Saturday, March 19, 2016

ಅಹಾ ಭಾರತ್ ಮಾತಾ ಕಿ ಜೈ!






ಗೋವಿನ ಹೆಸರಲ್ಲಿ ಮನುಷ್ಯರನ್ನು ಕೊಲ್ಲಬೇಕು
ನಂತರ ಭಾರತ್ ಮಾತಾ ಕಿ ಜೈ ಹೇಳಬೇಕು


ಕುದುರೆಯ ಕಾಲನ್ನು ಮುರಿಯಬೇಕು
ನಂತರ ಭಾರತ್
ಮಾತಾ ಕಿ ಜೈ ಹೇಳಬೇಕು

ಮಾತೆಯ ಮುಖಕ್ಕೆ ಏಸಿಡ್ ಎರಚಬೇಕು
ನಂತರ ಭಾರತ್
ಮಾತಾ ಕಿ ಜೈ ಹೇಳಬೇಕು

ದಲಿತ ಮಾತೆಯರ ಬಟ್ಟೆಗಳನ್ನು ಬಿಚ್ಚಬೇಕು
ನಂತರ ಭಾರತ್
ಮಾತಾ ಕಿ ಜೈ ಹೇಳಬೇಕು

ಮಾoಸ ತಿoದವನನ್ನು ಹೊಡೆದು ಕೊಲ್ಲಬೇಕು
ನಂತರ ಭಾರತ್
ಮಾತಾ ಕಿ ಜೈ ಹೇಳಬೇಕು

ಚುನಾವಣೆಗೆ ನಿoತ ಮಾತೆಯ ಮಗಳನ್ನು
ಅತ್ಯಾಚಾರ ಮಾಡಬೇಕು
ನಂತರ ಭಾರತ್
ಮಾತಾ ಕಿ ಜೈ ಹೇಳಬೇಕು

ಮುಗ್ದ ದಲಿತ ಕoದಮ್ಮಗಳನ್ನು ಜೀವoತ ಸುಡಬೇಕು
ನಂತರ ಭಾರತ್
ಮಾತಾ ಕಿ ಜೈ ಹೇಳಬೇಕು
 

 ಅಯ್ಯೊ ಇದೆಂಥ ದೇಶವಿದು?
ಮೊದಲು ನಾವು ಮನುಷ್ಯರಾಗಬೇಕು 
ನಂತರ ಭಾರತ್ ಮಾತಾ ಕಿ ಜೈ ಹೇಳಬೇಕು

ಮೊದಲು ನಾವು ಧರ್ಮ ಗ್ರoಥಗಳನ್ನು ಕಲಿಯಬೇಕು 

ನಂತರ ಧರ್ಮಗಳನ್ನು ಅನುಸರಿಸಬೇಕು

ಮೊದಲು ನಾವು ಮನುಷ್ಯರನ್ನು ಪ್ರೀತಿಸಲು ಕಲಿಯಬೇಕು 

ನಂತರ ಧರ್ಮಗಳನ್ನು ಪ್ರೀತಿಸಬೇಕು

ಮೊದಲು ನಮ್ಮ ತಾಯಿಯರನ್ನು ಗೌರವಿಸಲು ಕಲಿಯಬೇಕು 

ನಂತರ ಭಾರತ್ ಮಾತಾ ಕಿ ಜೈ ಹೇಳಬೇಕು

ಮೊದಲು ನಾವು ಮಾನವರಾಗಬೇಕು ನಂತರ
ಮಾನವ ಧರ್ಮಕ್ಕೆ ಸೇರಬೇಕು ಇತರರನ್ನು ಸೇರಿಸಬೇಕು

ಬನ್ನಿ ಕೈ ಜೋಡಿಸಿ ಧರ್ಮ ಬೇಧವನ್ನು ಬದಿಗಿಡೋಣ
ಗಾoಧಿ ತಾತನ ಕನಸಿನ ನವ ಭಾರತವನ್ನು ಕಟ್ಟೋಣ !!


-ಶಮೀಮ್ ಫಾತಿಮಾ

(ಮನುಷ್ಯರಿಗೆ ಮಾತ್ರ ಈ ಬರಹ ಯಾರನ್ನು ದ್ವೇಷಿಸಲು ಅಥವಾ ಯಾರನ್ನು ಕುಷಿ ಪಡಿಸಲು ಅಲ್ಲ ಇದು ಎಲ್ಲಾ ಧರ್ಮದವರಿಗೂ ಸೀಮಿತ )

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...