Wednesday, March 02, 2016

ಆತ್ಮಸಾಕ್ಷಿ


ಪಂಪಾರಡ್ಡಿ ಅರಳಹಳ್ಳಿ's photo.

ಶಿವಸುಂದರ್


ಕ್ಷಮಿಸಿ,
ನೀವು ಕೇಳುವ ಪ್ರಶ್ನೆಗೆ
ನೀವು ಬಯಸುವ ಉತ್ತರವನ್ನು ನೀಡಲಾರೆ
ವಿಚಾರಣೆಗೆ ಮುನ್ನವೇ ಶಿಕ್ಷೆ ಘೋಷಿಸುವ ನ್ಯಾಯಾಲಯಗಳಲ್ಲಿ
ಸಾಕ್ಷ್ಯ ನುಡಿಯಲಾರೆ


ಸುರಸಂಗೀತಕ್ಕೆ
ತಲೆದೂಗಿದ ಮಾತ್ರಕ್ಕೆ
ನರಕವಾಸಿಗಳ ಆಕ್ರಂದನಗಳ ಮೇಲೆ
ರಸಭಂಗದ ದೂರು ನೀಡಲಾರೆ

ರಾಮಚಂದ್ರನ ಸನ್ನಿಧಾನದಲ್ಲಿ
ಪುಳಕಿತನಾದ ಮಾತ್ರಕ್ಕೆ
ಶಂಭೂಕವದೆಗಳಿಗೆ
ಆತ್ಮಹತ್ಯೆಯೆಂದು ಸಹಿ ಮಾಡಲಾರೆ

ಏಕಲವ್ಯರ ಶಿರಚ್ಛೇದಗಳಿಗೆ
ಗುರುದಕ್ಷಣೆಯಿಂದ ಷರಾ ಬರೆಯಲಾರೆ

ಕಲ್ಯಾಣದ ಬೀದಿಗಳಲ್ಲಿ
ದುಗುಡವಿದ್ದ ಮಾತ್ರಕ್ಕೆ
ಮಹಾಮನೆಯೇ ಸಂಚೆಂದು ದೂರು ನೀಡಲಾರೆ

ಪ್ರಭುತ್ವದ ಪಹರೆಯಲ್ಲಿರುವ
ಸತ್ಯದ ಸೂತಕಕ್ಕೆ
ಪ್ರಜಾಸತ್ತೆಯೆಂದು ಪರಾಕು ಹೇಳಲಾರೆ

ಖಾಂಡವ ದಹನಕ್ಕೆ ಕವಾಯತು ನಡೆಯುತ್ತಿರುವಾಗ
ಹೂವಿನ ರಕ್ಷಣೆಗೆ ಮುಳ್ಳಿರುವುದೂ ತಪ್ಪೆನ್ನಲೇ?

ತೋಳಗಳು ತುಪಾಕಿಯೇರಿಸಿ ಹೊಂಚುಹಾಕುತ್ತಿರುವಾಗ
ಮೇಕೆಗಳಿಗೆ ಕೊಂಬಿರುವುದೂ ತಪ್ಪೆನ್ನಲೇ?.


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...