Thursday, February 25, 2016

ದೇಶವೆಂದರೆ ಬರಿ ಮಣ್ಣಲ್ಲವೋತೆಲುಗು ಮೂಲ: ಗುರಜಾಡ ಅಪ್ಪಾರಾವು.
ಕನ್ನಡಕ್ಕೆ: ಕೇಶವ ಮಳಗಿ. 
 keshva malagi


ದೇಶವನ್ನು ಪ್ರೀತಿಸೆಂದೆ
ಒಳಿತನ್ನು ಹೆಚ್ಚಿಸೆಂದೆ
ಟೊಳ್ಳುಮಾತನು ಗಂಟುಕಟ್ಟಿ
ಬಂಡೆಗೆ ತಲೆ ನೀಡು ಎಂದೆ 

ಹಾಲು ತೆನೆಗಳು ತುಂಬಿ ತುಳುಕುವ
ಹಾದಿಯಲಿ ನೀ ಹಾಡ ಹಾಡು
ದವಸ-ಧಾನ್ಯ ಇರುವ ಎಲ್ಲಡೆ
ಬಲದ ಮನುಷನು ಇರುವ ನೋಡು!  

ಹಸಿದ ಮನುಜರು ಇರುವವರೆಗೆ
ದೇಶ ಸುಖವು ಎಲ್ಲಿರುವುದೋ
ಎಲ್ಲ ಕಲೆಗಳ ಕರಗತವ ಮಾಡಿ
ದೇಶ ಕಣಜವ ತುಳುಕಿಸೋ  

ಹಿಂದೆ ತಿರುಗಿ ನೋಡಿದಾಗ
ಒಳ್ಳೆಯದು ಒಂದಿನಿತೆ ಇರುವುದು
ಮಂದಮತಿಯಾಗದೆ ಮುಂದಡಿಯಿಡು
ನೀ ಹಿಂದೆ ಉಳಿದರೆ ಹಿಂದೆಯೇ 

ದೇಶಭಕುತಿ ನನ್ನೊಬ್ಬನ ಸೊತ್ತೆನ್ನುತ 
ಟೊಳ್ಳು ದನಿಯಲಿ ಕೇಕೆ ಹಾಕದಿರು
ಎಂತಾದರೂ ಒಳಿತು ಮಾಡುತ
ಜನರ ಜತನವ ಧ್ಯಾನಿಸೋ!

ಹಗೆಯ ಹಾಲಾಹಲವು ದೇಶವ
ನಜ್ಜುಗುಜ್ಜಿಸಿ ನುಚ್ಚನೂರಾಗಿಸುವುದು 
ಬೆಚ್ಚಗಿನ ಸ್ನೇಹ ಹಸ್ತ ಚಾಚಿ
ಐಕ್ಯಮತವನು ಸಾಧಿಸೋ 

ಪರರ ಏಳ್ಗೆಗೆ ಹೊರಳಿ ಅಳುವ
ಪಾಪಿಗೆಲ್ಲಿಯ ಸುಖವು ಹೇಳು
ಅವರ ಸುಖವೇ ನನ್ನ ಸುಖವೆನ್ನುವಾತಗೆ
ಎಲ್ಲರ ಹಾರೈಕೆ ತಿಳಿಯೊ  

ಮತವು ಬೇರಾದರೇನೋ
ಮನುಜರಾದರೆ ಮನಸು ಒಂದೇ
ಮನುಜ ಕುಲವು ಎದ್ದು ನಿಂತರೆ
ಲೋಕವು ಮೆರೆಯುವುದೋ 

ದೇಶವೆಂಬುದು ದೊಡ್ಡ ಮರವು
ಪ್ರೀತಿ ಹೂವನು ಅರಳಿಸುವುದು
ನರರ ಚರ್ಮದ ಬೆವರಿನಲ್ಲಿ
ಸುಖದ ಬೆಳೆಯ ಬೆಳೆವುದು  

ಮರದ ಮರೆಯಲಿ ಅಡಗಿ ಕುಳಿತ
ಕೋಕಿಲ ಕವಿಯ ಹಾಡನು ಹಾಡಲಿ
ಸ್ವರದ ಸೊಗಸಿಗೆ ಸೋತ ದೇಶದ
ಮನಗಳು ಹೆಮ್ಮೆಯಲಿ ತಲೆಯೆತ್ತಲಿ  

ಕಪಟ-ವಂಚನೆ, ಕ್ರೋಧ, ನೆತ್ತರು
ಹಣದ ವೃಕ್ಷಕೆ ಆಹಾರವು
ಸ್ವಂತ ಲಾಭಕೆ ಕೊಂಚ ಮಾನಕೆ
ಪರರಿಗೆ ಹಿಂಸಿಸದಿರೋ 

ದೇಶವೆಂದರೆ ಮಣ್ಣಲ್ಲವೋ
ದೇಶವೆಂದರೆ ಮನುಜರು.

Monday, February 22, 2016

ಪ್ರಭುತ್ವ ಹೇರುವ ರಾಷ್ಟ್ರಪ್ರೇಮ ನಮಗೆ ಬೇಡ...

ಪ್ರಜಾಪ್ರಭುತ್ವ ಎಂದರೆ ಏನು? ಅಭಿವ್ಯಕ್ತಿ ಸ್ವಾತಂತ್ರ್ಯ ಎಂದರೆ ಏನು? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂವಿಧಾನ ಹಾಕಿರುವ ಮಿತಿಯಲ್ಲಿಯೇ ಒಬ್ಬ ಪ್ರಜೆಯಾಗಿ ನಾನು ಮಾತನಾಡಲು ಆಗುವುದಿಲ್ಲ ಎಂದರೆ ಏನು? ‘ನೀನು ಹೀಗೆಯೇ ಮಾತನಾಡಬೇಕು, ಇಲ್ಲವಾದರೆ ನಿನಗೆ ದೇಶದ್ರೋಹಿ ಎಂಬ ಪಟ್ಟಕಟ್ಟಿ ನೇಣಿಗೆ ಏರಿಸಿ ಬಿಡುತ್ತೇವೆ’ ಎಂದರೆ ಈ ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗುತ್ತ ಬಂತು ಎಂದು ಹೇಗೆ ನಂಬುವುದು?

ಈಗ ದೇಶದಲ್ಲಿ ನಡೆದಿರುವ ವಿದ್ಯಮಾನಗಳು ವಿಚಿತ್ರವಾಗಿವೆ; ಸರ್ವಸ್ವತಂತ್ರವಾಗಿ ಯೋಚಿಸುವವರನ್ನು ತಲ್ಲಣಗೊಳಿಸುವಷ್ಟು ಆತಂಕಕಾರಿಯಾಗಿವೆ.

ಯಾರೋ ದೂರದಲ್ಲಿ, ಮರೆಯಲ್ಲಿ ನಿಂತು ನೀವು ಹೀಗೆಯೇ ಯೋಚಿಸಬೇಕು, ಹೀಗೆಯೇ ಮಾತನಾಡಬೇಕು ಎಂದು ನಿರ್ಬಂಧ ಹೇರುತ್ತಿರುವಂತೆ ಭಾಸವಾಗುತ್ತದೆ; ಉಸಿರು ಕಟ್ಟಿದಂತೆ ಆಗುತ್ತಿದೆ. ಇದು ನೈಜ, ಜೀವಂತ ಪ್ರಜಾಪ್ರಭುತ್ವದ ರೀತಿ ಅಲ್ಲವೇ ಅಲ್ಲ ಎಂದು ಅನಿಸತೊಡಗಿದೆ. ಆದರೆ ಎಲ್ಲವೂ ರಾಷ್ಟ್ರಪ್ರೇಮ, ದೇಶಪ್ರೇಮ ಮತ್ತು ರಾಷ್ಟ್ರಧ್ವಜದ ಹೆಸರಿನಲ್ಲಿಯೇ ನಡೆಯುತ್ತಿದೆ. ಬಹುಪಾಲು ಮಾಧ್ಯಮಗಳು ಇದೇ ‘ವಾದ್ಯಗೋಷ್ಠಿ’ಯಲ್ಲಿ ಮತ್ತು ಅದೇ ಉಸುರಿನಲ್ಲಿ ಹಾಡುತ್ತಿರುವಂತೆಯೂ ಕಾಣುತ್ತದೆ. ಮತ್ತೆ, ಇಡೀ ಪ್ರಕರಣದಲ್ಲಿ ಕಣ್ಣಿಗೆ ಕಾಣುವಂತೆಯೇ ಹಿಂಸೆ ತಾಂಡವವಾಡುತ್ತಿದೆ.

ದೆಹಲಿಯ ಜೆ.ಎನ್‌.ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಕುಮಾರ್‌ ಅವರನ್ನು ಪಟಿಯಾಲ ನ್ಯಾಯಾಲಯಕ್ಕೆ ಪೊಲೀಸರು ಕರೆದುಕೊಂಡು ಬರುತ್ತಿದ್ದಾರೆ. ದಾರಿಯಲ್ಲಿ ಕೆಲವರು ವಕೀಲರ ವೇಷದಲ್ಲಿ ಇರುವವರು ಅಥವಾ ಸ್ವತಃ ವಕೀಲರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು, ‘ಆತನಿಗೆ ಗುಂಡು ಹಾಕಿ’, ‘ಅವನನ್ನು ನೇಣಿಗೆ ಏರಿಸಿ’ ಎಂದು ಕನ್ಹಯ್ಯ ಕಡೆಗೆ ಓಡಿ ಬರುತ್ತಾರೆ. ಅವರಿಗೆ ಸಿಕ್ಕ ಸಿಕ್ಕ ಕಡೆ ಥಳಿಸುತ್ತಾರೆ. ಥಳಿಸುತ್ತ ‘ಭಾರತ್‌ ಮಾತಾ ಕೀ ಜೈ’ ಎನ್ನುತ್ತಾರೆ. ಕನ್ಹಯ್ಯ ವಿರುದ್ಧ ಇರುವ ಆರೋಪ ಏನು ಎಂದು ತೀರಾ ಈಚಿನವರೆಗೆ ದೆಹಲಿ ಪೊಲೀಸ್‌ ಕಮಿಷನರ್ ಆಗಿದ್ದ ಬಸ್ಸಿ ಅವರಿಗೇ ಗೊತ್ತಿದ್ದಂತೆ ಕಾಣುವುದಿಲ್ಲ. ನ್ಯಾಯಾಲಯದಲ್ಲಿ ಬರೀ ಸರ್ಕಾರದ ಪರವಾಗಿ ಮಾತ್ರವಲ್ಲ ಆರೋಪಿ ಪರವಾಗಿಯೂ ವಾದಿಸಿ ಆತ ತಪ್ಪಿತಸ್ಥ ಅಲ್ಲ ಎಂದು ಮನವರಿಕೆ ಮಾಡಿಕೊಡಬೇಕಾದ ವಕೀಲರೇ, ‘ಗುಂಡು ಹಾರಿಸುವ’,‘ನೇಣಿಗೆ ಏರಿಸುವ’ ಮಾತು ಆಡುತ್ತಿದ್ದಾರೆ.

ಇದೇ ಸಮಯದಲ್ಲಿ ದೇಶದ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರಿಗೆ ಇದ್ದಕ್ಕಿದ್ದಂತೆ ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ ಕರೆಯಬೇಕು ಎಂದು ಅನಿಸುತ್ತದೆ. ಸಭೆಯಲ್ಲಿ ಅವರು ವಿಶ್ವವಿದ್ಯಾಲಯಗಳಲ್ಲಿ ಸಿಬ್ಬಂದಿಗೆ ಸಂಬಳ ಕೊಡಲು ಹಣ ಇದೆಯೇ ಎಂದೇನೂ ಕೇಳುವುದಿಲ್ಲ, ಪಾಠಗಳು ಸರಿಯಾಗಿ ನಡೆದಿವೆಯೇ ಎಂದೂ ವಿಚಾರಿಸುವುದಿಲ್ಲ. ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ 207 ಅಡಿ ಎತ್ತರದ ರಾಷ್ಟ್ರಧ್ವಜ ಹಾರಿಸಬೇಕು ಎಂದು ಒಂದೇ ಒಂದು ದಿಕ್ಖತ್ತು ಕೊಟ್ಟು ಸಭೆಯನ್ನು ಬರ್ಖಾಸ್ತು ಮಾಡುತ್ತಾರೆ.

ಅಂದೇ ಸಂಜೆ ಒಂದು ಪ್ರಬಲ ರಾಷ್ಟ್ರೀಯ ವಾಹಿನಿಯಲ್ಲಿ ಸರ್ಕಾರದ ಈ ತೀರ್ಮಾನವನ್ನು ಘನಘೋರವಾಗಿ ಸಮರ್ಥಿಸುವ ಏಕಮುಖದ ವಾಗ್ಝರಿ ಶುರುವಾಗುತ್ತದೆ. ಬರೀ ರಾಷ್ಟ್ರಧ್ವಜ ಹಾರಿಸುವುದು ಮಾತ್ರ ದೇಶಭಕ್ತಿಯಲ್ಲ ಎಂದು ಹೇಳಲು ಪ್ರಯತ್ನಿಸುವವರ ಬಾಯಿಯನ್ನು ನಿರ್ದಯವಾಗಿ ಮುಚ್ಚಿಸಲಾಗುತ್ತದೆ. ಎಲ್ಲವೂ ಪೂರ್ವನಿರ್ಧರಿತ ನಾಟಕದಂತೆ ಕಾಣುತ್ತದೆ. ಹಾಗಾದರೆ ಭಿನ್ನವಾಗಿ ಯೋಚಿಸುವುದು ರಾಷ್ಟ್ರಪ್ರೇಮ ಅಲ್ಲವೇ? ಹಾಗೆ ಸ್ವತಂತ್ರವಾಗಿ ಯೋಚಿಸುವುದನ್ನೇ ದೇಶದ್ರೋಹ ಎಂದು ಬಿಂಬಿಸಿ ಬಾಯಿ ಮುಚ್ಚಿಸಿ ಬಿಟ್ಟರೆ ಪ್ರಜಾಪ್ರಭುತ್ವಕ್ಕೆ ಏನು ಅರ್ಥ, ಏನು ಬೆಲೆ? ಈ ಸ್ವಾತಂತ್ರ್ಯವನ್ನು ದೇಶ ಎಷ್ಟು ಕಷ್ಟಪಟ್ಟು ಗಳಿಸಿದೆಯಲ್ಲವೇ? ನಾವೆಲ್ಲ ಹೆಮ್ಮೆಪಡುವ ಸಂವಿಧಾನವನ್ನು ಎಷ್ಟೆಲ್ಲ ಯೋಚಿಸಿ ನಮ್ಮ ಹಿರಿಯರು ಬರೆದರು ಅಲ್ಲವೇ?

ಜೆ.ಎನ್‌.ಯುವನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಎಲ್ಲ ವಿದ್ಯಮಾನ ನಡೆಯುತ್ತಿರುವುದು ಕೂಡ ಕುತೂಹಲಕಾರಿ ಮಾತ್ರವಾಗಿಲ್ಲ; ಇದರ ಹಿಂದೆ ಆಳವಾದ ರಾಜಕೀಯ ಹುನ್ನಾರವೂ ಇದ್ದಂತೆ ತೋರುತ್ತದೆ. ಜೆ.ಎನ್‌.ಯು ರಾಷ್ಟ್ರದ ರಾಜಧಾನಿಯಲ್ಲಿ ಇದೆ ಮತ್ತು ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹಾಗೂ ಮುಕ್ತ ಚಿಂತನೆಯ ಒಂದು ಬಹುದೊಡ್ಡ ವೇದಿಕೆ ಎನಿಸಿದೆ. ‘ಮುಕ್ತ ಚಿಂತನೆಗೆ ಅಲ್ಲಿಯೇ ಕಡಿವಾಣ ಹಾಕಿಬಿಟ್ಟರೆ ಆಯಿತು’ ಎಂದು ಅಧಿಕಾರದಲ್ಲಿ ಇದ್ದವರು ಯೋಚಿಸುತ್ತಿದ್ದಾರೆ. ‘ಜೆ.ಎನ್‌.ಯು ವಿದ್ಯಾರ್ಥಿ ಸಂಘದ ನಾಯಕನನ್ನೇ ಬಲಿ ಹಾಕಿಬಿಟ್ಟರೆ ಬಾಕಿಯವರೆಲ್ಲ ಮುಚ್ಚಿಕೊಂಡು ಇರುತ್ತಾರೆ’ ಎಂದು ಸರ್ಕಾರ ಭಾವಿಸಿದಂತಿದೆ.

ಅದು ಉಳಿದ ವಿಶ್ವವಿದ್ಯಾಲಯಗಳಲ್ಲಿನ ಸ್ವತಂತ್ರ ಚಿಂತನೆಗೂ ಮೂಗುದಾಣ ಹಾಕಿದಂತೆ ಆಗುತ್ತದೆ ಎಂದೂ ಸರ್ಕಾರ ಭಾವಿಸಿರಬಹುದು. ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂಬ ಸೂಚನೆಯ ಹಿಂದೆ ಇದೇ ಹುನ್ನಾರ ಇದೆ. ಜೆ.ಎನ್‌.ಯು ಎಷ್ಟು ಸ್ವತಂತ್ರ ಚಿಂತನೆಯ ಕೇಂದ್ರ ಎನಿಸುತ್ತದೆ ಎಂದರೆ ಅಲ್ಲಿನ ನಾಲ್ವರು ಎಬಿವಿಪಿ ಮುಖಂಡರು ಕೂಡ ತಮ್ಮ ಸಂಘಟನೆಗೆ ರಾಜೀನಾಮೆ ನೀಡಿದ್ದಾರೆ. ‘ಜೆ.ಎನ್.ಯು ವಿದ್ಯಮಾನವನ್ನು ಸರ್ಕಾರ ನಿಭಾಯಿಸುತ್ತಿರುವ ರೀತಿ ಸರಿಯಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಂದರೆ ಅವರೂ ದೇಶದ್ರೋಹಿಗಳು ಎಂದು ಹಣೆಪಟ್ಟಿ ಕಟ್ಟಲು ಆಗುತ್ತದೆಯೇ?

ನಮಗೆ ಪ್ರತ್ಯೇಕ ದೇಶ ಬೇಕು ಎಂದು ಕೇಳುವುದು ಈ ದೇಶಕ್ಕೆ ಹೊಸದೇನೂ ಅಲ್ಲ. ಕಾಶ್ಮೀರದಲ್ಲಿ ಈಗ ಅದು ನಿತ್ಯವೂ ಕೇಳಿಬರುತ್ತಿರುವ ಕೂಗು. ಹಾಗೆಂದು ಅಂಥ ಕೂಗು ಹಾಕುತ್ತಿರುವ ಎಲ್ಲರ ವಿರುದ್ಧವೂ ರಾಷ್ಟ್ರದ್ರೋಹದ ಪ್ರಕರಣ ಹಾಕಿ ಜೈಲಿಗೆ ಕಳುಹಿಸಲು ಆಗುತ್ತದೆಯೇ? ಈಶಾನ್ಯದ ಅನೇಕ ರಾಜ್ಯಗಳಲ್ಲಿ ಭಾರತದ ವಿರುದ್ಧ ಕೂಗು ಕೇಳಿಬರುತ್ತಿಲ್ಲವೇ? ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳಲಿಲ್ಲವೇ? ಈಗಲೂ ಕೊಡಗಿನ ಮಂದಿ ಕೇಳುತ್ತಿಲ್ಲವೇ? ಅವರ ವಿರುದ್ಧ ರಾಜ್ಯದ್ರೋಹದ ಪ್ರಕರಣ ಜಡಿದು ಒಳಗೆ ಹಾಕಲು ಆಗುತ್ತದೆಯೇ? ಎಲ್ಲಿಯವರೆಗೆ ಇಂಥ ಕೂಗುಗಳು ಅಹಿಂಸಾತ್ಮಕವಾಗಿ ಮತ್ತು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಇರುತ್ತವೆಯೋ ಅಲ್ಲಿಯವರೆಗೆ ಅವುಗಳನ್ನು ಪ್ರಜಾಪ್ರಭುತ್ವದಲ್ಲಿ ಲಭ್ಯ ಇರುವ ಕಾನೂನಿನ ಚೌಕಟ್ಟಿನಲ್ಲಿಯೇ ನಿಭಾಯಿಸಬೇಕು.

ಜೆ.ಎನ್‌.ಯುದಲ್ಲಿ ಯಾರೋ ಕೆಲವರು ಹುಡುಗರು, ಅವರು ಪ್ರತ್ಯೇಕ ಕಾಶ್ಮೀರದ ಪರವಾಗಿಯೇ ಇದ್ದಾರೆ ಎಂದುಕೊಳ್ಳೋಣ, ಪ್ರತ್ಯೇಕ ದೇಶದ ಪರವಾಗಿ ಕೂಗು ಹಾಕಿದರೆ ಅವರನ್ನು ಕಾಶ್ಮೀರದಲ್ಲಿ ನಿರಂತರವಾಗಿ ಇದೇ ಕೂಗು ಹಾಕುತ್ತಿರುವವರಿಗಿಂತ ಭಿನ್ನವಾಗಿ ಹೇಗೆ ಪರಿಗಣಿಸುವುದು? ‘ಕಾಶ್ಮೀರದಲ್ಲಿ ಅವರು ಬಹುಸಂಖ್ಯಾತರು. ಆದರೆ, ಇಲ್ಲಿ ನಾಲ್ಕೈದು ಜನ ಸಿಕ್ಕಿದ್ದಾರೆ ಅವರನ್ನು ಬಡಿದು ಬಿಡೋಣ’ ಎಂದು ಸರ್ಕಾರ ಯೋಚನೆ ಮಾಡುತ್ತಿದೆಯೇ? ಹಾಗೆ ಮಾಡಿದರೆ ಆ ಕೂಗನ್ನೇ ಅಡಗಿಸಿದಂತೆ ಆಗುತ್ತದೆ ಎಂದು ತಿಳಿದುಕೊಳ್ಳುವುದು ಎಂಥ ಆತ್ಮವಂಚನೆ ಅಲ್ಲವೇ? ಅಥವಾ ಜೆ.ಎನ್.ಯುದಲ್ಲಿ ಉಳಿದ ಯಾರಿಗೂ ದೇಶಪ್ರೇಮ ಇಲ್ಲ ಎಂಬ ತೀರ್ಮಾನಕ್ಕೆ ಸರ್ಕಾರ ಹೇಗೆ ಬರುತ್ತದೆ? ಅವರೆಲ್ಲ ಈ ಕಾಶ್ಮೀರಿ ಹುಡುಗರನ್ನು ನೋಡಿ ನಕ್ಕು ಸುಮ್ಮನಾಗಿಬಿಟ್ಟಿರಬಹುದಲ್ಲ? ದೇಶಪ್ರೇಮ ಎಂಬುದು ಯಾರದಾದರೂ ಕೆಲವರ ಗುತ್ತಿಗೆ ಅಲ್ಲವಲ್ಲ!

ಬಿಜೆಪಿಯವರು ಇದು ತಮ್ಮದೇ ಗುತ್ತಿಗೆ ಎನ್ನುತ್ತಿದ್ದಾರೆ. ಅವರು ಮೂರು ದಿನಗಳ ‘ಜನ ಸ್ವಾಭಿಮಾನ ಅಭಿಯಾನ’ವನ್ನು ದಿಢೀರ್‌ ಎಂದು ಈಗಲೇ ಹಮ್ಮಿಕೊಳ್ಳುವ ಕಾರಣ ಏನಿರಬಹುದು? ಬಿಜೆಪಿಯವರು ತಾವು ಮಾತ್ರ ದೇಶಪ್ರೇಮಿಗಳು ಮತ್ತು ದೇಶಪ್ರೇಮದ ವ್ಯಾಖ್ಯಾನವನ್ನು ‘ನಾವು ಮಾತ್ರ ಮಾಡಬಲ್ಲೆವು ಅಥವಾ ಮಾಡುತ್ತೇವೆ’ ಎಂದು ಅಂದುಕೊಂಡಿದ್ದಾರೆ. ಹಾಗೂ ಎಲ್ಲರೂ ಅದಕ್ಕೆ ಅನುಸಾರವಾಗಿ ನಡೆದುಕೊಳ್ಳಬೇಕು ಎಂದು ಅವರು ನಿರ್ಬಂಧ ವಿಧಿಸುತ್ತಾರೆ. ‘ನೀವು ಹೇಳುವುದೇ  ಮಾತ್ರ ದೇಶಪ್ರೇಮ ಅಲ್ಲ’ ಎಂದಕೂಡಲೇ ನಿಮಗೆ ‘ದೇಶದ್ರೋಹಿ’ ಪಟ್ಟ ಸಿಕ್ಕು ಬಿಡುತ್ತದೆ. ಹಾಗೂ ಅವರ ಧ್ವನಿ ಎಷ್ಟು ಜೋರಾಗಿದೆ ಎಂದರೆ ನಿಮ್ಮ ಧ್ವನಿ ಕೇಳುವುದೇ ಇಲ್ಲ. ಇದು ಒಂದು ರೀತಿಯಲ್ಲಿ ದೇಶದ ಹೆಸರಿನಲ್ಲಿ ನಡೆಸುವ ಮತ್ತು ನಡೆಯುತ್ತಿರುವ ಭಯೋತ್ಪಾದನೆ.

ಇಲ್ಲಿ ಬರೀ ರಾಜಕಾರಣಿಗಳು ಮಾತ್ರ ಇರುವುದಿಲ್ಲ. ಪೊಲೀಸರು ಇರುತ್ತಾರೆ, ವಕೀಲರು ಇರುತ್ತಾರೆ, ಮಾಧ್ಯಮದವರು ಇರುತ್ತಾರೆ ಮತ್ತು ಕೈಯಲ್ಲಿ ಬಡಿಗೆ ಹಿಡಿದುಕೊಂಡ ಗೂಂಡಾಗಳೂ ಇರುತ್ತಾರೆ. ಎಲ್ಲರೂ ಸೇರಿಕೊಂಡು ಬಾಯಿಮುಚ್ಚಿಸಲು, ‘ಧ್ವನಿ ಅಡಗಿಸಲು’ ಪ್ರಯತ್ನ ಮಾಡುತ್ತಾರೆ. ಇಡೀ ಪ್ರಕರಣದುದ್ದಕ್ಕೂ ದೆಹಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಒಂದು ಅಂಗ ಎಂದೇ ನಮಗೆ ಅನಿಸಲಿಲ್ಲ. ಜೆ.ಎನ್‌.ಯು ವಿದ್ಯಾರ್ಥಿಗಳ ಮೇಲೆ ಹಾಗೂ ಮಾಧ್ಯಮದವರ ಮೇಲೆ ಹಲ್ಲೆ ನಡೆಯುತ್ತಿದ್ದಾಗ ಅವರು ಬಿಟ್ಟ ಕಣ್ಣು ಬಿಟ್ಟುಕೊಂಡು ಸುಮ್ಮನೆ ನಿಂತಿದ್ದರು. ಮಾಧ್ಯಮದವರ ಮೇಲೆ ಹಲ್ಲೆ ಎಂದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ಎಂದು ಸರ್ಕಾರಕ್ಕೆ ಅರ್ಥವಾಗಬೇಕಿತ್ತು. ‘ಮಾಧ್ಯಮದವರಿಗೆ ಚೆನ್ನಾಗಿ ಒದೆಯಲಿ’ ಎಂದು ಸರ್ಕಾರದಲ್ಲಿ ಇದ್ದವರು ಯೋಚಿಸಿರಲಾರರು ಎಂದು ಹೇಗೆ ಹೇಳುವುದು?

ಇಲ್ಲೆಲ್ಲ ಒಂದೋ ಇಂಥ ದೈಹಿಕ ಹಿಂಸೆ ಇದೆ. ಅಥವಾ ಭಾರತೀಯ ದಂಡ ಸಂಹಿತೆಯ ರಾಷ್ಟ್ರದ್ರೋಹದ ಕಲಮಿನ ದುರ್ಬಳಕೆ(?)ಯ ಕಾನೂನಾತ್ಮಕ ಹಿಂಸೆ ಇದೆ. ಕನ್ಹಯ್ಯಕುಮಾರ್‌ ಏನು ಮಾತನಾಡಿದ್ದಾರೆ ಎಂದು ಗೊತ್ತೇ ಇಲ್ಲದಿರುವಾಗ ಅವರ ವಿರುದ್ಧ ರಾಷ್ಟ್ರದ್ರೋಹದ ಕಲಮಿನ ಪ್ರಕಾರ ಪ್ರಕರಣ ದಾಖಲಿಸುವುದು ಹೇಗೆ ಸಾಧ್ಯ? ಕನ್ಹಯ್ಯ ಅಪರಾಧ ಮನೋಭಾವದ ವ್ಯಕ್ತಿಯಲ್ಲ ಎನ್ನುವುದಕ್ಕೆ ಪುರಾವೆಯಾಗಿ ಅವರು ತಾವು ಈ ದೇಶದ ಸಂವಿಧಾನದ ವಿರೋಧಿಯಲ್ಲ ಎಂದು ಸಾರಿ ಸಾರಿ ಹೇಳಿದ್ದಾರಲ್ಲ, ಇನ್ನೇನು ಮಾಡಬೇಕು? ಹಾಗೆ ನೋಡಿದರೆ ಪೊಲೀಸರ ನಡವಳಿಕೆಯೇ ಅಪ್ರಾಮಾಣಿಕವಾಗಿತ್ತು. ಇನ್ನೇನು ನಿವೃತ್ತರಾಗಲಿರುವ ದೆಹಲಿಯ ಹಿಂದಿನ ಪೊಲೀಸ್‌ ಮುಖ್ಯಸ್ಥರಿಗೆ ಈ ಸರ್ಕಾರದಿಂದ ಇನ್ನೇನೋ ಆಗಬೇಕಿದೆ.
ಯಾವುದಾದರೂ ಹುದ್ದೆಯ ಮೇಲೆ ಕಣ್ಣು ಇಟ್ಟವರು ಈಗಿರುವ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂಬುದರಲ್ಲಿ ಯಾವ ಅನುಮಾನವೂ ಬೇಡ. ಬಸ್ಸಿ ಕೂಡ ಹಾಗೆಯೇ ನಡೆದುಕೊಂಡರು. ಅವರು ಕನ್ಹಯ್ಯಕುಮಾರ್‌ ಅವರನ್ನು ಒಳಗೆ ಹಾಕಿ ಅಧಿಕಾರದಲ್ಲಿ ಇದ್ದವರನ್ನು ಸಂಪ್ರೀತಗೊಳಿಸಲು ನೋಡಿದರು. ತಕ್ಷಣ ದೇಶದ ಗೃಹಸಚಿವರು ಜೆ.ಎನ್‌.ಯು ವಿದ್ಯಾರ್ಥಿಗಳ ವಿರುದ್ಧ ಎಲ್‌.ಇ.ಟಿ ಸಂಪರ್ಕದಂಥ ಕಪೋಲಕಲ್ಪಿತ ಸಂಗತಿಗಳನ್ನು ಬಿತ್ತರಿಸಲು ಆರಂಭಿಸಿದರು.
ಅಂತರರಾಷ್ಟ್ರೀಯ ಮಟ್ಟದ ಚಿಂತಕರು, ವಿಜ್ಞಾನಿಗಳು ಮತ್ತು ರಾಜಕೀಯ ವಿಶ್ಲೇಷಕರು, ಜೆ.ಎನ್‌.ಯು ವಿದ್ಯಮಾನವನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಹೀನಾಮಾನವಾಗಿ ಟೀಕಿಸಿದರೂ ದೇಶದ ಪ್ರಧಾನಿ ದಿವ್ಯಮೌನ ತಾಳಿದ್ದಾರೆ. ಈಗ ನಡೆಯುತ್ತಿರುವುದೆಲ್ಲ ಅವರಿಗೆ ಇಷ್ಟವಿಲ್ಲದ್ದು ಎಂದು ಹೇಗೆ ಹೇಳುವುದು? ಇಷ್ಟವಿದ್ದುದೇ ಇರಬೇಕೇ?

ಇದೆಲ್ಲ ಭಾವುಕ ಎಂದು ಅನಿಸಬಹುದು: ನಮಗೆ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧಿ. ಪ್ರಜಾಪ್ರಭುತ್ವದಲ್ಲಿ ಅವರಂಥ ಭಿನ್ನಮತೀಯ ಇನ್ನೊಬ್ಬ ಇರಲು ಸಾಧ್ಯವಿಲ್ಲ. ಅವರ ಎಲ್ಲ ಅಸಹಕಾರವೂ ಅಹಿಂಸಾತ್ಮಕವಾಗಿಯೇ ಇರುತ್ತಿತ್ತು. ಪ್ರಭುತ್ವದ ಜೊತೆಗೆ ತಮಗೆ ಇರುವ ಎಲ್ಲ ಅಸಮ್ಮತಿಯನ್ನು ಅವರು ಅಹಿಂಸಾತ್ಮಕವಾಗಿಯೇ ವ್ಯಕ್ತಪಡಿಸುತ್ತಿದ್ದರು. ಪ್ರಭುತ್ವ ಎನ್ನುವುದು ಅದು ನಮ್ಮದಾದರೂ ಇರಲಿ, ಪರಕೀಯರದಾದರೂ ಇರಲಿ. ಅದು ಹಿಂಸಾತ್ಮಕವಾಗಿಯೇ ಇರುತ್ತದೆ ಎಂದು ಕಾಣುತ್ತದೆ. ಈಗಲಂತೂ ಅದು ಹಿಂಸಾತ್ಮಕವಾಗಿಯೇ ಇದೆ. ಮತ್ತು ಹಿಂಸಾತ್ಮಕವಾಗಿಯೇ ನಡೆದುಕೊಳ್ಳುತ್ತಿದೆ. ಸ್ವತಂತ್ರವಾಗಿ ಯೋಚಿಸುವವರಿಗೆ ಈಗಿರುವ ಮಾನಸಿಕ ಹಿಂಸೆ ಹಿಂದೆ ಎಂದೂ ಇರಲಿಲ್ಲ ಎಂದೂ ಭಾಸವಾಗುತ್ತದೆ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಸ್ವಾಮಿನಾಥನ್‌ ಅಂಕ್ಲೆಸಾರಿಯಾ ಅಯ್ಯರ್‌ ತಮ್ಮ ಈಚಿನ ಅಂಕಣವನ್ನು, ‘ದೇಶಪ್ರೇಮ ಎಂಬುದು ಫಟಿಂಗರ ಕೊನೆಯ ಆಸರೆ’ ಎಂದು ಶುರು ಮಾಡಿದ್ದರು. ‘ರಾಜಕೀಯ, ಫಟಿಂಗರ ಕೊನೆಯ ಅಸರೆ’ ಎನ್ನುವ ಮಾತು ಇತ್ತು. ಎಂಥ ವಿಪರ್ಯಾಸ ಅಲ್ಲವೇ?

ಇದು ಕಥೆಯಲ್ಲ...!!ರಂಗಮ್ಮ ಹೊದೇಕಲ್


ಬರೆಯುತ್ತ ಸರಳವಾಗಬೇಕು ಅನ್ನುವ ಬರಗೂರ್ ಸರ್ ಮಾತು ನನಗಿಷ್ಟ.ಆರಂಭದಲ್ಲಿ ತೋಚಿದ್ದನ್ನುಗೀಚಿಕೊಂಡಿದ್ದ ನನ್ನಬರಹಗಳನ್ನು ಯಾರಿಗೆ ತೋರಿಸುವುದು?ಆಗಷ್ಟೆ ಮದುವೆಯಾದ ಆಕೆ ನಮ್ಮ ಪಕ್ಕದ ಮನೆಗೆ ಬಾಡಿಗೆಗೆ ಬಂದಿದ್ದಳು.ಹಿರೇಹಳ್ಳಿ ಯ ಆಕೆಯನ್ನು ರಾಯಚೂರಿನಿಂದ ಇಲ್ಲ ಗ್ರಾನೈಟ್ ಕೆಲಸಕ್ಕೆ ಬಂದು ನೆಲೆ ನಿಂತವನಿಗೆ ಮಧ್ಯೆ ಒಂದಷ್ಟು ಹಿರಿಯರು ಸೇರಿ ಮದುವೆಮಾಡಿದ್ದರು.

ನಾಲ್ಕನೇ ತರಗತಿ ಅಷ್ಟೇ ಓದಿಕೊಂಡಿದ್ದ ಆಕೆ ಅದೆಷ್ಟು ಗೆಳತಿಯಾದಳೆಂದರೆ ನಾನು 'ಶೈನಾ'ಬರೆದು ಮುಗಿಸುವುದು ಸರ ಹೊತ್ತಾದರೂ ನನ್ನೊಂದಿಗೆ ಇರುತ್ತಿದ್ದಳು!ಬರೆದ ಕವಿತೆ,ಲೇಖನ ಓದಿಸಿಕೊಂಡು ಚಪ್ಪಾಳೆ ಹೊಡೆಯುತ್ತಿದ್ದಳು!ದುಃಖ ಹಂಚಿಕೊಂಡು ಅತ್ತು ಹಗುರಾಗಿ ಕುಲುಕುಲು ನಗುತ್ತ ಬದುಕು ಅಂದ್ರೆ ಇಷ್ಟೇ ಮೇಡಂ-'ಅಳು-ನಗು 'ಅನ್ನುತ್ತಿದ್ದ ಆಕೆಯ ನಗುವಿಗೆ ನಾನೂ ಬೆರಗಾಗುತ್ತಿದ್ದೆ!ಆಕೆಯ ವಯಸ್ಸಾದ ಅಮ್ಮ,ಅಪ್ಪನೂ ಈಕೆಯ ಆಶ್ರಯಕ್ಕೆ ಬಂದ ಮೇಲೆ ಅವಳಿಗೆ ಬದುಕು ಇನ್ನೊಂದು ತೆರನಾದ ಕಷ್ಟ ಕೊಡಹತ್ತಿತ್ತು!ಹೆತ್ತವರ ಆರೈಕೆ ಜೊತೆಗೆ ಇಷ್ಟೂ ಜನಕ್ಕೆ ನಾನು ದುಡಿಯಬೇಕಲ್ಲ ಅನ್ನುವ ಸಿಟ್ಟಿನ ಗಂಡನನ್ನು ಸಂಭಾಳಿಸುತ್ತಲೇ ಎರಡು ಮುದ್ದಾದ ಮಕ್ಕಳ ತಾಯಾದಳು!ಆ ಎರಡು ಮಕ್ಕಳ ಬಾಣಂತನವೋ ದೇವರಿಗೇ ಪ್ರೀತಿ!ಬಡತನ,ಅಸಹಾಯಕತೆ ಕಿತ್ತು ತಿನ್ನುವ ಸ್ತಿತಿಯಲ್ಲೂ ಆಕೆಯದೂ ಯಾವತ್ತಿನದೇ ನಗು!ಈ ನಡುವೆ ಕುಡಿತದ ವ್ಯಸನಕ್ಕೆ ತೀವ್ರವಾಗಿ ಜೋತುಬಿದ್ದ ಆಕೆಯ ಗಂಡ ನಿತ್ಯ ಕುಡಿದು ಬಂದು ಬಡಿಯತೊಡಗಿದ...ನಿಂದಿಸತೊಡಗಿದ...ನಾವಾದರೂ ಎಷ್ಟಂತ ತಡದೇವು!ಒಮ್ಮೊ ಮಧ್ಯೆ ಹೋದ ನನಗೂ ಇದು 'ನಂ ಸಂಸಾರದ ವಿಷಯ' ಅಂದುಬಿಟ್ಟ!ಆಕೆ ಕೈ ಮುಗಿದು 'ನೀವೇನೂ ಅನ್ನಿಸ್ಕೊಬಾರದು ಮೇಡಂ ಯಾರಿಂದಲೂ....' ಅಂದಾಗ ನನ್ನ ಕಣ್ಣಲ್ಲೂ ನೀರು!

ದಿನ ದಿನದ ಹೊಡೆದಾಟ ಅತಿಯಾಗಿ ಒಮ್ಮೆ ತಾಳಿಯನ್ನೇ ಕಿತ್ತೊಗೆದವ ಹೋಗೇ ಬಿಟ್ಟ....೧,೨,೩,೪,೫,೬ ವರ್ಷಗಳ ಕಾಲ!!ಮಕ್ಕಳು ಬೆಳೆದು,ಶಾಲೆಗೆ ಹೋಗುವಂತಾಗಿ ಆಕೆಯೂ ಗಾರ್ಮೆಂಟ್ಸ್ ಸೇರಿಕೊಂಡು ದುಡಿಯತೊಡಗಿ ಇತ್ತೀಚೆಗೆ ಹಿರೇಹಳ್ಳಿಯಲ್ಲಿಯೇ ಮನೆ ಮಾಡಿಕೊಂಡು ತನ್ನ ಮಕ್ಕಳು,ತನ್ನ ತಾಯಿ ಜೊತೆ ಬದುಕನ್ನು ಏಗುತ್ತಿರುವಾಗ ಮತ್ತೆ ಪುಣ್ಯಾತ್ಮ(!?)ಅವಳ ಮನೆ ಬಾಗಿಲಲ್ಲಿ ಪ್ರತ್ಯಕ್ಷವಾಗಬೇಕೆ!?

ಬಿಲ್ಕುಲ್ ಒಳಗೆ ಬಿಟ್ಟುಕೊಳ್ಳದ ಆಕೆ ಯಾವ ಕಾರಣಕ್ಕೂ ನಿನ್ನ ಜೊತೆ ಬಾಳ್ವೆ ಮಾಡಲಾರೆ ಅಂದಿದ್ದಾಳೆ.ನಾನು ಆಕೆಯ ಆತ್ಮೀಯಳು ಅನ್ನುವ ಕಾರಣಕ್ಕೆ ನನ್ನಲ್ಲಿಗೆ ಬಂದಾತ ನಿಮ್ಮ ಮಾತು ನಡೆಯುತ್ತೆ ಹೇಳಿ ಅಂದ!'ನೋಡೋಣವೆಂದು ಏನವ್ವ ತೀರ್ಮಾನ ಅಂದೆ!'ಮೇಡಂ,ನಿಮ್ಮ ಬಗ್ಗೆ ಪ್ರೀತಿ,ಗೌರವ ಎರಡೂ ಇದೆ ನನಗೆ.ಆದರೆ ಇದೊಂದು ವಿಷಯದಲ್ಲಿ ನೀವು ರಾಜಿಯಾಗು ಅನ್ಬೇಡಿ!ಗಂಡ ನಿಲ್ಲದೆ ಬದುಕು ಅಭ್ಯಾಸವಾಯ್ತು ಅಂದುಬಿಟ್ಟಳು!

'ಹ್ಞೂಂ,ಮಿಸ್ಸಮ್ಮ,ಅಮ್ಮ ಸಾಕು 'ಅಂದುಬಿಟ್ಟಳು ಏಳನೇ ತರಗತಿ ಓದುವ ಮಗಳು!ಹೆಮ್ಮೆ ಅನ್ನಿಸಿತು.
ಈಗಾತ ಎಲ್ಲಿದ್ದಾನೋ....!?

ಅಂದ ಹಾಗೆ ಆಕೆಯ ಹೆಸರು-ರತ್ನ.!ಅಮ್ಮನ ಬಾಯಲ್ಲಿ 'ರತ್ನದಂತಹ ಹುಡುಗಿ'!

ಯಾವ ಸಂಭ್ರಮ,ಆಚರಣೆಯೂ ಇಲ್ಲದೆ ತೊಟ್ಟಿಲೊಳಗಿದ್ದ ಆ ಮಕ್ಕಳನ್ನು ಅಂಗೈಯಲ್ಲಿಟ್ಟುಕೊಂಡು ಕಿವಿಯಲ್ಲಿ ಕೂಗಿದ್ದೆ ನಾನು
'ಭೂಮಿಕಾ...ಶರಣ...!!ಅದೇ ನಾಮಕರಣ!!

ಇಬ್ಬರೂ ಚೆಂದಗೆ ಓದುತ್ತಿದ್ದಾರೆ.ಸಂಘಟನೆಯ ಕಾರ್ಯಕ್ರಮಗಳಿಗೆ ರತ್ನ ಬರುತ್ತಾರೆ.
'ನಗು ಪ್ರವಾಹದ ವಿರುದ್ಧದ ಈಜು'ಅನ್ನುವುದು ನನಗಿಂತ ಚೆನ್ನಾಗಿ ರತ್ನಾಗೆ ಗೊತ್ತಿದೆ!!

ಉಮರ್ ಖಾಲಿದ್. ಭಾಷಣ
ಸ್ನೇಹಿತರೇ,
ನನ್ನ ಹೆಸರು ಉಮರ್ ಖಾಲಿದ್. ಆದರೆ ನಾನು ಭಯೋತ್ಪಾದಕ ಅಲ್ಲ.

ಮೊದಲನೆಯದಾಗಿ ಈ ಹೋರಾಟದಲ್ಲಿ ಭಾಗವಹಿಸಿದ ಮತ್ತು ವಿದ್ಯಾರ್ಥಿಗಳಾದ ನಮಗೆ ಬೆಂಬಲವನ್ನು ನೀಡಿದ ಪ್ರತಿಯೊಬ್ಬ ಜೆಎನ್ ಯು ಪ್ರಾಧ್ಯಾಪಕರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಈ ಹೋರಾಟ ಕೇವಲ ನಮ್ಮ ನಾಲ್ಕೈದು ಜನರದ್ದಾಗಿರಲಿಲ್ಲ. ಈ ಹೋರಾಟ ನಮ್ಮೆಲ್ಲರ ಹೋರಾಟವಾಗಿದೆ. ಈ ಹೋರಾಟ ಕೇವಲ ಈ ಜೆಎನ್ ಯು ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವೇ ಇಲ್ಲ, ಇದೊಂದು ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳ ಹೋರಾಟವಾಗಿದೆ. ಅಷ್ಟಕ್ಕೇ ಸೀಮಿತವಾಗದೆ ಇದು ಇಡೀಯ ಸಮಾಜದ ಹೋರಾಟವಾಗಿದೆ. ಮುಂದಿನ ಪೀಳಿಗೆಯ ಸಮಾಜ ಹೇಗಿರಬೇಕೆಂಬುದರ ಸೂಚಕ ಈ ಹೋರಾಟ.


ಗೆಳೆಯರೇ
ಈ ಕೆಲ ದಿನಗಳಲ್ಲಿ ನನ್ನ ಬಗ್ಗೆ ನನಗೇ ಗೊತ್ತಿಲ್ಲದ ಹಲವಾರು ವಿಷಯಗಳನ್ನು ತಿಳಿದುಕೊಂಡೆ. ನಾನು ಎರಡು ಬಾರಿ ಪಾಕಿಸ್ತಾನ ಹೋಗಿ ಬಂದಿದ್ದೇನೆ ಎಂದು ನನಗೇ ಇತ್ತಿಚೆಗೆೆ ತಿಳಿಯಿತು. ನನ್ನ ಬಳಿ ಪಾಸ್ ಪೋರ್ಟೇ ಇಲ್ಲ. ಹಾಗಿದ್ದರೂ ನಾನು ಪಾಕಿಸ್ತಾನ ಹೋಗಿ ಬಂದೆ ಎಂಬುದು ನನಗೇ ಆಶ್ಚರ್ಯ ತರುವ ವಿಚಾರ. ನನಗೆ ಆನಂತರ ಮತ್ತೊಂದು ವಿಚಾರವೂ ತಿಳಿಯಿತು. ನಾನು ಮಾಸ್ಟರ್ ಮೈಂಡ್ ಎಂದು. ಜೆಎನ್ ಯು ವಿದ್ಯಾರ್ಥಿಗಳೇ ವಂಡರಫುಲ್ ಮೈಂಡ್ ಇರುವವರು. ಅವರಲ್ಲೇ ನಾನು ಮಾಸ್ಟರ್ ಮೈಂಡ್. ಇದು ತುಂಬಾ ಚೆನ್ನಾಗಿದೆ. ನಾನು ಇಂತಹ ಕಾರ್ಯಕ್ರಮವನ್ನು ದೇಶದ 70 ರಿಂದ 80 ವಿಶ್ವವಿದ್ಯಾನಿಲಯಗಳಲ್ಲಿ ಆಯೋಜಿಸಲು ಪ್ಲ್ಯಾನ್ ಮಾಡಿದ್ದೆನಂತೆ. ನಿಜವಾಗಲೂ ನನ್ನ ಲೀಡರ್ ಶಿಫ್ ಇಷ್ಟೊಂದು ವಿಸ್ತಾರವಾಗಿ ಬೆಳೆದಿದ್ದು ನನಗೇ ಗೊತ್ತಿರಲಿಲ್ಲ. ಈ ಕಾರ್ಯಕ್ರಮ ಆಯೋಜಿಸಲು ನಾವು ನಾಲ್ಕೈದು ತಿಂಗಳು ತಯಾರಿ ಮಾಡಿದ್ದೆವಂತೆ. ಜೆಎನ್ ಯು ನಲ್ಲಿ ಒಂದೊಂದು ಕಾರ್ಯಕ್ರಮ ಸಂಘಟಿಸಲು ಐದು-ಹತ್ತು ತಿಂಗಳು ಪಡೆದುಕೊಂಡರೆ ಜೆಎನ್ ಯು ಕತೆ ಏನಾಗಬಹುದು? ಅದೂ ಇರಲಿ. ನಾನು ಕೆಲ ದಿನಗಳಿಂದ 800 ಕರೆಗಳನ್ನು ಮಾಡಿದ್ದೇನಂತೆ. ಈ ಮಾಧ್ಯಮಗಳಿಗೆ ಯಾವ ನಾಚಿಕೆಯೂ ಇಲ್ಲ. ಸುದ್ದಿ ಪ್ರಸಾರಕ್ಕೆ ಮುನ್ನ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಯಾವುದೇ ದಾಖಲೆಯಿಲ್ಲದೆ, ಸತ್ಯಾಂಶವಿಲ್ಲದ ಸುದ್ದಿಗಳನ್ನು ಮಾಡಿದ್ರು. ನನಗೆ ಜೈಶ್ ಎ ಮಹಮ್ಮದ್ ಸಂಘಟನೆಯ ಕೈವಾಡ ಇದೆ ಎಂದು ಹೇಳಿದ್ರು. ಅದಕ್ಕೂ ಯಾವುದೇ ದಾಖಲೆ ಇಲ್ಲ. ನನಗೆ ನಿಜಕ್ಕೂ ಆಗ ನಗು ಬಂದಿತ್ತು. ನಿಜವಾಗಿಯೂ ಆ ಸಂಧರ್ಭದಲ್ಲಿ ಜೈಶ್ ಎ ಮಹಮ್ಮದ್ ಸಂಘಟನೆಯವರು ಪ್ರತಿಭಟನೆ ಮಾಡಬೇಕಿತ್ತು. ನನ್ನಂತವನನ್ನು ಅವರ ಸಂಘಟನೆಯವನು ಎಂದು ಹೇಳಿದ್ದಕ್ಕಾದರೂ ಅವರು ಪ್ರತಿಭಟಿಸಬೇಕಿತ್ತು. ಕೊನೆಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯೇ ಸ್ಪಷ್ಟಪಡಿಸಿ, ಜೈಶ್ ಎ ಮಹಮ್ಮದ್ ಸಂಘಟನೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ ಎಂದು ಹೇಳಿದರೂ ಮಾಧ್ಯಮಗಳು ಕ್ಷಮೆ ಕೇಳಲಿಲ್ಲ. ಈ ಮೀಡಿಯಾಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಿವೆ. ಮೀಡಿಯಾಗಳು ಪೂರ್ವನಿರ್ಧರಿತವಾಗಿ ನಮ್ಮನ್ನು ಮಿಡಿಯಾ ಟ್ರಯಲ್ ಗೆ ಒಳಪಡಿಸಿದ್ವು. ಯಾವ ನಾಚಿಕೆಯೂ ಇಲ್ಲದೆ ವರ್ತಿಸಿದ್ರು.

ಮಾಧ್ಯಮಗಳ ಈ ರೀತಿಯ ವರ್ತನೆ ಇದೇ ಮೊದಲಲ್ಲ. ಅವುಗಳು ಏನು ಮಾಡಿದ್ರೂ ನಡೀತದೆ ಅಂದುಕೊಂಡಿದ್ದಾರೆ. ಮುಸ್ಲೀಮರನ್ನು ಭಯೋತ್ಪಾದಕರನ್ನಾಗಿಯೂ, ಆದಿವಾಸಿಗಳನ್ನು ನಕ್ಸಲರನ್ನಾಗಿಯೂ ಚಿತ್ರಿಸಿ ಅವರಿಗೆ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಈ ಬಾರಿ ನೀವು ತಪ್ಪು ಜನರಿಗೆ ತಗಳ್ಳಾಕ್ಕೊಂಡಿದ್ದೀರಿ. ನಾವು ಪ್ರತೀ ಚಾನೆಲ್ ಗಳು ನಮ್ಮ ಬಗ್ಗೆ ಮಾಡಿದ ಸುದ್ದಿಗೆ ವಿವರಣೆ ನೀಡುವಂತಹ ಸಂಧರ್ಭ ಸೃಷ್ಠಿ ಮಾಡುತ್ತೇವೆ.

ಈ ಪ್ರಕರಣ ಈ ರೀತಿ ಸುದ್ದಿಯಾದ ನಂತರ ನಂತರ ನನ್ನ ತಂಗಿ, ತಂದೆಗೆ ಬೆದರಿಕೆ ಒಡ್ಡಲಾಯ್ತು. ತಂಗಿಗೆ ಅತ್ಯಾಚಾರದ ಬೆದರಿಕೆ ಒಡ್ಡಲಾಯ್ತು. ಕೊಲೆ ಬೆದರಿಕೆಯನ್ನೂ ನೀಡಲಾಯ್ತು. ಈ ಜನಗಳು ಏನೂ ಮಾಡಲೂ ಹೇಸದವರು. ತಂಗಿಗೆ ಅತ್ಯಾಚಾರದ ಬೆದರಿಕೆ ನೀಡಿದ ಈ ದೇಶಪ್ರೇಮಿಗಳ ಕಂದಮಾಲ್ ಘಟನೆ ಆ ಸಂಧರ್ಭ ನನಗೆ ನೆನಪಿಗೆ ಬಂದಿತ್ತು. ನಿಮಗೂ ನೆನಪಿರಬಹುದು. ಕಂದಮಾಲ್ ನಲ್ಲಿ ಭಜರಂಗದಳದವರು ಕ್ರಿಶ್ಚಿಯನ್ ಸನ್ಯಾಸಿನಿ ಮೇಲೆ ಅತ್ಯಾಚಾರ ಮಾಡಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದ್ದರು. ಆದುದರಿಂದ ನನಗೆ ತಂಗಿಯ ಬಗ್ಗೆ ಆತಂಕ ಉಂಟಾಗಿತ್ತು. ಇವರು ಅತ್ಯಾಚಾರ ಮಾಡಿಯೂ ಭಾರತ ಮಾತೆಗೆ ಜೈ ಎನ್ನುವವರು. ಇಂತಹ ಮಾತೆ ನಮಗೆ ಬೇಕಾಗಿಲ್ಲ. ಇಂತಹ ಮಾತೆ ನಮ್ಮದಲ್ಲ.

ನನ್ನ ತಂದೆಯನ್ನು ಕೆಲವು ಮಾಧ್ಯಮಗಳು ಮಾತನಾಡಿಸಿದ್ವು. ಅದನ್ನು ಸಂದರ್ಶನ ಅನ್ನೋದಕ್ಕಿಂತ ಮಾಧ್ಯಮಗಳ ವಿಚಾರಣೆ ಅನ್ನಬಹುದು. ನಮ್ಮಲ್ಲಿ ಕೆಲವು ಪತ್ರಕರ್ತರಿದ್ದಾರೆ. ಟೈಮ್ಸ್ ನೌ ನಲ್ಲಿ ಒಬ್ಬ ಪತ್ರಕರ್ತ ಇದ್ದಾರೆ. ಅವರ ಹೆಸರು ಹೇಳಲು ನಾನು ಬಯಸೋದಿಲ್ಲ. ಈ ಪತ್ರಕರ್ತರಿಗೆಲ್ಲಾ ನಮ್ಮ ವಿಚಾರದಲ್ಲಿ ಇಷ್ಟೊಂದು ಕೋಪ ಯಾಕೆ ಎಲ್ಲಿಂದ ಬರುತ್ತದೆ ಎಂಬುದೇ ಗೊತ್ತಾಗ್ತಾ ಇಲ್ಲ. ಆ ರೀತಿಯಲ್ಲಿ ಮಾಧ್ಯಮಗಳ ಕೋರ್ಟ್ ನಡೆಸಿದ್ವು.

ಒಂದು ವಿಷಯವನ್ನು ನಾನಿಲ್ಲಿ ಹೇಳಲೇ ಬೇಕು. ಕಳೆದ ಆರು ವರ್ಷಗಳಿಂದ ಈ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಇಲ್ಲಿಯವರೆಗೂ ನನ್ನನ್ನು ನಾನು ಮುಸ್ಲೀಮನೆಂದು ಅಂದುಕೊಂಡಿಲ್ಲ. ಈ ಸಮಾಜದಲ್ಲಿ ಮುಸ್ಲೀಮರು ಮಾತ್ರ ದಮನಕ್ಕೊಳಗಾಗ್ತಿಲ್ಲ. ಆದಿವಾಸಿಗಳು, ದಲಿತರು ಈ ಸಮಾಜದ ಶೋಷಿತರಾಗಿದ್ದಾರೆ. ನಾನು ಇವರೆಲ್ಲರ ಪರವಾಗಿ ಹೋರಾಟ ಮಾಡಿದ್ದೇನೆ. ದಲಿತರು, ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡಿದಷ್ಟೇ ಶೋಷಿತ ಮುಸ್ಲೀಮರ ಪರವಾಗಿ ಮಾತನಾಡಿದ್ದೇನೆ. ಆದರೆ ಕಳೆದ ಹತ್ತು ದಿನಗಳಿಂದ ನಾನು ಮುಸ್ಲೀಂ ಎಂದು ನನಗೆ ಗೊತ್ತಾಯಿತು. ಈ ಮಾಧ್ಯಮಗಳಿಗೆ ನಾಚಿಕೆಯಾಗಬೇಕು.

ನಾನು ಪಾಕಿಸ್ತಾನಿ ಏಂಜೆಂಟ್ ಅಂತ ಹೇಳಿದ್ರು. ಈ ಸಂಧರ್ಭದಲ್ಲಿ ನನಗೆ ಒಂದು ಶಾಹಿರಿ ನೆನಪಾಗ್ತಿದೆ.

ಹಿಂದೂಸ್ತಾನವೂ ನನ್ನದೇ,
ಪಾಕಿಸ್ತಾನವೂ ನನ್ನದೇ….
ಹಿಂದೂಸ್ತಾನ ಪಾಕಿಸ್ತಾನದಲ್ಲಿ ಅಮೇರಿಕಾ ನೆಲೆ ನಿಂತಿದೆ
ನೀವೆಲ್ಲರೂ ಆ ಅಮೇರಿಕಾದ ದಲ್ಲಾಳಿಗಳು

ನಮ್ಮ ಸರಕಾರ ಕೂಡಾ ಅಮೇರಿಕಾದ ಏಜೆಂಟರಂತೆ ವರ್ತಿಸುತ್ತಿದೆ. ಮಲ್ಟಿ ನ್ಯಾಶನಲ್ ಕಂಪನಿಗಳಿಗೆ ಜನ ಪೂರೈಸೋ ಕೆಲಸವನ್ನು ಸರಕಾರ ಮಾಡುತ್ತಿದೆ. ಅದಕ್ಕಾಗಿ ಶಿಕ್ಷಣವನ್ನು ಸರಕಾರ ಮಾರಿದೆ. ಅದನ್ನು ಪ್ರಶ್ನಿಸಿದ್ರೆ ನಾವು ದೇಶದ್ರೋಹಿಗಳಾಗ್ತಿವೆ. ಈಗ ನಾವು ನೀವೆಲ್ಲಾ ದೇಶದ್ರೋಹಿಗಳು. ಜನರನ್ನು ಅಗಾಧವಾಗಿ ಪ್ರೀತಿಸುವ ನಾವುಗಳು ದೇಶದ್ರೋಹಿಗಳು. ನಮ್ಮ ಪ್ರೀತಿಗೆ ಗಡಿಗಳು ಇಲ್ಲ. ಈ ದೇಶ ಮಾತ್ರ ಅಲ್ಲ. ಇಡೀನ ಜಗತ್ತಿನ ಜನರನ್ನು ನಾವು ಪ್ರೀತಿಸುತ್ತೇವೆ. ನಾನು ಈ ನ್ಯಾಶನಿಲಿಸಂ ಅನ್ನು ನಂಬೋದಿಲ್ಲ. ಭಾರತದ ನ್ಯಾಶನಲಿಸಂ ಮಾತ್ರವಲ್ಲ. ಅಮೇರಿಕಾ ಸೇರಿದಂತೆ ಯಾವುದೇ ದೇಶದ ನ್ಯಾಶನಲಿಸಂ ಅನ್ನು ನಾನು ಒಪ್ಪೋದಿಲ್ಲ. ಇಡೀ ವಿಶ್ವವೇ ನಮ್ಮದು. ವಿಶ್ವದ ಎಲ್ಲರೂ ನಮ್ಮವರು.

ನಾವು ಈ ಜನರಿಗೆಲ್ಲಾ ಹೆದರಬೇಕಿಲ್ಲ. ಅವರ ಬಳಿ ಬಹುಮತ ಇರಬಹುದು. ಮೀಡಿಯಾಗಳೂ, ಪೊಲೀಸರೂ ಇರಬಹುದು. ಆದರೆ ಅವರು ಹೆದರುಪುಕ್ಕಲರು. ಅವರು ನಮ್ಮ ಜನರಿಗೆ ಹೆದರುತ್ತಾರೆ. ಆವರು ನಮ್ಮ ಹೋರಾಟಗಳಿಗೆ ಹೆದರುತ್ತಾರೆ. ಅದಕ್ಕಾಗಿಯೇ ನೀವು ಜನರ ಪರವಾಗಿ ಯೋಚಿಸಲು ಶುರು ಮಾಡಿದ್ರೆ ನಿಮ್ಮನ್ನು ದೇಶದ್ರೋಹಿ ಎನ್ನುವ ಮೂಲಕ ಹೆದರಿಸಲಾಗ್ತಿದೆ.

ನಮ್ಮ ಜನರಿಗೆ ಹೆದರಿಯೇ ಈ ಜನರು ಹಲವು ವಿಶ್ವವಿದ್ಯಾನಿಲಯಗಳಿಗೆ ತೆರಳಿ ಗಲಭೆ ಎಬ್ಬಿಸಲು ಯಶಸ್ವಿಯಾದ್ರು. ಆದರೆ ಈ ವಿದ್ವವಿದ್ಯಾಲಯಕ್ಕೆ ಮಾತ್ರ ತಪ್ಪಾಗಿ ಬಂದ್ರಿ. ಇಲ್ಲಿ ನಿಮ್ಮ ಆಟ ನಡೆಯಲ್ಲ.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೆಮೂಲ ಹತ್ಯೆಯಾಯ್ತು. ಬನರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂದೀಪ್ ಪಾಂಡೆ ಮೇಲೆ ದೌರ್ಜನ್ಯವಾಯಿತು. ಅ ಸಂಧರ್ಭದಲ್ಲಿ ನಡೆದ ಪ್ರತೀ ಹೋರಾಟದಲ್ಲಿ ಜೆ ಎನ್ ಯು ವಿದ್ಯಾರ್ಥಿಗಳು ಹೆಗಲು ಕೊಟ್ಟು ಸಾಥ್ ನೀಡಿದ್ದೇವೆ. ಅದು ನಮ್ಮ ಜವಾಬ್ದಾರಿ ಕೂಡಾ. ನೀವೇನಾದ್ರೂ ಜೆಎನ್ ಯು ವನ್ನು ಮುಗಿಸುತ್ತೇವೆ ಎಂದು ಒಂದಿರೋದಾದ್ರೆ ಒಂದಂತೂ ತಿಳಿದುಕೊಳ್ಳಿ. ಈ ಹಿಂದೆಯೂ ಈ ರೀತಿ ಯೋಚನೆ ಇಟ್ಟುಕೊಂಡು ತುಂಬಾ ಜನ ಇಲ್ಲಿಗೆ ಬಂದಿದ್ದರು. ಅಂತಹ ಹಲವು ಪ್ರಯತ್ನಗಳಾಗಿತ್ತು. ಅದನ್ನು ಅಷ್ಟೇ ನಾಜೂಕಾಗಿ ನಾವು ನಿಭಾಯಿಸಿ ನಾವು ಗೆದ್ದಿದ್ದೇವೆ.

ಬಹುಶಃ ನೀವು ಇಂದಿರಾಗಾಂಧಿಯನ್ನು ಮರೆತಿದ್ದೀರಿ. ತುರ್ತು ಪರಿಸ್ಥಿತಿ ನಂತರ ಅವರು ಜೆ ಎನ್ ಯು ಕಡೆಗೆ ಬಂದಿದ್ದರು. ನಾವು ಅವರನ್ನು ಬರಲು ಬಿಟ್ಟಿರಲಿಲ್ಲ. ನಂತರ ನೀವು ಮನಮೋಹನ ಸಿಂಗ್ ರನ್ನೂ ಮರೆತಿದ್ದೀರಿ. ದೇಶವನ್ನು ಮಾರಾಟ ಮಾಡಲು ಹೊರಟ ಮನಮೋಹನ ಸಿಂಗ್ ಇಲ್ಲಿಗೆ ಬಂದಾಗ ಅವರಿಗೂ ಕಪ್ಪು ಬಾವುಟ ತೋರಿಸಿದ್ವಿ. ನಂತರ ಚಿದಂಬರಂ ಬಂದ್ರು. ಆಗ ಇಲ್ಲಿನ ವಿದ್ಯಾರ್ಥಿಗಳು ಚಿದಂಬರಂ ಅನ್ನು ಸ್ವಾಗತ ಮಾಡ್ತಾರೆ ಅಂದುಕೊಂಡಿದ್ರು. ಆದರೆ ಇಲ್ಲಿನ ವಿದ್ಯಾರ್ಥಿಗಳು ಯಾರ ಜೊತೆ ಇರ್ತೀವಿ ಎಂಬುದನ್ನು ತೋರಿಸಿಕೊಟ್ಟರು. ಇಲ್ಲಿನ ವಿದ್ಯಾರ್ಥಿಗಳು ಯಾವತ್ತೂ ಶೋಷಿತ ಜನರ ಜೊತೆ ಇರ್ತಾರೆ. ಈಗಿನ ಸರಕಾರ ನಾವು ಹೆದರುತ್ತೇವೆಯೋ ಎಂದು ಪರೀಕ್ಷೆ ಮಾಡುತ್ತಿದೆ. ನಾವು ಹೆದರುವುದಿಲ್ಲ. ನಾವು ಸಂಘರ್ಷ ಮಾಡುತ್ತೇವೆ.

ಗೆಳೆಯರೇ,
ನಾವು ಈ ಜನಗಳಿಗೆಲ್ಲಾ ಹೆದರುವ ಅಗತ್ಯವೇ ಇಲ್ಲ. ಈ ಕ್ಯಾಂಪಸ್ಸಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಎಂಬ ವಾನರ ಸೇನೆ ಇದೆ. ಇಲ್ಲೂ ಕೂಡಾ ಹೈದರಾಬಾದ್ ನ ದತ್ತಾತ್ರೆಯ ರೀತಿಯವರು ಇದ್ದಾರೆ. ಆದರೆ ಇಲ್ಲಿ ಮತ್ತೊಬ್ಬ ರೋಹಿತನನ್ನು ನಾವು ನಿಮ್ಮ ಕೈಗೆ ಕೊಡೋದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ನಾವು ಸಂಘರ್ಷಕ್ಕೆ ಸಿದ್ದರಿದ್ದೇವೆ. ರೋಹಿತನ ಸಾವಿಗೆ ಉತ್ತರ ಕೊಡಲು ಸಿದ್ದರಿದ್ದೇವೆ.

ಅವರಿಗೆ ಜನರ ಬಳಿ ಹೋಗಿ ಸಂಘಟನೆ ಮಾಡಲು ಆಗುವುದಿಲ್ಲ. ಅವರೇನಿದ್ದರೂ ಮಧ್ಯಮಗಳನ್ನು ಬಳಸಿಕೊಂಡು ದೇಶಪ್ರೇಮ ಉಕ್ಕುವಂತೆ ಮಾಡುತ್ತಾರೆ. ಅಷ್ಟೊಂದು ಮಾಧ್ಯಮಗಳನ್ನು ಬಳಸಿಯೂ ಅವರು ಸಾವಿರ ಜನ ಸೇರಿಸಲು ಕಷ್ಟಪಟ್ಟರು. ಆದರೆ ಇಲ್ಲಿ ನಮ್ಮವರು 15 ಸಾವಿರಕ್ಕೂ ಮಿಕ್ಕಿ ಜಮಾವಣೆಗೊಂಡರು. ಆದರೆ ಚೀ ನ್ಯೂಸ್ ಮಾತ್ರ ಸುಳ್ಳೇ ಸುದ್ದಿ ಪ್ರಸಾರ ಮಾಡ್ತು. ನಾಚಿಗೆ ಇಲ್ಲದೆ ಸುಳ್ಳು ಹೇಳ್ತಾರೆ ಈ ಜನಗಳು.

ಜೆ ಎನ್ ಯು ನಲ್ಲಿ ಅವರು ನಡೆಸಿದ ದೌರ್ಜನ್ಯಕಾರಿ ತಂತ್ರಗಾರಿಕೆಯನ್ನು ಬೇರೆಡೆಯಲ್ಲೂ ಯಶಸ್ವಿಯಾಗಿ ಮಾಡಿದ್ದಾರೆ. ಈ ರೀತಿಯ ತಂತ್ರಗಾರಿಕೆ ನಮ್ಮಲ್ಲಿ ನಡೆಯಲ್ಲ. ಇದೇ ರೀತಿಯ ದೌರ್ಜನ್ಯವನ್ನು ಹೋಂಡಾ ಕಾರ್ಮಿಕರ ಮೇಲೆ, ಸೋನಿ ಸೋರಿ ಆದಿವಾಸಿ ಮೇಲೆ ಪ್ರಯೋಗಿಸಿದ್ರು. ಇವೆಲ್ಲವನ್ನೂ ನೋಡಿದ್ರೆ ಇದು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಹೋರಾಟ ಮಾತ್ರವಲ್ಲ. ಈ ಹೋರಾಟವು ಇಡೀ ದೇಶದ ಹೋರಾಟವನ್ನು ಸಂಧಿಸಬೇಕು.

ಧನ್ಯವಾದಗಳು
ಇಂಕ್ವಿಲಾಬ್ ಜಿಂದಾಬಾದ್

ನಾಳೆ ಧಾರವಾಡದಲ್ಲಿ ಜೆಎನ್ ಯು ವಿದ್ಯಮಾನ- ಸಂವಾದಗೋಷ್ಠಿ

ಕವಿತೆ : ಕನಸ ಬಿದ್ದಿತೋ
ಗಂಗಪ್ಪ ತಳವಾರಕನಸ ಬಿದ್ದಿತೋ..ಬಂದಿಖಾನೆಗೆ
ಕನಸಬಿದ್ದಿತೋ...
ಪೆನ್ನಿನ ಕತ್ತನು ಸೀಳಿ
ರವರವ ನೆತ್ತರ ಶಾಹಿಯ ಚುಕ್ಕೆಯ ಹರಿಸಿ

ಕನಸ ಬಿದ್ದಿತೋ

ಖಾಕಿಬಟ್ಟೆಯು ಕೇಕೆಯು ಹಾಕಿ
ಕಪ್ಪುಕೋಟುಗಳು ಮೂಳಬಾಕುಗಳಾಗಿ
ನೆಗೆಯುತಾ ಬರುತಿವೆ ಸಾಗಿ
/ಕನಸಬಿದ್ದಿತೋ/


ದೇಶಪ್ರೇಮದ ದ್ವಜಗಳ ಪಂಜು ಹಿಡಿದು
ನುಗ್ಗಿಬರುವವು ಅಬ್ಬರಿಸಿ ನೆಗೆದು
ವಿಷ್ಣುಅಸಹಿಷ್ಣುಗಳೆಂದರೆ
ಸ್ಮ್ರುತಿಸಂಚಯಗಳಿಗೆ ಯಾಕೋ ಸಳಕು
ಟಿಆರ್ಪಿಬೂತಗಳ ವಿದವಿದ ಥಳಕಿನ ಬಳಕು
ಅಚ್ಛೇದಿನಗಳಿಗೆ ವೇಮುಲ ನೇಣು
ಉತ್ತರ ಕೋರಿಯದಿಂದ ಉಗುಳಬಹುದು ಹೈಡ್ರೋಜಾನು
/ಕನಸು ಬಿದ್ದಿತೋ/


ಅಕ್ಷರಗುಡಿಗಳಿಗೆ ಕೇಸರಿಯೇ ಸುಣ್ಣ
ಉಳಿಯುವುದೆಂತು ಲೋಕದ ಕಣ್ಣ
ಉಳಿಯಲುಬೇಕು ಉಳಿಸಲುಬೇಕು
ಉರಿಸುವ ಜ್ವಾಲೆಯ ನಂದಿಸಿ
ಸಮತೆಯ ದೀಪದ ಪ್ರಭೆಯ ಮೆತ್ತಿಸಿ
ಸತ್ಯಶೋದನೆಯ ಕಿರುದಾರಿಗೆ ಹೆಜ್ಜೆಗಳಿಟ್ಟು
ಪ್ರತಿ ಕಣ್ಣಿನ ಕನಸನುಬಿತ್ತುವ
/ಕನಸು ಬಿದ್ದಿತೋ/


* ಕನ್ನಯ್ಯನ ಕುರಿತು ನನ್ನಲ್ಲಿ ಹುಟ್ಟಿಕೂಂಡ ಸಾಲು..

Sunday, February 21, 2016

24 ರಂದು ಧಾರವಾಡದಲ್ಲಿ ಜೆ ಎನ್ ಯು ಸಂವಾದ ಗೋಷ್ಠಿಲಡಾಯಿ ಪ್ರಕಾಶನ, ಗದಗ

೨೪ ಫೆಬ್ರುವರಿ ೨೦೧೬ ಸಂಜೆ ೬ ಗಂಟೆಗೆ
ರಾ ಹ ದೇಶಪಾಂಡೆ ಭವನ ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ

ಜೆ ಎನ್ ಯು ವಿದ್ಯಮಾನ : ವಾಸ್ತವ ಮತ್ತು ವಿಥ್ಯ
ಸಂವಾದ ಗೋಷ್ಠಿ

ವಿಷಯ ಮಂಡsನೆ : ದಿನೇಶ್ ಅಮಿನ್ ಮಟ್ಟು
ಡಾ. ವಿ. ಎಸ್. ಶ್ರೀಧರ
ಅಧ್ಯಕ್ಷತೆ : ಪ್ರೊ. ಅಶೋಕ ಶೆಟ್ಟರ್
ಸಂವಾದದಲ್ಲಿ:
ಬಿ. ಎಸ್. ಸೊಪ್ಪಿನ್, ಡಾ. ರಾಜೇಂದ್ರ ಪೊದ್ದಾರ, ಡಾ. ಸಂಜೀವ ಕುಲಕರ್ಣಿ, ಸುನಂದಾ ಕಡಮೆ, ಶಾರದಾ ದಾಬಡೆ, ಬಸವಪ್ರಭು ಹೊಸಕೇರಿ, ಡಾ. ಎಂ. ಡಿ. ಒಕ್ಕುಂದ, ಶಂಕರ ಹಲಗತ್ತಿ, ಡಾ. ಡಿ. ಜಿ. ಹಜಾವಗೋಳ, ಪಾಂಡುರಂಗ ನೀರಲಕೇರಿ, ಜೆ. ಬಾರದ್ವಾಜ್, ವಿಠ್ಠಪ್ಪ ಗೋರಂಟ್ಲಿ, ಬಸವರಾಜ ಶೀಲವಂತರ , ಡಾ. ಎಸ್ ಬಿ ಜೋಗುರ, ಬಿ. ಎ. ಕೆಂಚರಡ್ಡಿ, ಪ್ರಮೋದ ತುರ್ವಿಹಾಳ, ಬಿ. ಮಾರುತಿ, ಚಾಮರಾಜ ಬಾಂಗಿ, ದೇವಾನಂದ ಜಗಾಪುರ, ವಿಕಾಶ ಸೊಪ್ಪಿನ್, ಬಾಬಾಜಾನ ಮುದೋಳ, ಗಿರೀಶ ಪಟ್ಟಣಶೆಟ್ಟಿ, ಅಮರೇಗೌಡ ಗೊನವಾರ, ವೆಂಕನಗೌಡ ಪಾಟೀಲ, ಮುಸ್ತಪಾ ಕುನ್ನಿಬಾವಿ, ಆರ್ ಎಚ್ ಆಯಿ, ಬಿ. ಎನ್. ಪೂಜಾರ, ಮಹೇಶ ಪತ್ತಾರ, ಮಾರುತಿ ಅಂಬಿಗೇರ, ರಾಚಪ್ಪ ಹಡಪದ, ಡಾ. ಅನಸೂಯ ಕಾಂಬಳೆ, ಡಾ. ಚಂದ್ರಶೇಖರ ರೊಟ್ಟಿಗವಾಡ, ಸಿದ್ದು ಸತ್ಯಣ್ಣವರ, ಗಂಗಾಧರ ಬಡಿಗೇರ, ಎಚ್ ಜಿ. ದೇಸಾಯಿ, ಡಾ. ಎಸ್ ಜಿ. ಚಿಕ್ಕ ನರಗುಂದ, ಡಾ. ಡಿ. ಬಿ. ಗವಾನಿ, ಡಾ. ನಿಂಗಪ್ಪ ಮುದೇನೂರ, ಮಹಾದೇವ ಹಡಪದ, ಲಕ್ಷ್ಮಣ ಬಕ್ಕಾಯಿ, ಹಿಪ್ಪರಗಿ ಸಿದ್ರಾಮ, ನಾಗರಾಜ ಗುರಿಕಾರ, ಪ್ರಗಾಥ ಮೋಹನ ಮತ್ತು ಜೊತೆಗೆ ನೀವು

ಸಂಯೋಜನೆ : ಎಂ. ಎಸ್. ಹಡಪದ

ಬನ್ನಿ ಸಂಗಾತಿಗಳೊಡನೆ
-ಬಸೂ
ಲಡಾಯಿ ಪ್ರಕಾಶನ, ಗದಗ

Saturday, February 20, 2016

ನೀರಾಟ


ಚಿತ್ರ ಕೃಪೆ : ಕಿರಣ ಭಟ್ ಹೊನ್ನಾವರ


ಭಿನ್ನಾಭಿಪ್ರಾಯಗಳು ಅಪರಾಧವೇ?ಪಿ.ಸಾಯಿನಾಥ್

ಭಾಗ 1

 
 
ದಿನಾಂಕ-19-02-2016 ರಂದು ಜೆ.ಎನ್.ಯು ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪಿ. ಸಾಯಿನಾಥ್ ಮಾತನಾಡಿದ್ದರು. ಅದರ ಕನ್ನಡ ಭಾವಾನುವಾದದ ಮೊದಲ ಭಾಗ ಇಲ್ಲಿದೆ.

ಅನುವಾದ: ಡಾ.ಕಿರಣ್ ಎಂ ಗಾಜನೂರು
 
ಇದುವರೆಗೂ ನನ್ನನ್ನು ಪರಿಚಯಿಸಿದವರು ನನ್ನ ಕುರಿತು ಬಹಳಷ್ಟು ವಿಷಯಗಳನ್ನು ಹೇಳಿದ್ದಾರೆ; ಅದಕ್ಕೆ, ನಾನು ಸಹ ಒಬ್ಬ ಜೆ.ಎನ್.ಯು ದ ಹಿರಿಯ ವಿದ್ಯಾರ್ಥಿಯಾಗಿದ್ದೇನೆ ಎಂಬ ಹೆಮ್ಮೆಯ ವಿಷಯವನ್ನು ಸೇರಿಸ ಬಯಸುತ್ತೇನೆ. ಆ ನಂತರ ಸುಮಾರು 25 ರಿಂದ 30 ವರ್ಷಗಳ ನಂತರ ಈ ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಲು ಮತ್ತೆ ಇಲ್ಲಿಗೆ ಬಂದೆ. ಆದರೆ ನನ್ನ ಸೇವೆಯ ಶೇ 80 ರಷ್ಟು ಸಮಯ ಸುಪ್ರೀಂ ಕೋರ್ಟ್ ತೀರ್ಪು, ಸಂಸತ್ತಿನ ಕಾಯ್ದೆ ಎಲ್ಲವನ್ನೂ ಧಿಕ್ಕರಿಸಿ ಹಿಂದುಳಿದ ವರ್ಗಗಳಿಗೆ ನೀಡಬೇಕಿದ್ದ 27ಶೇ ಮೀಸಲಾತಿಯನ್ನು ಅಲ್ಲಗಳೆಯುತ್ತಿದ್ದ ಕೆಲವು ಜನರನ್ನು ಎದುರಿಸುವುದರಲ್ಲಿಯೇ ಕಳೆದು ಹೋಯಿತು. ಅಂತಿಮವಾಗಿ ನಾವು ಗೆದ್ದೆವು, ಅದು ಬೇರೆ ವಿಚಾರ. ನಿಜ ಹೇಳಬೇಕು ಎಂದರೆ ನಾನು ವಿದ್ಯಾರ್ಥಿಯಾಗಿ ಇಲ್ಲಿನ ಗಂಗಾ ವಸತಿ ನಿಲಯದ ಅಧ್ಯಕ್ಷನಾಗಿದ್ದಾಗ ಇದ್ದಷ್ಟು ಸಂತೋಷ ಇಲ್ಲಿನ ಕಾರ್ಯಕಾರಿ ಮಂಡಳಿಯ ಸದಸ್ಯನಾಗಿದ್ದಾಗ ಇರಲಿಲ್ಲ . .
ನಾನು ಇಂದು ದೆಹಲಿಗೆ ನಿಮಗಾಗಿಯೇ ಬಂದಿದ್ದೇನೆ. ನನಗೆ ದೆಹಲಿಯಲ್ಲಿ ಬೇರೆ ಯಾವ ಕೆಲಸವೂ ಇಲ್ಲ. ನಾನು ಏಕೆ ಇಂದು ನಿಮ್ಮ ಎದುರು ನಿಂತಿದ್ದೇನೆ ಎಂದರೆ ಇಂದು ನೀವು ಮಾಡುತ್ತಿರುವ ಹೋರಾಟ ನಿಮ್ಮ ಬೇಡಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಅದಕ್ಕಿಂತಲೂ ಮೀರಿದ ವಿಶಾಲವಾದ ಸಂಗತಿಯೊಂದರ ಕಡೆಗೆ ನಮ್ಮನ್ನು ಸೆಳೆಯುತ್ತಿದೆ.
ಈ ದೇಶದಲ್ಲಿ ಇಂದು ನಡೆಯುತ್ತಿರುವ ಹೋರಾಟಗಳ ಕುರಿತು ಅದ್ಯತಾ ಪಟ್ಟಿಯೊಂದನ್ನು ತಯಾರು ಮಾಡಿಕೊಂಡರೆ ನಿಮ್ಮ ಹೋರಾಟ 3ನೇ ಸ್ಥಾನದಲ್ಲಿ ಇದೆ. ಆದರೆ ನಿಮಗೆ ನೆನಪಿರಲಿ ಈ ಹೋರಾಟವನ್ನು ಈ ದೇಶದ ಸಾಮಾನ್ಯ, ಬಡವ, ದಲಿತ ಕಳೆದ ಎರಡು ದಶಕಗಳಿಂದ ನಡೆಸುತ್ತಲೇ ಬರುತ್ತಿದ್ದಾರೆ. ಇಂದು ಆ ಹೋರಾಟ ಜೆ.ಎನ್.ಯು ಅಂತಹ ಎಲೈಟ್ ವಿಶ್ವವಿದ್ಯಾನಿಲಯಗಳ ಅಂಗಳವನ್ನು ತಲುಪಿದೆ ಅಷ್ಟೆ! ಇದು ನಿಮಗೆ ಅರ್ಥವಾಗಬೇಕು. ನೀವು ನಿಜವಾಗಿಯೂ ಹೋರಾಡುತ್ತಿರುವುದು ಭಿನ್ನಾಭಿಪ್ರಾಯಗಳನ್ನೆ ಅಪರಾಧ ಎಂದು ಸಾಧಿಸಲು ಹೊರಟಿರುವ ಪ್ರಕ್ರಿಯೆಯ ವಿರುದ್ಧ. ನಮ್ಮ ನಡುವೆ ನಡೆಯುತ್ತಿರುವ ಈ ಸಂಗತಿ ಕೇವಲ ಸಂವಿಧಾನಿಕ ಕಾನೂನಿನ ವಿರೋಧ ಅಥವಾ ಅತಿಕ್ರಮಣದ ಪ್ರಕ್ರಿಯೆ ಮಾತ್ರ ಆಗಿ ನೋಡಲಾಗದು, ಬದಲಾಗಿ ಇದು ನಮ್ಮ ನಡುವಿನ ಅಭಿಪ್ರಾಯ ಭಿನ್ನತೆ ಹೊಂದುವುವವರನ್ನು ಅಪರಾಧಿಗಳೆಂದು ವಿವರಿಸುತ್ತಿರುವ ಮಾದರಿಯ ವಿರುದ್ಧದ ಹೋರಾಟ ಎಂಬ ವಿಶಾಲ ಅರ್ಥದಲ್ಲಿ ನೋಡಬೇಕಿದೆ.
ಇಂದು ನೀವು ಬದುಕುತ್ತಿರುವ ಕಾಲಘಟ್ಟ ಕೇವಲ ಅಸಮಾನತೆಯ ಕಾಲ ಮಾತ್ರವಲ್ಲ ಬದಲಾಗಿ ಕಾರ್ಪೊರೇಟ್ ಶಕ್ತಿಗಳ ದಮನಕಾರಿ ನೀತಿಯನ್ನು ಎದುರಿಸುತ್ತಿದ್ದ ಧ್ವನಿಗಳನ್ನು ಹತ್ತಿಕ್ಕುತ್ತಿರುವ ಕಾಲಘಟ್ಟವೂ ಹೌದು. ಜೀವನದಲ್ಲಿ ಎಂದಿಗೂ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿರದ ಒರಿಸ್ಸಾದ ಕಳಿಂಗಾ ನಗರದಲ್ಲಿನ, ಉತ್ಕಲ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರುವ ಅದಿವಾಸಿ ಕುಟುಂಬವೊಂದು ಟಾಟಾ ಕಂಪೆನಿಯನ್ನು ತಮ್ಮ ಭೂಮಿಯ ಹಕ್ಕಿಗಾಗಿ ಎದುರಿಸುತ್ತದೆ ಮತ್ತು ಅನ್ನ ನೀಡುವ ಭೂಮಿಯನ್ನು ಕೊಡಲು ನಿರಾಕರಿಸುತ್ತದೆ. ಪರಿಣಾಮ ಇಂದು ಆ ಕುಟುಂಬದ ಮೇಲೆ 91 ಪ್ರಕರಣಗಳು ದಾಖಲಾಗಿವೆ! ಎಷ್ಟು 91 ಪ್ರಕರಣಗಳು!
ಒಡಿಸ್ಸಾದ ಜಗತ್ ಸಿಂಗ್ಪುರ್ ನಲ್ಲಿ ಪೋಸ್ಕೋ ವಿರುದ್ಧದ ಹೋರಾಟದ ನಾಯಕ ಅಭಯ್ ಸಾಹು, ನಿಮಗೆ ನೆನಪಿರಲಿ ಈತ ಹೋರಾಡಿ ಪೋಸ್ಕೋವನ್ನು ಮಣಿಸಿದ್ದಾನೆ; ಪ್ರತಿಬಾರಿ ಅವನನ್ನು ಬೇಟಿ ಮಾಡಿದಾಗ ನಾನು ಎಷ್ಟಾದವು ಎಂದು ಆತನನ್ನು ಕೇಳುತ್ತೇನೆ, ಆತ ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಮಾಹಿತಿಯನ್ನು ನೀಡುತ್ತಿರುತ್ತಾನೆ ಕಳೆದ ಬಾರಿಯ ಭೇಟಿಯಲ್ಲಿ ಆತನ ಮೇಲೆ 56 ರಿಂದ 58 ಪ್ರಕರಣಗಳು ದಾಖಲಾಗಿದ್ದವು. ಆ ಹಳ್ಳಿಯ ಜನ ಪ್ರಕರಣಗಳಿಗೆ ಹೆದರಿ ಹಳ್ಳಿಯಿಂದ ಹೊರಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ ಆ ಕಾರಣಕ್ಕೆ ಅವರುಗಳಿಗೆ ಅಣ್ಣ, ತಮ್ಮ ಬಂಧುಗಳನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ.
ನೀವು ರಿಲಯನ್ಸ್ ಮತ್ತು ಎಸ್.ಇ.ಝೆಡ್ (ವಿಶೇಷ ಆರ್ಥಿಕ ವಲಯ) ಪ್ರಾಜೆಕ್ಟ್ ಗಳನ್ನು ವಿರೋಧಿಸುತ್ತಿರುವ ದೇಶದ ಯಾವುದೇ ಭಾಗವನ್ನು ಸಂದರ್ಶಿಸಿ ಇದು ನಿಮಗೆ ಕಾಣಿಸುತ್ತದೆ. ಇಂದು ಪ್ರಕರಣಗಳನ್ನು ದಾಖಲಿಸಿ ಹೋರಾಟಗಳನ್ನು ಹತ್ತಿಕ್ಕುವುದು ಒಂದು ತಂತ್ರವಾಗಿಬಿಟ್ಟಿದೆ. ಇದು ಇಲ್ಲಿ ಮಾತ್ರ ನಡೆಯುತ್ತಿಲ್ಲ, ಬದಲಾಗಿ ದೇಶದ ಎಲ್ಲಾ ಕಡೆ ನಡೆಯುತ್ತಿದೆ ಉದಾಹರಣೆಗೆ ನೀವು ಒಂದು ಸಂಗತಿಯನ್ನು ಎದುರಿಸಿ ಪ್ರತಿಭಟನೆ ನಡೆಸಿದರೆ ಪೋಲಿಸರು ಕನ್ಹಯ್ಯ ಕುಮಾರ್ ಮತ್ತು 800 ಇತರರು ಎಂದು ಪ್ರಕರಣ ದಾಖಲಿಸಿಬಿಡುತ್ತಾರೆ. ಇದು ಅವರಿಗೆ ಸುತ್ತ ಮುತ್ತಲಿನ ಹಳ್ಳಿಗಳನ್ನು ಮುಂದಿನ ಮೂರು ವರ್ಷಗಳ ಕಾಲ ದಾಳಿ ಮಾಡಲು ಮತ್ತು ಜನರನ್ನು ಹೆದರಿಸಲು ಸಹಕಾರಿಯಾಗುತ್ತದೆ ಎ.ಬಿ.ಸಿ ಮತ್ತು 800 ಇತರರು ಪೋಲಿಸರ ಮೇಲೆ ಹಲ್ಲೆ ನಡೆಸಿದರು ಎಂದು ಪ್ರಕರಣ ದಾಖಲಾಗುತ್ತದೆ.
ಕೋರಾಪುರದ ಜೈಲಿನಲ್ಲಿ ನಾನು ಒಬ್ಬರನ್ನು ಬೇಟಿಯಾಗಲು ಹೋಗಿದ್ದೆ. ವೃತ್ತಿಯಲ್ಲಿ ಅವರು ರಸಾಯನಶಾಸ್ತ್ರದ ಪ್ರಾಧ್ಯಾಪಕರು. ಆದರೆ ನಮಗೆ ಅವರನ್ನು ಬೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ ಅವರ ವಕೀಲರು ನಮ್ಮೊಡನೆ ಮಾತನಾಡಿದರು. ನಿಮಗೆ ಕೇಳಿ ಆಶ್ಚರ್ಯವಾಗುತ್ತದೆ, ಒಬ್ಬ ರಸಾಯನ ಶಾಸ್ತ್ರದ ಪ್ರಾಧ್ಯಾಪಕರ ಮೇಲೆ ಎಮ್ಮೆ ಕದ್ದ ಆರೋಪ ಹೋರಿಸಿ ಪ್ರಕರಣ ದಾಖಲಿಸಲಾಗಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಈ ರೀತಿಯ ಪ್ರಕರಣಗಳು ನಮ್ಮಗಳ ಮೇಲೆಯೂ ದಾಖಲಾಗಿವೆ. ಇಲ್ಲಿ ಆ ಪ್ರಾಧ್ಯಾಪಕರನ್ನು ಮತ್ತು ಎಮ್ಮೆಯನ್ನು ನಮಗೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಅದು ಬೇರೆ ವಿಚಾರ.
ಸಿತಾಕುಲಂ ಜಿಲ್ಲೆಯಲ್ಲಿನ ಪೋರ್ಟ್ ವಿರುಧ್ಧದ ಹೋರಾಟದಲ್ಲಿ 78 ವರ್ಷದ ಮಹಿಳೆಯ ಮೇಲೆ, ಈ ವರ್ಷ ಆಕೆಗೆ 80 ವರ್ಷ ತುಂಬುತ್ತದೆ. ಆಕೆಯ ಮೇಲೆ ಪೋಲಿಸರನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದ್ದು ಸೇರಿದಂತೆ 23 ಪ್ರಕರಣಗಳು ದಾಖಲಾಗಿವೆ. ಆಕೆ ಸುಮಾರು ಐದು ಅಡಿ ಇರಬಹುದು. 35 ಕೆ.ಜಿ ತೂಕವನ್ನು ಹೊಂದಿರಬಹದು. ಆಕೆ ದಾಳಿ ಮಾಡಲು ಬಂದ 20 ರಿಂದ 23 ಜನ ಪೋಲಿಸರನ್ನು ಕೊಲ್ಲಲು ಯತ್ನಿಸಿದಳು ಎಂಬ ಆರೋಪವನ್ನು ಹೊರಿಸಲಾಗಿದೆ. ಈ ಪ್ರವೃತ್ತಿಯೀಗ ಎಲೈಟ್ ವಿಶ್ವವಿದ್ಯಾನಿಲಯವನ್ನು ತಲುಪಿರುವುದನ್ನು ಸ್ವಾಗತಿಸಬೇಕಿದೆ ಮತ್ತು ಇಂತಹದರ ವಿರುಧ್ಧ ನಾವು ಪ್ರತಿಭಟಿಸಬೇಕಿದೆ.
ನಾನು ನಾಳೆಗೆ ಎಲ್ಲವೂ ಸರಿಹೋಗಿಬಿಡುತ್ತದೆ ಎಂದು ಹೇಳುತ್ತಿಲ್ಲ. ನನಗೆ ಅನ್ನಿಸುವಂತೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಲಿದೆ. ಆದರೆ ಭವಿಷ್ಯದಲ್ಲಿ ಖಂಡಿತ ಪರಿಸ್ಥಿತಿ ಉತ್ತಮಗೊಳ್ಳುತ್ತದೆ, ಆದರೆ ಅದಕ್ಕೂ ಮುಂಚೆ ಅತ್ಯಂತ ದುರ್ಗಮ ದಾರಿಯನ್ನು ಪರಿಸ್ಥಿತಿಯನ್ನು ನಾವು ನೋಡಬೇಕಿದೆ. ಆದರೆ ಭವಿಷ್ಯ ಹೇಗೆ ಬದಲಾಗುತ್ತದೆ ಎಂಬುದು ನಾವು ಮತ್ತು ನಮ್ಮ ಕಾನೂನು ಹೇಗೆ ಕೆಲಸ ಮಾಡುತ್ತೇವೆ ಎಂಬುದು ನಿರ್ಧರಿಸಲಿದೆ. ನನಗೆ ಜೆ.ಎನ್.ಯು ವಿಧ್ಯಾರ್ಥಿ ಸಮುದಾಯದಲ್ಲಿ ಅಪಾರವಾದ ನಂಬಿಕೆಯಿದೆ. ಆ ಕಾರಣಕ್ಕೆ ನಾನು ನಿಮ್ಮೊಳಗೆ ಒಬ್ಬನಾಗಿ ಇಂದು ಇಲ್ಲಿ ನಿಂತಿದ್ದೇನೆ ಈ ಹೋರಾಟದಲ್ಲಿ ನೀವು ಗೆದ್ದೇ ಗೆಲ್ಲುತ್ತೀರಾ ಎಂಬ ನಂಬಿಕೆ ನನಗಿದೆ.
ನೀವು ಇಂದು ಈ ದೇಶದ ಎಂದೂ ಕಂಡಿರದ ಅಸಮಾನತೆಯ ಕಾಲದಲ್ಲಿ ನಿಂತಿದ್ದೀರಾ ಜೊತೆಗೆ ಹೆಚ್ಚುತ್ತಿರುವ ಮೂಲಭೂತವಾದಿ ಶಕ್ತಿಗಳು ನಮ್ಮ ಮುಂದಿವೆ. ನನ್ನ ದೃಷ್ಟಿಯಲ್ಲಿ ಇಂದು ಭಾರತ ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮಾರುಕಟ್ಟೆ ಶಕ್ತಿಗಳೊಂದಿಗೆ ಸೇರಿ ಮಾಡಿಕೊಂಡಿರುವ ಮೈತ್ರಿಕೂಟದಿಂದ ಆಳಲ್ಪಡುತ್ತಿದೆ, ಇದು ನನ್ನ ಅಭಿಪ್ರಾಯ ಆಗಿದೆ ಈ ಕುರಿತ ಚರ್ಚೆಗೆ ನಾನು ಸಿದ್ಧನಿದ್ದೇನೆ. ಆ ಎರಡು ಶಕ್ತಿಗಳು (ಸಾಮಾಜಿಕ ಮತ್ತು ಧಾರ್ಮಿಕ ಮೂಲಭೂತವಾದಿಗಳು ಮತ್ತು ಮಾರುಕಟ್ಟೆ ಶಕ್ತಿಗಳು) ಪರಸ್ಪರ ಹೊಂದಿಕೊಂಡೆ ಸಾಗುವ ಅನಿವಾರ್ಯತೆಯನ್ನು ಹೊಂದಿವೆ. ತುಂಬಾ ಸಾರಿ ಬಹಳ ದೊಡ್ಡ ಸಂಖ್ಯೆಯ ಜನರು ಮಾರುಕಟ್ಟೆ ಮೂಲಭೂತವಾದಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳಾಗಿರುವುದನ್ನು ನಾವು ಕಾಣಬಹುದಾಗಿದೆ . . .
ಮೊದಲು ನಾವು ಮಾರುಕಟ್ಟೆ ಮೂಲಭೂತವಾದಿಗಳು, ಯಾವ ಧಾರ್ಮಿಕ ಮೂಲಭೂತವಾದಿಗಳಿಂದ ಕಡಿಮೆ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಈ ಎರಡು ಶಕ್ತಿಗಳು ತಮ್ಮದೇ ಆದ ಪವಿತ್ರ ಗ್ರಂಥಗಳು, ಪುರಾಣಗಳು, ದೈವವಾಣಿಗಳು ಮತ್ತು ಪಂಡಿತರನ್ನು ಹೊಂದಿವೆ. ಮಾರುಕಟ್ಟೆ ಮೂಲಭೂತವಾದಿಗಳು, ಧಾರ್ಮಿಕ ಮೂಲಭೂತವಾದಿಗಳಿಗಿಂತ ಹೆಚ್ಚು ಟಿ.ವಿ ವಕ್ತಾರರನ್ನು ಹೊಂದಿದ್ದಾರೆ ಅವರು ಪ್ರತಿದಿನ ಸಂಜೆ ಎಲ್ಲಾ ಚಾನೆಲ್ ಗಳಲ್ಲಿಯೂ ಕಾಣಲು ಸಿಗುತ್ತಾರೆ. . .
ಅಭಿವೃದ್ಧಿ, ಆಯ್ಕೆ ಎಂಬ ಮಾರುಕಟ್ಟೆ ಮೂಲಭೂತವಾದಿಗಳ ದೈವವಾಣಿಗಳು ಜೆ.ಎನ್.ಯು ವಿಧ್ಯಾರ್ಥಿಗಳಾದ ನಿಮಗೆ ಗೊತ್ತಿರುತ್ತವೆ. ಮಾರುಕಟ್ಟೆ ನಿಜಕ್ಕೂ ನಮಗೆ ಆಯ್ಕೆಯ ಸ್ವಾತಂತ್ರ‍್ಯ ನೀಡುತ್ತದೆಯೇ? ಈ ಕುರಿತು ವಿಸ್ತೃತ ಚರ್ಚೆಗಳು ಆಗುತ್ತಿರುತ್ತವೆ, ಇತ್ತೀಚೆಗೆ ವಾರ ಅಥವಾ ಹತ್ತು ದಿನಗಳ ಹಿಂದೆ ನಮ್ಮ ನಡುವಿನ ಇಬ್ಬರು ಮಾರುಕಟ್ಟೆ ಮೂಲಭೂತವಾದಿಗಳು ಒಂದು ಟಿ.ವಿ ವಾಹಿನಿಯಲ್ಲಿ ಥಾಮೇಸ್ ಪೀಕೆಟಿ ಅವರೊಂದಿಗೆ ಚರ್ಚಿಸುತ್ತಾ ಅಸಮಾನತೆ ಎಂಬುದು ಅಂಥ ತಲೆಕೆಡಿಸಿಕೊಳ್ಳಬೇಕಾದ ಸಂಗತಿಯಲ್ಲ ಮತ್ತು ಜನರ ಸಂಪತ್ತು ಮುಳುಗುತ್ತಿರುವುದು ದೊಡ್ಡ ವಿಷಯವಾಗಬೇಕಿಲ್ಲ ಎಂದು ವಾದಿಸುತ್ತಿದ್ದರು. ಹೀಗೆ ವಾದಿಸುತ್ತಿದ್ದವರು ವಿವೇಕ್ ಡಿಬ್ರಾಯ್ ಮತ್ತು ನಮ್ಮ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ ಸುಬ್ರಮ್ಹಣ್ಯ. ನನಗೆ ನೀತಿ ಅಯೋಗದ ವಿವೇಕ್ ಡಿಬ್ರಾಯ್ ಅವರೊಂದಿಗೆ ಯಾವುದೇ ಸಮಸ್ಯೆಗಳಿಲ್ಲ, ತಮಿಳುನಾಡಿನ ನನ್ನ ಸ್ನೇಹಿತರು “ನೀತಿ ಅಯೋಗ”ವನ್ನು “ನೀತಿ ಅಯ್ಯೂ” ಎಂದು ಕರೆಯುತ್ತಾರೆ. ಇವರು ಹೇಳುತ್ತಿದ್ದರು ಇಂದು ಮಾರುಕಟ್ಟೆಯಲ್ಲಿ ಹೂಡಿದ ಹಣವನ್ನು ಜನರು ಕಳೆದುಕೊಳ್ಳುತ್ತಿದ್ದರೆ ಅದು ಅವರ ವ್ಯವಹಾರ, ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದಂತೆ ಅರವಿಂದ ಸುಬ್ರಮ್ಹಣ್ಯ ಅವರು ‘ವಿವೇಕ್ ಸರಿಯಾಗಿ ಹೇಳುತ್ತಿದ್ದಾರೆ’ ಎನ್ನುತ್ತಿದ್ದರು. ಅವರ ಇಬ್ಬರ ಅಲೋಚನೆಗಳು ಒಂದೆ ಆಗಿವೆ . . .
ನಾವು ಮಾರುಕಟ್ಟೆ ಮೂಲಭೂತವಾದದ ಕುರಿತು ನಮ್ಮೆದುರು ಬರುತ್ತಿರುವ ಅಸಮಾನತೆಯ ಮಾದರಿಗಳ ಕುರಿತು ಮಾತನಾಡುವಾಗ ಯುಪಿಎ ಮತ್ತು ಎನ್.ಡಿ.ಎ ನಿಲುವುಗಳಲ್ಲಿ ಅಂತಹ ಅಂತರ ಕಾಣಲಾಗುವುದಿಲ್ಲ. ಈ ಸಂದರ್ಭದಲ್ಲಿ ವೃತ್ತಿಯಲ್ಲಿ ನನ್ನ ಸಹೋದ್ಯೋಗಿಯಾದ ಅರುಣ್ ಶೌರಿ ಅವರ ಮಾತೊಂದು ನೆನಪಿಸಿಕೊಳ್ಳಬೇಕು. ಅವರು ಬಿ.ಜೆ.ಪಿ ಎಂದರೆ ಕಾಂಗ್ರೆಸ್+ಗೋವು ಎಂಬ ವಿಮರ್ಶೆಯನ್ನು ಅರುಣ್ ಶೌರಿ ಮಾಡಿದ್ದರು. ಅವರ ಪ್ರಕಾರ ದೇಶದ ನೀತಿಗಳ ರಚನೆಯ ವಿಷಯದಲ್ಲಿ ಬಿ.ಜೆ.ಪಿ ಎಂದರೆ ದನದ ವಿಷ್ಯವನ್ನು ಸೇರಿಸಿಕೊಂಡ ಮತ್ತೊಂದು ಕಾಂಗ್ರೆಸ್ ಅಷ್ಟೆ ಎಂದುಬಿಟ್ಟಿದ್ದರು. . . .
ನಾವು ಮಹಾರಾಷ್ಟ್ರಕ್ಕೆ ಬಂದರೆ ನೀವು ಪತ್ರಿಕೆಗಳಲ್ಲಿ ನೋಡುತ್ತಲೇ ಇರುತ್ತೀರ, ಅಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿಸಲಾಗಿದೆ. ಈ ನಿಷೇಧದ ಹಿಂದಿರುವ ಬಹಳ ಪ್ರಮುಖವಾದ ನಂಬಿಕೆ ಮೂಲಭೂತವಾದಿಗಳು ಗೋವನ್ನು ಪವಿತ್ರ ಎಂದು ಭಾವಿಸುತ್ತಾರೆ ಎಂಬುದು. ಉಳಿದೆಡೆಗಳಲ್ಲಿಯೂ ಗೋವನ್ನು ಬಹಳ ಪವಿತ್ರ ಎಂದು ಗುರುತಿಸಲಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಕೃಷಿ ಪ್ರಧಾನ ಸಮುದಾಯಗಳನ್ನು ಹೊಂದಿರುವ ಭಾರತದಲ್ಲಿ ಗೋವು ಕೃಷಿ ಆರ್ಥಿಕತೆಯಲ್ಲಿ ಮಹತ್ವದ ಸ್ಥಾನ ಹೊಂದಿದೆ. ಅದರಲ್ಲಿ ಯಾವುದೇ ಸಂಶಯವಿಲ್ಲ. . .
ಅದರೆ ಇಂದು ಜಾರಿಯಲ್ಲಿರುವ ಗೋವುಗಳನ್ನು ಮಾಂಸಕ್ಕಾಗಿ ಕೊಲ್ಲುವುದು ಮತ್ತು ಮಾರಾಟ ಮಾಡುವುದರ ಮೇಲಿನ ನಿಷೇಧ (ಈ ನಿಷೇಧ ಎಮ್ಮೆ ಕೋಣಗಳ ಮೇಲೂ ಹೆರಲಾಗುತ್ತಿದೆ) ಮೂಲಭೂತವಾದಿಗಳ ಅಲೋಚನೆಯಾಗಿದೆ. ಈ ಕುರಿತಂತೆ ನಾವು ಸ್ಪಲ್ಪ ತಿಳಿದುಕೊಳ್ಳಬೇಕಿದೆ. ನೀವು ನಮ್ಮ ಇತ್ತೀಚಿನ ಜನಸಂಖ್ಯೆ ವರದಿಯ ಅಂಕಿ-ಅಂಶಗಳನ್ನು ನೋಡಿದರೆ ಐಡಿಯಾಲಜಿಕಲಿ ಮತ್ತು ಧಾರ್ಮಿಕವಾಗಿ ಈ ದೇಶದ ಶೇ 42ರಷ್ಟು ಜನಸಂಖ್ಯೆಗೆ ಗೋ ಮಾಂಸ ಸೇವನೆಗೆ ಯಾವುದೇ ತಕರಾರು ಇಲ್ಲ. ಅದರಾಚೆಗೆ ಹಿಂದೂ ಎಂದು ಕರೆಯಲ್ಪಡಬಹುದಾದ ಬಹುದೊಡ್ಡ ಜನಸಂಖ್ಯೆಯ ಬಹಳಷ್ಟು ಮಂದಿಗೆ ಗೋ ಮಾಂಸ ಒಂದು ಸಮಸ್ಯೆಯೇ ಅಲ್ಲ! ಕೇರಳದಲ್ಲಿ ಬಿ.ಜೆ.ಪಿಯ ನಾಯಕರು ಗೋ ಮಾಂಸ ತಿನ್ನುತ್ತಿರುವ ವೀಡಿಯೋ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದೆ. ಅದಕ್ಕೆ ಪ್ರತಿಯಾಗಿ ನಾನು ಗೋ ಮಾಂಸ ತಿನ್ನುತ್ತಿರುವುದು ಮೂರು ವರ್ಷಗಳ ಹಿಂದೆ! ಇಲ್ಲ ಇಲ್ಲ ಇದು ಗೋ ಮಾಂಸ ಅಲ್ಲ ಇದು ಈರುಳ್ಳಿ ಪಕೋಡಾ! ಎಂಬ ಕೆಲವು ವೀಡಿಯೋಗಳನ್ನು ಹರಿಬಿಡಲಾಗಿದೆ. ಆದರೆ ಈ ಸಂಗತಿಯಿಂದ ನಾವು ಅರ್ಥಮಾಡಿಕೊಳ್ಳಬಹುದಾದ ವಿಷಯ ಕೇರಳದಲ್ಲಿ ಬಹುಪಾಲು ಜನ ಪಕ್ಷಾತೀತವಾಗಿ ಗೋ ಮಾಂಸ ಸೇವಿಸುತ್ತಾರೆ ಎಂಬುದು . . . .
ಇನ್ನು ಮಹಾರಾಷ್ಟ್ರಕ್ಕೆ ಬರುವುದಾದರೆ ಅಲ್ಲಿ ಗೋ ಮಾಂಸ ನಿಷೇಧಿಸಿದ ಮೊದಲ ವಾರ ಭಜರಂಗ ದಳದ ಹುಡುಗರು ಎಲ್ಲಾ ರಸ್ತೆಗಳಲ್ಲಿ ನಿಂತು ವಾಹನಗಳಲ್ಲಿ ಯಾವ ಮಾಂಸ ಇದೆ ಎಂದು ಪರಿಶೀಲಿಸುತ್ತಿದ್ದರಿಂದ ಮುಂಬಯಿಯ ಮೃಗಾಲಯಗಳಲ್ಲಿನ ಹುಲಿ ಮತ್ತು ಸಿಂಹಗಳಿಗೆ ಚಿಕನ್ ಸರಬರಾಜು ಮಾಡಲಾಯಿತು. ಇಲ್ಲಿ ಇನ್ನೊಂದು ವಿಷಯವಿದೆ. ಈ ಬಿ.ಜೆ.ಪಿ ಭಜರಂಗದಳ, ವಿಶ್ವಹಿಂದೂ ಪರಿಷದ್, ಆರ್.ಎಸ್.ಎಸ್ ಎಲ್ಲವೂ ಬೇರೆ ಬೇರೆ ಸಂಘಟನೆಗಳು ಎಂಬ ಒಂದು ವಾದವನ್ನು ಮುಂದಿಡಲಾಗುತ್ತದೆ. ನಮ್ಮ ಸೆಕ್ಯಲಾರ್ ಮಿತ್ರರು ಇಲ್ಲ ಇಲ್ಲ ಅವೆಲ್ಲವೂ ಒಂದೆ ಎಂದು ಗಟ್ಟಿಯಾಗಿ ಹೇಳುತ್ತಿರುತ್ತಾರೆ. ಆದರೆ ವಾಸ್ತವದಲ್ಲಿ ಈ ಎಲ್ಲಾ ಸಂಘಟನೆಗಳು ಒಂದೇ ಅಲ್ಲ ಬದಲಾಗಿ ಬೇರೆ ಬೇರೆ, ಈ ಸತ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಇವರೆಲ್ಲಾ ಯಾರು ಎಂದು ನಾವು ನೋಡಿದರೆ ಬಿ.ಜೆ.ಪಿ ರಾಜಕೀಯ ರಂಗದಲ್ಲಿನ ಆರ್.ಎಸ್.ಎಸ್ ಆಗಿದ್ದರೆ, ವಿಶ್ವಹಿಂದೂ ಪರಿಷತ್ ಹುಡುಗರ ತಲೆಯಲ್ಲಿ ಧಾರ್ಮಿಕ ನಶೆಯನ್ನು ತುಂಬುವಲ್ಲಿ ಬಿ.ಜೆ.ಪಿ ತರ ಕೆಲಸ ಮಾಡುತ್ತದೆ, ಇನ್ನು ಭಜರಂಗದಳ ಕಟ್ಟಡಗಳನ್ನು, ಬದುಕುಗಳನ್ನು ಒಡೆಯುವುದರಲ್ಲಿ ವಿಶ್ವಹಿಂದೂ ಪರಿಷದ್ ನಂತೆ ಕೆಲಸ ಮಾಡುತ್ತದೆ. ಆದ್ದರಿಂದ ನಾವು ಇವುಗಳ ನಡುವಿನ ಈ ವ್ಯತ್ಯಾಸವನ್ನು ಗುರುತಿಸಬೇಕಿದೆ. . ..
ಇನ್ನು ನಾವು ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಘಟನೆಗೆ ಮರಳುವುದಾದರೆ ಮುಂಬಯಿಯ ಮೃಗಾಲಯದಲ್ಲಿ ಒಂದು ವಾರಗಳ ಕಾಲ ಹುಲಿ ಸಿಂಹಗಳಿಗೆ ಚಿಕನ್ ತಿನ್ನಿಸಿದ ಪರಿಣಾಮ ಸಮಸ್ಯೆಯಾಗಿ ಇಡಿ ಮಹಾರಾಷ್ಟ್ರದಲ್ಲಿನ ಪಶುಗಳ ಮಾರುಕಟ್ಟೆ ಕುಸಿದು ಬಿತ್ತು. ಹಿಂದೂ, ಮುಸ್ಲಿಂ,ಕ್ರಿಶ್ಚಿಯನ್ ಮತ್ತು ದಲಿತರು ಸೇರಿದಂತೆ ಸಾವಿರ ಸಾವಿರ ಜನ ತೊಂದರೆಗೆ ಅತಂಕಕ್ಕೆ ಒಳಗಾದರು. ಇವರ‍್ಯಾರಿಗೂ ಗ್ರಾಮೀಣ ಆರ್ಥಿಕತೆಯಲ್ಲಿ ಗೋವಿನ ಪಾತ್ರದ ಕುರಿತ ಕೊಂಚವೂ ಅರಿವಿರಲಿಲ್ಲ. ಹಾಗೆ ನೋಡಿದರೆ ಗ್ರಾಮೀಣ ಭಾರತದ ಆರ್ಥಿಕತೆಯಲ್ಲಿ ಗೋವು ಮಹತ್ವದ ಪಾತ್ರ ವಹಿಸುತ್ತದೆ. . .
ಇದನ್ನೆಲ್ಲಾ ಆಧರಿಸಿ ಮೊನ್ನೆ ಟೈಮ್ಸ್ ಆಫ್ ಇಂಡಿಯಾ ಕೊಲ್ಲಾಪುರದ ಚಪ್ಪಲಿ ಉದ್ಯಮ ಕುಸಿದು ಬಿದ್ದಿರುವ ಕುರಿತು ಬಹಳ ಅಧ್ಬುತವಾದ ವರದಿಗಳನ್ನು ಪ್ರಕಟಿಸಿತು. ಇದು ಒಂದು ಅರ್ಥದಲ್ಲಿ ಮೇಕ್ ಇನ್ ಇಂಡಿಯಾ, ಬ್ರೇಕ್ ಇನ್ ಇಂಡಿಯಾ ಎನ್ನುವಂತಿದೆ. ನಿಮಗೆ ಗೊತ್ತಿರಲಿ ಕೊಲ್ಲಾಪುರದ ಚಪ್ಪಲಿಗಳು ಅಂತರಾಷ್ಟ್ರೀಯ ಬ್ರಾಂಡ್ ಹೊಂದಿವೆ, ಜಾಗತೀಕರಣ, ಉದಾರಿಕರಣಕ್ಕೂ ಪೂರ್ವದಲ್ಲಿಯೇ ಜಗತ್ತಿನ ಎಲ್ಲಾ ಭಾಗಗಳಿಗೆ ತಮ್ಮ ಉತ್ಪನ್ನಗಳನ್ನು ರಫ್ತು ಮಾಡಿದ ಹಿರಿಮೆ ಕೊಲ್ಲಾಪುರದ ಚಪ್ಪಲಿ ಉದ್ಯಮಕ್ಕೆ ಇತ್ತು. ಆದರೆ ಇಂದು ಪ್ರಾಣಿ ಮತ್ತು ಗೋ ಹತ್ಯೆ ನಿಷೇಧದಿಂದ ಅ ನಿಷೇಧವನ್ನು ಎಮ್ಮೆ ಮತ್ತು ಕೋಣಗಳಿಗೂ ವಿಸ್ತರಿಸಿರುವುದರಿಂದ ಕೊಲ್ಲಾಪುರದ ಚಪ್ಪಲಿ ಉದ್ಯಮ ನೆಲ ಕಚ್ಚಿದೆ. ನಿಜವಾಗಿಯೂ ಕೊಲ್ಲಾಪುರದ ಚಪ್ಪಲಿ ಉದ್ಯಮವನ್ನು ನಡೆಸುತ್ತಿದ್ದವರು ಮುಸ್ಲಿಂ ಜನರಲ್ಲ ಬದಲಾಗಿ ದಲಿತರು. ಸರ್ಕಾರದ ಈ ಕ್ರಮದಿಂದ ಒಂದು ಕಡೆ ಮುಸ್ಲಿಮರು ತೊಂದರೆಗೆ ಒಳಗಾದರೆ ಮತ್ತೊಂದು ಕಡೆ ದಲಿತರನ್ನು ತುಳಿದು ಹಾಕಲಾಗಿದೆ. ಅದರ ಜೊತೆಗೆ ಪಶುಗಳ ಉದ್ಯಮಗಳಲ್ಲಿ ತೊಡಗಿದ್ದ ಮರಾಠ ಇತ್ಯಾದಿ ಹಿಂದುಳಿದ ವರ್ಗಗಳನ್ನು ನಾಶಮಾಡಲಾಗಿದೆ. ಒಂದು ಗುಂಪಿನ ದಾಳಿಗೆ/ಕೆಲಸಕ್ಕೆ ಇಂದು ನಾವು ಎಲ್ಲಾ ಕಡೆಗಳಿಂದ ಬಂಧನಕ್ಕೆ ಒಳಗಾಗುತ್ತಿದ್ದೇವೆ. . .
ನಾನು ಇಲ್ಲಿನ ವಿಷಯಕ್ಕೆ ಮರಳುವುದಾದರೆ ಕಳೆದ ಕೆಲ ದಿನಗಳಿಂದ ಕೆಲ ಸ್ನೇಹಿತರು ನನಗೆ ಕರೆ ಮಾಡಿ ನಿಜಕ್ಕೂ ಈ ಸಂಗತಿಗಳು ಘಟಿಸುತ್ತಿವೆಯೇ ಎಂದು ಕೇಳುತ್ತಿದ್ದಾರೆ ನಾವು ಅವರಿಗೆ ಬನ್ನಿ ಗೊತ್ತಾಗುತ್ತದೆ ಇವು ನಮ್ಮ ನಡುವೆ ಘಟಿಸುತ್ತಿರುವ ಸಂಗತಿಗಳೆಂದು ಹೇಳುತ್ತಿದ್ದೇನೆ. . .
ನಾನು ಇದನ್ನು ಹೀಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇಂದು ಜೆ.ಎನ್.ಯು ಮತ್ತು ದೇಶದ ಇತರ ಕಡೆಗಳಲ್ಲಿ ನಡೆಯುತ್ತಿರುವ ಹೋರಾಟಗಳಿಂದ ಕೆಲವು ಜನ ಅತಂಕಕ್ಕೆ, ಬೇಸರಕ್ಕೆ ಒಳಗಾದಂತೆ ಕಾಣುತ್ತಾರೆ. ಆದರೆ ಈ ಘಟನೆಗಳು ಅವರಿಗೆ ಆಶ್ಚರ್ಯ ಉಂಟು ಮಾಡಿಲ್ಲ. ಅವರಿಗೆ ಇಂತಹ ಘಟನೆಗಳಿಂದ ಅತಂಕವಾಗುತ್ತದೆ. ಆದರೆ ಆಶ್ಚರ್ಯಕ್ಕೆ ಆಗುವುದಿಲ್ಲ. ಇದನ್ನು ಅರ್ಥಮಾಡಿಕೊಳ್ಳಲು ನಾವು ಸಮಕಾಲೀನ ಭಾರತದ ರಾಜಕೀಯದಲ್ಲಿ ಆದ ಬದಲಾವಣೆಗಳನ್ನು ಗುರುತಿಸಬೇಕು. ದಶಕಗಳ ಕಾಲ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆದರೆ ಇಂದು ಈ ದೇಶದ ರಾಜಕಾರಣದಲ್ಲಿ ಆಗಿರುವ ಬಹಳ ಬದಲಾವಣೆಯ ಕುರಿತು ನಾವು ಯೋಚಿಸಬೇಕು. ಚಿಂತಿಸಬೇಕು. ಆ ಬದಲಾವಣೆ ಒಬ್ಬ ಸಕ್ರಿಯ ಆರ್.ಎಸ್.ಎಸ್. ಪ್ರಚಾರಕ ಬಹುಮತ ಪಡೆದು ಪ್ರಧಾನಿಯಾಗಿರುವುದು. ಇದು ಭಾರತದ ರಾಜಕಾರಣದಲ್ಲಿ ಆಗಿರುವ ಬಹಳ ದೊಡ್ಡ ಬದಲಾವಣೆ. ಈ ಹಿಂದೆಯೂ ಆರ್.ಎಸ್.ಎಸ್. ಪ್ರಚಾರಕರು ನಮ್ಮ ನಾಯಕರಾಗಿದ್ದಾರೆ, 40 ವರ್ಷಗಳ ಕಾಲ ಪ್ರಚಾರಕರಾಗಿದ್ದವರು. ಆದರೆ ಅವರು ಬಹುಮತವಿಲ್ಲದ ಸರ್ಕಾರವನ್ನು ನಡೆಸುತ್ತಿದ್ದರು. ಆ ಕಾರಣಕ್ಕೆ ಅವರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಕೆಲವು ಮಿತಿಗಳು ಇದ್ದವು. ಆ ಕಾರಣಕ್ಕೆ ಅವರು “ಸಮ್ಮಿಶ್ರ ಸರ್ಕಾರದ ಧರ್ಮ” ಇತ್ಯಾದಿ ಮಾತುಗಳನ್ನು ಆಡುತ್ತಿದ್ದರು. ಆದರೆ ಇಂದು ನಾವು ಬಹುಮತ ಪಡೆದಿರುವ ಒಬ್ಬ ಸಂಘದ ಪ್ರಚಾರಕ ಪ್ರಧಾನಿಯಾಗಿರುವುದನ್ನು ನೋಡುತ್ತಿದ್ದೇವೆ. ಈ ಅಂಶ ಅವರನ್ನು ನಿಜವಾಗಿಯೂ ತಾವು ಏನು ಎಂಬುದನ್ನು ವ್ಯಕ್ತಪಡಿಸಲು ವಾತಾವರಣ ಸೃಷ್ಟಿಮಾಡಿಕೊಟ್ಟಿದೆ. ಅದನ್ನೆ ಅವರು ಮಾಡುತ್ತಿದ್ದಾರೆ ಮತ್ತು ಮಾಡುತ್ತಾರೆ ಕೂಡಾ. ಇದರಿಂದ ನಾವು ಈ ಕುರಿತು ಅತಂಕಕ್ಕೆ ಒಳಗಾಗಿ ಚರ್ಚೆ ಮಾಡಬಹುದೇ ಹೊರತು ಆಶ್ಚರ್ಯಕ್ಕೆ ಒಳಗಾಗುಗುವ ಅಗತ್ಯ ಇಲ್ಲ. ಏಕೆಂದರೆ ಇದು ನೀರಿಕ್ಷಿತ. . .
ನಾವು ಇಂದು ಎಲ್ಲಾ ಕಡೆಗಳಿಂದ ನಂಬಲಾರದಂತಹ ಅಸಮಾನತೆ ಇರುವ ದೇಶದಲ್ಲಿ ಬದುಕುತ್ತಿದ್ದೇವೆ. ನಿಮ್ಮ ನೀತಿ ಅಯೋಗದ ಜನ, ನಿಮ್ಮ ಆರ್ಥಿಕ ಸಲಹೆಗಾರರು ಈ ಹೆಚ್ಚುತ್ತಿರುವ ಅಸಮಾನತೆಯನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುವುದೇ ಇಲ್ಲ ಬದಲಾಗಿ, ಮಾರುಕಟ್ಟೆ ಭಾರತವನ್ನು ಬಿಡುಗಡೆಗೊಳಿಸಿದೆ, ಅಲ್ಪ ಪ್ರಮಾಣದ ಅಸಮಾನತೆ ಇರಬೇಕು, ಇದರಿಂದ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ ಎಂಬಿತ್ಯಾದಿ ಮಾತುಗಳನ್ನು ಆಡುತ್ತಿದ್ದಾರೆ . .
ಇಂದು ಈ ದೇಶದಲ್ಲಿ 2011ರ ಜನಗಣತಿಯ ಅಂಕಿ-ಅಂಶಗಳನ್ನು ಮುಂದಿರಿಸಿ ಕಳೆದ ಇಪ್ಪತ್ತನಾಲ್ಕು ತಿಂಗಳಲ್ಲಿ ಮಹತ್ವ ಎನ್ನಿಸುವ ನಾಲ್ಕರಿಂದ ಐದು ಅಂಕಿ-ಆಂಶ ಮತ್ತು ಮಾಹಿತಿಗಳ ವರದಿಗಳು ಬಂದಿವೆ. ಅವುಗಳಲ್ಲಿ ಬಹಳ ಪ್ರಮುಖವಾದವು ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ. ವಾಸ್ತವದಲ್ಲಿ ಜಾತಿಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮಾಹಿತಿ ಬಿಡುಗಡೆಗೊಳಿಸಿಲ್ಲ. ಆ ಕಾರಣಕ್ಕೆ ನಮಗೆ ಜಾತಿ ಆಧಾರಿತ ವಿಶ್ಲೇಷಣೆ ಸಾಧ್ಯವಿಲ್ಲ. ಆದರೆ ಇಂದು ವರ್ಗಗಳ ಆಧಾರದಲ್ಲಿನ ಮಾಹಿತಿಗಳನ್ನು, ಅಂಕಿ-ಅಂಶಗಳನ್ನು ನೋಡಿದರೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಮಾಸಿಕ ಅದಾಯ ಹೊಂದಿದ್ದಾನೆ. ಇದನ್ನು ನಾವು 10 ಸಾವಿರಕ್ಕೆ ಏರಿಸಿದರೆ ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಆದರೆ ಇದೇ ದೇಶದಲ್ಲಿ ಪೋರ್ಬ್ ಸಮೀಕ್ಷೆಯ ಶ್ರಿಮಂತರ ಪಟ್ಟಿಯಲ್ಲಿ ಈ ದೇಶದ ಮಿನಿಮಮ್ ಶ್ರೀಮಂತ 3.5 ಕೋಟಿ ಡಾಲರ್ ಹೊಂದಿದ್ದಾನೆ ಅತಿ ಹೆಚ್ಚು ಸಂಪತ್ತನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಈ ದೇಶ 4 ರಿಂದ 5ನೇ ಸ್ಥಾನದಲ್ಲಿದೆ. ನನ್ನ ಪ್ರಕಾರ ನಾವು ಎರಡನೆಯ ಸ್ಥಾನದಲ್ಲಿ ಇದ್ದೇವೆ. ಸದ್ಯಕ್ಕೆ ಐದನೇ ಸ್ಥಾನ ಎಂದುಕೊಳ್ಳಿ. ಯಾವ ದೇಶ ಒಂದು ಕಡೆ ಜಗತ್ತಿನ ಶ್ರಿಮಂತರ ಪಟ್ಟಿಯಲ್ಲಿ 5ನೇ ಸ್ಥಾನ ಗಳಿಸಿದೆಯೋ ಅದೇ ದೇಶ ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 135ನೇ ಸ್ಥಾನ ಹೊಂದಿದೆ. ಲ್ಯಾಟೀನ್ ಅಮೇರಿಕಾದ ಎಲ್ಲಾ ದೇಶಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿವೆ. 30 ವರ್ಷಗಳ ಕಾಲ ನಾಗರೀಕ ಯುದ್ಧವನ್ನು ಅನುಭವಿಸಿದ ಶ್ರೀಲಂಕಾ, ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ 20 ಸ್ಥಾನ ಮೇಲಿದ್ದರೆ ಜಗತ್ತಿನಲ್ಲಿಯೇ ಅತ್ಯಂತ ಕ್ರೌರ್ಯಯುತ ಯುಧ್ಧಕ್ಕೆ ಒಳಗಾಗಿ ಯುದ್ಧದಲ್ಲಿ ಬಳಸಿದ ರಾಸಾಯನಿಕ ಮತ್ತು ಅಸ್ತ್ರಗಳ ಕಾರಣಕ್ಕೆ ಇಂದಿಗೂ ಹಲವು ಪೀಳಿಗೆಗಳು ತೊಂದರೆಗೊಳಗಾಗಿರುವ ವಿಯೆಟ್ನಾಂ ನಮಗಿಂತ 50 ಸ್ಥಾನ ಮೇಲಿದೆ. ಈ ಎಲ್ಲಾ ದೇಶಗಳು ಮಾನವನ ಅಭಿವೃದ್ಧಿ ಸೂಚ್ಯಂಕದಲ್ಲಿ ನಮಗಿಂತ ಮುಂದಿವೆ ಇದಕ್ಕೆ ಕಾರಣ ಆ ದೇಶಗಳಲ್ಲಿ ಡಾಲರ್ ಮಿಲೇನಿಯರ್ ಗಳ ಉತ್ಪಾದನೆ ಆಗುತ್ತಿಲ್ಲ . . .
ನಿಮಗೆ ಆಶ್ಚರ್ಯ ಆಗಬಹದು. ನಾರ್ಡಿಕ್ ಮತ್ತು ಸ್ಕಾಂಡಿನೇವಿಯನ್ ದೇಶಗಳಾದ ಡೆನ್ಮಾರ್ಕ್, ಸ್ವೀಡೆನ್, ಫೀನ್ಲೆಂಡ್, ಐಸ್ಲೆಂಡ್, ನಾರ್ವೆ ಎಲ್ಲಾ ದೇಶಗಳಲ್ಲಿ ಭಾರತದ ಒಟ್ಟು ಡಾಲರ್ ಬಿಲೇನಿಯರ್ ಗಳ ಪೈಕಿ ಶೇ 3 ರಷ್ಟ ಮಾತ್ರ ಬಿಲೆನಿಯರ್ಗಳಿದ್ದಾರೆ. ಚೀನಾದಲ್ಲಿ ನಮಗಿಂತ ಜಾಸ್ತಿ ಇರಬಹದು. ರಷ್ಯದಲ್ಲಿ ಪ್ರತಿ ಐದು ವರ್ಷಕ್ಕೂಮ್ಮೆ ಎಲ್ಲಾ ಬಿಲೇನಿಯರ‍್ಗಳನ್ನು ಜೈಲಿಗೆ ಕಳುಹಿಸುತ್ತಾರೆ, ನಾವು ಪಾರ್ಲಿಮೆಂಟಿಗೆ ಕಳುಹಿಸುತ್ತೇವೆ ಅಷ್ಟೆ ವ್ಯತ್ಯಾಸ. ಹೌದು ಈ ಅರ್ಥದಲ್ಲಿ ನಮ್ಮದು ಪ್ರೌಢ ಪ್ರಜಾತಂತ್ರ. . .
ಇದರ ಜೊತೆಯಲ್ಲಿಯೇ ಪಾರ್ಲಿಮೆಂಟಿನಲ್ಲಿ ಇರುವ ಅಸಮಾನತೆಯ ಕುರಿತು ಕೆಲವು ವಿಷಯಗಳನ್ನು ನಾನು ನಿಮಗೆ ಹೇಳುತ್ತೇನೆ. 2014ರ ಚುನಾವಣೆಯ ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಂತೆ ನಮ್ಮ ದೇಶದ ಲೋಕಸಭೆಯ ಶೇ 82 ಸಂಸದರು ಕೋಟ್ಯಾಧಿಪತಿಗಳು. ಇದು ಅವರೇ ಸ್ವ-ಘೋಷಿಸಿಕೊಂಡಿರುವ ಸಂಗತಿ. ಹಾಗಾದರೆ ಐದು ಮತ್ತು ಹತ್ತು ವರ್ಷಗಳ ಹಿಂದಿನ ಪ್ರಮಾಣ ಏನಿತ್ತು ಎಂದು ನೋಡಿದರೆ 2004ರ ಸಂಧರ್ಭದಲ್ಲಿ ಒಟ್ಟು ಸಂಸದರಲ್ಲಿ ಶೇ 32 ಮಂದಿ ಕೋಟ್ಯಾಧಿಪತಿಗಳಿದ್ದರೆ 2009 ರಲ್ಲಿ ಅದು 53 ಶೇ ಕ್ಕೆ ಏರಿದೆ. 2014ರಲ್ಲಿ ನಾನು ಆಗಲೇ ಹೇಳಿದಂತೆ 82 ಶೇ ಸಂಸದರು ಕೋಟ್ಯಾಧಿಪತಿಗಳಿದ್ದಾರೆ. ಇದು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಮಾಣ ಪತ್ರಗಳನ್ನು ಆಧರಿಸಿದ ಲೆಕ್ಕ. ಇಲ್ಲಿ ನೀವು ಎಷ್ಟು ಬೇಕಾದರು ಬರೆಯಬಹದು. ನಿಮ್ಮ ಆದಾಯ ತೆರಿಗೆಯ ದಾಖಲೆಗಳನ್ನೇನು ಇಲ್ಲಿ ಕೇಳುವುದಿಲ್ಲ. ನಮ್ಮ ನಡುವಿನ ಸತ್ಯವಂತ ರಾಜಕಾರಣಿಯಾದ ಚಂದ್ರಬಾಬು ನಾಯ್ಡು ಅವರು 2014 ರಲ್ಲಿ ಘೋಷಿಸಿಕೊಂಡಿರುವ ಆಸ್ತಿ 2004ಕ್ಕಿಂತ ಕಡಿಮೆ ಇದೆ. ಇದು ನಿಜವಾದ ನಿಸ್ವಾರ್ಥ ಜೀವನ ಇದಕ್ಕೆ ಅವರು ಕೊಡುವ ಕಾರಣ ಕಳೆದ ಸಾರಿ ನನ್ನ ಮನೆಯನ್ನು ಮಾರುಕಟ್ಟೆಯ ಮೌಲ್ಯದಲ್ಲಿ ಲೆಕ್ಕ ಹಾಕಿದ್ದರು, ಆದರೆ ಈ ಬಾರಿ ಅದನ್ನು ನಾನು ಕೊಂಡ ಬೆಲೆಯಲ್ಲಿ ಲೆಕ್ಕ ಹಾಕಿದ್ದಾರೆ ಎಂದಿದ್ದಾರೆ. ಅದಕ್ಕೆ ನಾನು ಹೇಳಿದ್ದು ಮಾರುಕಟ್ಟೆ ನಿಮಗೆ ಆಯ್ಕೆಗಳನ್ನು ಕೊಡುತ್ತದೆ ಎಂದು ಹೇಳಿದ್ದು. . .. . 
ನಾವು ಮಾರುಕಟ್ಟೆ ಕೊಡುವ ಆಯ್ಕೆಗಳ ಕುರಿತಂತೆ ಮಾತನಾಡುತ್ತಿದ್ದೆವು. ಇಂದು ಜಗತ್ತಿನಾದ್ಯಂತ ಒಂದು ಬಿಲಿಯನ್ ಜನರು (‌ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಮಂಡಳಿ ಬೇರೆ ಬೇರೆ ವ್ಯಾಖ್ಯೆಗಳನ್ನು ನೀಡುವ ಮೂಲಕ ಆ ಸಂಖ್ಯೆಯನ್ನು 850 ಮಿಲಿಯನ್ ಎಂದು ಹೇಳುತ್ತಿದೆ) ಪ್ರತಿ ರಾತ್ರಿ ಹಸಿವಿನಿಂದಲೇ ಮಲಗುತ್ತಿದ್ದಾರೆ. ನಿಜವಾಗಲೂ ಮಾರುಕಟ್ಟೆ ಹಸಿವಿನಿಂದ ಕಂಗೆಟ್ಟರುವ ಒಂದು ಬಿಲಿಯನ್ ಜನರಿಗೆ ಆಯ್ಕೆಯ ಸ್ವಾತಂತ್ಯವನ್ನು ನೀಡಿದ್ದರೆ ಅವರ ಆಯ್ಕೆ ಆ ಹೊತ್ತಿನ ಆಹಾರವಾಗಿರುತ್ತಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕೆ ನಾವು ಮಾರುಕಟ್ಟೆ ಆಯ್ಕೆಯ ಸ್ವಾತಂತ್ರ‍್ಯವನ್ನು ನೀಡಿದೆ ಎಂಬ ಮಿಥ್ಯೆಯನ್ನು ತಿರಸ್ಕರಿಸಬೇಕಿದೆ. . .
ನಾವು ಆಗಲೇ ಚರ್ಚಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ಅಂಕಿ-ಅಂಶ ಗಳ ಪ್ರಕಾರ ಇಂದು ದೇಶದ ಶೆ 75 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ ಐದು ಸಾವಿರಕ್ಕಿಂತ ಕಡಿಮೆ ಅದಾಯ ಹೊಂದಿದ್ದಾನೆ. ಈ ದೇಶದ 90ಶೇ ಗ್ರಾಮೀಣ ಕುಟುಂಬಗಳು 10 ಸಾವಿರಕ್ಕಿಂತ ಕಡಿಮೆ ವರಮಾನ ಹೊಂದಿವೆ. ಕೇವಲ ಶೇ 8 ರಷ್ಟು ಗ್ರಾಮೀಣ ಕುಟುಂಬಗಳ ಮುಖ್ಯಸ್ಥ 10 ಸಾವಿರಕ್ಕಿಂತ ಹೆಚ್ಚಿನ ಅದಾಯವನ್ನು ಪಡೆಯುತ್ತಿದ್ದಾನೆ. ಇದು ನಮ್ಮ ನಡುವಿನ ಸ್ಥಿತಿ. . .
ಇನ್ನು ನ್ಯಾಷನಲ್ ಸ್ಯಾಂಪೆಲ್ ಸರ್ವೇ ಇಂಡಿಯಾದ ಅಂಕಿ-ಅಂಶಗಳನ್ನು ನೋಡುವುದಾದರೆ ಭಾರತದಲ್ಲಿನ ಐದು ಸದಸ್ಯರುಳ್ಳ ಕೃಷಿ ಕುಟುಂಬ ಕೃಷಿ ಮತ್ತು ಕೃಷೀಯೇತರ ಮೂಲಗಳಿಂದ ಗಳಿಸುವ ಮಾಸಿಕ ಅದಾಯ 6426 ರೂಪಾಯಿಗಳು. ಇದು ಇಂದಿನ 97 ಯು.ಎಸ್ ಡಾಲರ್ ಗೆ ಸಮನಾಗಿದೆ. ಒಂದು ಕಡೆ ಈ 6426 ರುಪಾಯಿ ಕೇರಳ, ಪಂಜಾಬ್ ನ ಕುಟುಂಬಗಳ ಸರಾಸರಿ ಗಳಿಕೆಯನ್ನು ತೋರಿಸಿದರೆ ಇನ್ನೂಂದು ಕಡೆ ಛತ್ತಿಸ್ಗಡ್, ಬಿಹಾರ್ ಕಡೆ ಆ ಪ್ರಮಾಣ 3500/4000 ಸಾವಿರ ಇದೆ. ಇದರ ಅರ್ಥ 3500 ರಿಂದ 9000 ದಿಂದ ಹತ್ತು ಸಾವಿರದ ಮಧ್ಯದ ಸರಾಸರಿಯಲ್ಲಿ ಗಳಿಸುವ ಎಲ್ಲಾ ಕೃಷಿ ಕುಟುಂಬಗಳನ್ನು 6426 ರೂಪಾಯಿ ಗಳಿಸುತ್ತಿವೆ ಎಂಬ ಈ ಲೆಕ್ಕದಲ್ಲಿ ನೋಡಲಾಗುತ್ತಿದೆ. ನಮ್ಮ ಗ್ರಾಮೀಣ ಭಾರತದ ಸ್ಥಿತಿ ಇಷ್ಟು ಕೆಟ್ಟದಾಗಿದೆ. ಅದು ಹಳ್ಳಿಯಲ್ಲಿನ ಜನ ಕೃಷಿಕರಾಗಿರಿಲಿ, ಕೃಷಿ ಕಾರ್ಮಿಕರಾಗಿರಿ ಏನಾದರೂ ಆಗಿರಲಿ, ಇದು ಕೆಟ್ಟ ಸ್ಥಿತಿ ಈ ರೀತಿಯ ಅಸಮಾನತೆ ಒಂದು ಕಡೆ ಇದ್ದರೆ. . .
ಮತ್ತೊಂದು ಕಡೆ 1991 ರಲ್ಲಿ ನಮ್ಮ ದೇಶದಲ್ಲಿ ಒಬ್ಬೆ ಒಬ್ಬ ಡಾಲರ್ ಬಿಲೇನಿಯರ್ ಇರಲಿಲ್ಲ. ಆದರೆ 2015ರ ಹೊತ್ತಿಗೆ ಪೋರ್ಬ್ ಪಟ್ಟಿಯಲ್ಲಿ ಭಾರತದ ನೂರು ಡಾಲೆರ್ ಬಿಲೇನಿಯರ‍್ಗಳು ಸ್ಥಾನ ಪಡೆದಿದ್ದಾ.ರೆ ಇತ್ತೀಚಿಗಿನ ಮಾರುಕಟ್ಟೆಯ ಹೊಡೆತಕ್ಕೆ ಅದರಲ್ಲಿ ಕೆಲವರ ಸ್ಪಲ್ಪ ಪ್ರಮಾಣದ ಸಂಪತ್ತು ಕರಗಿರಬಹುದು. ಇದು ನಮ್ಮ ದೇಶದ ಸ್ಥಿತಿ . . .
ಇದನ್ನೆ ನಾನು ಬೆಂಗಳೂರಿನ ಐಐಎಮ್ ವಿಧ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಿದ್ದೆ. ನಾನು ಗ್ರಾಮೀಣ ಭಾರತದ ಕುರಿತು ಮಾಹಿತಿಗಳನ್ನು ಒಟ್ಟಾಗಿಸುವ ಕೆಲಸವೊಂದನ್ನು ಮಾಡುತ್ತಿದ್ದೇನೆ. ನೀವು ಎಷ್ಟು ಸುಂದರವಾದ ಸಮುದಾಯಗಳನ್ನು ಹಾಳು ಮಾಡುತ್ತಿದ್ದೀರಾ ಎಂದರೆ ಇಲ್ಲಿ ನಾವು ಭಯಪಡುವ, ಅಯ್ಯೋ ಹೀಗಿದೆಯಲ್ಲ ಸ್ಥಿತಿ ಎನ್ನುವ ಸಂಗತಿಗಳು ಇವೆ ಮತ್ತು ನಾವು ಆಶ್ಚರ್ಯಕ್ಕೆ ಒಳಗಾಗುವ ನಮ್ಮನ್ನು ಚಕಿತತೆಯ ಕಡೆಗೆ ನೂಕುವ ಸಂಗತಿಗಳು ಇವೆ ಆಶ್ಚರ್ಯ ಎಂದರೆ ಎರಡೂ ಭಾರತೀಯ ಮೂಲದವುಗಳು ಮತ್ತು ಇವು ನಮ್ಮ ವಾಸ್ತವಗಳಾಗಿವೆ. . .
ಇಲ್ಲಿ 833 ಮಿಲಿಯನ್ ಜನರು 718 ಜೀವಂತ ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಅವುಗಳಲ್ಲಿ ಐದು ಬಾಷೆಗಳನ್ನು 15 ಮಿಲಿಯನ್ ಗೂ ಹೆಚ್ಚು ಮಂದಿ ಮಾತನಾಡುತ್ತಿದ್ದಾರೆ. 3 ಭಾಷೆಗಳನ್ನು ಸುಮಾರು 80 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 600 ಮಿಲಿಯನ್ ಜನರು ಮಾತನಾಡುತ್ತಿದ್ದಾರೆ. ಒಂದು ಬಾಷೆಯನ್ನು 1ಶೇ ಜನರು ಅಂಡಮಾನ್ ನಲ್ಲಿ ಮಾತನಾಡುತ್ತಿದ್ದಾರೆ. ಒಂದು ಭಾಷೆಯನ್ನು 7 ಮಿಲಿಯನ್ ಜನರು ಸೈಮಾರ್ ಮತ್ತು ತ್ರಿಪುರಾಗಳಲ್ಲಿ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯ ಉಂಟುಮಾಡಬಹುದಾದ ವಿಭಿನ್ನತೆಗಳನ್ನು ಒಳಗೊಂಡಿರುವ ಸಮಾಜ. ಈ ಮಾದರಿಯನ್ನು ಜಗತ್ತಿನ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಕೆಲವು ಜನರಿಗೆ ಈ ವಿಭಿನ್ನತೆ ಭಯವನ್ನು ಹುಟ್ಟಿಸುತ್ತಿದೆ. ಆ ಕಾರಣಕ್ಕೆ ಅವರು ಒಂದು ಭಾಷೆಯನ್ನು ಎಲ್ಲರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಅವರದೇ ಸಂಸ್ಕೃತಿಯ ಮಹತ್ವ ಅರ್ಥವಾಗುತ್ತಿಲ್ಲ. ಹಿಂದಿ ಇವರಿಗೆ ಭಾಷೆಯಂತೆ ಕಾಣುತ್ತದೆ, ಆದರೆ ಉತ್ತರ ಭಾರತದ ಅತ್ಯುತ್ತಮ ಭಾಷೆಗಳಾದ ಭೋಜ್ ಪುರಿ, ಮಿಥಿಲಾ,ಬ್ರೀಜ್ ಬಾಷಾ, ಅವಧಿ ಇವರಿಗೆ ಡಯಲೆಕ್ಟ್ ರೀತಿ ಕಾಣುತ್ತದೆ. ಹಾಗೆ ನೋಡಿದರೆ ಹಿಂದಿಗೆ 150 ವರ್ಷಗಳ ಇತಿಹಾಸವೂ ಇಲ್ಲ. ಉತ್ತರ ಭಾರತದ ಮಹತ್ವದ ಸಾಹಿತ್ಯ ರಚನೆಯಾಗಿರುವುದು ಭೋಜ್ ಪುರಿ, ಮಿಥಿಲಾ, ಬ್ರೀಜ್ ಬಾಷಾ, ಅವಧಿ ಭಾಷೆಗಳಲ್ಲಿ ಇವು ಉತ್ತರ ಭಾರತದ ಪ್ರಾಚೀನ ಭಾಷೆಗಳು ಅವುಗಳನ್ನು ಗೌರವಿಸಿ, ಹೆಮ್ಮೆಪಡಿ . . . .
ಆದರೆ ಎರಡು ಬದಿಯ ಮೂಲಭೂತವಾದಿಗಳು ಸ್ಥಳೀಯ ಭಾಷೆಗಳನ್ನು ಕಡೆಗಣಿಸಿ ಉರ್ದುವನ್ನೂ ಪರ್ಶಿಯನ್ ಗೆ ಹತ್ತಿರ ಮಾಡಿದ್ದಾರೆ. ಎಲ್ಲಾ ಉರ್ದು ಮತ್ತು ಪರ್ಶಿಯನ್ ಪದಗಳನ್ನು ತೆಗೆದುಕೊಂಡು ಹಿಂದೂಸ್ಥಾನಿ ಅಥವಾ ಹಿಂದಿಯನ್ನು ಕಟ್ಟಲು ಬಳಸಲಾಯಿತು. ಈ ಪ್ರಕ್ರಿಯೆ ಕಳೆದ 100 ವರ್ಷಗಳಿಂದ ನಡೆಯುತ್ತಲೇ ಇದೆ. 60ರ ದಶಕದಲ್ಲಿ ನಾನು ಹುಡುಗನಾಗಿದ್ದಾಗ ಆಲ್ ಇಂಡಿಯಾ ರೇಡಿಯೋದ ಕುರಿತಂತೆ ಒಂದು ಹಾಸ್ಯ ಪ್ರಚಲಿತದಲ್ಲಿತ್ತು. ಅದು ಏನೆಂದರೆ ಆಲ್ ಇಂಡಿಯಾ ರೇಡಿಯೋ ಯಾರು ಮಾತನಾಡದ ಮೂರು ಭಾಷೆಗಳಲ್ಲಿ ಪ್ರಸಾರವಾಗುತ್ತದೆ. ಅವು ಕ್ವೀನ್ಸ್ ಇಂಗ್ಲೀಷ್, ಪರ್ಶೀಯನ್ ಉರ್ದು ಮತ್ತು ಸಂಸ್ಕೃತಿಕರಣಗೊಂಡ ಹಿಂದಿ! ಮೂಲಭೂತವಾದಿಗಳು ವಿವಿಧತೆಗೆ ಹೆದರುತ್ತಾರೆ. ಅವರಿಗೆ ಅರ್ಥವಾಗದ ತ್ರಿಪುರಾ, ನಾಗಾಲ್ಯಾಂಡ್ ಜನರ ಭಾಷೆಗಳು ಭಯ ಹುಟ್ಟಿಸುತ್ತವೆ. ಆದರೆ ನಾನು, ನೀವು ಅವು ಎಷ್ಟು ಸಮೃದ್ಧವಾಗಿವೆ ಅಲ್ಲವೇ ಎಂದು ಅಲೋಚಿಸುತ್ತೇವೆ. ನಾನು ಇಲ್ಲಿ ಗಂಗಾ ಹಾಸ್ಟೆಲ್ಲಿನಲ್ಲಿ ಇದ್ದಾಗ 24 ಭಾಷೆ ಮಾತನಾಡುವ ಸ್ನೇಹಿತರಿದ್ದರು. ಎಷ್ಟು ಸುಂದರ ಪ್ರಪಂಚ ಅದು. ಇದು ಸಹ ಜೆ.ಎನ್.ಯು ಭಾಗವೇ. ಒಂದು ವಿಷಯ ನಾನು ನಿಮಗೆ ಹೇಳಲೇ ಬೇಕು. ನಾನು ಈ ಕಾಲೇಜಿನ ಅವರಣದಲ್ಲಿ ನನ್ನ ಸ್ವಂತಕ್ಕಿಂತ ಮಿಗಿಲಾಗಿ ಬದುಕುವ ಗುಣ ಕಲಿತಿದ್ದೇನೆ. ವೃತ್ತಿ ಎಂದರೆ ಕೇವಲ ನನ್ನ ಪರಿಚಯ ಪತ್ರವಲ್ಲ ಮತ್ತು ಜೀವನದಲ್ಲಿ ಬೆಳೆಯುವುದು ಯಶಸ್ವಿಯಾಗೋದು ಅಂದರೆ ಅದರ ಪುಟಗಳನ್ನು ಹೆಚ್ಚಿಸಿಕೊಳ್ಳುವುದಲ್ಲ ಎಂಬುದನ್ನು ನಾವು ಕಲಿಯಬೇಕಿದೆ. . .
ಮುಂದುವರೆಯುವುದು. . . .
 
ಸೌಜನ್ಯ : ಹಿಂಗ್ಯಾಕೆ 

ಒಂದು ಪದ್ಯ ದಾಕ್ಷಿಣ್ಯದಿಂದ
a

ನಾವು ಪ್ರತಿಭಟಿಸುವುದಿಲ್ಲ
ಪೆಟ್ಟಿಗೆಯೊಳಗಿಟ್ಟು ಧಿಕ್ಕಾರಗಳನ್ನೆಲ್ಲ
ಹೊದೆಸಿದ್ದೇವೆ ರೇಶ್ಮೆ ವಸ್ತ್ರ
ಅವರ ಕೈಯೊಳಗಿನ ಅಸ್ತ್ರ
ನಾವು ಪ್ರತಿಭಟಿಸುವುದಿಲ್ಲ

ಈ ಸಂತೆಗಳಲ್ಲಿ ಸುಂದರ ಕಡಲ ತೀರದ
ದಾಹಗಳಲ್ಲಿ ವಿಕಾರ ರಾಗಗಳಲ್ಲಿ ಮುಗಿಯದ
ಭರವಸೆಗಳ ಕೆಸರಿನಲ್ಲಿ ಆಕ್ರಮಿಸಿದ
ಭ್ರಮೆಗಳ ಮೈಥುನದಲ್ಲಿ ಸುಖವಾಗಿದ್ದೇವೆ ನಾವು

ಬಿಸಿಲಲ್ಲಿ ಬೆಂದೂ ಮಳೆಯಲ್ಲಿ  ನೆಂದೂ
ಬೆವರಿನ ಹಾಡು ಬರೆದು ಅವರ ಕೈಗಿಟ್ಟಿದ್ದೇವೆ
ಅವರದನ್ನು ಹಾಡುತ್ತಿರುವ ಧಾಟಿಗೆ
ಮನಸೋತು ಕೂತಿದ್ದೇವೆ ಆನಂದದಿಂದ
ಮೂಕರಾಗಿದ್ದೇವೆ ಮತ್ತಿನ ಪಾಯಸ ಕುಡಿದು
ಮೈಮರೆಯುತ್ತಿದ್ದೇವೆ ಮತ್ತೂ ಮತ್ತೂ

ಬಾಯುಪಚಾರಕ್ಕೇ ಪುಳಕಿತರು ನಾವು
ಇರಲಿ ಇರಲಿ ಪರವಾಗಿಲ್ಲ ಎನ್ನುತ್ತ
ದೇಹ ಇಷ್ಟೇ ಇಷ್ಟಾಗಿಸಿಕೊಂಡು ಸಂಕೋಚದಿಂದ
ಮಣಿದು ದಣಿದು ಕತ್ತಲೆಯೊಳಗೆ
ನಿದ್ದೆ ತಬ್ಬಿಕೊಂಡಿರುವಾಗ ಕೇಳಿಸುತ್ತದೆ
ಸುಖದ ನರಳಿಕೆ ಹಿತವಾಗಿ

ನಮ್ಮ ಹೆಸರಲ್ಲೇ ಇದೆ ಎಲ್ಲ
ನಮ್ಮ ಹೆಸರಲ್ಲೇ ನಡೆಯುತ್ತದೆ ಎಲ್ಲ
ಪವಾಡಕ್ಕೆ ಕೊನೆಯೇ ಇಲ್ಲ

ನಾವು ಪ್ರತಿಭಟಿಸುತ್ತೇವೆ

"I Am An Anti-National…Count Me Out"
In the name of patriotism, do not demand my complicity for your endless crimes. I want to secede from this sickness
 
 
 
I am an Agmark 100% anti-national. I am an anti-national. Please go ahead and prepare a prison cell for me. Keep in mind that I have a slight preference for solitary confinement. I do not want to play the role of cheerleader for a caste society that massacres an entire Dalit village in one night, a police force that colludes in such killing, a political system that justifies these atrocities, a court mafia that allows oppressor-caste culprits to walk away and a nation that allows this nightmare to happen again and again. I want to secede from this sickness.

A nation of mass graves in Kashmir and mass rapes in Bastar can cease to exist. The murders by your military and paramilitaries hold your India together, and since this puffs you up with pride, I wish funeral dirges replace your national anthem. The change in music will change your appreciation of the situation.


For a poem about the father of this nation, I had my books burnt. I no longer address Gandhi in poetry, I resort to the coarsest curses that my mother-tongue provides. Advertised as India’s greatest freedom fighter, his killers today call themselves India’s greatest patriots.


The Constitution may be celebratory, but at the end of a day, its implementation depends on a judiciary that quotes and upholds the Manusmriti. I have nothing but utter contempt for these courts and criminal jurisprudence that targets Dalits, Adivasis and Muslims.


This is the glorious nation whose farmers are pushed to suicide, whose workers are beaten up on factory floors, whose university campuses are laid siege by the police. Banks here exist for the sake of corporates who control the state. In the India where the 1% owns more than half the wealth, national pride is available on a supermarket shelf.


Soaked in the blood of each of the girl children who were not allowed to be born—and that is one woman like me killed for every ten men you see in this country of a billion people—the Indian tricolour has lost its moral fibre. Nation of female genocide, no flag can cover your shame.


I wish to have nothing to do with the idea of an Indian nation. In the name of patriotism, do not demand my complicity for your endless crimes. Count me out
.

Meena Kandasamy is a poet, writer, activist and translator. Her work focuses on caste annihilation, linguistic identity and feminism. She has published two collections of poetry, Touch (2006) and Ms Militancy (2010). Her first novel, The Gypsy Goddess was published by Atlantic Books (UK) and HarperCollins India in 2014.
(The views expressed in the Freedom Series are personal and do not necessarily reflect the views of ‘Outlook’ magazine or its journalists.)

ಕವಿತೆ: ಅವರು ದೇಶವನು ಒಡೆಯುತ್ತಿರಲಿಲ್ಲ


ಪುರುಷೋತ್ತಮ ಬಿಳಿಮಲೆ


ಗಾಂಧಿಗೆ ಗುಂಡಿಕ್ಕಿ,
ಗೋಡ್ಸೆಗೆ ಗುಡಿ ಕಟ್ಟಿ
ರಾಮ ಮಂತ್ರವ ಜಪಿಸುವಾಗ
ಅವರು ದೇಶವನು ಒಡೆಯುತ್ತಿರಲಿಲ್ಲ. 


ತಿನ್ನುವ ಆಹಾರ ಕಸಿದು
ಅತ್ತಾಗ ಮರುಗಿ
ಮತ್ತೆ ವಿಷಬೆರೆಸಿ ಕೊಟ್ಟು
ನಿನ್ನನ್ನು ಸಾಯಿಸಿದಾಗ
ಅವರು ದೇಶವನು ಒಡೆಯುತ್ತಿರಲಿಲ್ಲ.

ತಲೆಯಲ್ಲಿ ಹೇಲು ಹೊರಿಸಿ
ಮುಟ್ಟಬಾರದೆಂದು ಊರ ಹೊರಗಿರಿಸಿ
ಮತ್ತೆ ಮಲಗಿದ್ದ ದಲಿತರನು
ಕೇರಿ ಸಹಿತ ಸುಟ್ಟಾಗ
ಅವರು ದೇಶವನು ಒಡೆಯುತ್ತಿರಲಿಲ್ಲ.

ಅಮಾಯಕರ ಮನೆಯೊಳಗೆ ನುಗ್ಗಿ
ತೋಳ ಬಲದಿಂದ ಹೊರಗೆಳೆದು
ತಿವಿ ತಿವಿದು ಕೊಂದು
ಅನ್ನವನು ಕಸಿವಾಗ
ಅವರು ದೇಶವನು ಒಡೆಯುತ್ತಿರಲಿಲ್ಲ.

ದೇಶ ತುಂಬಾ ಸುತ್ತಿ,
ಇಟ್ಟಿಗೆಗಳ ಮೆರವಣಿಗೆಯಲಿ
ಮಂದಿರಗಳ ಒಡೆದು
ಭಾಷಣಗಳ ಬಿಗಿವಾಗ
ಅವರು ದೇಶವನು ಒಡೆಯುತ್ತಿರಲಿಲ್ಲ.

ತುಂಬು ಗರ್ಭಿಣಿಯರ
ಹೊಟ್ಟೆ ಬಗೆದು
ಬೀದಿಯಲಿ ರಕ್ತ ಚೆಲ್ಲಿ
ಬೆಂಕಿಯನಿಕ್ಕಿದಾಗ
ಅವರು ದೇಶವನು ಒಡೆಯುತ್ತಿರಲಿಲ್ಲ

ನನ್ನ ಪ್ರಿಯ ದೇಶವೇ
ನಿನ್ನ ಸಂಪತ್ತನು ನನ್ನೆದುರೇ ಹರಾಜಿಗಿಟ್ಟು
ಮೋಜು ಮಾಡುತ್ತಾ
ದೇಶಭಕ್ತಿಯ ಬಗೆಗೆ ನನಗೆ ತಿಳಿ ಹೇಳುತ್ತಿದ್ದಾಗ
ಅವರು ದೇಶವನು ಒಡೆಯುತ್ತಿರಲಿಲ್ಲ.

ರಾಷ್ಟ್ರ ಧ್ವಜ ಮತ್ತು R S S ನಿಜ ಮುಖರಾಷ್ಟ್ರ ಧ್ವಜ ಹಾರಿಸಿದ ಇವರು 12 ವರ್ಷ ನ್ಯಾಯಾಲಯಕ್ಕೆ ಅಲೆದಾಡ ಬೇಕಾಯಿತು

2001 ಜನವರಿ 26ರಲ್ಲಿ ನಡೆದ ಘಟನೆ ಇದು. ಅಂದು ರಾಷ್ಟ್ರಪ್ರೇಮಿ ಯುವದಳದ ಮೂವರು ಕಾರ್ಯಕರ್ತರು ನಾಗಪುರದ ಆರೆಸ್ಸೆಸ್ ಮುಖ್ಯ ಕಚೇರಿಗೆ ಭೇಟಿ ನೀಡಿದರು. ‘ಕೇಶವ ಹೆಡಗೇವಾರ್’ ಅವರಿಗೆ ಶದ್ದಾಂಜಲಿ ಸಲ್ಲಿಸಲು ಬಂದಿದ್ದೇವೆ’ ಎಂದು ಅವರು ಮುಖ್ಯ ಕಚೇರಿಗೆ ಪ್ರವೇಶ ಪಡೆದಿದ್ದರು. ಕಚೇರಿಗೆ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ, ಬಾಬಾ ಮಂಧೆ, ರಮೇಶ್ ಕಾಳಂಬಿ, ದಿಲೀಪ್ ಜಟ್ಟಾಣಿ ಎಂಬ ಆ ಮೂವರು ದೇಶಪ್ರೇಮಿ ಯುವಕರು ತಮ್ಮ ಚೀಲದಿಂದ ತ್ರಿವರ್ಣ ರಾಷ್ಟ್ರ ಧ್ವಜವನ್ನು ಹೊರತೆಗೆದವರೇ ಕಚೇರಿಯ ಮುಂದೆ ಹಾರಿಸಿಯೇ ಬಿಟ್ಟರು. ದೇಶದ ಇತಿಹಾಸದಲ್ಲೇ ಮೊದಲ ಬಾರಿ ನಾಗಪುರ ಆರೆಸ್ಸೆಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿದ್ದು ಹೀಗೆ. ಇವರನ್ನು ತಡೆಯಲು ಆರೆಸ್ಸೆಸ್‌ನ ಮುಖಂಡ ಸುನೀಲ್ ಕಾಥ್ಲೆ ತಂಡ ಸರ್ವ ಪ್ರಯತ್ನ ಮಾಡಿದರಾದರೂ ಅದರಲ್ಲಿ ವಿಫಲರಾದರು.

ಮುಂದೇನಾಯಿತು ಗೊತ್ತೆ? ಆರೆಸ್ಸೆಸ್ ಇವರ ಮೇಲೆ ಪ್ರಕರಣ ದಾಖಲಿಸಿತು. ಸುಮಾರು 12 ವರ್ಷ ಈ ಮೂವರು ಯುವಕರನ್ನು ನ್ಯಾಯಾಲಯದಲ್ಲಿ ಅಲೆದಾಡಿಸಿತು. ಅಂತಿಮವಾಗಿ 2013ರ ಸ್ವಾತಂತ್ರ ದಿನದಂದು, ಸರಿಯಾದ ಸಾಕ್ಷಾಧಾರವಿಲ್ಲ ಎನ್ನುವ ಕಾರಣಕ್ಕೆ ಈ ಮೂವರನ್ನು ಆರ್. ಆರ್. ಲೋಹಿಯಾ ನ್ಯಾಯಾಲಯ ನ್ಯಾಯಾಲಯ ಬಿಡುಗಡೆ ಮಾಡಿತು. ಯಾರು ದೇಶದ್ರೋಹಿಗಳು? ಯಾರು ದೇಶಪ್ರೇಮಿಗಳು?

Friday, February 19, 2016

ಇದು ದೇಶವೇ ? ಇದು ಧರ್ಮವೇ?
ಕವಿತೆ : ಪ್ರೀತಿ
ಹೃದಯಶಿವ

ನಾವಿಬ್ಬರೇ ಇರಬಹುದಾದ ಲೋಕಕ್ಕೆ
ಸೂರ್ಯನಿಗೂ ಪ್ರವೇಶವಿರಬಾರದು,
ಚಂದಿರನ ಕಲ್ಪನೆಯೂ ಇರಬಾರದು.
ಹಗಲುರಾತ್ರಿಗಳ ತಮಾಷೆ ಇರಲೇಬಾರದಲ್ಲಿ,
ಯಾವ ಹಾಡಿನ ನೆರಳೂ
ಅಲ್ಲಿ ಸುಳಿಯಬಾರದು.


ಉರಿರಾಡಲು ಗಾಳಿಯೂ ಇಲ್ಲದ
ನಡೆದಾಡಲೂ ನೆಲವೂ ಇಲ್ಲದ
ಕುಡಿಯಲು ಜಲವೂ ಇಲ್ಲದ
ತಿನ್ನಲೂ ಅನ್ನವೂ ಇಲ್ಲದ
ಆ ಪವಿತ್ರ ಲೋಕದಲ್ಲಿ
ನಾವಿಬ್ಬರು ಪ್ರೀತಿಯನ್ನೇ ಉಸಿರಾಡಿ
ಸ್ವಪ್ನಗಳನ್ನೇ ಹೀರಿಕೊಂಡು
ಭಾವನೆಗಳನ್ನೇ
ಹಸಿವಿಗೌಷಧ ಮಾಡಿಕೊಳ್ಳಬೇಕು.


ನಾವು ಪ್ರೀತಿಸಬೇಕು; ವ್ಯಾಖ್ಯಾನಗಳಾಚೆಗೆ.
ನಾವು ಭೋಗಿಸಬೇಕು; ದೇಹಗಳಾಚೆಗೆ.
ಹಡೆದ ಮಕ್ಕಳು ಹಾರಬೇಕು ರೆಕ್ಕೆಬಿಚ್ಚಿ;
ಕಲ್ಪನೆಯ ಕಣ್ಣಿನಾಚೆಗೆ. 


ನಾವು ಸಾಯಲೇಬಾರದು,
ಹುಟ್ಟಿರಲೂಬಾರದು-
ಅಕ್ಷರಗಳ ಹಂಗಿಗೆ ಬೀಳದ ನಮ್ಮ ಪ್ರೇಮಚರಿತ್ರೆಯೋದಿ
ಸೋ ಕಾಲ್ಡ್ ಕವಿಗಳೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕು.No Crushing of Dissent in Hyderabad and JNU – Sanghi Disinformation and Despotism Shall Not Pass
Dipankar Bhattacharya
Dipankar Bhattarcharya picDipankar Bhattacharya is the General Secretary of CPI(ML)-Liberation.
The stunning sequence of events in Delhi in the last few days has appalled all who care about democracy in India. The unprecedented alacrity with which the Union Home Ministry, Delhi Police and sections of the media swooped down upon allegations of some controversial slogans having been raised inside JNU campus on the third anniversary of the hanging of Afzal Guru, the police crackdown, the arrest of the President of the elected Student Union and witch-hunt of other activists of the Students’ Union and Left student groups on absolutely ridiculous charges of sedition, the harassment and arrest of Delhi University teachers on similar grounds, acts of vandalism by rightwing goons targeting the CPI(M) Central Committee office in Delhi, the shocking and absurd attempt by the Union Home Minister to link the JNU events to Hafiz Saeed followed by a warning by the Delhi Police to the student community of the entire country, the detention of cultural activists for the ‘crime’ of ‘looking like JNU students’, the open assault on students, faculty members, journalists and activists right in the premises of Delhi’s Patiala House Court by a group led by Delhi BJP MLA OP Sharma with the Delhi police watching cheerfully – it looks like the Modi regime has declared a veritable war on students, teachers, journalists and activists in Delhi.

Soon after Modi took over as the PM in May 2014, it became clear that while the government was desperate to turn India into a lucrative laboratory for aggressive corporate acquisition, it was equally anxious to hijack and control, and even destroy, the institutions of higher education and research, the laboratories of creative freedom where ideas developed through debate and dissent, and where voices could thus emerge even from the otherwise most deprived and oppressed sections of India to challenge the age-old structures of exclusion and domination, including those of the universities themselves. The new regime wants its handpicked persons to decide the academic content and environment of these institutions so dissenting and inconvenient ideas can be nipped in the bud and intellectuals can be subdued and string-pulled by the puppeteers of the Sangh brigade. The conspiracy revealed itself first in IIT-Madras and then in FTII Pune, and now almost simultaneously and in quite similar fashion we see the script playing itself out in Hyderabad and Delhi.

In both Hyderabad and JNU, the allegation is of students indulging in ‘anti-national’ activities. If raising questions about the hanging of Yakub Menon and the screening of a documentary film on the 2013 Muzaffarnagar carnage were dubbed anti-national in Hyderabad, remembering Afzal Guru on the third anniversary of his hanging and the raising of certain slogans by some people – the identity of several of them is not clear from the footage while some are now apparently exposed to have been from the ABVP itself – have been branded as sedition. The modus operandi is also quite similar – local ABVP unit complains to local BJP MP who then writes to ministers and the entire state gets into the act of a concerted and systematic persecution. The ABVP is thus playing the role of saffron stormtroopers on the ground while the government, police and a heavily pressurized and increasingly saffronised university administration are working in tandem to push the Sangh agenda.

In the case of JNU, it should be remembered that the RSS has long been campaigning to defame the institution and vitiate the democratic environment of the campus. Long before Modi came to power, the likes of Subramanian Swamy have been openly abusing women activists with a JNU background on television channels and print and social media, especially in the wake of the December 16 anti-rape movement of 2012 and the powerful resonance it had across the country. More recently, JNU students’ role in the Justice for Rohith Vemula movement and in #OccupyUGC and fighting privatization in education made the saffron brigade even more determined to target them. Of late, the RSS has been carrying a strident tirade against JNU with a continuous campaign of defamation and disinformation in its journals which has now reached this climax with physical attacks on JNU students and faculty, police crackdown in the campus and the loud Sanghi clamour for shutting down the University.

Some of the slogans raised in the said JNU event were opposed on the spot itself by the students’ union leadership that was there to avert violent clashes sought by the ABVP. Many well-wishers of JNU and the Left student movement have also found some slogans ill-advised and liable to be misunderstood. We should however consider the context of the provocative slogans that the ABVP in JNU have been known to raise and that were raised by them from the sidelines even in the widely televised and hugely attended meeting in the campus following the arrest of Kanhaiya Kumar. For example, ABVP slogans included ‘jo Afzal ki baat karega, wo Afzal ki maut marega’ (whoever talks about Afzal Guru should be hanged just as he was).This slogan incites violence against the many in India, and not just in Kashmir, who have quite persuasively articulated the position that Afzal’s hanging was judicially untenable and wrong.

ABVP also raised several other slogans with violent imagery such as ‘Desh Hai Pukarta, Pukarti Maa Bharati, Khoon se Tilak Karo, Goliyon Se Aarti’ (The Country is Calling, Mother India is Calling, Anoint Yourselves with Blood, And Worship with Bullets). As for slogans calling for destruction of India, it is patently unthinkable that any activist of the Left student movement in India would raise such slogans. On the contrary, disintegration and destruction of India has been the Sanghi agenda which it pursues relentlessly through its policies of corporate plunder and communal polarisation.

The BJP thought it had found in the JNU incident the perfect weapon to crush the radical student politics of JNU and tarnish and isolate the Left movement as being ‘anti-national’. But in the process it has only managed to trigger a massive solidarity movement within JNU and powerful protests across the country. If the BJP thought it could escape the heat of Hyderabad by targeting JNU, it has only succeeded in further strengthening the bonds of solidarity between the struggling students, and now 40 universities including Hyderabad have come out in support of JNU. Even a party like the Congress which had initially begun to toe the BJP line has had to change its stance and stand up in support of JNU and against the Sangh-BJP assault on democracy. A leader like Mayawati who usually keeps quiet on such issues has also come out in opposition to the BJP’s tactic of using the colonial era sedition law against the students.
Indeed, in every corner of the country, it is the BJP which has now been thoroughly exposed and isolated, not only on the question of democracy but also on the plane of patriotism. The progressive vision of patriotism which combines consistent anti-imperialism with the struggle for justice, dignity and democracy for the oppressed millions, and views the nation, first and foremost, in terms of the people and their needs, aspirations and rights is being articulated boldly and eloquently all around us. The legacy of Bhagat Singh and Ambedkar cherished by generations over the last eight decades and more, and now brought ever closer in articulation and action by the resistance emanating from Hyderabad and JNU, will give a crushing defeat to the fascist project of the Nazi-inspired pseudo-nationalists of Nagpur.

ಬಿಜೆಪಿ IT ವಿಭಾಗ ಸಂಸ್ಥಾಪಕ ಪ್ರದ್ಯುತ್ ಬೋರಾ ರಾಜೀನಾಮೆ·ಯುವಕರನ್ನು ಸೆಳೆಯುವಲ್ಲಿ ಮಹತ್ವದ ಪಾತ್ರವಹಿಸಿದ್ದ ಬಿಜೆಪಿಯ ಅತ್ಯಂತ ಯಶಸ್ವಿ ಐಟಿ ವಿಭಾಗದ ಸಂಸ್ಥಾಪಕ, ಯುವ ಬಿಜೆಪಿ ನಾಯಕ ಪ್ರದ್ಯುತ್ ಬೋರಾ ಪಕ್ಷದ ಸದಸ್ಯತನ ಹಾಗೂ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಭ್ರಮೆಗಳ ಮೂಲಕ ಪ್ರಜಾಪ್ರಭುತ್ವ ಸಂಪ್ರದಾಯವನ್ನು ವಿಧ್ವಂಸಿಸುವ ನಿಟ್ಟಿನಲ್ಲಿ ಪಕ್ಷ ಹಾಗೂ ಸರಕಾರ ನಡೆಯುತ್ತಿದೆ ಎಂದು ಆಪಾದಿಸಿ ಪ್ರದ್ಯುತ್ ಬೋರಾ ರಾಜೀನಾಮೆ ಸಲ್ಲಿಸಿದ್ದಾರೆ. ತಾನು ಪಕ್ಷಕ್ಕೆ ಸೇರ್ಪಡೆಗೊಂಡಾಗ ಇದ್ದ ರೀತಿ ಪಕ್ಷ ಈಗ ಇಲ್ಲ. “ಪಕ್ಷದಲ್ಲಿ ಹುಚ್ಚುತನ ಕಂಡುಬರುತ್ತಿದೆ. ಯಾವುದೇ ರೀತಿಯಲ್ಲಾದರೂ ಗೆಲ್ಲಲೇ ಬೇಕೆಂಬ ನಿಲುವು ಪಕ್ಷದ ನೈತಿಕತೆಯನ್ನೇ ನಾಶಗೊಳಿಸಿದೆ. 2004ರಲ್ಲಿ ನಾನು ಸೇರ್ಪಡೆಗೊಳ್ಳುವಾಗ ಇದ್ದ ಪಕ್ಷ ಇದಲ್ಲ” ಎಂದು ಬಿಜೆಪಿ ಬಗ್ಗೆ ಬೋರಾ ಅಸಹನೆ ವ್ಯಕ್ತ ಪಡಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಅವರು ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ..

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...