Wednesday, March 02, 2016

ಒಂದು ಕವಿತೆ



ಒಂದು ಕಾಲದಲಿ
ಪಂಜಾಬಿನ ಪಂಚ ನದಿಗಳ ತುಂಬ
ರಕುತವೇ ಹರಿದಾಡಿದ ಕಥೆ
ಗಂವೆನ್ನುವ ಏಕಾಂತ ರಾತ್ರಿಗಳಲಿ
ತೆಕ್ಕೆಗಾನಿದ ಮಗಳ ಮುಂಗುರುಳ
ನೇವರಿಸುತ ನಾಲಿಗೆಗೆ ಬಂದಿತು
 

ಕಾಶ್ಮೀರದ ರುಚಿಕಟ್ಟಾದ
ಸೇಬು ಕಚ್ಚಿದಾಗ
ವಸಡ ತುಂಬ
ರಕ್ತ ವಸರುವ ಚಿತ್ರ...

ಸೈನಿಕರ ಬಂದೂಕಿನ ಶಿಶ್ನ
ಕಣ್ಣಿಲ್ಲದ ಕಾದಾಟಕೆ ನಿಂತು
ಗಡಿಭಾಗದ ಬಾಲೆಯರ ಯೋನಿ ರಕ್ತ
ನೆಲ ತೋಯಿಸಿದ ವಾಸ್ತವ...

 ಮಾತುಗಳಾದವು

ಅದೆಷ್ಟಿದ್ದವೊ ಇಂಥ ಕಥೆಗಳು
ಇಂಥವೇ ರಾತ್ರಿಗಳು..!

ಆಗಿನಿಂದಲೂ ನೋಡುತ್ತಲೇ ಇದ್ದೇನೆ
ಕಥೆ ಕೇಳಿದ ದಿನಗಳಿಂದ ಮಗಳು
ಚಾಕು ಚೂರಿ ಆಟಿಕೆಗಳ ಬಳಸುತ್ತಿಲ್ಲ..

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...