Tuesday, March 22, 2016

ಬಂದೂಕು ಮತ್ತು ಹಸಿವು


ಒಟೊ ರೆನೆ ಕ್ಯಾಸ್ಟಿಲೊ
ಅನು : ಡಾ. ಎಚ್. ಎಸ್. ಅನಪಮಾ






ನಿನ್ನ ಬಳಿ ಬಂದೂಕಿದೆ
ನನ್ನಲ್ಲಿ ಹಸಿವೆ

ನಿನ್ನ ಬಂದೂಕು
ನಾ ಹಸಿದಿರುವೆನೆಲದೇ
ನಿನ್ನ ಬಳಿಯಿದೆ

ನಿನ್ನ ಬಳಿ ಬಂದೂಕಿದೆ
ಎಂದೇ ನಾನು ಹಸಿದಿದ್ದೇನೆ

ನೀನು ಇಟ್ಟುಕೊಳ್ಳಬಹುದು
ಒಂದು ಬಂದೂಕು

ಒಂದು ಸಾವಿರ ಬುಲೆಟುಗಳು,
ಮೇಲೆ ಇನ್ನೂ ಒಂದು ಸಾವಿರ
ಸುರಿಯಬಹುದು ಅವನೆಲ್ಲ,
ವೃಥಾ ನನ್ನ ಬಡಕಲು ದೇಹದ ಮೇಲೆ ಒಮ್ಮೆ ,
ಎರಡು ಸಲ, ಮೂರುಸಲ ಸಾವಿರ ಸಲ ,
ಏಳು ಸಾವಿರ ಸಲ ನನ್ನ ಕೊಲ್ಲಬಹುದು
ಆದರೆ ನೆನಪಿರಲಿ ,
ಕಾಲದ ದೀರ್ಘ ಓಟದಲ್ಲಿ
ನಾನು ನಿನಗಿಂತ ಶಸ್ತ್ರಸಜ್ಜಿತ.

ನಿನ್ನ ಬಳಿ ಬಂದೂಕಿರಬಹುದು
ಆದರೆ ನನ್ನಲ್ಲಿ
ಬರೀ ಹಸಿವೆ....


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...