂಘಟನೆ. ಅರ್ಜೆಂಟೀನಾದ ಅಹಿಂಸಾತ್ಮಕ ಪ್ರತಿರೋಧದಿಂದ ಸ್ಫೂತರ್ಿ ಪಡೆದ ಇಸ್ರೇಲಿ ಮಹಿಳೆಯರು ಪ್ರತಿ ಶುಕ್ರವಾರ ಜೆರುಸಲೇಂನ ಹಗಾರ್ ಸ್ಕ್ವೇರ್ನಲ್ಲಿ ಮಧ್ಯಾಹ್ನ ಒಂದರಿಂದ ಎರಡರ ತನಕ `ಸ್ಟಾಪ್ ಆಕ್ಯುಪೇಷನ್' ಎಂಬ ಪ್ಲಕಾಡರ್್ ಹಿಡಿದು ಮೌನವಾಗಿ ನಿಂತರು. ಇಸ್ರೇಲಿನ ಇತರ ನಗರಗಳಲ್ಲೂ ವಾರಕ್ಕೊಮ್ಮೆ ಮಹಿಳೆಯರು ನಗರದ ಚೌಕಗಳಲ್ಲಿ, ಹೆದ್ದಾರಿ ಜಂಕ್ಷನ್ಗಳಲ್ಲಿ, ಮೌನವಾಗಿ ಕಪ್ಪುಬಟ್ಟೆ ಧರಿಸಿ ನಿಂತು ಜನರ ಗಮನ ಸೆಳೆದರು. 1993ರ ಓಸ್ಲೋ ಒಪ್ಪಂದದ ಬಳಿಕ ಇದು ಕಡಿಮೆಯಾಯಿತು.

 ಟಕರ್ಿಯ ಇಸ್ತಾನ್ಬುಲ್ನ `ಸ್ಯಾಟಡರ್ೆ ಮದರ್ಸ್' ಪ್ರತಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಅರ್ಧ ತಾಸು ಅವಧಿಗೆ 1995ರಿಂದ ಸೇರುತ್ತ ಮೌನ ಜಾಗೃತಿ ಮಾಡುತ್ತಿದ್ದಾರೆ. 80-90ರ ದಶಕಗಳ ಕ್ಷಿಪ್ರಕ್ರಾಂತಿ ಮತ್ತು ಅರಾಜಕ ಆಡಳಿತದ  ವೇಳೆ `ನಾಪತ್ತೆ'ಯಾದವರ ಮಹಿಳಾ ಸಂಬಂಧಿಗಳು `ಮೊದಲು ಏಕಾಂಗಿಯಾಗಿ ಅಳುತ್ತಿದ್ದೆವು. ಈಗ ಸಾಮೂಹಿಕವಾಗಿ ದುಃಖಿಸುವುದು ಕಲಿತಿದ್ದೇವೆ' ಎನ್ನುತ್ತಾರೆ.

 ಕ್ಯೂಬಾ ಹವಾನಾದಲ್ಲಿ ಜೈಲಿಗೆ ಕಳಿಸಲ್ಪಟ್ಟ ಭಿನ್ನಮತೀಯರ ಕುಟುಂಬದ ಮಹಿಳೆಯರು `ಲೇಡೀಸ್ ಇನ್ ವೈಟ್'. ಅವರು 2003ರಿಂದ ಪ್ರತಿ ಭಾನುವಾರ ಬಿಳಿಬಟ್ಟೆ ಧರಿಸಿ ಮೌನವಾಗಿ ನಡೆಯುತ್ತಾರೆ.

 ಚೀನಾದಲ್ಲಿ 1989ರಲ್ಲಿ ಟಿಯಾನಾನ್ಮನ್ ಸ್ಕ್ವೇರ್ ಪ್ರತಿಭಟನೆ ವೇಳೆ ಮರಣಿಸಿದ ಹುಡುಗರ ತಾಯಂದಿರ ಗುಂಪು ಟಿಯಾನಾನ್ಮನ್ ಮದರ್ಸ್. ಇದು ಚೀನಾದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು ಬರಬೇಕೆಂದು ಪ್ರತಿಪಾದಿಸುತ್ತದೆ. ಸಾರ್ವಜನಿಕವಾಗಿ ಆ ಘಟನೆಯ ವಿಚಾರಣೆ; ಶಾಂತಿಯುತ ದುಃಖಾಚರಣೆಗೆ ಅವಕಾಶ; ದೇಶ-ವಿದೇಶಗಳಿಂದ ಪರಿಹಾರ ಪಡೆಯಲು ಅವಕಾಶ; ಬಂಧಿಸಲ್ಪಟ್ಟವರ ಬಿಡುಗಡೆ; ಮರಣದಂಡನೆ ತಡೆ ಮೊದಲಾದ ಬೇಡಿಕೆಗಳನ್ನದು ಮುಂದಿಟ್ಟಿದೆ. ಆದರೆ ಚೀನಾ ಸರ್ಕಾರ ಈ ಗುಂಪು `ಪ್ರತಿಕ್ರಾಂತಿಗೆ ಪೂರಕ' ಎಂದು ಭಾವಿಸಿ ಸಂಘದ ಸ್ಥಾಪಕಿ ಡಿಂಗ್ ಜಿಲಿನ್ರ ಬಂಧಿಸಿ ಕಮ್ಯುನಿಸ್ಟ್ ಪಕ್ಷದಿಂದ ಉಚ್ಛಾಟಿಸಿದೆ.


***
ಮಹಿಳಾ ಚಳುವಳಿ ಎಂಬುದೊಂದು ಸಂಭವಿಸುತ್ತಿದೆಯೆ? ಅದರ ಸ್ವರೂಪ, ಶೈಲಿ ಯಾವುದು? ಅದರ ನಾಳೆ ಹೇಗಿರಬಹುದು? ರೂಪುಗೊಳ್ಳಲು ಇರುವ ಮುಕ್ತ ಅವಕಾಶ ಎಷ್ಟು? ವಿದ್ಯೆ-ಸಂಪರ್ಕ-ಸಂಪನ್ಮೂಲಕ್ಕೆ ಮೊದಲಿಗಿಂತ ಹೆಚ್ಚು ಅವಕಾಶವಿದ್ದರೂ ಮಹಿಳಾ ಸಂಘಟನೆ ಕಟ್ಟಿ ಬೆಳೆಸುವುದು ಏಕೆ ಕಷ್ಟವಾಗುತ್ತಿದೆ? ಮುಂತಾದ ಪ್ರಶ್ನೆಗಳು ಮುನ್ನೆಲೆಗೆ ಬರುತ್ತಿರುವ ಈ ಹೊತ್ತು; ಪ್ರತಿಭಟನಾ ಮಾದರಿಗಳು ಸವಕಲಾಗುತ್ತ ಸಾಂಕೇತಿಕವಾಗುತ್ತ ಹೋದಂತೆನಿಸುತ್ತಿರುವ ಈ ಹೊತ್ತು ಹೊಸ ಸ್ಥಳೀಯ, ಸರಳ ಹೋರಾಟ ಮಾದರಿಗಳು ಸೃಷ್ಟಿಯಾಗಬೇಕಿದೆ. ರಾಜಕೀಯ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಬದಿಗಿರಿಸಿ ಮಹಿಳೆಯರು ಜೀವಪರ ಸಂಘಟನೆ ಕಟ್ಟಬೇಕಿದೆ. ಸ್ತ್ರೀವಾದವೆಂಬುದು ಕೇವಲ ಹಕ್ಕಿನ ಹೋರಾಟವಷ್ಟೇ ಅಲ್ಲ, ಎಲ್ಲವನ್ನು ಒಳಗೊಂಡು ನೇರ್ಪಡಿಸುವ ಭರವಸೆಯ ತಾಯ್ತನ. ಹಾಗಿರುತ್ತ ತಮ್ಮ ತರುಣ ಪ್ರತಿಭಾವಂತ ಮಕ್ಕಳನ್ನು ಸಮಾಜದ ಅಸೂಕ್ಷ್ಮ, ಅನ್ಯಾಯಗಳಿಗೆ ಕಳಕೊಂಡ ಭಾರತದ ತಾಯಂದಿರಿಗೆ ಅರ್ಜೆಂಟೀನಾ ಅಮ್ಮಂದಿರ ಮಾದರಿ ಕೈದೀಪವಾಗಬಹುದಲ್ಲವೆ?

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...