Thursday, February 18, 2016

ಕವಿತೆ: ಗೆಳೆಯ ಕನ್ಹಯ್ಯವಿಶ್ವಾರಾಧ್ಯ ಸತ್ಯಂಪೇಟೆ Vishwaradhya Satyampet's photo.

ಇಲ್ಲಿ ಸತ್ಯ ಮಾತಾಡುವಂತ್ತಿಲ್ಲ
ವಿಚಾರಕ್ಕೂ ನಿರ್ಬಂಧ
ಚಡ್ಡಿ ತೊಟ್ಡು ಏನಾದರೂ ಮಾಡು
ಅದು ದೇಶ ಪ್ರೇಮ!
ಜೀವಿಗಳು ಸತ್ತಾಗ ಗಲ್ಲಿಗೇರಿಸಿದಾಗ
ಸಂಭ್ರಮ ಪಡು, ಪಟಾಕಿ ಹಚ್ಚು
ಗೋಡ್ಸೆಯನ್ನೂ ಪೂಜಿಸು
ಇದು ದೇಶ ಪ್ರೇಮ!


ಅನ್ಯಾಯದ ವಿರುದ್ದ ಮಾತಾಡದಿರು
ಜಾತಿಯ ಪೆಡಂಭೂತವ ಕೆಣಕದಿರು
ಮನುವಾದಿಗಳ ಷಡ್ಯಂತ್ರ ಬಿಚ್ಚಿರಿಸದಿರು
ಪಟ್ಟಭದ್ರರ ಬುಡಕ್ಕೆ ಕೊಡಲಿಪೆಟ್ಡು ಇಡದಿರು
ಹುಸಿ ದೇಶ ಪ್ರೇಮಿಗಳ ಬಯಲುಗೊಳಿಸದಿರು
ಗೀತೆಯ ಮಾತ ತಳ್ಳಿಹಾಕದಿರು
ಕರ್ಮ ಮಾಡುತ್ತ ಹೋಗು,
ಫಲ ಕೇಳದಿರು
ಕರ್ಮ ಹಣೆ ಬರಹ ಜೋತಿಷ್ಯ ಒಪ್ಪಿಕೋ

ಇಲ್ಲದಿರೆ
ನೀನು ದೇಶದ್ರೋಹಿ, ಕನ್ಹಯ್ಯಾ

ದೇಶ ದ್ರೋಹಿ ಅಂದರೂ ಪರವಾ ಇಲ್ಲ
ನ್ಯಾಯ ನಿಷ್ಠುರಿ ದಾಕ್ಷಿಣ್ಯ ಪರನಾಗದಿರು
ಲೋಕವಿರೋಧಿ ಶರಣ ಯಾರಿಗೂ ಅಂಜಲಾರ
ನೆನಪಿರಲಿ !
***

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...