Saturday, January 02, 2016

ಜನೇವರಿ 9 ಬೆಂಗಳೂರು : ನಮ್ಮ ಪ್ರಕಾಶನದ ಪುಸ್ತಕಗಳ ಬಿಡುಗಡೆ




ತೆರೆಯೆದ್ದ 2016 ರ ಅಂಗಳದಲ್ಲಿ ನಮ್ಮ ಮೊದಲ ಹೆಜ್ಜೆ ಬಿ ಯು ಸುಮಾ ಅವರ ಪುಸ್ತಕಗಳ ಬಿಡುಗಡೆ. ಲಡಾಯಿ ಪ್ರಕಾಶನ ಪ್ರಕಟಿಸಿರುವ ಅವರ 'ಸಂತೆಯೊಳಗೊಂದು ಮನೆ' ಮತ್ತು ಅವರ ಸಂಪಾದನೆಯ 'ಡಾ. ಬಿ.ಆರ್. ಅಂಬೇಡ್ಕರ್ : ವರ್ತಮಾನದೊಂದಿಗೆ ಮುಖಾಮುಖಿ' ಎಂಬೆರಡು ಪುಸ್ತಕಗಳು ಜನೇವರಿ 9 ರಂದು ಸಂಜೆ  5 ಗಂಟೆಗೆ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿವೆ. ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯುವುದು. ಹಿರಿಯ ಕವಿ ಎಸ್ ಜಿ ಸಿದ್ದರಾಮಯ್ಯ, ಇಂದೂಧರ ಹೊನ್ನಾಪುರ, ಡಾ. ಡೊಮಿನಿಕ್ , ಡಾ ಸಿ.ಜಿ. ಲಕ್ಷ್ಮೀಪತಿ ಪಾಲ್ಗೊಳ್ಳುವರು.

ಸಮಾಜದ ಅವಘಡಗಳಿಗೆ ತಕ್ಷಣ ಸ್ಪಂದಿಸುವ, ಮುಂದೆ ನಿಂತು ಚಳವಳಿ ಸಂಘಟಿಸುವ, ಬೇರೆ ಬೇರೆ ವೃತ್ತಿಯಲ್ಲಿದ್ದೂ 'ಬಹುಳ' ಪತ್ರಿಕೆಯನ್ನು ಅಷ್ಟೇ ಬದ್ಧತೆಯಿಂದ ಹೊರತರುವ ಉತ್ಸಾಹಿ ಯುವ ತಲೆಮಾರಿನ ಗೆಳೆಯರಾದ ಹುಲಿಕುಂಟೆಮೂರ್ತಿ, ಎಸ್ ಮಂಜುನಾಥ (ಮಧುರ ಚೆನ್ನ) ರವಿಕುಮಾರ ಬಾಗಿ ಅವರು ಸಂಘಟನೆಯ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದ್ದಾರೆ.ನೀವೂ ಜೊತೆಯಾಗಿ. ಬರ್ರಿ. ನಿಮಗಿದೋ ಸ್ವಾಗತ.
-ಬಸೂ



No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...