Friday, January 08, 2016

22, ಮಾನ್ವಿ : ಸಾಂಸ್ಕೃತಿಕ ಬಹುತ್ವದ ಸವಾಲು-ಸಾಧ್ಯತೆಗಳು-ವಿಚಾರ ಸಂಕಿರಣ
ಪ್ರಿಯರೆ
ಜನೇವರಿ 22 ರಂದು ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಲೋಯಲ ಕಾಲೇಜ್ ಸಹಯೋಗದಲ್ಲಿ ಸಾಂಸ್ಕೃತಿಕ ಸವಾಲು-ಸಾಧ್ಯತೆಗಳು- ಕುರಿತಾಗಿ ಒಂದು ದಿನದ ವಿಚಾರ ಸಂಕಿರಣ ಹಮ್ಮಿಕೊಂಡಿದ್ದೇವೆ. ನಮ್ಮ ಕಾಲದ ಪ್ರಖರ ಚಿಂತಕರಾದ ದಿನೇಶ ಅಮಿನ್ ಮಟ್ಟು ಅವರು ವಿಚಾರ ಸಂಕಿರಣದ ಸರ್ವಾಧ್ಯಕ್ಷರಾಗಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಸಮಾಜ ವಿಜ್ಞಾನಿಗಳಾದ ಜೋಗನ್ ಶಂಕರ್ ಅವರು ವಿಚಾರ ಉದ್ಘಾಟಿಸಲಿದ್ದಾರೆ

ಭಾರತ ದೇಶದಲ್ಲಿ ಪುರಾತನ ಕಾಲದಿಂದಲೂ ಸಾಂಸ್ಕೃತಿಕ ಬಹುತ್ವ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಅದರಲ್ಲಿ ಜೀವನದ ಸಾಮರಸ್ಯ ಅಡಗಿದೆ, ಪ್ರಸ್ತುತ ದಿನಮಾನದಲ್ಲಿ ಈ ಸಾಂಸ್ಕೃತಿಕ ಬಹುತ್ವದ ಮೇಲೆ ಏಕ ಸಂಸ್ಕೃತಿಯ ಹೇರಿಕೆಯಿಂದ ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಯಾಗುತ್ತಿದೆ. ಈ ದೇಶದ ಪ್ರಜ್ಞಾವಂತ ಪ್ರಜೆಗಳಾದ ನಾವು ಅದನ್ನು ಖಂಡಿಸಿ ನಮ್ಮ ಬಹು ಸಂಸ್ಕೃತಿಯ ಸಾಮರಸ್ಯ ಜೀವನವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕಾಗಿದೆ.. ವಿಚಾರ ಸಂಕಿರಣಕ್ಕೆ ಬನ್ನಿ. ನಮ್ಮ ಬಹುತ್ವ ಪರಂಪರೆಯನ್ನು ಉಳಿಸಿಕೊಳ್ಳುವ ಹೋರಾಟದ ದಾರಿಯಲ್ಲಿ ನಾವೆಲ್ಲ ಜೊತೆಯಾಗುವಾ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...