Sunday, March 06, 2016

ಡಾ.ಸಿದ್ದನಗೌಡ ಪಾಟೀಲ ಕವಿತೆ.: ಕಂದ ಕನ್ಹಯ್ಯ










ಕರುಳ ಸಂಕಟವನ್ನು
ಸಾರಿ ಹೇಳಿದ್ದಕ್ಕೆ
ನೀನೊಬ್ಬ ದೇಶದ್ರೋಹಿ.

ಜಾತಿ  ಧರ್ಮ ಅಸ್ಪೃಷ್ಯತೆ
ಹಸಿವು ಬಡತನ ಗುಲಾಮಗಿರಿಗಳ
ಸಂಕಟವನ್ನು ಸಹಿಸಿಕೊಂಡು
ಕೋಟ್ಯಾಂತರ ಬಂಧುಗಳು
ನರಳುತ್ತಿದ್ದಾರೆ.
ಅವರ ನರಳಾಟ ಕೂಗಾಟವಾದಾಗ
ಅವರೂ ದೇಶದ್ರೋಹಿಗಳಾಗುತ್ತಾರೆ.
ಆಗ ದೇಶದ್ರೋಹಿಗಳ ಸುಂದರ ದೇಶ ಕಟ್ಟೋಣ.

ಕಂದ ಕನ್ಹಯ್ಯ
ಬ್ರಿಟಿಷರೂ ಅಂದು
ಹೀಗೇ 'ದೇಶದ್ರೋಹಿಗಳು'
ಅಂದಿದ್ದರು, ಇಂದು
ಅವರ ವಾರಸುದಾರರೂ ಹಾಗೇ.
ಅಂದು ಕೂಗಿದ ಘೋಷಣೆಗಳನ್ನು
ಇನ್ನೂ ಕೂಗುತ್ತಿರುವೆಯಲ್ಲ ಮಗೂ
ನಿನ್ನ ಕೂಗು ವ್ಯರ್ಥವಾಗಲಿಲ್ಲ.
ಅದಕ್ಕೆ ಪ್ರತಿಧ್ವನಿಸುವ ಅಗಾಧ
ಶಕ್ತಿ ಇದೆ.
ವಿಶ್ವಾಸ ದ್ರೋಹಿಗಳಿಂದ
ದೇಶದ್ರೋಹಿಯೆಂದು ಕರೆಯಿಸಿಕೊಳ್ಳಲು
ಹೆಮ್ಮೆಯಾಗುತ್ತಿದೆ.
ನಾನು ರೋಹಿತ್
ನಾನು ಕನ್ಹಯ್ಯ
ನಾನೂ ಅವರಂತೆಯೇ
ದೇಶದ್ರೋಹಿ.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...