Friday, March 04, 2016

ಕು.ಸ.ಮಧುಸೂದನ್ ಕವಿತೆ : ಚಕ್ರವರ್ತಿಯ ಮೌನ!


ಚೆಂದದ ಬಿಳಿಬಿಳಿ ಬಟ್ಟೆಯಲಿ
ಅಷ್ಟೆತ್ತರದಸಿಂಹಾಸನದಲ್ಲಿ
ಕೂತ ಮೌನಿ ಚಕ್ರವರ್ತಿಯ
ಮುಖದಲ್ಲಿ ಮಾಸದ ಮಂದಹಾಸ!
ಮಾತಾಡದ ಪ್ರಭುವಿನ ಭಟ್ಟಂಗಿಗಳು
ರಾಜಮುದ್ರೆಯ ಹಿಡಿದು ಹೆದರಿಸುತ್ತಿದ್ದಾರೆ!
ರಾಜಾಜ್ಞೆಯ ಪಾಲಿಸದವರ ತಲೆದಂಡ ಶತಸಿದ್ದ!
ಜನರೀಗ ಭಯಬೀತರಾಗಿದ್ದಾರೆ:
ತಮಗೆ ಬೇಕಾದ್ದನ್ನು
ಉಣ್ಣಲು
ಉಡಲು
ನುಡಿಯಲು
ನಡೆಯಲು!
ಮತಾಂಧಪಡೆಯ ಕಾಲಾಳುಗಳಿಗೀಗ  ಹೊಸ ಉನ್ಮಾದ
ದಣಿಯ
ಮೆಚ್ಚಿಸುವ ಸಲುವಾಗಿ ಸಾರುತ್ತಿದ್ದಾರೆ
ಕವಿತೆ ಬರೆದವನಿಗದರರ್ಥವ ತಿಳಿಸಲು ಆದೇಶವಾಗಿದೆ
ಇಲ್ಲವೇ ಶಿರಚ್ಛೇದನಕ್ಕೆ ಕತ್ತಿ ಮಸೆಯಲಾಗಿದೆ.
ಇದೆಲ್ಲದರ ನಡುವೆಯೂ
ಚಕ್ರವರ್ತಿಯ ಮೌನಕ್ಕೆ
ನೂರು ಅರ್ಥಗಳಿವೆ!
ಅದನ್ನು ಅರ್ಥಮಾಡಿಕೊಳ್ಳ ಹೊರಟವರಿಗೆ
ಜೈಲುಗಳು ಕದ ತೆರೆದು ಕುಂತಿವೆ!No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...