Tuesday, January 19, 2016

ಹೈದರಾಬಾದ್ ಕೇಂದ್ರ ವಿವಿಯಲ್ಲಿ ನಡೆಯುತ್ತಿರುವುದೇನು ?
ರವಿಕುಮಾರ್
 ಕಾರ್ಯದರ್ಶಿ, ರಾಷ್ಟ್ರೀಯ ದಲಿತ ವೇದಿಕೆ


ಸ್ನೇಹಿತರೆ, ಈ ವೇಳೆಗೆ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ನಡೆದ ದುರದೃಷ್ಟಕರ ಘಟನೆಯನ್ನು ನೀವು ತಿಳಿದುಕೊಂಡಿರಬಹುದು. ಈ ಘಟನೆಯನ್ನು ನಾವು ಪ್ರತ್ಯೇಕ ಘಟನೆಯಾಗಿ ನೋಡಬಾರದು. ಕ್ಯಾಂಪಸ್ ನಲ್ಲಿ ನಡೆದ ಸರಣಿ ಘಟನಾವಳಿಗಳು ಈ ಕೃತ್ಯಕ್ಕೆ ಹೇಗೆ ಪ್ರಚೋದನೆ ನೀಡಿದವು ಎನ್ನುವುದನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ .

ಭಾರತೀಯ ದಂಡಸಂಹಿತೆಯಲ್ಲಿ ಇನ್ನೂ ಮರಣ ದಂಡನೆ ಶಿಕ್ಷೆ ಉಳಿದುಕೊಂಡಿರುವ ಬಗ್ಗೆ ಅಂಬೇಡ್ಕರ್ ವಿದ್ಯಾರ್ಥಿ ಸಂಘ ಪ್ರತಿಭಟನೆ ಆರಂಭಿಸಿತು. ಡಾ. ಬಿ .ಆರ್ . ಅಂಬೇಡ್ಕರ್ ಅವರ ಅನುಯಾಯಿಗಳಾಗಿ ಹಾಗೂ ಸೂಕ್ಷ್ಮ ಮಾನವಹಕ್ಕು ಸಂರಕ್ಷಕರಾಗಿ ಆರು ತಿಂಗಳ ಹಿಂದೆ ಸಂವಿಧಾನಾತ್ಮಕ ಚೌಕಟ್ಟಿನಲ್ಲೇ ಪ್ರತಿಭಟನೆ ಆರಂಭಿಸಿದರು . ಮರಣದಂಡನೆ ನಿಷೇಧಕ್ಕೆ ವಿರುದ್ಧವಾಗಿರುವ ಬಲಪಂಥೀಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ , ಈ ಪ್ರತಿಭಟನೆ ಬಗ್ಗೆ ಅಸಹನೆ ಹೊಂದಿತ್ತು ಹಾಗೂ ಅಂಬೇಡ್ಕರ್ ವಿದ್ಯಾರ್ಥಿ ಸಂಘದ ವಿರುದ್ಧ ಕೆಸರೆರಚಾಟಕ್ಕೆ ನಿಂತಿತು .

ಡಾ .ಪಿ. ಅಪ್ಪಾರಾವ್ ಅವರನ್ನು ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕ ಮಾಡಿದ ಬಳಿಕ ಎಬಿವಿಪಿಗೆ ಆನೆ ಬಲ ಬಂತು. ಜೊತೆಗೆ ಕ್ಯಾಂಪಸ್ ಹೊರಗಿನ ಬಿಜೆಪಿ/ಆರೆಸ್ಸೆಸ್ ಸದಸ್ಯರು ಅಂಬೇಡ್ಕರ್ ವಿದ್ಯಾರ್ಥಿ ಸಂಘದ ಮುಖಂಡರ ವಿರುದ್ಧ ನೇರ ದಾಳಿಗೆ ಆಶ್ರಯದಾತರಾದರು. ಅಪ್ಪಾರಾವ್ ಅವರು ಕುಲಪತಿಯಾಗಿ ನೇಮಕವಾದ ಬಳಿಕ ವಿಶ್ವವಿದ್ಯಾಲಯದ ಒಂದು ಪ್ರಸ್ತಾವನೆ ವಿರುದ್ಧವೂ ಎಎಸ್ಎ ಪ್ರತಿಭಟನೆ ಆರಂಭಿಸಿತು. ಅದೆಂದರೆ ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ಎಲ್ಲರೂ ಲುಂಗಿ ಧರಿಸಿ ಪಾಲ್ಗೊಳ್ಳಬೇಕು ಎನ್ನುವ ಪ್ರಸ್ತಾವ. ಕೊನೆಗೆ ಕುಲಪತಿ ಅದನ್ನು ಕೈಬಿಡಬೇಕಾಯಿತು. ಅಂತಿಮವಾಗಿ ವಿದ್ಯಾರ್ಥಿಗಳು ತಮಗೆ ಇಷ್ಟವಾದ ದಿರಿಸಿನಲ್ಲಿ ಭಾಗವಹಿಸಲು ಅನುಮತಿ ನೀಡಿದರು. ಎರಡು ಘಟನೆಗಳಿಂದ ಉದ್ರಿಕ್ತರಾದ ಎಬಿವಿಪಿ ಮುಖಂಡರು ಫೇಸ್ ಬುಕ್ ನಲ್ಲಿ ಎಎಸ್ಎ ಮುಖಂಡರ ಬಗ್ಗೆ ಕಪೋಲಕಲ್ಪಿತ ಹಾಗೂ ತೇಜೋವಧೆ ಅಭಿಪ್ರಾಯಗಳನ್ನು ಪ್ರಕಟಿಸಲು ಆರಂಭಿಸಿದರು. ಇದನ್ನು ನೋಡಿದ ಎಎಸ್ಎ ಮುಖಂಡರು ಎಬಿವಿಪಿ ಮುಖಂಡರನ್ನು ಭದ್ರತಾ ಅಧಿಕಾರಿಯ ಬಳಿಗೆ ಎಳೆತಂದು ಕಪೋಲ ಕಲ್ಪಿತ ಹೇಳಿಕೆಗಳನ್ನು ಫೇಸ್ಬುಕ್ ನಿಂದ ಕಿತ್ತುಹಾಕುವಂತೆ ಮಾಡಿದರು.

ಅಲ್ಲಿಗೆ ಎಲ್ಲವೂ ಮುಗಿಯಿತು ಎಂದು ಎಎಸ್ಎ ಮುಖಂಡರು ಅಂದುಕೊಂಡರು. ಆದರೆ ಎಬಿವಿಪಿ ಸದಸ್ಯರು ಸ್ಥಳೀಯ ಠಾಣೆಯಲ್ಲಿ ಹಾಗೂ ವಿಶ್ವವಿದ್ಯಾಲಯ ಅಧಿಕಾರಿಗಳಲ್ಲಿ ಈ ಬಗ್ಗೆ ದೂರು ದಾಖಲಿಸಿದರು. ತಮ್ಮ ಸದಸ್ಯರೊಬ್ಬರ ಮೇಲೆ ಎಎಸ್ಎ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಪ್ರಕರಣ ದಾಖಲಿಸಿದರು.

ವಿಶ್ವವಿದ್ಯಾಲಯ ಈ ವಿಚಾರದ ಬಗ್ಗೆ ಪರಿಶೀಲನೆಗೆ ಶಿಷ್ಟಾಚಾರ ಸಮಿತಿಯನ್ನು ನೇಮಕ ಮಾಡಿತು. ಇವೆಲ್ಲವೂ ಸುಳ್ಳು ಎಂಬ ವರದಿಯನ್ನು ಸಮಿತಿ ನೀಡಿತು. ಎಬಿವಿಪಿ, ತಮ್ಮ ಬಾಹ್ಯಬಲವನ್ನು ಕ್ರೋಡೀಕರಿಸಿಕೊಂಡು, ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯ ಹಾಗೂ ವಿಧಾನ ಪರಿಷತ್ ಸದಸ್ಯರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದು, ಅವರು ಕುಲಪತಿಗೆ ಸೂಕ್ತ ಸೂಚನೆ ನೀಡುವಂತೆ ಮಾಡಬೇಕು ಎಂದು ಒತ್ತಡ ತಂದರು .

ಆಗ ಕುಲಪತಿ ಶಿಷ್ಟಾಚಾರ ಸಮಿತಿಯನ್ನು ಮತ್ತಷ್ಟು ವಿಸ್ತರಿಸಿ, ಹಿಂದಿನ ವರದಿಗೆ ವಿರುದ್ಧವಾದ ಮತ್ತೊಂದು ವರದಿಯನ್ನು ಪಡೆದರು. ಇದರ ಅನ್ವಯ ಐದು ಮಂದಿ ಎಎಸ್ಎ ಸಂಶೋಧನಾ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಯಿತು. ಎಬಿವಿಪಿ ವಿಶ್ವವಿದ್ಯಾಲಯಕ್ಕೆ ಇನ್ನೊಂದು ಖಾಸಗಿ ದೂರು ಸಲ್ಲಿಸಿ, ಎಎಸ್ಎ ಸದಸ್ಯರ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ವರದಿ ನೀಡುವಂತೆ ಕೋರಿತು. ವಿಶ್ವವಿದ್ಯಾಲಯ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಯ ಸಹಕಾರದೊಂದಿಗೆ ಎಎಸ್ಎ ಪ್ರತಿಭಟನೆಗೆ ತೊಂದರೆ ನೀಡಿತು .
ಈ ಪರಿಸ್ಥಿತಿಯಲ್ಲಿ ರೋಹಿತ್ ಜೀವ ಕಳೆದುಕೊಂಡಿದ್ದ .

ಇದನ್ನು ಏಕೆ ಹೇಳುತ್ತಿರುವುದೆಂದರೆ , ಇದನ್ನು ನಾವು ಕೇವಲ ಎಚ್ ಸಿಯು ಕ್ಯಾಂಪಸ್ ವಿಷಯವಾಗಿಯೇ ನೋಡಬೇಕು. ಏಕೆಂದರೆ ಇಎಫ್ಎಲ್ ಯು ನಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಹಾಗೂ ಸಭಾಗೃಹಕ್ಕೆ ಡಾ . ಬಿ .ಆರ್ . ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ಆಗ್ರಹಿಸಿದ ಮದ್ರಾಸ್ ಕಾನೂನು ಕಾಲೇಜಿನ ದಲಿತ ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಹೀಗೆ ಎಲ್ಲಕ್ಕೂ ಸಾಮ್ಯತೆ ಇದೆ. ಈ ಎಲ್ಲ ಪ್ರತಿಭಟನೆಗಳನ್ನು ನಮ್ಮ ಯುವಕರು ಸಂವಿಧಾನಾತ್ಮಕ ಚೌಕಟ್ಟಿನೊಳಗೇ ಮಾಡಿದ್ದಾರೆ . ಅವರ ಎಲ್ಲ ಬೇಡಿಕೆಗಳೂ ಇಡೀ ಭಾರತೀಯ ಸಮುದಾಯಕ್ಕೆ ಸಂಬಂಧಿಸಿದವು. ಇವು ಕನಿಷ್ಠ ಮಾನವಹಕ್ಕು ವಿಷಯಗಳು. ಪ್ರಜಾಪ್ರಭುತ್ವ ದೇಶದಲ್ಲಿ ನ್ಯಾಯ ಹಾಗೂ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ . ಸಮುದಾಯದ ಘನತೆಯನ್ನು ಎತ್ತಿಹಿಡಿಯುವುದಕ್ಕೆ ಸಂಬಂಧಿಸಿದ್ದು.

ಆದರೆ ಪರಸ್ಪರ ಸಂಬಂಧ ಇಲ್ಲದ ಈ ಎಲ್ಲ ಪ್ರಕರಣಗಳಲ್ಲಿ ಆಡಳಿತ ವ್ಯವಸ್ಥೆಯ ಆಕ್ರಮಣಶೀಲತೆ ಹಾಗೂ ಕಾರ್ಯಶೈಲಿ ಒಂದೇ ಆಗಿದೆ. ಪರಸ್ಪರ ಮಾತನಾಡಿಕೊಂಡಂತೆ ಎಲ್ಲರೂ ನಮ್ಮ ಯುವಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಅವರ ವೃತ್ತಿ ಭವಿಷ್ಯವೇ ಮಣ್ಣುಪಾಲಾಗಿದೆ. ಅವರನ್ನು ಕ್ಯಾಂಪಸ್ ನಿಂದ ಹೊರಹಾಕಿರುವುದರಿಂದ ಯಾವುದೇ ಶೈಕ್ಷಣಿಕ ಉದ್ಯೋಗಗಳನ್ನು ಪಡೆಯಲು ಅವರು ಅನರ್ಹರಾಗುತ್ತಾರೆ. ಈ ಮೂರೂ ಘಟನೆಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳನ್ನು ನೋಡಿದರೆ ಅವರೆಲ್ಲರೂ ಆಯಾ ಸಂಸ್ಥೆಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿಗಳಾಗಿದ್ದವರು.

ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ಇಂಥ ಘಟನೆ ನಡೆದದ್ದು ಇದೇ ಮೊದಲಲ್ಲ . ಸರಿಯಾಗಿ ೧೫ ವರ್ಷಗಳ ಹಿಂದೆ ಇದೇ ಅಪ್ಪಾರಾವ್ ಮುಖ್ಯ ವಾರ್ಡನ್ ಆಗಿದ್ದಾಗ, ೧೧ ಮಂದಿ ಅತ್ಯುತ್ತಮ ಸಂಶೋಧನಾ ವಿದ್ಯಾರ್ಥಿಗಳನ್ನು ಮೂರು ವರ್ಷ ಕಾಲ ಹೊರಹಾಕಲಾಗಿತ್ತು. ಅವರ ಪೈಕಿ ಮೂರು ನಾಲ್ಕು ಮಂದಿಗೆ ಮಾತ್ರ ಅಧ್ಯಯನ ಮುಂದುವರಿಸುವುದು ಸಾಧ್ಯವಾಯಿತು . ಅವರು ತಮ್ಮ ಪಿಎಚ್ ಡಿ ಗಳನ್ನು ಪೂರೈಸಿದ್ದಾರೆ. ಆದರೆ ಎಲ್ಲಿ ಉದ್ಯೋಗ ಅರಸಿ ಹೋದರೂ ಈ ಕಪ್ಪುಚುಕ್ಕೆ ಸಮಸ್ಯೆ ಅವರನ್ನು ಕಾಡುತ್ತದೆ.

ಆದ್ದರಿಂದ ನಮ್ಮ ಕಳಕಳಿಯ ಮನವಿ ಎಂದರೆ ಇದನ್ನು ಕೇವಲ ಕ್ಯಾಂಪಸ್ ಸಮಸ್ಯೆಯಾಗಿಯೇ ಪರಿಗಣಿಸಬೇಡಿ. ಇದು ದಲಿತ ಪ್ರಜ್ಞಾವಂತ ಸಮುದಾಯದ ವಿರುದ್ಧದ ಯೋಜಿತವಾದ ಕುಟಿಲ ತಂತ್ರ.

ಭವಿಷ್ಯದ ಪೀಳಿಗೆಯ ನಾಯಕರನ್ನು ಮತ್ತು ಬುದ್ಧಿಜೀವಿಗಳನ್ನು ಮತ್ತಷ್ಟು ಕಳೆದುಕೊಳ್ಳುವ ಮುನ್ನ ಹಿಂದೂ ಜಾತಿಭೂತದ ವಿರುದ್ಧದ ಹೋರಾಟಕ್ಕೆ ಎಲ್ಲರೂ ಒಗ್ಗೂಡೋಣ.ಸೌಜನ್ಯ : ವಾಭಾ ೨೦.೧.೨೦೧೬

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...