Thursday, February 18, 2016

JNU ವಿದ್ಯಾರ್ಥಿ ಹೋರಾಟ ಮತ್ತು ವಕೀಲರು : ಒಂದು ಅಭಿಪ್ರಾಯ

-  ಸೂರ್ಯಕಾಂತ ಬಳ್ಳಾರಿ

JNU students union president Kanhaiya Kumar's, mother Meena Devi today slammed the attack on her son in the Patiala House Court premises and questioned who will be responsible if he dies in custody."I am not a terrorist's mother. I know it will be proved some day but until then if my son dies in custody, who will be responsible for it? They can call Kanhaiya a threat to nation but cannot protect him from other threats?," his mother Meena Devi told PTI from Bihar over phone.


"What if he had died that day and it was proved later that he was innocent? Will the government give me my son back then? They acted so fast on complaint against my son but they haven't arrested anyone for the attack on Kanhaiya in court," she added.

ತಾಯಿಯ ಅಳಲು ನಿಜವಲ್ಲವೇ? ಒಬ್ಬ ವಿದ್ಯಾರ್ಥಿಯ ಮೇಲೆ ಕಾನೂನು ರಕ್ಷಿಸುವ ಹೊಣೆ ಹೊತ್ತು ಪ್ರತಿವಾದಿಯ ವಾದವನ್ನು ತಾಳ್ಮೆಯಿಂದ ಕೇಳಿಸಿಕೊಂಡು ಸಾಕ್ಷಸಮೇತ ತಾವು ಸರಿ ಎಂಬುವುದನ್ನು ಸಾಧಿಸಿತೋರಿಸಬೇಕಾದ 'ವಕೀಲ'ರೇ ರೀತಿ ಮೃಗಗಳಂತೆ ವರ್ತಿಸಿ ಹಲ್ಲೆಮಾಡಿದಾಗ, ಸಂದೇಹ ಬರೋದು ಸಹಜ ಅಲ್ವೇನ್ರಿ. ಪೋಲೀಸ್ ಬಿಗಿ ಬಂದೋಬಸ್ತಿನಲ್ಲಿ ಕೋರ್ಟಿಗೆ ಹಾಜರು ಪಡಿಸಲು ಕರೆದುಕೊಂಡು ಬಂದಾಗ, ಹಲ್ಲೆಮಾಡಿ ಸಲೀಸಾಗಿ ಪಾರಾಗಿ ಹೋಗುತ್ತಾರೆ. ವೈದ್ಯಕೀಯ ಪರೀಕ್ಷೆಯೇ ಮೈಮೇಲೆ ಗಾಯಗಳಿರುವುದನ್ನು ಖಚಿಚಪಡಿಸಿರುವಾಗಲೂ 'ಹಲ್ಲೆ ನಡೆದಿದೆ ಎಂದು ನಾನು ಭಾವಿಸುವುದಿಲ್ಲ. ತಳ್ಳಾಟ ಆಗಿತ್ತು. ಸಾಕಷ್ಟು ಪೋಲೀಸರಿದ್ದು ಪರಿಸ್ಥಿತಿ ನಿಭಾಯಿಸಿದ್ದಾರೆ' ಎಂದು ಬೇಜವಾಬ್ದಾರಿಯಿಂದ ಮಾತನಾಡುತ್ತಾರಲ್ಲ ದೆಹಲಿ ಪೋಲೀಸ್ ಆಯುಕ್ತರು. ಇದಕ್ಕಿಂತ ನಗೆಪಾಟಲಿನ ವಿಷಯ ಬೇರೇನಿದೆ? ತಾಯಿಯ ಬೇಗುದಿ ಹೃದಯ ಹೀನರಿಗೆ ಅರ್ಥವಾಗುವ ಯಾವ ಲಕ್ಷಣವೂ ಇಲ್ಲ. ಹೌದು, ಹಲ್ಲೆ ಮಾಡಿ ಕೊಂದು ಹಾಕಿದ ಮೇಲೆ, 'ನಮ್ಮ ಸಿಬ್ಬಂದಿಯ ಕಾವಲಿನ ಮಧ್ಯೆಯೂ ರೀತಿ ಹಲ್ಲೆ ನಡೆದಿದೆ, ನಾವು ಎಂಕ್ವಾಯಿರಿ ಮಾಡ್ತೇವೆ' ಎಂದು ಹೇಳುವುದಿಲ್ಲ ಎಂಬುವುದಕ್ಕೆ ಏನು ಗ್ಯಾರಂಟಿ

ಪೋಲೀಸರು ಮತ್ತು ಹಲ್ಲೆಮಾಡಿದ ವಕೀಲ ವೇಷಧಾರಿ ಗೂಂಡಾಗಳಿಗೂ ಲಿಂಕ್ ಇರೋಥರ ಮೇಲ್ನೋಟಕ್ಕೆ ಕಾಣಿಸ್ತಿದೆ. ಒಬ್ಬರನ್ನಾದರೂ ಸ್ಥಳದಲ್ಲೇ ಬಂಧಿಸಿ ವಿಚಾರಿಸಲಿಕ್ಕಾಗಿಲ್ಲ ಇವರ ಕರ್ತವ್ಯ ಪ್ರಜ್ಞೆಗೆ. ಇದು ಅತಿಯಾದ ದಬ್ಬಾಳಿಕೆ ಮಾತ್ರವಲ್ಲ, ಯೋಜಿತ ದಾಳಿ ಎಂದೇ ಭಾವಿಸಬೇಕಾಗುತ್ತದೆ

ವಿದ್ಯಾರ್ಥಿ ಜೀವನದಿಂದಲೇ ಅನ್ಯಾಯದ ವಿರುದ್ಧ ಹೋರಾಟ ನಡೆಸಿ ಕ್ರಮೇಣ ರಾಜಕೀಯಕ್ಕೆ ಕಾಲಿಟ್ಟು ಮೆರೆದಾಡುವ ಯಾವುದೇ ರಾಜಕಾರಣಿಯೂ ತಾವೂ ಒಮ್ಮೆ ಹಂತವನ್ನು ದಾಟಿ ಬಂದವರು ಎಂಬ ಎಚ್ಚರಿಕೆಯಿಂದ ನಡೆದುಕೊಂಡು ಮಾತನಾಡಿರುವುದು ವರದಿಯಾಗಿಲ್ಲ

ಪ್ರಕರಣವನ್ನೆಲ್ಲ ಗಮನಿಸಿದರೆ 'ಸರ್ವಾಧಿಕಾರಿ ಧೋರಣೆ' ಭಿನ್ನಾಭಿಪ್ರಾಯಗಳನ್ನು ತುಳಿದು ಮೆರೆಯುವ ನಿರಂಕುಶ ಅಧಿಕಾರದ ಲಕ್ಷಣವೇ ಢಾಳಾಗಿ ಕಾಣುತ್ತಿದೆ

ಜಗತ್ತಿನ ಎಲ್ಲಾ ದಿಕ್ಕುಗಳಿಂದ ವಿದ್ಯಾರ್ಥಿ ಹೋರಾಟಕ್ಕೆ ಮತ್ತು ದಮನಿತ ವಿದ್ಯಾರ್ಥಿಗೆ ಸಹಾನುಭೂತಿ ವ್ಯಕ್ತವಾಗುತ್ತಿರುವುದು ಇವರ ಕಣ್ಣು ತೆರೆಸಬಹುದೇ? ಕಾದು ನೋಡಬೇಕಾ? ತೀರ ಅಸಹ್ಯವಾಗುತ್ತಿದೆ. ಛೇ......


-      ಸೂರ್ಯಕಾಂತ ಬಳ್ಳಾರಿ
-      9902865762

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...