Wednesday, January 20, 2016

' ದಲಿತ ಸಾಹಿತ್ಯದ ಸೌಂದರ್ಯಶಾಸ್ತ್ರ' : ಪುಸ್ತಕ ಸೊಗಸು ಬಹುಮಾನ

ಕನ್ನಡ ಪುಸ್ತಕ ಪ್ರಾಧಿಕಾರದ ವರ್ಷದ ಪುಸ್ತಕ ಸೊಗಸು ಮತ್ತು ಅತ್ಯುತ್ತಮ ವಿನ್ಯಾಸದ ಮೊದಲ ಪುಸ್ತಕ ಬಹುಮಾನಕ್ಕೆ ಲಡಾಯಿ ಪ್ರಕಾಶನದ ' ದಲಿತ ಸಾಹಿತ್ಯದ ಸೌಂದರ್ಯಶಾಸ್ತ್ರ' ಪುಸ್ತಕ ಆಯ್ಕೆಯಾಗಿದೆ.

ಹಿಂದಿಯ ಬಹುದೊಡ್ಡ ಲೇಖಕರಾದ ಓಮ್ ಪ್ರಕಾಶ ವಾಲ್ಮೀಕಿ ಈ ಪುಸ್ತಕದ ಲೇಖಕರು. ನಮ್ಮ ನಡುವಿನ ಅತ್ಯುತ್ತಮ ಅನುವಾದಕರಲ್ಲಿ ಒಬ್ಬರಾದ ಸಿದ್ದಾಪುರದ ಆರ್ ಪಿ ಹೆಗಡೆ ಕನ್ನಡಕ್ಕೆ ಅನುವಾದಿಸಿದ್ದಾರೆ.

ಈ ಪುಸ್ತಕದ ಸೊಗಸು ಹೆಚ್ಚಿಸುವಲ್ಲಿ ಪುಸ್ತಕದ ಮುಖಪುಟ ಮತ್ತು ಒಳವಿನ್ಯಾಸ ಮಾಡಿದ ಜೀವ ಸ್ಪಂದನೆಯ ಕಲಾವಿದ ಜೆ ಅರುಣಕುಮಾರ ಶ್ರಮ ದೊಡ್ಡದು. ಅಷ್ಟೇ ಚಂದವಾಗಿ ಮುದ್ರಿಸಿದ ಇಳಾ ಮುದ್ರಣದ ಗುರು ಅವರ ಪಾತ್ರವೂ ಮುಖ್ಯವಾದುದು. ಅವರ ಶ್ರಮ ಮತ್ತು ಶ್ರದ್ಧೆ ಪುಸ್ತಕದ ಗುಣಮಟ್ಟ ಹೆಚ್ಚಲು ಕಾರಣವಾಗಿದೆ. ಅವರೆಲ್ಲರಿಗೂ ಧನ್ಯವಾದಗಳು. 

ಸಾಧ್ಯವಾದರೆ ನೀವೂ ಈ ಪುಸ್ತಕವನ್ನು ಗಮನಿಸಿ.1 comment:

  1. ಮಾನ್ಯರೇ,
    ನನಗೆ ಒಂದು ಪ್ರತಿ ಕಳುಹಿಸಿ. ವಿಳಾಸ: ನಟರಾಜ್ ಹೊನ್ನವಳ್ಳಿ, Sanskrit college of Visual and performing Arts, #3rd Floor, Venkatagiri Plaza, Gokula Road, Hubballi - 580030

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...