Thursday, February 18, 2016

ರಾಜ್ಯಮಟ್ಟದ ಯುಗಾದಿ ಕಾವ್ಯ ಸ್ಪರ್ಧೆ 2016






ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ಯುಗಾದಿ ಕಾವ್ಯಯನ್ನು ಆಯೋಜಿಸಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವಿತೆಗಳು ಕಳುಹಿಸಬಹುದು. ನಿಯಮಗಳು ಈ ಕೆಳಗಿನಂತೆ ಇರುತ್ತವೆ.

01. ಸ್ವರಚಿತ ಕವಿತೆಗಳು ಮಾತ್ರ ಕಳುಹಿಸಬೇಕು.
02. ಒಬ್ಬರು ಒಂದು ಕವಿತೆ ಮಾತ್ರ ಕಳುಹಿಸಬೇಕು.
03. ಕವಿತೆ 35 ಸಾಲುಗಳನ್ನು ಮೀರಿರಬಾರದು.
04. ಕವಿತೆಯ ಜೊತೆಯಲ್ಲಿ ಕವಿಯ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿರಬೇಕು ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಳುಹಿಸಬೇಕು.
05. ಯಾವುದೇ ರೀತಿಯ ಪ್ರವೇಶ ಧನ ಇರುವುದಿಲ್ಲ.
06. ಇ-ಮೇಲ್ ಮೂಲಕ ಕವಿತೆಗಳನ್ನು ಕಳುಹಿಸುವವರು ನುಡಿ ಅಥವಾ ಯೂನಿಕೋಡ್ ತಂತ್ರಾಶದಲ್ಲಿ ಟೈಪಿಸಿ ಕಳುಹಿಸಬೇಕು.
07. ಪ್ರಥಮ ಮತ್ತು ದ್ವಿತಿಯ ಬಹುಮಾನ ಇರುತ್ತದೆ. (ತೃತೀಯ ಬಹುಮಾನ ಇರುವುದಿಲ್ಲ) ಮೆಚ್ಚುಗೆ ಪಡೆದ ಕವಿತೆಗಳನ್ನು ಗುರುತಿಸಲಾಗುವುದು (ಇದಕ್ಕೆ ಸಂಖ್ಯೆಗಳ ಮಿತಿ ಇರುವುದಿಲ್ಲ)
08. ಕವಿತೆ ಕಳುಹಿಸಿಕೊಡಲು ಕೊನೆಯ ದಿನಾಂಕ ಮಾರ್ಚ್ 05
09. ಅವಧಿ ಮೀರಿ ಬಂದ ಮತ್ತು ನಿಯಮ ಮೀರಿದ ಕವಿತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.
10. ಬಹುಮಾನ ಪಡೆದ ಮತ್ತು ಮೆಚ್ಚುಗೆ ಕವಿತೆಗಳನ್ನು ಸೇರಿಸಿ ಕವನ ಸಂಕಲನ ಹೊರತರಲಾಗುವುದು. (ಇದಕ್ಕೆ ಪ್ರಕಟಣಾ ವೆಚ್ಚ ಇರುವುದಿಲ್ಲ)


ಕವಿತೆಗಳು ಕಳುಹಿಸಿಕೊಡಬೇಕಾದ ವಿಳಾಸ:-
ರಾಜಹಂಸ, ಸಂಪಾದಕರು, ಜೀವನ್ ಪ್ರಕಾಶನ, ಅಂಚೆ ಪೆಟ್ಟಿಗೆ ಸಂಖ್ಯೆ 03, ಚಿಕ್ಕಬಳ್ಳಾಪುರ -562101
ಇ-ಮೇಲ್:- jeevanprakashana@gmail.com
ಮಾಹಿತಿಗೆ +91 9901982195 ಕ್ಕೆ ಸಂಪರ್ಕಿಸಬಹುದು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...