Monday, February 15, 2016

ಕಾನೂನಿನ ಕಣ್ಣಿನಲ್ಲಿ ಕೆಲವರು ಮಾತ್ರ ಹೆಚ್ಚು ‘ಸಮಾನರು’ ?


ಶ್ರೀನಿವಾಸ ಕಾರ್ಕಳ


Shrinivas Karkala's photo.

ಈ ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳ ಅಪರಾಧಿಗಳೆಂದು ಸಾಬೀತಾದ ಅಫಜಲ್ ಗುರು, ಯಾಕೂಬ್ ಮೆಮನ್ ರನ್ನು ಗಲ್ಲಿಗೇರಿಸಲಾಗುತ್ತದೆ.
ಆದರೆ
ರಾಜೀವ ಗಾಂಧಿಯವರನ್ನು ಬಾಂಬ್ ಸಿಡಿಸಿ ಛಿದ್ರಗೊಳಿಸಿದವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸುವ ಮಾತು ಒತ್ತಟ್ಟಿಗಿರಲಿ, ಆ ಶಿಕ್ಷೆಯನ್ನು ಕಡಿಮೆ ಮಾಡಿಯಾಗಿದೆ. ತಮಿಳುನಾಡು ಸರಕಾರ ಅವರಿಗೆ ಮರಣದಂಡನೆ ಜಾರಿಯಾಗದಂತೆ ನೋಡಿಕೊಳ್ಳುತ್ತದೆ ಮಾತ್ರವಲ್ಲ ಅವರನ್ನು ಜೈಲಿನಿಂದಲೇ ಬಿಡುಗಡೆಗೊಳಿಸಲು ಯತ್ನಿಸುತ್ತದೆ ( ರಾಜೀವ್ ಹತ್ಯೆ ನಡೆದು 23 ವರ್ಷ ಆಯಿತು).

ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಬಿಯಾಂತ್ ಸಿಂಗರನ್ನು ಕೊಂದ ಬಲವಂತ ಸಿಂಗ್ ರಾಜೋನಾನನ್ನು ಗಲ್ಲಿಗೇರಿಸುವಂತೆ ನ್ಯಾಯಾಲಯ ಹೇಳುತ್ತದೆ. ಆದರೆ ಅಲ್ಲಿನ ಸರಕಾರವೇ ಒತ್ತಡ ಹೇರಿ ಗಲ್ಲು ಶಿಕ್ಷೆ ಜಾರಿಯಾಗದಂತೆ ನೋಡಿಕೊಳ್ಳುತ್ತದೆ (ಹತ್ಯೆ ನಡೆಸಿ 20 ವರ್ಷ ಆಯಿತು. ಮರಣದಂಡನೆ ಶಿಕ್ಷೆ ಘೋಷಣೆಯಾಗಿ 8 ವರ್ಷ ಆಯಿತು).

2002 ನೇ ಇಸವಿಯ ಗುಜರಾತ್ ಗಲಭೆಯಲ್ಲಿ 95 ಜನ ಗುಜರಾತಿಗಳನ್ನು ಕೊಂದ ಆರೋಪದಡಿ ಶಿಕ್ಷೆಗೆ ಒಳಗಾದ ಮಾಯಾಬೆನ್ ಕೊಡ್ನಾನಿ ಜೈಲು ಸೇರಿಯೂ ಆಯಿತು. ಜಾಮೀನಿನ ಮೇಲೆ ಹೊರಗೆ ಬಂದೂ ಆಯಿತು. ಈಗ ಆಕೆ ಸ್ವತಂತ್ರ ಹಕ್ಕಿ.

ಮಾಲೇಗಾಂವ್ ಭಯೋತ್ಪಾದಕ ಕೃತ್ಯದ ಪ್ರಜ್ಞಾಸಿಂಗ್ ಬಳಗದ ವಿಚಾರಣೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಲು ಯಾವುದೇ ತರಾತುರಿಯಿಲ್ಲ. (ಸರಕಾರಿ ವಕೀಲರಿಗೆ ‘ನಿಧಾನ ಹೋಗಿ’ ಎಂಬ ಆದೇಶ ಬರುತ್ತದೆ ; ರೋಹಿಣಿ ಸಾಲ್ಯಾನ್ ಹೇಳಿಕೆ).
ಶೇಕಡಾ 75 ರಷ್ಟು ಮರಣದಂಡನೆ ಶಿಕ್ಷೆಗಳನ್ನು ಮತ್ತು ಭಯೋತ್ಪಾದನೆ ಪ್ರಕರಣಗಳಲ್ಲಿ ನೀಡಿದ ಶೇಕಡ 93.5 ಮರಣದಂಡನೆ ಶಿಕ್ಷೆಗಳನ್ನು ನೀಡಿದ್ದು ದಲಿತರು ಹಾಗೂ ಮುಸ್ಲಿಮರಿಗೆ (ರಾಷ್ಟ್ರೀಯ ಕಾನೂನು ವಿವಿ ಪ್ರಕಟಿಸಲಿರುವ ಅಧ್ಯಯನ; ಮಾಹಿತಿ: ಆಕಾರ್ ಪಟೇಲ್ ಲೇಖನ).


ಅವರನ್ನು ಗಲ್ಲಿಗೇರಿಸಿರುವುದರಿಂದ ಇವರನ್ನೂ ಗಲ್ಲಿಗೇರಿಸಿ ಎನ್ನುವುದು ನನ್ನ ವಾದವಲ್ಲ. ಗಲ್ಲುಶಿಕ್ಷೆ ಜಗತ್ತಿನಿಂದಲೇ ರದ್ದಾಗಲಿ ಎನ್ನುವುದು ನನ್ನ ಬಯಕೆ; ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿ ಮಾತ್ರ ಸರ್ವಥಾ ಸಲ್ಲದು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...