Thursday, March 10, 2016

ಕಾಜೂರು ಸತೀಶ್ ಕವಿತೆ



ನಿನ್ನಂಗಿಯ ಕ್ಯಾನ್ವಾಸಿನಲ್ಲಿ
ಗಾಯದ ಕೆಂಪುಗೆರೆ
ಗೇರು ಹಣ್ಣಿನ ಗುರುತು
ಬಾಳೆಯೆಲೆಯ ಕಲೆ
ಸೆಗಣಿ ಗೊಬ್ಬರದ ಕಂಪು.
ನೀನು ಗೀಚಿ ಜೇಬಲ್ಲಿಟ್ಟ ಪ್ರೇಮ
ಕವಿತೆ
ಸುರಿದ ಹಾಳು ಮಳೆಯ ಕೃತಿಚೌರ್ಯಕ್ಕೆ
ಸಿಲುಕಿದೆ
ಒದ್ದೆಯಾದ ಬಿಳಿಯ ಹಾಳೆ
ಅವಳ ಊದಿದ,ಬಿಳುಚಿಕೊಂಡ ಮುಖ
ಹೃದಯದ ಕೆಂಪು ಬಸಿದು
ಜೇಬಲ್ಲಿರಿಸಿದ
ಗುಲಾಬಿಯದ್ದೂ ಅದೇ ಕಥೆ.
ಹಾದಿ-ಬೀದಿಯಲ್ಲಿ ನಿನ್ನ ಅಂಗಿ
ತೊಟ್ಟು ನಡೆವಾಗ
ಹಿಂಬದಿಯಿಂದ ಯಾರೋ ನಿನ್ನ ಹೆಸರ
ಕೂಗಿ ಕರೆವಾಗ

ಹಿಂತಿರುಗಿಯೂ ನೋಡದೆ
ನಡೆದುಹೋಗುತ್ತೇನೆ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...