Wednesday, February 03, 2016

ಕೇರಳ ಆರೆಸ್ಸೆಸ್ನ ಮಾಜಿ ಕಾರ್ಯಕರ್ತನ ಅಂತರಂಗಮಲಯಾಳಂ ಮೂಲ: ವಿ.ಎಂ.ಫಹದ್
ಕನ್ನಡಕ್ಕೆ : ಕೆ.ವೈ.Harohalli Ravindra's photo.ಸುಧೀಷ್ ಮಿನ್ನಿ ಎಂಬ ಮಾಜಿ ಆರೆಸ್ಸೆಸ್ ಕಾರ್ಯಕರ್ತ ಸಂಘಪರಿವಾರದಲ್ಲಿ ತನಗಾದ 25 ವರ್ಷಗಳ ಅನುಭವಗಳನ್ನು ಪುಸ್ತಕ ರೂಪದಲ್ಲಿ (ನರಕ ಸಾಕೇದತ್ತಿಲೆ ಉಳ್ಳರಗಳ್) ಪ್ರಕಟಿಸಿದಾಗ ಕೇವಲ ಹದಿನೈದು ದಿನಗಳಲ್ಲಿ ಆ ಪುಸ್ತಕ ಮೂರನೇ ಆವತಿ ಕಂಡು ಹತ್ತು ಸಾವಿರಕ್ಕಿಂತ ಮಿಕ್ಕು ಪ್ರತಿಗಳು ಮಾರಾಟವಾಗಿ ಮಲಯಾಳ ಸಾಹಿತ್ಯದಲ್ಲಿ ನೂತನ ದಾಖಲೆ ಸಷ್ಟಿಸಿತು.)

ಆರೆಸ್ಸೆಸ್ನ ಮಾಜಿ ಕಾರ್ಯಕರ್ತನ ಅಂತರಂಗ

ಭೂಗತ ಜಗತ್ತಿನಿಂದ ಹೊರ ಬಂದು ಅಲ್ಲಿನ ಕ್ರೌರ್ಯತೆಯನ್ನು ಬಹಿರಂಗಗೊಳಿಸಿ ಮಾಫಿ ಸಾಕ್ಷಿಯಾದ ಹಲವರ ಕಥೆಗಳನ್ನು ನಾವು ಕೇಳಿದ್ದೇವೆ. ಅಂತಹ ಸಾಹಿತ್ಯಗಳ ಪಟ್ಟಿಗೆ ಇದೀಗ ಮತ್ತೊಂದು ಹೊಸ ಸೇರ್ಪಡೆಯಾಗಿದೆ. ಕೇರಳದ ಕಣ್ಣೂರಿನ ಆರೆಸ್ಸೆಸ್ನ ಮಾಜಿ ಪ್ರಚಾರಕನಾದ ಸುಧೀಷ್ ಮಿನ್ನಿ ಎಂಬವರು ಸಂಘಪರಿವಾರದ ಅಂತಪುರ ರಹಸ್ಯಗಳನ್ನು ತನ್ನ ನರಗ ಸಾಕೇದತ್ತಿಲೆ ಉಳ್ಳರಗಳ್ ಎಂಬ ಪುಸ್ತಕದ ಮೂಲಕ ಬಹಿರಂಗಗೊಳಿಸಿದ್ದಾರೆ. ಭಯೋತ್ಪಾದನೆಯ ಮೂಲ ಆರೆಸ್ಸೆಸ್ಎಂಬುದಕ್ಕೆ ಅವರು ಸ್ಪಷ್ಟವಾದ ಪುರಾವೆಗಳನ್ನು ಒದಗಿಸಿದ್ದಾರೆ.

ಆರೆಸ್ಸೆಸ್ ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯೂನಿಷ್ಟರನ್ನು ಶತ್ರುವಾಗಿ ಕಂಡು ಅವರೆಲ್ಲರ ನಿರ್ಮೂಲನೆಗಾಗಿ ಕಾರ್ಯಯೋಜನೆಗಳನ್ನು ತಯಾರಿಸಿ, ಅದನ್ನು ನಿರಂತರ ನವೀಕರಿಸಿ ಮುನ್ನಡೆಯುವ ದೊಡ್ಡ ಜಾಲವನ್ನು ಹೊಂದಿದ ಸಂಘಟನೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆರೆಸ್ಸೆಸ್ ಹೇಗೆ ಇತರರ ಮೇಲಿನ ದ್ವೇಷವನ್ನು ಬೆಳೆಸುತ್ತದೆ ಎಂಬುದಕ್ಕೆ ಸುಧೀಷ್ ತನ್ನ ಪುಸ್ತಕದಲ್ಲಿ ಒಂದು ಒಳ್ಳೆಯ ಉದಾಹರಣೆಯನ್ನು ಹೇಳಿದ್ದಾರೆ. ಶಿಬಿರದಲ್ಲಿ ನಡೆಯುವ ಕಬಡ್ಡಿ
ಪಂದ್ಯಾಟದಲ್ಲಿ ‘ವೀರಮತ್ಯು’ ಎಂಬ ಒಂದು ಆಟವಿದೆ. ಪಂದ್ಯದಲ್ಲಿ ತನ್ನ ಮುಂದಿನ ಗೆರೆಯ ಆಚೆಗಿರುವುದು ಮುಸ್ಲಿಮರ ಭಯೋತ್ಪಾದನಾ ಕೇಂದ್ರ. ಅಲ್ಲಿಗೆ ತೆರಳಿ ತನ್ನ ಶ್ವಾಸ ಮುಗಿಯುವ ತನಕ ಪ್ರತಿಯೊಬ್ಬರನ್ನು ಮುಟ್ಟಬೇಕು. ಆ ಸಂದರ್ಭದಲ್ಲಿ ಅವರಿಂದ ಹಿಡಿಯಲ್ಪಟ್ಟರೆ (ಕ್ಯಾಚ್) ಆತ ವೀರ ಮತ್ಯು ಪಡೆದವನಾಗುತ್ತಾನೆ. ಗೆರೆಯ ಎರಡು ಬದಿಗಳಿಂದ ಕ್ರೈಸ್ತರು ಮತ್ತು
ಕಮ್ಯೂನಿಷ್ಟರು ನುಸುಳಿ ಬರುವ ಸಾಧ್ಯತೆಯೂ ಇರುತ್ತದೆ. ಇದೊಂದು ಆಟ. ಆಟದಲ್ಲೂ ಶತ್ರು ನಿಗ್ರಹದ ತರಬೇತಿಯನ್ನು ಸಮರ್ಥವಾಗಿ ತುರುಕಿಸಿದ ಆರೆಸ್ಸೆಸ್ನ ಕುತಂತ್ರವನ್ನು ಇದರಲ್ಲಿ ಕಾಣಬಹುದು.

ಆರೆಸ್ಸೆಸ್ ನಡೆಸುವ ವಿವಿಧ ಕ್ಯಾಂಪುಗಳು ದೇಶದಲ್ಲಿ ಗಲಭೆಗಳನ್ನು ಸಷ್ಟಿಸಲಿರುವ ಷಡ್ಯಂತ್ರಗಳಾಗಿರುತ್ತದೆ. ಅದರಲ್ಲಿ ಭಾಗವಹಿಸುವ ಸ್ವಯಂಸೇವಕರು ಕೊಲೆಯೊಂದನ್ನು ನಡೆಸುವ ಮನೋಭಾವದೊಂದಿಗೆ ಮರಳುತ್ತಾರೆ. ಕ್ಯಾಂಪ್ ಕೊನೆಗೊಳ್ಳುವ ಹಿಂದಿನ ರಾತ್ರಿ ಶಿಬಿರದಲ್ಲಿ ಪಾಲ್ಗೊಂಡ ಪ್ರತಿಯೊಬ್ಬನು ಒಂದು ಪತ್ರವನ್ನು ಬರೆದು ಅಲ್ಲಿ ಒಪ್ಪಿಸಬೇಕಾಗುತ್ತದೆ. ಅದರಲ್ಲಿ ತಾನು ಊರಿಗೆ ಮರಳಿ ಮಾಡಬಹುದಾದ ಸಂಘದ ಕಾರ್ಯಚಟುವಟಿಕೆಯನ್ನು (ಗಲಭೆ ಅಥವಾ ಅದಕ್ಕೆ ಸಂಬಂಧಪಟ್ಟದ್ದು) ಮತ್ತು ಅದಕ್ಕೆ ತಗಲಬಹುದಾದ ಖರ್ಚುವೆಚ್ಚದ ಸಮಗ್ರ ವಿವರವನ್ನು ಬರೆದು ಕೊಡಬೇಕು. ಜತೆಗೆ ಹಣ ಪಡೆಯಲು ಬ್ಯಾಂಕ್ ಎಕೌಂಟ್ ಖ್ಯೆಯನ್ನು ನೀಡಬೇಕು. ಕ್ಯಾಂಪ್ ಮುಗಿದ ಬಳಿಕ ಭಾಗವಹಿಸಿದ
ಸ್ವಯಂಸೇವಕರು ಕಾರ್ಯಯೋಜನೆ ಮತ್ತು ಅದಕ್ಕೆ ಬೇಕಾದ ಹಣದೊಂದಿಗೆ ಮರಳುತ್ತಾರೆ. ಕ್ಯಾಂಪ್ ಮುಗಿಸುವುದರೊಂದಿಗೆ ಮುಸ್ಲಿಮ್, ಕ್ರೈಸ್ತ ಮತ್ತು ಕಮ್ಯೂನಿಷ್ಟ್ ವಿರೋಧ ಮನೋಭಾವ ಪ್ರತಿಯೊಬ್ಬರಲ್ಲೂ ಇರುತ್ತದೆ. ಒಮ್ಮೆ
ಕ್ಯಾಂಪ್ ಮುಗಿಸಿ ಮಧುರೆಯ ಮೀನಾಕ್ಷಿ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ವ್ಯಾಪಾರ ನಡೆಸುತ್ತಿದ್ದ ಮುಸ್ಲಿಮನ ಮೇಲೆ ದಾಳಿ ಮಾಡಲಾಯಿತು. ಆ ವೇಳೆ ಆತನನ್ನು ಆಸ್ಪತ್ರೆಗೆ ಸಾಗಿಸಿದಾಗ ಆತನ ಎಲ್ಲಾ ಮಗ್ರಿಗಳನ್ನು ನಾವು ಲೂಟಿ ಮಾಡಿರುವುದು ಇದೇ ಮನೋಭಾವದಲ್ಲಿ ಎಂದು ಸುಧೀಷ್ ಮಿನ್ನಿ ಹೇಳುತ್ತಾರೆ. ಲೂಟಿ ಮತ್ತು ಅನೈತಿಕ ಸಂಬಂಧ
ಸಂಘಪರಿವಾರದವರು ನಡೆಸುವ ಹಣದ ಲಪಟಾವಣೆ, ಭ್ರಷ್ಟಾಚಾರ, ವ್ಯಭಿಚಾರದ ಕುರಿತಂತೆ ಸುಧೀರ್ ಪುಸ್ತಕದಲ್ಲಿ ವಿವರಿಸಿದ್ದಾರೆ. ಸೇವೆ ಮತ್ತು ಚಿಟ್ಫಂಡ್ನ ಹೆಸರಿನಲ್ಲಿ ನಡೆಸುವ ಮೋಸ, ಸಂಘದಿಂದ ಸಿಗುವ ವಿವಿಧ ಫಂಡ್ಗಳ ಮೂಲಕ ನಡೆಸುವ ಭ್ರಷ್ಟಾಚಾರದ ಕಥೆಗಳು ಆಶ್ಚರ್ಯಗೊಳಿಸುವಂತಿದೆ. ಹೊರಗಿನ ಮೋಸದ ವ್ಯವಹಾರದಲ್ಲಿ ಎಲ್ಲರೂ ಭಾಗಿಯಾದರೆ ಆಂತರಿಕವಾದ ವಂಚನೆಗಳಲ್ಲಿ ಕೆಲವರು ಮಾತ್ರ ಭಾಗಿಯಾಗಿರುತ್ತಾರೆ. ಹೆಡ್ಗೆವಾರ್ ಸಮತಿ ಮಂದಿರ ನಿರ್ಮಾಣಕ್ಕಾಗಿ ಸಂಘ
ನೀಡಿದ ನಾಲ್ಕು ಲಕ್ಷ ರೂಪಾಯಿಯಲ್ಲಿ ಅವ್ಯವಹಾರ ನಡೆದ ಘಟನೆಗೆ ಸಂಬಂಧಿಸಿ ಸ್ವಯಂ ಸೇವಕನಾಗಿದ್ದ ಶಿವಕುಮಾರ್ ಆತ್ಮಹತ್ಯೆಗೈದಿದ್ದ. ಬಡವರಿಗೆ ಆರ್ಥಿಕವಾಗಿ ನೆರವಾಗಲು ಮುಂದಾದ ಕೆಲವರನ್ನು ವಂಚಿಸಿದ ಕಥೆಯನ್ನು ಅವರು ಹೀಗೆ
ವಿವರಿಸುತ್ತಾರೆ: ‘‘ಪ್ರತಿಯೊಂದು ಮಗುವಿನ ಮನೆಯವರ ದೈನ್ಯಸ್ಥಿತಿಯನ್ನ ು ವಿಡಿಯೋ ಮಾಡಿ ಕಳಿಸಿದರೆ 25 ಲಕ್ಷ ರೂಪಾಯಿ ನೀಡುತ್ತೇವೆಂಬ ಭರವಸೆ ದೊರೆಯಿತು. ಅದಕ್ಕಾಗಿ ಅಟ್ಟಪಾಡಿ ಎಂಬ ಊರಿನ ಮುಳ್ಳಿ ಎಂಬ ಪ್ರದೇಶದಲ್ಲಿ
ಸಿನಿಮಾ ಸೆಟ್ನಂತೆ ಬಿದಿರಿನಿಂದ 40 ಮನೆಗಳನ್ನು ನಿರ್ಮಿಸಲಾಯಿತು. ನೀರು, ವಿದ್ಯುತ್, ರಸ್ತೆ ಇಲ್ಲದ ಈ ಸ್ಥಳದಲ್ಲಿ ಜೀವನ ಸಂಕಷ್ಟಮಯ ಎಂದು ತೋರಿಸಲು ಈ ಸೆಟ್ನ ನಿರ್ಮಾಣವಾಗಿತ್ತು. ಅಟ್ಟಪಾಡಿ ಕುಗ್ರಾಮದಲ್ಲಿದ್ದ ಎಲ್ಲಾ ರೋಗಿಗಳಿಗೆ
ಹಣದ ಅಮಿಷ ತೋರಿಸಿ ತಾತ್ಕಾಲಿಕ ನಿರ್ಮಿಸಿದ ಬಿದಿರಿನ ಮನೆಗಳಿಗೆ ಕರೆ ತರಲಾಯಿತು. ಇವರನ್ನು ಬಾಲವಿಕಾಸ ಕೇಂದ್ರದಲ್ಲಿರುವ ಮಕ್ಕಳ ಪೋಷಕರೆಂದು ಬಿಂಬಿಸಲಾಯಿತು. ಯಾರೇ ಕಂಡರೂ ಮನಕರಗುವ ರೀತಿಯಲ್ಲಿ ಸ್ಕ್ರಿಪ್ಟ್
ರಚಿಸಲಾಗಿತ್ತು. ಇದಕ್ಕೆ ಒಟ್ಟು ಒಂದೂವರೆ ಲಕ್ಷ ವೆಚ್ಚ ಮಾಡಿದ್ದರು.ಮೂರು ತಿಂಗಳ ಬಳಿಕ 40 ಮನೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ಕೋರುವ ಪತ್ರದೊಂದಿಗೆ 30 ಲಕ್ಷ ರೂಪಾಯಿ ಹಣ ವಿದೇಶದಿಂದ ಅವರಿಗೆ ಲಭಿಸಿತು ’’ ಸಂಘಪರಿವಾರ ವಿದೇಶದಿಂದ ಹಣ ಪಡೆದುಕೊಳ್ಳುವ ಸಣ್ಣ ಉದಾಹರಣೆಯಾಗಿದೆ ಇದು. ಸಂಘದ ವಿದೇಶ ಫಂಡ್ನ ಬಗ್ಗೆ ನಮಗೀಗಾಗಲೆ ತಿಳಿದಿದೆ. ಅಸಂಖ್ಯಾತ ಕೋಟಿ ರೂಪಾಯಿಗಳ ನಿತ್ಯ ವರಮಾನ ಅದಕ್ಕ್ತಿದೆ. ವಿವಿಧ ರೀತಿಯಲ್ಲಿ ಜನರ ಶೋಷಣೆ ಮಾಡಿ ಸಂಘವು ಹಣವನ್ನು ಸಂಪಾದಿಸುತ್ತದೆ. ಅದರಲ್ಲಿ ಮುಖ್ಯವಾದುದು ಗುರು ದಕ್ಷಿಣೆಯಾಗಿದೆ. ಕೇರಳದ ಒಂದು ಜಿಲ್ಲೆಯಲ್ಲೆ ಪ್ರತಿ ವರ್ಷ 17 ಕೋಟಿ ರೂಪಾಯಿಯ ಗುರು ದಕ್ಷಿಣೆ ಲಭಿಸುತ್ತಿದೆ. ಕೇರಳ ರಾಜ್ಯದಲ್ಲಿ ಪ್ರತಿ ವರ್ಷ 250 ಕೋಟಿ
ರೂಪಾಯಿ ಹಣವನ್ನು ಈ ಮಾರ್ಗದಲ್ಲಿ ಸಂಘ ಸಂಪಾದಿಸುತ್ತದೆ. ಗುರುದಕ್ಷಿಣೆ ಅತಿ ಹೆಚ್ಚು ಸಿಗುವ ರಾಜ್ಯ ಗುಜರಾತ್. ಅಲ್ಲಿ ಪ್ರತಿ ವರ್ಷ 1000 ಕೋಟಿ ರೂಪಾಯಿ ಹಣ ಸಂಗ್ರಹವಾಗುತ್ತದೆ. ಕಣ್ಣೂರಿನಲ್ಲಿ ಸಂಘದ ಕಾರ್ಯಚಟುವಟಿಕೆ ವ್ಯಭಿಚಾರವಾಗಿ
ಬದಲಾಗಿದೆ ಎಂದು ಸುಧೀಷ್ ಹೇಳುತ್ತಾರೆ. ಬಿ.ಜೆ.ಪಿಯ ನಾಯಕ ಮತ್ತು ಮಹಿಳಾ ನಾಯಕಿಯ ಅನೈತಿಕ ಸಂಬಂಧವನ್ನು ಪತಿ ರೆಡ್ ಹ್ಯಾಂಡ್ಆಗಿ ಹಿಡಿದ ವಿಚಾರ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇಂತಹ ವಿಚಾರಗಳಿಗೆ ಸಂಬಂಧಪಟ್ಟಂತೆ
ಕೆಲವು ಸ್ವಯಂ ಸೇವಕರು ನಮೋ ವಿಚಾರ್ ಮಂಚ್ ಎಂಬ ಹೆಸರಿನಲ್ಲಿ ಸಂಘಟಿಸಿದ್ದರು. ಸಂಘಟನೆಯ ಪ್ರಾಣಕ್ಕೆ ಸಮಾನವಾದ ಬಲಿದಾನಿಯ ಪತ್ನಿಯನ್ನೂ ವ್ಯಭಿಚಾರಕ್ಕೆ ಬಳಸಿದ್ದಾರೆಂದು ಸುಧೀಷ್ ಹೇಳುತ್ತಾರೆ. ಕ್ಷಾತ್ರ ಸದನ ಎಂಬ
ಹೆಸರಿನಲ್ಲಿ ಉತ್ತರ ಇಂಡಿಯಾದಲ್ಲೆಡೆ ವ್ಯಾಪಕವಾಗಿ ಕಾರ್ಯವೆಸಗುವ ಗುಪ್ತ ಸಂಘಟನೆ ದಲಿತ ಮಹಿಳೆಯರನ್ನು ಬಳಸಿ ಅವರ ಗರ್ಭದಲ್ಲಿ ಕ್ಷತ್ರೀಯ ಮಕ್ಕಳನ್ನು ಹುಟ್ಟಿಸುವ ಪ್ರಕ್ರಿಯೆ ನಡೆಸುತ್ತಿದೆ. 1950 ರಿಂದಲೆ ನಾಗಪುರದಿಂದ ಕ್ಷಾತ್ರಸದನ
ಕಾರ್ಯವೆಸಗುತ್ತಿದೆ. ಈ ಮಕ್ಕಳನ್ನು ಕ್ಷತ್ರೀಯರಾಗಿ ಬೆಳೆಸಿ ಅವರನ್ನು ಗಲಭೆಗೆ ಉಪಯೋಗಿಸಲಾಗುತ್ತಿದೆ. ಕೆಲವು ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನೂ ಇದೇ ರೀತಿ ಬಳಸಲಾಗಿದೆಯಂತೆ.

ಲೂಟಿ

ಗಲಭೆಗಳನ್ನು ಸಷ್ಟಿಸಿ ಬಹತ್ ಪ್ರಮಾಣದ ಲೂಟಿ ನಡೆಸಿ ಹಣ ಸಂಪಾದಿಸುವುದನ್ನು ಆರೆಸ್ಸೆಸ್ ಒಂದು ವರಮಾನ ಮಾರ್ಗವಾಗಿ ಕಂಡಿದೆ. ಇಂಡಿಯಾದಲ್ಲಿ ನಡೆದ ಹಲವಾರು ಗಲಭೆಯಲ್ಲಿ ನಡೆದ ಲೂಟಿಯ ಕಥೆಗಳನ್ನು ನಾವು ಕೇಳಿದ್ದೇವೆ. ಕಣ್ಣೂರಿನಲ್ಲಿ ಅಶ್ವಿನ್ ಕುಮಾರ್ನ ಮರಣದ ಬಳಿಕ ಮುಸ್ಲಿಮರ ಮನೆಗಳನ್ನು ದೋಚಿದ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ. ಪೊಲೀಸರು ತೆರಳುವ ತನಕ ಆರೆಸ್ಸೆಸ್ನ ಜನರೇ ಮುಸ್ಲಿಮರ ಮನೆಗಳಿಗೆ ಕಾವಲು ನಿಂತರು. ಆ ಬಳಿಕ ಮನೆಗಳಿಗೆ ನುಗ್ಗಿ ಅಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಅವರು ಲೂಟಿ ಮಾಡಿದರು. ಪುನ್ನಾಡ್ ಗಲಭೆಯ ಸಂದರ್ಭದಲ್ಲಿ ಮುಸ್ಲಿಮರ ಮನೆಗಳಿಂದ ದೋಚಿದ ಚಿನ್ನಾಭರಣಗಳನ್ನು ಮಂಗಳೂರಿನ ಬಿ.ಜೆ.ಪಿಯ ಓರ್ವ ವ್ಯಾಪಾರಿಗೆ ಮಾರಲಾಗಿತ್ತಂತೆ. ಆ ಹಣದಿಂದ ನಾಲ್ಕು ಬೋಟುಗಳು ಮತ್ತು  ಮೀನಿನ ಬಲೆಗಳನ್ನು ಖರೀದಿಸಿ ಹಿಂದೂ ಮೀನುಗಾರರಿಗೆ ನೀಡಲಾಯಿತೆಂದು
ಹೇಳಲಾಗಿದೆ. ಈ ನಾಡಿನ ಮುಸ್ಲಿಮರು ತುಂಬಾ ಬಲಿಷ್ಠರು. ಅವರು ತುಂಬಾ ಶ್ರೀಮಂತರು. ಒಂದು ಹಸುವಿನ ತಲೆಯನ್ನು ಕಡಿದು ಯಾವುದಾದರೂ ದೇವಸ್ಥಾನದ ಮುಂದೆ ಹಾಕಿದರೆ ಗಲಭೆಯನ್ನು ಸಷ್ಟಿಸಬಹುದು. ಉಳಿದ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ಆರೆಸ್ಸೆಸ್ನ ಸಭೆಗಳಲ್ಲಿ ಹೇಳಲಾಗುತ್ತಿತ್ತಂತೆ. ಶಸ್ತ್ರಾಸ್ತ್ರ ನಿರ್ಮಾಣ ಮುಖ್ಯವಾಗಿ ಮರಾಠಿ ಸ್ವಯಂ ಸೇವಕರು ಶಸ್ತ್ರಾಸ್ತ್ರಗಳನ್ನು ನಿರ್ಮಿಸಿ ಬೋಟು ಮುಖಾಂತರ ಕಣ್ಣೂರಿಗೆ ತಲುಪಿಸುತ್ತಾರಂತೆ. ನಿರಂತರವಾಗಿ ನಡೆಯುತ್ತಿರುವ ಬಾಂಬ್ ನಿರ್ಮಾಣ ತರಬೇತಿಯು ಸಂಘಪರಿವಾರದವರನ್ನು ಮತ್ತಷ್ಟು ಆಕ್ರಮಶೀಲರನ್ನಾಗಿಸುತ್ತಿದೆ. ನಿರ್ಮಾಣದ ವೇಳೆ ಮತ್ತು ಪ್ರಯೋಗಿಸುವ ವೇಳೆ ಅನಾಹುತ ನಡೆದು ಹಲವಾರು ಸ್ವಯಂಸೇವಕರು ಸತ್ತಿದ್ದಾರೆ.

ಕಾರ್ಯವಾಹಕನಾಗಿದ್ದ ತಟ್ಟುಪರಂಬ್ನ ಶಶಿ ಎಂಬಾತ ಪಲಾಯನದ ಸಂದರ್ಭದಲ್ಲಿ ಕೈಯಲ್ಲಿದ್ದ ಬಾಂಬ್ ಕಲ್ಲಿಗೆ ತಾಗಿ ಸ್ಪೋಟಿಸಿ ಸ್ಥಳದಲ್ಲೆ ಸತ್ತಿದ್ದ. ಇದನ್ನು ಸಿ.ಪಿ.ಎಂನ ತಲೆಗೆ ಕಟ್ಟಿ ಆರೆಸ್ಸೆಸ್ ಗಲಭೆಯನ್ನು ಸಷ್ಟಿಸಿತ್ತು. ಶ್ರೀಜಿತ್ ಮತ್ತು
ಶಬರಿಮಲೆಯ ಮಾಲೆ ಹಾಕಿದ್ದ ಭಕ್ತನೊಬ್ಬ ಕೊರಳನ್ನು ಕಡಿದಿರುವುದನ್ನು ಸುಧೀಷ್ ಪುಸ್ತಕದಲ್ಲಿ ಸ್ಮರಿಸುತ್ತಾರೆ. ಭೂಗತ ಲೋಕದವರಂತೆ ತನಿಖೆಯನ್ನು ಬುಡಮೇಲುಗೊಳಿಸುವ ಪ್ರಯತ್ನವನ್ನು ಸಂಘ ಮಾಡುತ್ತಿದೆ. ತನಿಖಾಧಿಕಾರಿಗಳ
ಮೇಲೆ ಒತ್ತಡ ಹೇರಲು ಬೇರೆ ರಾಜ್ಯಗಳಲ್ಲಿ ಕಲಿಯುತ್ತಿರುವ ಅವರ ಮಕ್ಕಳ, ಕುಟುಂಬದವರ ಮೇಲೆ ಕೊಲೆ ಬೆದರಿಕೆಯಯನ್ನು ಹಾಕಿ ಕೇಸುಗಳ ಹಾದಿ ತಪ್ಪಿಸಲಾಗುತ್ತದೆ ಅಥವಾ ಸಂಘಕ್ಕೆ ಅನುಕೂಲಕರವಾಗಿಸಲು ಆರೆಸ್ಸೆಸ್
ಪ್ರಯತ್ನಿಸುತ್ತದೆ. ವಂಚನೆ ಮತ್ತು ಸುಳ್ಳು ವದಂತಿಗಳನ್ನು ಅವರು ತಮ್ಮ   ಕಾರ್ಯಶೈಲಿಯನ್ನಾಗಿಸಿದ್ದಾರೆ.

ಸುಧೀಷ್ ಈ ಪುಸ್ತಕದಲ್ಲಿ ಆಶ್ಚರ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ. ರಾಮನನ್ನು ಮರ್ಯಾದಾ ಪುರುಷನಾಗಿಯೂ, ರಾವಣನನ್ನು ಭಯೋತ್ಫಾದಕನಾಗಿಯೂ ಚಿತ್ರಿಸಿರುವುದು, ಮುಸ್ಲಿಮ್ ಉಗ್ರವಾದ ಎಂಬ ದವನ್ನು ಅದೇ ರೀತಿ ಪ್ರಯೋಗಿಸಿರುವುದು ಸಂಘಪರಿವಾರ ಶಿಕ್ಷಣ ಅವರ ಮೇಲೆ ಬೀರಿದ ಪರಿಣಾಮವಾಗಿರಬಹುದು. ಆರೆಸ್ಸೆಸ್ನ ಭಯೋತ್ಪಾದನೆಯನ್ನು ತೆರೆದಿಡುವಲ್ಲಿ ಪುಸ್ತಕ ಹೆಚ್ಚು ಕಡಿಮೆ ಯಶಸ್ವಿಯಾಗಿದೆ. ಎಂದು ಹೇಳಬಹುದು.

(ಪ್ರಸ್ತುತ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ)

1 comment:

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...