Friday, March 04, 2016

ಯಾರೀ ಕನ್ಹಯ್ಯ ?



Here, is our Hero
ಫ್ರಂ "ಲೆನಿನ್ ಗ್ರಾದ್ " ಆಫ್ ಬಿಹಾರ್..
ಇಂಥಹವು ತೀರಾ ಅಪರೂಪಕ್ಕೆ ನಡೆದುಬಿಡುತ್ತವೆ. ಬಿಹಾರದ " ಬೇಗುಸರಾಯ್ " ಜಿಲ್ಲೆಯ "ಬಿಹಾತ್" ಅನ್ನುವ ಪುಟ್ಟಹಳ್ಳಿಯ ಮುರುಕಲು ಹೆಂಚಿನಮನೆ ಕನ್ಹಯ್ಯನದ್ದು. ಇಡೀ ಹಳ್ಳಿಗೆ ಹಳ್ಳಿಯೇ ಬಲಪಂಥವಾದದ ವಿರುದ್ದ ತೊಡೆತಟ್ಟಿ ನಿಂತ ಇತಿಹಾಸವುಳ್ಳದ್ದು. ಅದಕ್ಕೆಂದೇ ಬಿಹಾತ್ ಗ್ರಾಮವನ್ನು "ಲೆನಿನ್ ಗ್ರಾದ್ ಆಫ್ ಬಿಹಾರ್" ಅಂತಲೇ ಕರೆಯುತ್ತಾರೆ. ಇಂಥ ಖಡಕ್ಕು ಹಳ್ಳಿಯೊಂದರಲ್ಲಿ ಓಡಾಡಿ ಬೆಳೆದವನು ಕನ್ಹಯ್ಯ. Sslc ಡ್ರಾಪ್ ಔಟ್ ತಂದೆ ಜೈಶಂಕರ್ ಸಿಂಗ್, ತಿಂಗಳಿಗೆ 3000 ಸಂಬಳದ ಅಂಗನವಾಡಿ ಕಾರ್ಯಕರ್ತೆ ತಾಯಿ ಮೀನಾದೇವಿ. ಸಣ್ಣಮಟ್ಟದ ಕಲ್ಲುವ್ಯಾಪಾರಿಯಾಗಿದ್ದ ಪತಿ ಜೈಶಂಕರ್ ಸಿಂಗ್, ಪಾರ್ಶ್ವವಾಯು ಖಾಯಿಲೆಗೆ ಬಿದ್ದು ದೇಹದ ಅರ್ಧಭಾಗದ ಚಲನೆಯನ್ನೇ ಕಳೆದುಕೊಂಡ ಮೇಲೆ, ಮಕ್ಕಳ ಜೊತೆಗೆ ಗಂಡನನ್ನೂ ತಾಯಾಗಿ ಸಲಹಿದ್ದು ಕನ್ಹಯ್ಯನ ಅಮ್ಮ ಮೀನಾದೇವಿ. AISF ವಿದ್ಯಾರ್ಥಿ ಸಂಘಟನೆಯ ನಾಯಕ.

ನಮ್ಮೆಲ್ಲರ ಬದುಕಿನ ಹಿನ್ನೆಲೆಯಲ್ಲೂ ಇಂಥದೊಂದು ತಾಯಿ, ಅಂಥವೊಬ್ಬ ತಂದೆ, ಒಂದು ಮುರುಕಲು ಹೆಂಚಿನ ಮನೆ, ಪುಟ್ಟಹಳ್ಳಿ, ಬಡತನ, ಎಲ್ಲವೂ ಇರುವಂಥವೇ.. ಆದರೆ.. ಒಬ್ಬ ಕನ್ಹಯ್ಯ ನಮ್ಮೆಲ್ಲರ ನಡುವಿನಿಂದಲೇ ಎದ್ದು ನಿಂತು "ನಮಗೆ ದೇಶದಿಂದ ಸ್ವಾತಂತ್ರ್ಯ ಬೇಡ, ದೇಶದ ಒಳಗೆ ಸ್ವಾತಂತ್ರ್ಯ ಬೇಕು, ಗಡಿಯಲ್ಲಿ ಸಾಯುವ ಬಡಸೈನಿಕರಿಗೆ  ಕಣ್ಣೀರು ಹಾಕುವ ರಾಜಕಾರಣಿಗಳೇ.. ಹಳ್ಳಿಹಳ್ಳಿಯಲ್ಲಿ ರೈತರು ಸಾಲಕ್ಕೆ ಸಿಕ್ಕಿ ಸಾಯ್ತಿದ್ದಾರೆ.. ಅವರಲ್ಲಿ ಸಾಯುತ್ತಿರೋ ಸೈನಿಕನ ಮನೆಯವರೂ ಇದ್ದಾರೆ.. ಇವರತ್ತಲೂ ಚೂರು ನೋಡ್ರಪ್ಪ, ಇವರಿಗೋಸ್ಕರವೂ ಒಂದೆರಡು ಹನಿ ಕಣ್ಣೀರು ಹಾಕ್ರಪ್ಪ" ಅಂತ ದೊಡ್ಡಸಾಹೇಬನ ಕೊರಳಪಟ್ಟಿ ಹಿಡಿಯುತ್ತಾನಲ್ಲ..   ದೇಶಕ್ಕೆ ದೇಶವೇ ತನ್ನತ್ತ ತಿರುಗಿ ನಿಂತು ನೋಡುವಷ್ಟು ಬೆಳೆಯುತ್ತಾನಲ್ಲ.. ಇದನ್ನೇ The Power of Poverty ಅನ್ನೋದು. Power of Students ಅನ್ನೋದು, Power of Youngsters ಅನ್ನೋದು. Power of Resistance ಅನ್ನೋದು. ಇವೆಲ್ಲವನ್ನೂ ಒಂದೇಟಿಗೆ ಒಂದು ಸರ್ಕಲ್ಲಿನೊಳಗೆ ತಂದು ಇಟ್ಟ ಬಡವರ ಮನೆಯ ಹುಡುಗ ಕನ್ಹಯ್ಯ..ತನ್ನನ್ನು ದೇಶದ್ರೋಹದ ಕುಣಿಕೆಗೆ ಸಿಲುಕಿಸಿದ ಎಬಿವಿಪಿ ಹುಡುಗರ ಎದೆಯೊಳಗೂ ಮನುಷ್ಯತ್ವವನ್ನು ಬಿತ್ತಿನಲ್ಲ ಈ ಹುಡುಗ..  

ಬೇರೆ ಆಪ್ಷನ್ನೇ ಇಲ್ಲ ಕನ್ಹಯ್ಯ..
ವಿ ಲವ್ ಯೂ ಬ್ರೋ..

-ದಯಾನಂದ ಡಿ ಕೆ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...