Monday, April 25, 2016

ನಮ್ಮ ಪ್ರಕಾಶನದ ಪ್ರಕಟಣೆಗಳು


*ಎಪ್ರಿಲ್ 23 ವಿಶ್ವ ಪುಸ್ತಕ ದಿನಾಚರಣೆ ಆಚರಿಸಿಯಾಗಿದೆ. ಅನೇಕರು ನಮ್ಮ ಪ್ರಕಾಶನದ ಪುಸ್ತಕಗಳ ಪಟ್ಟಿ ಕೇಳುತ್ತಿದ್ದರು. ಆಸಕ್ತರು ಗಮನಿಸಿ. ಪುಸ್ತಕ ಬೇಕೆನಿಸಿದವರು ಸಂಪರ್ಕಿಸಿ೧. *ಬಾಯಾರಿಕೆ: (ಕಾವ್ಯ) ಡಾ. ವಿನಯಾ ೩೫
(ಕರ್ನಾಟಕ ಸಾಹಿತ್ಯ ಅಕಾಡೆಮಿ, ಪು.ತಿ.ನ ಕಾವ್ಯ ಪ್ರಶಸ್ತಿ ಸೇರಿ ೬ ಪ್ರಶಸ್ತಿ ಪುರಸ್ಕೃತ ಕೃತಿ)
೨. ಬಿಳಿ ಮುಗಿಲ ಕೆಳಗೆ (ಕಾವ್ಯ) ಸಿ.ಜಿ. ಹಿರೇಮಠ ೩೦
೩. ತುಳುಕು: (ಕಾವ್ಯ) ಎಂ.ಡಿ. ಒಕ್ಕುಂದ ೩೫
೪. ಬಂದೂಕಿನ ಮನುಷ್ಯ (ಕಾವ್ಯ) ಡಾ. ಬಸವರಾಜ ಕುಂಬಾರ ೩೫
೫. *ಹಕ್ಕಿಗೂಡು: (ಕಾವ್ಯ) ಪೃಥ್ವಿ  ೨೦
(ಗಂಗಮ್ಮ ಬೊಮ್ಮಾಯಿ ಅರಳು ಪ್ರತಿಭೆ ಪುರಸ್ಕೃತ ಕೃತಿ)
೬. *ತತ್ರಾಣಿ: (ಕಾವ್ಯ) ಬಸವರಾಜ ಹೂಗಾರ ೩೦
(ಕರ್ನಾಟಕ ಸಾಹಿv ಅಕಾಡೆಮಿ, ಕಡೆಂಗೋಡ್ಲು, ಕಸಾಪ ದತ್ತಿ ನಿಧಿ ಪುರಸ್ಕೃತ)
೭. *ಕನ್ನಡ: ರಚನಾತ್ಮಕ ಮತ್ತು ಸಮಾಜೋಭಾಷಿಕ ಅಧ್ಯಯನ: ಡಾ. ಬಿ.ಎಸ್. ಗೊರವರ ೮೦
೮. *ಉಮರ ಖಯ್ಯಾಮನ ಪದ್ಯಗಳು: ಡಾ. ಎನ್. ಜಗದೀಶ ಕೊಪ್ಪ ೫೦
೯. *ಗೊಂಬೆಯಾಟ: (ಕಾವ್ಯ) ಶಂಕರಗೌಡ ಸಾತ್ಮಾರ ೩೫
೧೦. *ಬೆತ್ತಲೆ ರಸ್ತೆಯ ಕನಸಿನ ದೀಪ: (ಕೈಫಿ ಆಜ್ಮಿ ಕವಿತೆಗಳು) ಅನು: ವಿಭಾ ೪೦
೧೧. *ಮುಂಡರಗಿ: ಬ್ರಿಟಿಷ್ ವಿರೋಧಿ ಹೋರಾಟ: ಹು. ಬಾ. ವಡ್ಡಟ್ಟಿ ೩೦
೧೨. *ಜಂಗಮ ಫಕೀರನ ಜೋಳಿಗೆ: (ಕಾವ್ಯ) ಆರೀಫ್ ರಾಜಾ ೪೦
(ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ, ಕ.ಸಾ.ಪ. ಅರಳು ಪ್ರಶಸ್ತಿ,
ಗುಲಬರ್ಗಾ ವಿ.ವಿ. ಪ್ರಶಸ್ತಿ ಪುರಸ್ಕೃತ ಕೃತಿ)
೧೩. ದಲಿತ ತತ್ವ: ಕಾಂಚ ಐಲಯ್ಯ: ಅನು: ಸುಜ್ಞಾನಮೂರ್ತಿ ೬೦
೧೪. ಜಾತಿ ವಿನಾಶ: ಕಾಂಚ ಐಲಯ್ಯ: ಅನು: ಸುಜ್ಞಾನಮೂರ್ತಿ ೫೦
೧೫. *ನಮಗೆ ಗೋಡೆಗಳಿಲ್ಲ ಅನು: ಸುಜ್ಞಾನಮೂರ್ತಿ ೬೦
೧೬. ಬಿ.ಟಿ. ಬದನೆ: ಬದುಕು ಬರಿದಾಗಿಸುವ ಕುಲಾಂತರಿ! ಸಂ. ಬಸೂ ೫೦
೧೭. *ಕಡಲ ತಡಿಯ ಮನೆ: (ಕಥೆ) ಡಾ. ಸಬಿಹಾ ಭೂಮಿಗೌಡ ೫೦
೧೮. *ಮುಗ್ಗಲು ಮನಸಿನ ಪದರು: (ಕಥೆ) ಎಸ್.ಬಿ. ಜೋಗುರ ೫೦
೧೯. ಮಾಯಕಾರತಿ: (ಕಥೆ) ಶರಣಪ್ಪ ವಡಿಗೇರಿ ೫೦
೨೦. *ಹರಿವ ನೀರೊಳಗಿನ ಉರಿ (ಅನುವಾದಿತ ಕಾವ್ಯ) ವಿಭಾ ೬೦
೨೧. ಕಾಣದಾಯಿತೋ ಊರುಕೇರಿ (ಕಥೆ) ಬಿ. ಶ್ರೀನಿವಾಸ ೬೦
೨೨. ಮನುಸ್ಮೃತಿ ಮತ್ತು ದಲಿತರು: ಜ ಹೊ ನಾ. ೫೦
೨೩. *ಉರಿಯ ಪೇಟೆ: ಡಾ.ಕಾಂ.ವೆಂ. ಶ್ರೀನಿವಾಸಮೂರ್ತಿ ೬೦
೨೪. *ಕೋಮುವಾದಿ ಕಾರ‍್ಯಾಚರಣೆ*: ದಲಿತ ಪ್ರತಿಸ್ಪಂದನೆ ಸಂ: ಆನಂದ ತೇಲ್ತುಂಬ್ಡೆ
ಅನು, ಸಂಯೋಜನೆ: ಬಿ.ಗಂಗಾಧರಮೂರ್ತಿ, ಶಿವಸುಂದರ ೧೨೦
೨೫. * ಗೀತಾ ನಾಗಭೂಷಣ: ಮಹಿಳಾ ಮಾರ್ಗ, ಸಂ. ಕೆ. ಷರೀಫಾ, ಬಸೂ ೮೦
೨೬. ಕೋರೆಗಾಂವ ಕದನ: ದಲಿತ ದಿಗ್ವಿಜಯ
ಸುಧಾಕರ ಖಾಂಬೆ ಅನು: ಡಾ. ಸಿದ್ರಾಮ ಕಾರಣಿಕ ೫೦
೨೭. *ಗೋಹತ್ಯೆ ನಿಷೇಧ ಸುತ್ತಲಿನ ರಾಜಕೀಯ: ಬಿ. ಗಂಗಾಧರ ಮೂರ್ತಿ ೩೦
೨೮. *ಯಾರೂ ನೆಡದ ಮರ: (ಕಾವ್ಯ) ಗಣೇಶ ಹೊಸ್ಮನೆ ೪೦
(ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಪ್ರಶಸ್ತಿ ಪುರಸ್ಕೃತ ಕೃತಿ)
೨೯. ಜೀವ ಮಿಡಿತದ ಸದ್ದು: ವಿಭಾ ೮೦
(ಡಿ.ಎಸ್. ಕರ್ಕಿ, ಕಸಾಪ ಮಲ್ಲಿಕಾ ದತ್ತಿನಿಧಿ, ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ
ಹೆಗ್ಗಡೆ, ಹರಿಹರ ಶ್ರೀ ಪ್ರಶಸ್ತಿ ಪುರಸ್ಕೃತ ಕೃತಿ)
೩೦. *ಮನುಷ್ಯರನ್ನು ಹುಡುಕುತ್ತಾ: ಗಾಯಕವಾಡ (ಕಥೆ) ಅನು: ವಿಜಯ ಕಾಂಬಳೆ ೫೦
೩೧. *ತೆರೆದರಷ್ಟೆ ಬಾಗಿಲು: (ಕಾವ್ಯ) ಡಿ.ಎಸ್. ರಾಮಸ್ವಾಮಿ ೪೦
(೨೦೧೦ರ ವಿಭಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಕೃತಿ)
೩೨. *ದಲಿತತ್ವ: ಅಕ್ಷರವಾಗದ ಆತ್ಮಕಥಾನಕ: ಡಾ. ಕಾಂ.ವೆಂ.ಶ್ರೀನಿವಾಸಮೂರ್ತಿ ೭೦
(ಕಸಾಪದ ಎಲ್. ಬಸವರಾಜು ದತ್ತಿನಿಧಿ, ದಸಾಪ ಪ್ರಶಸ್ತಿ ಪುರಸ್ಕೃತ)
೩೩. *ಸಾಹಿತ್ಯ ಸಂಗತಿ: ಡಾ. ಪ್ರಕಾಶ ಗ. ಖಾಡೆ ೫೦
೩೪. *ಅಸಮಾನ ಭಾರತ: ಸಂ. ಡಾ. ಅನುಪಮಾ, ಡಾ. ಕೃಷ್ಣ, ಐಜೂರ್ ೧೫೦
೩೫. ಅಮೆರಿಕಾ ಆ ಮುಖ: ಡಾ. ಸಿ.ಎಸ್. ದ್ವಾರಕಾನಾಥ್ ೮೦
(ದಸಾಪ ಪ್ರಶಸ್ತಿ ಪುರಸ್ಕೃತ)
೩೬. ಇಲ್ಲಿ ಯಾರೂ ಮುಖ್ಯರಲ್ಲ: ಡಾ. ರಹಮತ್ ತರೀಕೆರೆ ೧೬೦
೩೭. ಖಲೀಲ್ ಗಿಬ್ರಾನ್ ಪ್ರೇಮಪತ್ರಗಳು: ಕನ್ನಡಕ್ಕೆ: ಕಸ್ತೂರಿ ಬಾಯರಿ ೧೨೦
೩೮. ರಾಮದುರ್ಗ ಸಂಸ್ಥಾನ: ವಿಮೋಚನಾ ಹೋರಾಟ ಲೇ: ಡಾ. ಎ.ಬಿ. ವಗ್ಗರ,
ಜರಕುಂಟೆ ೮೦
೩೯. ದೇವರ ರಾಜಕೀಯ ತತ್ವ: ಬ್ರಾಹ್ಮಣ್ಯಕ್ಕೆ ಬುದ್ಧನ ತಿರುಗುಬಾಣ
ಕಂಚ ಐಲಯ್ಯ, ಅನು: ಜಾಜಿ ದೇವೇಂದ್ರಪ್ಪ ೧೮೦
೪೦. ಹಿಂಸಾಕಾರಣ: ಡಾ. ಐ.ಜೆ. ಮ್ಯಾಗೇರಿ ೬೦
೪೧. ದೇವದಾಸಿ ಮತ್ತು ಬೆತ್ತಲೆಸೇವೆ: ಉತ್ತಮ ಕಾಂಬಳೆ, ಅನು: ಡಾ. ಸಿದ್ರಾಮ ಕಾರಣಿಕ ೧೦೦
೪೨. ಜ್ಯೋತಿಬಾ ಫುಲೆ ಮತ್ತು ರೈತ ಚಳುವಳಿ: ಡಾ. ಅಶೋಕ ಚೌಸಾಳಕರ, ಅನು: ಡಾ. ಜೆ. ಪಿ. ದೊಡಮನಿ ೬೦
೪೩. ನಾಗವಂಶ: ದಲಿತ ಅಸ್ಮಿತೆ - ಶ್ರೀನಿವಾಸ ಭಾಲೇರಾವ್, ಅನು: ಡಾ. ಸಿದ್ರಾಮ ಕಾರಣಿಕ ೪೦
೪೪. ಮಹಿಳಾ ಮೀಸಲಾತಿ ಮತ್ತು ಲಿಂಗರಾಜಕಾರಣ: ಡಾ. ಎನ್. ಗಾಯತ್ರಿ ೮೦
೪೫. *ನೂರು ಬಣ್ಣದ ಕಣ್ಣು: (ಕಾವ್ಯ) ವಿಜಯಕಾಂತ ಪಾಟೀಲ ೫೦
೪೬. ಕಷ್ಟಕುಲದ ಕಥೆ: ದಲಿತರ ಸಬಲೀಕರಣ ಅಧ್ಯಯನ: ಡಾ.ಟಿ.ಆರ್.ಚಂದ್ರಶೇಖರ್ ೮೦
೪೭. ಬೇಯುವ ಉಸಿರಿನ ಗುರುತು (ಕಥೆ) ಎ.ಆರ್. ಪಂಪಣ್ಣ ೯೦
೪೮. ಚೆ: ಕ್ರಾಂತಿಯ ಸಹಜೀವನ - ಫಿಡಲ್ ಕ್ಯಾಸ್ಟ್ರೋ ನೆನಪುಗಳಿಂದ ಅನು: ನಾ. ದಿವಾಕರ ೧೬೦
೪೯.ಲೋಹಿಯಾ: ವ್ಯಕ್ತಿ ಮತ್ತು ವಿಚಾರ ಒಂದು ವಿಭಿನ್ನ ವಿಮರ್ಶೆ: ಬಾಪು ಹೆದ್ದೂರಶೆಟ್ಟಿ ೨೦೦
೫೦. ಭಾರತದ ಬೌದ್ಧಿಕ ದಾರಿದ್ರ್ಯ: ವಿ. ಆರ್. ನಾರ‍್ಲಾ ಅನು: ಪ್ರೊ. ಬಿ. ಗಂಗಾಧರಮೂರ್ತಿ ೬೦
೫೧. ದಲಿತರು: ಭೂತ-ಭವಿಷ್ಯ: ಡಾ. ಆನಂದ ತೇಲ್ತುಂಬ್ಡೆ ಸಂ: ಬಸೂ, ಅನುಪಮಾ ೧೫೦
೫೨. ಜಾತಿ ವ್ಯವಸ್ಥೆ: ಸಮಸ್ಯೆ-ಸವಾಲುಗಳು: ಬಾಬು ಜಗಜೀವನ್‌ರಾಮ್ ಅನು: ರಾಹು ೧೨೦
೫೩. ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ ಮೂಲ: ಕನಕ ಮುಖರ್ಜಿ, ಅನು: ರಾಹು ೧೫೦
೫೪. ಜಾಗತೀಕರಣ ಮತ್ತು ದಲಿತರು: ಡಾ. ಆನಂದ ತೇಲ್ತುಂಬ್ಡೆ ಅನು: ನಾ. ದಿವಾಕರ ೬೦
೫೫. ಹರಿದ ಪತ್ರ: (ಕಥೆ) ಅನಸೂಯಾ ಕಾಂಬಳೆ ೯೦
೫೬. ಇಬ್ಬನಿಯ ಕಾವು: ಬಾನು ಮುಷ್ತಾಕ್ ೯೦
೫೭. ಅಂಬೇಡ್ಕರ್ ಮತ್ತು ಮುಸ್ಲಿಮರು: ಡಾ. ಆನಂದ ತೇಲ್ತುಂಬ್ಡೆ ಅನು: ಪ್ರೊ. ಬಿ. ಗಂಗಾಧರಮೂರ್ತಿ ೮೦
೫೮. ಮಹಿಳೆ: ಇಂದಿನ ಸವಾಲುಗಳು: ಡಾ. ಸಬಿಹಾ ಭೂಮಿಗೌಡ ೧೨೦
೫೯. ಪುರುಷ ಅಹಂಕಾರಕ್ಕೆ ಸವಾಲು: ತಾರಾಬಾಯಿ ಶಿಂಧೆ, ಅನು: ಸುಜ್ಞಾನಮೂರ್ತಿ ೮೦
೬೦. ನವಿಲುಗರಿ: ಸಂ. ಡಾ. ಸಬಿಹಾ ಭೂಮಿಗೌಡ ೫೦
೬೧. ನನ್ನ ಪ್ರೀತಿಯ ಅಪ್ಪ: ಶಬಾನಾ ಅಜ್ಮಿ ಅನು: ರಾಹು, ವಿಭಾ ೪೦
೬೨. ಅಸಮಾನತೆಯ ಜಾಗತೀಕರಣ: ಪಿ.ಸಾಯಿನಾಥ ಅನು: ಸಿಂಚನ ತಂಡ ೧೫
೬೩. ಭಗವದ್ಗೀತೆ ವರ್ಸಸ್ ಬೌದ್ಧತತ್ವ: ಡಾ. ಬಿ. ಆರ್. ಅಂಬೇಡ್ಕರ್ ೩೦
೬೪. ಭಗವದ್ಗೀತೆ: ಸಾಮಾಜಿಕ, ಆರ್ಥಿಕ ಸಂಗತಿಗಳ ಒಳನೋಟ: ಡಿ. ಡಿ. ಕೋಸಾಂಬಿ,
ಅನು: ಟಿ. ಎಸ್. ವೇಣುಗೋಪಾಲ, ಶೈಲಜಾ ೧೫
೬೫. *ಬಾಡು ತಿಂದ ಬ್ರಾಹ್ಮಣರು: ಡಾ. ಬಿ. ಆರ್. ಅಂಬೇಡ್ಕರ್
ಅನು: ಮಹಾದೇವ ಶಂಕನಪುರ ೦೫
೬೬. ಹರಿದು ಕೂಡುವ ಕಡಲು: ಗಜಲ್‌ಗಳು - ಗಣೇಶ ಹೊಸ್ಮನೆ ೬೦
೬೭. ಕೋಮುಹಿಂಸಾ ನಿಯಂತ್ರಣಾ ಮಸೂದೆ ೨೦೧೧: ಫಕೀರ ಮುಹಮ್ಮದ್ ಕಟ್ಪಾಡಿ ೪೦
೬೮. ಭೂಮಿ ತಿರುಗುವ ಶಬ್ಧ: (ಕಾವ್ಯ) ಚನ್ನಪ್ಪ ಅಂಗಡಿ ೬೦
(ವಿಭಾ ಸಾಹಿತ್ಯ ಪ್ರಶಸ್ತಿ - ೨೦೧೧ ಪುರಸ್ಕೃತ ಕೃತಿ)
೬೯. ವಿದ್ಯುತ್‌ಕ್ಷೇತ್ರದ ರಾಜಕಾರಣ: ಅರುಂಧತಿ ರಾಯ್ ಅನು: ಪ್ರೊ. ಬಿ. ಗಂಗಾಧರಮೂರ್ ತಿ ೩೦
೭೦. ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ: ಡಾ. ಎಚ್. ಎಸ್. ಅನುಪಮಾ ೧೨೦
(ಕನ್ನಡ ಸಾಹಿತ್ಯ ಪರಿಷತ್ತಿನ ಲಕ್ಷ್ಮೀದೇವಿ ಶಾಂತರಸ ಹೆಂಬೆರಾಳ ಪ್ರಶಸ್ತಿ ಪುರಸ್ಕೃತ ಕೃತಿ)
೭೧. ಭೀಮಯಾನ: ಡಾ. ಬಿ.ಆರ್. ಅಂಬೇಡ್ಕರ್ ಚಿಂತನೆಗಳು: ಡಾ. ಎಚ್. ಎಸ್. ಅನುಪಮಾ, ಬಸೂ ೭೦
೭೨. ಉರಿವ ಒಲೆಯ ಮುಂದೆ: (ಕಾವ್ಯ) ಬಿ. ಶ್ರೀನಿವಾಸ ೬೦
೭೩. ಉರಿಯ ಪದವು (ಕಾವ್ಯ) ಮರಾಠಿ: ನಾಮದೇವ್ ಢಸಾಳ್ ಅನು: ಡಾ. ಎಚ್. ಎಸ್. ಅನುಪಮಾ ೧೫೦
(ಶಿವಮೊಗ್ಗದ ಕರ್ನಾಟಕ ಸಂಘ, ದಸಾಪ ಪ್ರಶಸ್ತಿ ಪುರಸ್ಕೃತ ಕೃತಿ)
೭೪. ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ: ಸಂ: ಬಸೂ, ಎಚ್. ಎಸ್. ಅನುಪಮಾ ೧೦೦
೭೫. ಉರಿವ ಏಕಾಂತ ದೀಪ (ಕಾವ್ಯ) ಲಕ್ಕೂರು ಸಿ. ಆನಂದ
(ವಿಭಾ ಸಾಹಿತ್ಯ ಪ್ರಶಸ್ತಿ - ೨೦೧೨ ಪುರಸ್ಕೃತ ಕೃತಿ) ೬೦
೭೬. ಹಾದಿ ಜಂಗಮ (ಕಾವ್ಯ) - ಬಸವರಾಜ ಹೂಗಾರ, ೬೦
(ಕಸಾಪ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ಕೃತಿ)
೭೭. ಬೀದಿ ಬೆಳಕಿನ ಕಂದೀಲು (ಲೇಖನಗಳು) - ಬಸವರಾಜ ಹೂಗಾರ, ೬೦
೭೮. ಬಾಡೂಟದ ಜೊತೆಗೆ ಗಾಂಧಿ ಜಯಂತಿ! ಮತ್ತು ಇತರ ಲೇಖನಗಳು - ಬಿ. ಎಂ. ಬಶೀರ್ ೧೨೦.
೭೯. ಮರಗುದುರೆ - ನಗ್ನಮುನಿ ಮಾತು-ಕವಿತೆ ಅನು: ಡಾ. ಎಚ್. ಎಸ್. ಅನುಪಮಾ, ೪೦.
೮೦. ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು: ಡಾ. ಆನಂದ ತೇಲ್ತುಂಬ್ಡೆ
ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ, ೬೦
೮೧. ಅಭಿವ್ಯಕ್ತಿ ಸ್ವಾತಂತ್ರ್ಯ: ವಿವಿಧ ಆಯಾಮಗಳು - ಸಂ: ಬಸೂ, ಎಚ್.ಎಸ್. ಅನುಪಮಾ   ೧೨೦.
೮೨. ನನ್ನ ಶಬ್ದ ನಿನ್ನಲಿ ಬಂದು (ಕಾವ್ಯ) - ಕೆ.ಪಿ. ಮೃತ್ಯುಂಜಯ ೧೦೦
(ವಿಭಾ ಸಾಹಿತ್ಯ ಪ್ರಶಸ್ತಿ - ೨೦೧೩ ಪುರಸ್ಕೃತ ಕೃತಿ)
೮೩. ನೆನಪಿನ ಹಕ್ಕಿ (ದಲಿತ ಆತ್ಮಕತೆ) ಮರಾಠಿ ಮೂಲ: ಪ್ರ. ಈ. ಸೋನಕಾಂಬಳೆ ಅನು: ಚಂದ್ರಕಾಂತ ಪೋಕಳೆ ೧೪೦
೮೪. ಹೆಣ್ಣು: ಸಂಕರ ಕಾಲದ ಆತ್ಮಪ್ರಜ್ಞೆ - ಡಾ. ಎಚ್. ಎಸ್. ಅನುಪಮಾ, ೧೩೦.
(ರಮಾಬಾಯಿ ಅಂಬೇಡ್ಕರ್ ಪುಸ್ತಕ ಬಹುಮಾನ ಪುರಸ್ಕೃತ ಕೃತಿ)
೮೫. ಅಂಡಮಾನ್: ಕಂಡ ಹಾಗೆ - (ಪ್ರವಾಸ) ಡಾ. ಎಚ್. ಎಸ್. ಅನುಪಮಾ, ೮೦. 
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ
೮೬. ಹುಲಿಯ ನೆರಳಿನೊಳಗೆ ಅಂಬೇಡ್ಕರ್‌ವಾದಿಯ ಆತ್ಮಕಥೆ - ನಾಮದೇವ ನಿಮ್ಗಾಡೆ ೯೦
೮೭ ಸೂಫಿ ಕಥಾಲೋಕ - ಅನು: ಪ್ರೊ. ಬಿ ಗಂಗಾಧರಮೂರ್ತಿ ೨೫೦
೮೮. ಮೌಢ್ಯ ವಿರೋಧಿ ಹೋರಾಟಗಾರ ಎಚ್ಚೆನ್: ಡಾ. ಎಚ್. ನರಸಿಂಹಯ್ಯನವರ ಸಂಕ್ಷಿಪ್ತ ಜೀವನ ಚಿತ್ರಣ - ಪ್ರೊ. ಬಿ.ಗಂಗಾಧರಮೂರ್ತಿ ೯೦
೮೯. ಮೋಟಾರ್ ಸೈಕಲ್ ಡೈರಿ: ಪ್ರವಾಸಿಯ ಟಿಪ್ಪಣಿಗಳು. ಚೆ. ಅನು: ಡಾ ಎಚ್ ಎಸ್ ಅನುಪಮಾ ೧೫೦
೯೦ ಒಳ ಮೀಸಲಾತಿ: ಮುಟ್ಟಲಾರದವನ ಒಡಲಾಳ - ಮರಡ್ಡಿ, ವೆಂಕಟೇಶ ಬೇವಿನಬೆಂಚಿ, ಗುಂಜಳ್ಳಿ, ರಮೇಶ ಅರೋಲಿ ೧೦೦
೯೧. ಛತ್ರಪತಿ ಶಾಹೂ: ಜನರ ನೋವಿಗೆ ಮಿಡಿದ ಪ್ರಾಣಮಿತ್ರ - ಡಾ ಎಚ್. ಎಸ್. ಅನುಪಮಾ ೧೧೦
೯೨. ಮುಳ್ಳ ಮೇಲಿನ ಸೆರಗು-ಅತ್ಯಾಚಾರ ಮತ್ತು ಕಾನೂನು: ಇಣುಕು ನೋಟ: ಡಾ ಎಚ್. ಎಸ್. ಅನುಪಮಾ ೬೦
೯೩ ದಲಿತ ಸಮಾಜ: ಇಂದಿನ ಸವಾಲುಗಳು - ಜಿಯಾಲಾಲ ಆರ್ಯ, ಅನು: ಆರ್. ಪಿ. ಹೆಗಡೆ ೮೦
೯೪ ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ: ಓಂ ಪ್ರಕಾಶ ವಾಲ್ಮೀಕಿ, ಅನು: ಆರ್. ಪಿ. ಹೆಗಡೆ ೧೦೦
೯೫ ಆರೆಸ್ಸೆಸ್ ಮತ್ತು ಬಿಜೆಪಿ: ಒಂದೇ ಹಾದಿ:ಭಿನ್ನ ಶ್ರಮ - ಎ. ಜಿ. ನೂರಾನಿ, ಕನ್ನಡಕ್ಕೆ: ಸುರೇಶ ಭಟ್, ಬಾಕ್ರಬೈಲು. ೧೫೦
೯೬ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ: ಡಾ ಎಚ್. ಎಸ್. ಅನುಪಮಾ  ೬೦
೯೭ ಪುರೋಹಿತಶಾಹಿ ಮತ್ತು ಗುಲಾಮಗಿರಿ: ಜ್ಯೋತಿಬಾ ಫುಲೆ ಅನು: ಬಿ ಶ್ರೀನಿವಾಸ  ೧೦೦
೯೮ ಸಾಕಾರದತ್ತ ಸಮಾನತೆಯ ಕನಸು: ಸಂ: ಪ್ರೀತಿ ಶುಭಚಂದ್ರ ಮತ್ತು ಎಂ. ಎನ್. ಸುಮನಾ, ೧೨೦
೯೯ ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು-ರಿಚರ್ಡ್ ಎಂ. ಈಟನ್ ಅನು: ಸುರೇಶ ಭಟ್, ಬಾಕ್ರಬೈಲ್  ೬೦
೧೦೦ ಭಗತ್‌ಸಿಂಗ್ ಜೈಲಿನ ಡೈರಿ ಸಂ. ಚಮನ್‌ಲಾಲ ಅನು: ಡಾ. ಎಚ್. ಎಸ್. ಅನುಪಮಾ  ೧೭೦
೧೦೧ ಕತ್ತೆ ಪುರಾಣ: (ನಾಟಕ) ಬ್ರಿಜೇಶ್ ಶರ್ಮಾ ಮತ್ತು ಕಲಾವಿದರ ತಂಡ ಅನು: ಪ್ರೊ. ಬಿ. ಗಂಗಾಧರಮೂರ್ತಿ ೪೦
೧೦೨ ಚಿತ್ತ ಭಿತ್ತಿ_(ಕವನ) ರೂಪಶ್ರೀ ಕಲ್ಲಿಗನೂರ  ೯೦
(೨೦೧೪ ರ ವಿಭಾ ಸಾಹಿತ್ಯ ಪ್ರಶಸ್ತಿ - ಪುರಸ್ಕೃತ ಕೃತಿ)
೧೦೩ ಮನು v/s ಅಂಬೇಡ್ಮರ್: ಜಿ. ಕೆ. ಗೋವಿಂದರಾವ್  ೩೦
೧೦೪ ವೀಸಾದ ನಿರೀಕ್ಷೆಯಲ್ಲಿ ನೆನಪುಗಳು - ಡಾ ಬಿ.ಆರ್.ಅಂಬೇಡ್ಕರ್, ಅನು : ಸದಾಶಿವ ಮರ್ಜಿ  ೯೦
೧೦೫ ಡಾ ಬಿ ಆರ್ ಅಂಬೇಡ್ಕರ್ -ವರ್ತಮಾನದೊಂದಿಗೆ ಮುಖಾಮುಖಿ ಸಂ ಬಿ ಯು ಸುಮಾ ೧೫೦
೧೦೬ ಸಂತೆಯೊಳಗೊಂದು ಮನೆ : ಬಿ ಯು ಸುಮಾ  ೧೪೦
೧೦೭ ಬಸವಣ್ಣ ಮತ್ತು ಅಂಬೇಡ್ಕರ್‌ಹಾಗೂ ಇತರ ಲೇಖನಗಳು: ಡಾ ರಂಜಾನ್ ದರ್ಗಾ ೧೩೦
೧೦೮ ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ : ಶೂದ್ರ ಶ್ರೀನಿವಾಸ ೬೦
೧೦೯ ಯು. ಆರ್. ಎಂಬ ನೀವು - ಒಂದು ನೋಟ : ಶೂದ್ರ ಶ್ರೀನಿವಾಸ೮೦
೧೧೦ ಅವಳ ನಡೆದಂತೆ- ಗಜಲ್‌ಗಳು : ಶೂದ್ರ ಶ್ರೀನಿವಾಸ ₹  ೫೦
೧೧೧ ಕಳಸಾ-ಬಂಡೂರಿ: ನೀರಿಗಾಗಿ ಹಾಹಾಕಾರ ಮತ್ತು ನೀಚ ರಾಜಕಾರಣ : ಸಿರಿಮನೆ ನಾಗರಾಜ್ ೨೫
೧೧೨ ಮೊಳಕೆಯೊಡೆಯದ ಬೀಜ(ಕಾವ್ಯ): ವಸು ಮಳಲಿ ೯೦ 

ನಮ್ಮಲ್ಲಿ ಸಿಗುವ ಕವಿ ಪ್ರಕಾಶನದ ಪುಸ್ತಕಗಳು

೧೧೩ ಬಟ್ಟೆಯೆಂಬುದು ಬೆಂಕಿಯ ಹಾಗೆ (ಕವಿತೆಗಳು) ಬಸೂ ₹  ೧೨೦
೧೧೪ ದೀಪದ ಗಿಡ (ದ್ವಿಪದಿಗಳು) ಬಸೂ
₹  ೧೫೦
೧೧೫ ತೇವ ಕಾಯುವ ಬೀಜ (ಕವಿತೆಗಳು) ಬಸೂ 
₹  ೧೬೦
೧೧೬ ನೀರ ದಾರಿ- ದಲಿತ ಮಹಿಳಾ ಪ್ರಜ್ಞೆ - ಸಂ: ದು ಸರಸ್ವತಿ
₹  ೪೦೦
೧೧೭ ಸೂಜಿಗಣ್ಣಿಗೆ ಒಳಹೊರಗಿಲ್ಲ (ಕವಿತೆಗಳು) ಡಾ ಕೃಷ್ಣ ಗಿಳಿಯಾರ
₹  ೯೦
೧೧೮ ಕಾವ್ಯ ಬೋಧಿ (ಮಹಿಳಾ  ಕಾವ್ಯ)
೧೭೦


ಅಚ್ಚಿನಲ್ಲಿ

೧೯ ಉರಿವ ಕುಡಿಯ ನಟ್ಟ ನಡುವೆ : ರೂಮಿ ಕವಿತೆಗಳು ಅನು: ಡಾ ಅನುಪಮಾ ೧೪೦
೨೦ ಕಾಲನ ಕಾಲಂದುಗೆ (ಕಾವ್ಯ) : ಪ್ರಜ್ಞಾ ಮತ್ತಿಹಳ್ಳಿ ೯೦
೨೧ ಧರ್ಮ ಮತ್ತು ರಾಜಕಾರಣ : ಸಂ : ಬಸೂ, ಡಾ. ಎಚ್. ಎಸ್. ಅನುಪಮಾ ೯೦
೨೨ ಗೀತೆ : ಒಳಗಿನ ಸತ್ಯ ಎನು? ಡಾ. ವಿ ಆರ್ ನಾರ‍್ಲಾ ಅನು: ಪ್ರೊ . ಬಿ ಗಂಗಾಧರಮೂರ್ತಿ ೩೦೦
೨೩. ದಲಿತ ಸಂವೇದನೆ : ಡಾ. ಅಪ್ಪಗೆರೆ ಸೋಮಶೇಖರ್ ೧೫೦
೨೪. ಸಾರಾ ಶಗುಫ್ತಾ : ಜೀವನ ಮತ್ತು ಕವಿತೆ-ಅಮೃತಾ ಪ್ರೀತಂ ಅನು: ಹಸನ್ ನಯೀಂ ಸುರುಕೋಡ ೧೪೦ 


------------
* ಪ್ರತಿಗಳು ಮುಗಿದಿವೆ.

ಸಂಶೋಧನ ವಿದ್ಯಾರ್ಥಿಗಳ ಸಮಾಲೋಚನಾ ಸಭೆಗೆ ಆಹ್ವಾನ
ಪ್ರಿಯ ಸಂಶೋಧನ ವಿದ್ಯಾರ್ಥಿ ಮಿತ್ರರೆ,
ಕೆಲವು ದಿನಗಳ ಹಿಂದೆ ನಾನು ಧಾರವಾಡಕ್ಕೆ ವಾಸವಾಗಲು ಬಂದಿದ್ದೇನೆ. ಧಾರವಾಡದಲ್ಲಿ ಬಹಳಷ್ಟು ಜನ ವಿದ್ವಾಂಸರಾಗಿದ್ದಾರೆ, ಸಾಹಿತಿಗಳಾಗಿದ್ದಾರೆ, ಸತತ ಓದುವ ಹವ್ಯಾಸವುಳ್ಳಂತವರೂ, ವಿಚಾರಶೀಲರೂ ಮತ್ತು ಸಾಹಿತ್ಯಿಕ ಆಸಕ್ತಿಯುಳ್ಳವರಾಗಿದ್ದಾರೆಂದು ಕೇಳಿದ್ದೇನೆ.

ಸಾಹಿತ್ಯ ಮತ್ತು ಸಾಮಾಜಿಕ ಜೀವನದ ಬಗ್ಗೆ ಅಧ್ಯಯನ ಮಾಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ. ನಾನು ಮತ್ತು ನನ್ನಂತೆಯೇ ಆಸಕ್ತಿಯುಳ್ಳ, ವಿಚಾರವುಳ್ಳ, ಅಧ್ಯಯನಶೀಲ ವ್ಯಕ್ತಿಗಳೊಂದಿಗೆ ಕೆಲವು ಚರ್ಚೆಗಳನ್ನು ಮತ್ತು ಸಂವಾದಗಳನ್ನು ಮಾಡುವ ಮೂಲಕ ವಿಷಯ-ವಿಚಾರ ವಿನಿಮಯಮಾಡಿಕೊಳ್ಳುವುದು ನನಗೆ ತುಂಬಾ ಆಸಕ್ತಿಯ ವಿಷಯವಾಗಿದೆ.

ಈ ಚರ್ಚೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಷಯಕ್ಕೆ ತ್ರಿಜ್ಯಾ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡಿದ್ದೇನೆ: ತ್ರಿಜ್ಯಾ ಇದು ಕೇಂದ್ರ ಬಿಂದುವೂ ಅಲ್ಲ ಮತ್ತು ಹೊರಗಿನ ಪರಿಧಿಯೂ ಅಲ್ಲ. ಇದೊಂದು ಕೇಂದ್ರ ಮತ್ತು ಪರಿಧಿಯ ಮಧ್ಯವರ್ತಿ ಹಾಗೂ ಅವೆರಡನ್ನೂ ಜೋಡಿಸುವ ಸಂಪರ್ಕ ಸಾಧನವಾಗಿದೆ. ತ್ರಿಜ್ಯಾ ಈ ಚರ್ಚೆಯಲ್ಲಿ ನಾನು ಮತ್ತು ನೀವು ಭಾರತೀಯ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳ ಕುರಿತು ನಿರಂತರ ಚರ್ಚೆ ಮತ್ತು ಸಂವಾದಗಳನ್ನು ಯಾವಾಗಲೂ ಮಾಡುತ್ತಾ ಇರೋಣ. ಈ ಸಭೆಯಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು ಮೊದಲಾದ ಭಾಷಾ ವಿಭಾಗಗಳ, ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮನೋವಿಜ್ಞಾನ, ಪತ್ರಿಕೋದ್ಯಮ ಮೊದಲಾದ ಮಾನವಿಕ ವಿಭಾಗಗಳ ಹಾಗೂ ಸಂಗೀತ, ಚಿತ್ರಕಲೆ, ರಂಗಭೂಮಿ ಮೊದಲಾದ ಕಲಾ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾಗವಹಿಸಬಹುದು.
೦೧ ಮೇ, ೨೦೧೬ ರಂದು ತ್ರಿಜ್ಯಾ ವಿಷಯದ ಕುರಿತು ಪ್ರಥಮವಾಗಿ ಒಂದು ಸಭೆಯನ್ನು ಹಮ್ಮಿಕೊಂಡಿದ್ದು ಮತ್ತು ಅದನ್ನು ’ಪರಿಚಯ ಸಭೆ’ ಎಂದು ಕರೆಯೋಣ. ಈ ಸಭೆಯನ್ನು ಬೆಳಗ್ಗೆ ೧೦.೩೦ ಗಂಟೆಗೆ ಧಾರವಾಡ ರಂಗಾಯಣದ ಆವರಣದಲ್ಲಿ ಪ್ರಾರಂಭಿಸೋಣ. ತಾವು ಈ ಸಭೆಗೆ ಭಾಗವಹಿಸುತ್ತೀರೆಂದು ಮತ್ತು ಇದರ ಯಶಸ್ವಿಗೆ ಕಾರಣೀಭೂತರಾಗುವಿರೆಂದು ತಿಳಿದಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಲಿಚ್ಛಿಸುತ್ತೇನೆ.

ಈ ಕೋರಿಕೆಯನ್ನು ಒಪ್ಪಿದಲ್ಲಿ ಮತ್ತು ಈ ವಿಷಯದ ಕುರಿತು ತಮಗೆ ಆಸಕ್ತಿ ಇದ್ದಲ್ಲಿ, ನನ್ನ ಯುವ ಮಿತ್ರನಾದ ಚಿದಾನಂದ ಮಾಸನಕಟ್ಟಿ (cimasanakatti@gmail.com) ಅವರಿಗೆ ಮೇಲ್ ಮಾಡುವ ಮೂಲಕ ಅಥವಾ ಇತರ ಸಂಪರ್ಕ ಮಾಧ್ಯಮಗಳ ಮೂಲಕ (೯೮೮೬೯೫೦೭೨೩) ತಮ್ಮ ಒಪ್ಪಿಗೆಯನ್ನು ತಿಳಿಸಲು ನಮ್ರವಾಗಿ ವಿನಂತಿಸುತ್ತೇನೆ.
ಡಾ. ಎಂ.ಡಿ. ಒಕ್ಕುಂದ ಅವರನ್ನು ಕೂಡಾ ಸಂಪರ್ಕಿಸಬಹುದಾಗಿದೆ (೯೪೪೮೫೫೬೧೨೭). ನೀವು ನಿಮ್ಮ ಸ್ನೇಹಿತರನ್ನು ನಿಮ್ಮ ಜೊತೆ ಕರೆತರುವದಾದರೆ ಜರೂರಾಗಿ ಅವರೂ ಸಹ ತಮ್ಮ ಒಪ್ಪಿಗೆಯನ್ನು ತಿಳಿಸಬೇಕು. ಇದನ್ನು ಕಡ್ಡಾಯವಾಗಿ ಮಾಡಬೇಕು. ಏಕೆಂದರೆ ನಿಮ್ಮ ಬರುವಿಕೆ ನಮಗೆ ಖಚಿತವಾಗುತ್ತದೆ.

ತಮ್ಮ ಆತ್ಮೀಯ
ಪ್ರೊ. ಜಿ.ಎನ್. ದೇವಿ
(prof G N Devy)
MA (leeds)phd

ಮಾಯಾವತಿ ಅವರ ಕನ್ಹಯ್ಯನ ಮೇಲಿನ ದಾಳಿ ಸೈದ್ಧಾಂತಿಕ ದಿವಾಳಿತನವಲ್ಲದೆ ಮತ್ತೇನು?


ದಯಾನಂದ್. ಟಿ.ಕೆ.ಒಂದೆರಡು ದಿನಗಳಿಂದ ದಲಿತಪಕ್ಷ ಬಿಎಸ್ಪಿ ಮತ್ತು ಕಮ್ಯುನಿಷ್ಟ್ ಹಿನ್ನೆಲೆಯ ಕನ್ಹಯ್ಯರ ಸೈದ್ಧಾಂತಿಕತೆಗಳ ಬಗೆಗಿನ ಚರ್ಚೆ ನಡೆಯುತ್ತಿದೆ. ಕಮ್ಯುನಿಷ್ಟ್ ಕನ್ಹಯ್ಯ ದಲಿತಪರವಾದ, ಬಡವರ ಪರವಾದ ಪ್ರಶ್ನೆಗಳೆತ್ತುತ್ತಿರುವುದು ಬಿಎಸ್ಪಿ ಪಕ್ಷಕ್ಕೆ ಆಗಿ ಬರುತ್ತಿಲ್ಲ. ಇದಕ್ಕೆ ತಕ್ಕ ಲಾಜಿಕಲ್ ಕಾರಣಗಳನ್ನು ಒದಗಿಸದೆ ಕನ್ಹಯ್ಯನ ಭೂಮಿಹಾರ್ ಜಾತಿಯನ್ನು ಮುಂದಿಟ್ಟುಕೊಂಡು ಮಾಯಾವತಿಯವರು ಅಗ್ಗದ ಆರೋಪಗಳನ್ನು ಹೊರಿಸಿದ್ದಾರೆ. ಈ ಬಗೆಗಿನ ಚರ್ಚೆ ಮುಂದುವರೆದು ಕನ್ಹಯ್ಯನಷ್ಟೇ ಅಲ್ಲ, ದಲಿತರಲ್ಲದ ಯಾರೂ ಸಹ "ಜೈ ಭೀಮ್" ಘೋಷಣೆಯನ್ನು ಕೂಗಬಾರದೆಂದು ಬಿಎಸ್ಪಿಯ ಬೆಂಬಲಿಗರು ಫತ್ವಾ ಹೊರಡಿಸಿದ್ದೂ ಆಯಿತು. (ಬಿಎಸ್ಪಿ ಪಕ್ಷದ ಸಂಸ್ಥಾಪಕ ಕಾನ್ಷೀರಾಮರೇ ಕನ್ವರ್ಟೆಡ್ ಸಿಖ್ ಧರ್ಮೀಯರು) ಅಲ್ಲಿಗೆ ತಾಲಿಬಾನಿಗಳಿಗೂ, ಆರೆಸ್ಸೆಸ್ ಎಂಬ ಧರ್ಮದ ವಿಷ ಹಂಚುವ ಎನ್.ಜಿ.ಓಗೂ ಯಾವ ವ್ಯತ್ಯಾಸವೂ ಇಲ್ಲವೆಂದಾಯಿತು. ಎಲ್ಲ ಕಪ್ಪೆಗಳಿಗೆ ಅವರಿರುವ ಬಾವಿಯೇ ಜಗತ್ತು, ಅದರಾಚೆಗೊಂದು ಸಮುದ್ರವಿದೆಯೆಂಬ ಪರಿಜ್ಞಾನವಿದ್ದಂತಿಲ್ಲ.


ಕನ್ಹಯ್ಯನ ಗಲಾಟೆ, ಬಂಧನ, ಚಳವಳಿ ಎಲ್ಲವೂ ನಡೆದು ಹೋಗಿ ಹತ್ತತ್ತಿರ ಎರಡು ತಿಂಗಳುಗಳಾಗುತ್ತ ಬಂದವು. ಆಗಿಂದ ಕನ್ಹಯ್ಯನ ಬಗ್ಗೆ ತಕರಾರು ಇಲ್ಲದಿದ್ದ ಬಿಎಸ್ಪಿ ಪಕ್ಷಕ್ಕೆ ಇದ್ದಕ್ಕಿದ್ದಂತೆ ಕನ್ಹಯ್ಯನನ್ನು ದಲಿತರೆದುರು ಖಳನಾಯಕನಾಗಿರುವ ಜರೂರತ್ತು ಇವಾಗೇನಕ್ಕೆ ಬಂತು?

ಸ್ವಲ್ಪ ಗಮನಿಸಿ ನೋಡಿ, ಇಲ್ಲೊಂದು ಸೂಕ್ಷ್ಮ ವಿಚಾರವಿದೆ. ವೇಮುಲ ಸಾವಿನ ವಿಷಯದಲ್ಲಿ ದಲಿತ ವಿರೋಧಿಯೆಂದು ಹೆಸರು ಕೆಡಿಸಿಕೊಂಡ ಬಿಜೆಪಿ ಮತ್ತು ಮಂಗಪರಿವಾರಗಳು ತಮ್ಮ ದಲಿತ್ ವೋಟ್ ಬ್ಯಾಂಕನ್ನು ಮರುಸ್ಥಾಪಿಸಿಕೊಳ್ಳಲು ಸರ್ಕಸ್ ನಡೆಸುತ್ತಿರುವ ಹೊತ್ತು ಇದು. ಇಂಥ ಬಫೂನ್ ಸರ್ಕಸ್ಸಿನಲ್ಲಿ ಮೋದಿ, ಅಂಬೇಡ್ಕರ್ ಭಜನೆ ಮಾಡ್ತಾರೆ, ಆರೆಸ್ಸೆಸ್ ಅಂಬೇಡ್ಕರ್ ನಮ್ಮವರು ಅಂತ ಪುಂಗಿ ಊದಲು ಶುರುವಿಡುತ್ತದೆ, ಬೈಠಕ್ಕುಗಳಲ್ಲಿ ಅಂಬೇಡ್ಕರ್ ಗುಣಗಾನವಾಗುತ್ತದೆ..
ಇದ್ಯಾವುದೂ ಮಾಯಾವತಿಯವರಿಗೆ ಸಮಸ್ಯೆಯೇ ಆಗುವುದಿಲ್ಲ. ಯಾಕೆ? ಬದುಕಿದಷ್ಟೂ ದಿನ ಅಂಬೇಡ್ಕರರನ್ನು ಕಾಡಿದವರು ಅಂಬೇಡ್ಕರ್ ಪರವಾದ ಹುಸಿ ಕ್ಯಾಂಪೇನ್ ನಡೆಸುವುದು ಮಾಯಾವತಿಯವರಿಗೆ ಸಮಸ್ಯೆಯೇ ಆಗುವುದಿಲ್ಲ ಯಾಕೆ ? ಬಿಜೆಪಿ, ಆರೆಸ್ಸೆಸ್ ನಲ್ಲಿದ್ದು ದಲಿತರಲ್ಲದವರು ಅಂಬೇಡ್ಕರ್ ರನ್ನು ಪೊಲಿಟಿಕಲ್ ಪ್ರಾಫಿಟ್ ಗೆ ಬಳಸುತ್ತಿರುವ ಹೀನ ಕೆಲಸ ಮಾಯಾವತಿಯವರಿಗೆ ಸಮಸ್ಯೆ ಅನಿಸುತ್ತಿಲ್ಲವಲ್ಲ ಯಾಕೆ ? ಒಬ್ಬ ಯಕಶ್ಚಿತ್ ಸ್ಟೂಡೆಂಟ್ ನಾಯಕ ಕನ್ಹಯ್ಯ ಜೈಭೀಮ್ ಅಂದರೆ, ದಲಿತರ ಪರವಾದವಾದ ಕೂಗು ಎತ್ತುವುದು ಮಾತ್ರ ಮಾಯಾವತಿಯವರಿಗೆ ಸಮಸ್ಯೆ ಅನಿಸುತ್ತಿದೆಯಲ್ಲ ಯಾಕೆ ?

ಇವೆಲ್ಲವುಗಳ ಮಧ್ಯೆ ಇರುವ ಹಿಡನ್ ಲೈನ್ ಗಳನ್ನು ಓದಿಕೊಳ್ಳುವುದಾದರೆ, ಬಿಜೆಪಿ ಆರೆಸ್ಸೆಸ್ ನ ಅಂಬೇಡ್ಕರ್ ಭಜನೆಗೂ, ಮಾಯಾವತಿಯವರ ಕನ್ಹಯ್ಯನ ದ್ವೇಷಕ್ಕೂ ಒಂದು ಇನ್ವಿಸಿಬಲ್ ಲಿಂಕ್ ಇದೆ ಅಂತ ಅನ್ನಿಸೋದಿಲ್ವ ? ಮೋದಿ ಮತ್ತು ಮಂಗಪರಿವಾರಕ್ಕೆ ಕನ್ಹಯ್ಯನ ಮುಖ ಕಂಡರಾಗುವುದಿಲ್ಲ. ಯಾಕಂದ್ರೆ ಕನ್ಹಯ್ಯ ಕಟ್ಟರ್ ಬಿಜೆಪಿ ಆರೆಸ್ಸೆಸ್ ವಿರೋಧಿ. ಈ ಲೆಕ್ಕದಲ್ಲಿ ಬಹುಜನರ ಪರವಾದ ನಿಲುವಿನಲ್ಲೇ ಕನ್ಹಯ್ಯ ನಿಂತಿದ್ದಾನೆ. ಇಂಥಲ್ಲಿ ಮಾಯಾವತಿಯವರೇಕೆ ಬಿಜೆಪಿ ವಿರೋಧಿಯನ್ನು ತಮ್ಮ ವಿರೋಧಿ ಅಂತ ಡಿಕ್ಲೇರ್ ಮಾಡಿದ್ದಾರೆ ? ಬಿಎಸ್ಪಿ ಪಕ್ಷ ಬಿಜೆಪಿಯ ಜೊತೆಗೇಕೆ ನಿಂತು ತನ್ನ ಎದುರಾಳಿಯಲ್ಲದ ಕನ್ಹಯ್ಯನಿಗೆ ಕಲ್ಲು ಬೀರುತ್ತಿದೆ ? ಇಲ್ಲಿ ಬಿಜೆಪಿ ಮತ್ತು ಬಿಎಸ್ಪಿ ಎರಡೂ ಪಕ್ಷಗಳು ಒಳ ಒಪ್ಪಂದಗಳೇನಾದರು ಮಾಡಿಕೊಂಡಿವೆಯೇ? ಆಗಿರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ ಮಾಯಾವತಿಯವರ ಮೇಲ್ಜಾತಿ ಮೋಹ ಕಳೆದೆರಡು ಎಲೆಕ್ಷನ್ ಗಳಲ್ಲು ನಿಚ್ಚಳವಾಗಿ ಸಾಬೀತಾಗಿದೆ. ಬ್ರಾಹ್ಮಣರ ಸಮಾವೇಶ ಮಾಡುತ್ತ ಅವರ ಕೃಪಾಕಟಾಕ್ಷ ಪಡೆಯಲು ಅವರನ್ನು ಹೊಗಳಿಕೊಂಡು ತಿರುಗುವಷ್ಟರ ಮಟ್ಟಿಗೆ ಬಿಎಸ್ಪಿಯ ಸೈದ್ಧಾಂತಿಕತೆ ಹಳ್ಳ ಹಿಡಿದದ್ದನ್ನು ದೇಶವೇ ನೋಡಿದೆ. ಬಿಜೆಪಿ ಮತ್ತು ಬಿಎಸ್ಪಿ ಅಧಿಕಾರ ರಾಜಕಾರಣದ ವಂಚನೆಯ ಕೂಡಾವಳಿಗಳಲ್ಲಿ ಮೊದಲಿಂದಲೂ ಸಮಾನಮನಸ್ಕರು. ಮತ್ತೆ ಮಾಯಾವತಿಯವರ ಬಾಯಿಂದ ಬ್ರಾಹ್ಮಣ ಭಜನೆ ಶುರುವಾಗಿದೆ. ಅವರಿಗೆ ಅಧಿಕಾರ ಹಿಡಿಯಲು ಬ್ರಾಹ್ಮಣರು ಬೇಕೇ ಬೇಕು. ಹಾಗಾಗಿ ಬಿಜೆಪಿಯ ಶತ್ರುವಾದ ಕನ್ಹಯ್ಯ ಈಗ ಬಿಎಸ್ಪಿಗೂ ಶತ್ರುವಾಗ್ತಾನೆ. ಶತ್ರುವಿನ ಶತ್ರು ನಮಗೂ ಶತ್ರುವಾಗಬೇಕು ಅನ್ನೋದು ಬಿಎಸ್ಪಿ ಪಕ್ಷದ ಸದ್ಯದ ಹಾಸ್ಯಾಸ್ಪದ ನಿಲುವು.

ವೇಮುಲ ಸಾವಿನ ವಿಷಯದಲ್ಲಿ ಕನ್ಹಯ್ಯ ಒಂದು ಕಡೆಯಿಂದ ಪ್ರಭುತ್ವವನ್ನು ಕೆತ್ತಿಕೊಂಡು ಬರುತ್ತಿದ್ದಾಗ ಬಿಎಸ್ಪಿ ಪಕ್ಷ ಈ ಬಗ್ಗೆ ಕಾಟಾಚಾರಕ್ಕೆ ಒಂದೆರಡು ಹೇಳಿಕೆ ಕೊಟ್ಟು ಬಾಯಿಗೆ ಬೀಗ ಹಾಕಿಕೊಂಡಿದ್ದೇಕೆ ? ದಲಿತಪರವಾದ ನಿಲುವು ತಮ್ಮ ಮೇಲ್ಜಾತಿ ರಾಜಕಾರಣದ ಗೆಳೆಯರಿಗೆ ಬೇಸರ ತರಿಸುತ್ತದೆ ಅಂತಲಾ? ಘಟಾನುಘಟಿ ನಾಯಕರೆಲ್ಲ ವೇಮುಲನ ಸಾವಿನ ಸಂದರ್ಭದಲ್ಲಿ ಹೈದರಾಬಾದ್ ವಿ.ವಿಗೆ ಭೇಟಿ ನೀಡಿದರೂ ಮಾಯಾವತಿಯವರು ಮಾತ್ರ ಹೋಗಲಿಲ್ಲವೇಕೆ ? ವೇಮುಲನ ಸಾವಿನ ಬಗ್ಗೆ ಪಕ್ಷದ ವತಿಯಿಂದ ನಡೆದ ಫ್ಯಾಕ್ಟ್ ಫೈಂಡಿಂಗ್ ರಿಪೋರ್ಟನ್ನು ಜನರ ಮುಂದೆ, ಮಾಧ್ಯಮದ ಮುಂದೆ ಬಹಿರಂಗಗೊಳಿಸದೆ ಮುಚ್ಚಿಟ್ಟದ್ದು ಏಕೆ ?

ಇಲ್ಲಿ ಮೋದಿ ಅಂಬೇಡ್ಕರ್ ಮೇಲೆ ಪ್ರೀತಿ ತೋರಿಸುವುದು, ಅಲ್ಲಿ ಮಾಯಾವತಿ ಬ್ರಾಹ್ಮಣರ ಮೇಲೆ ಪ್ರೀತಿ ತೋರಿಸಿವುದು.. ಎರಡಕ್ಕೂ ಏನೋ ಕಾರ್ಯಕಾರಣ ಸಂಬಂಧವಂತೂ ಇದ್ದೇ ಇದೆ. ಇಲ್ಲದಿದ್ದರೆ, ಸುಖಾಸುಮ್ಮನೆ ಎರಡೂ ಒಂದೇ ಸಮಯದಲ್ಲಿ ಶುರುವಾಗುವುದಿಲ್ಲ. ಅಧಿಕಾರ ರಾಜಕಾರಣಕ್ಕೋಸ್ಕರ ಬಿಜೆಪಿ ಜೊತೆಗೆ ಸಲ್ಲಾಪಕ್ಕಿಳಿದಿರುವ ಬಿಎಸ್ಪಿಗೆ ತಾವು ಗಮನ ಹರಿಸಬೇಕಿರುವುದು ಕನ್ಹಯ್ಯನ ಕಡೆಗಲ್ಲ, ಈ ದೇಶದ ಸಾಮಾನ್ಯ ಬಡದಲಿತರ ಕಡೆಗೆ ಅನ್ನುವ ಕಾಮನ್ ಸೆನ್ಸ್ ಈ ಪಕ್ಷಕ್ಕೆ ಬರುವವರೆಗು ಬಿಎಸ್ಪಿ ಪಕ್ಷದ ಯಾವ ಬಾಯಿಮಾತಿನ ಸೈದ್ಧಾಂತಿಕತೆಯನ್ನೂ ನಂಬುವುದು ಅಪಾಯಕಾರಿಯೆಂದು ನನ್ನ ನಂಬಿಕೆ.

Tuesday, April 12, 2016

ಎ 14 ಧಾರವಾಡ : ಅಂಬೇಡ್ಕರ್ ಚಿಂತನೆಗಳು ಮತ್ತು ಹೊಸ ತಲೆಮಾರು ಚಿಂತನ ಗೋಷ್ಠಿ


ಪ್ರಿಯರೆ
ಎಪ್ರಿಲ್ 14 ರಂದು ಸಂಜೆ 6 ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾ ವರ್ಧಕ ಸಂಘದ ರಾ ಹಾ ದೇಶಪಾಂಡೆ ಸಭಾಭವನದಲ್ಲಿ ನಾವು ಪ್ರಕಟಿಸಿರುವ ಸೌಹಾರ್ದ ನೆಲೆಯಲ್ಲಿ ಅವಿರತವಾಗಿ ಕೆಲಸ ಮಾಡುವ ಕವಿಯೂ ಚಿಂತಕರೂ ಆಗಿರುವ ರಂಜಾನ್ ದರ್ಗಾ ಅವರ 'ಬಸವಣ್ಣ ಮತ್ತು ಅಂಬೇಡ್ಕರ್' ಪುಸ್ತಕ ಬಿಡುಗಡೆ ಹಾಗೂ 'ಅಂಬೇಡ್ಕರ್ ಚಿಂತನೆಗಳು ಮತ್ತು ಹೊಸ ತಲೆಮಾರು' ಕುರಿತು ಚಿಂತನಗೋಷ್ಟಿ . ಆ ಕುರಿತು ಅತ್ಯುತ್ತಮ ವಾಗ್ಮಿಯಾದ ಚಿಂತಕ ಪ್ರೊ ಜಿ. ಕೆ. ಗೋವಿಂದರಾವ್ ಮಾತನಾಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಪಿಯುಸಿಎಲ್ ನ ಅಧ್ಯಕ್ಷರಾದ ಮೈಸೂರಿನ ಡಾ. ವಿ ಲಕ್ಷ್ಮೀನಾರಾಯಣ ಅವರು ವಹಿಸಲಿದ್ದಾರೆ. ಜೊತೆಯಾಗಿ. ನೀವೂ ಬನ್ನಿ. . ನಿಮಗಿದು ಪ್ರೀತಿಯ ಆಹ್ವಾನ. 
Sunday, April 03, 2016

ಕನ್ನಡಪ್ರಭ : ಪಾಕಿಸ್ತಾನ ನೆಲದಲ್ಲಿ..
'ಮುಸ್ಲಿಮರ ಬಗ್ಗೆ ಕೆಟ್ಟ ದೃಷ್ಟಿ ತರವಲ್ಲ’ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ’ ಸೇರಿ ಮೂರು ಕೃತಿಗಳ ಬಿಡುಗಡೆ

ಪ್ರಜಾವಾಣಿ


ಬೆಂಗಳೂರು:  ‘ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವು ಕೈ ಜೋಡಿಸಬೇಕು. ಪೂರ್ವಗ್ರಹಪೀಡಿತರಾಗಿ ಮುಸ್ಲಿಮರನ್ನು ಕೆಟ್ಟದೃಷ್ಟಿಯಿಂದ ನೋಡಬಾರದು’ ಎಂದು ಭಾರತ ಮತ್ತು ಪಾಕಿಸ್ತಾನ ಮೈತ್ರಿಕೂಟದ ಅಧ್ಯಕ್ಷ ಪಿ.ಕೋದಂಡರಾಮಯ್ಯ ಹೇಳಿದರು.

ಗದಗದ ಲಡಾಯಿ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ಶೂದ್ರ ಶ್ರೀನಿವಾಸ್‌ ಅವರ ‘ಪಾಕಿಸ್ತಾನದ ನೆಲದಲ್ಲಿ ಸಂಬಂಧಗಳ ಹುಡುಕಾಟ’, ‘ಅವಳು ನಡೆದಂತೆ’ ಹಾಗೂ ‘ಯು.ಆರ್‌. ಎಂಬ ನೀವು’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನದಲ್ಲಿ ಕಳೆದ 10 ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆ ನೆಲೆಗೊಳ್ಳುತ್ತಿದೆ. ಆದರೆ, ಮಿಲಿಟರಿ, ಮುಲ್ಲಾಗಳ ಮೇಲುಸ್ತುವಾರಿಯಲ್ಲಿ ದೇಶ ಮುನ್ನಡೆಯುತ್ತಿದೆ. ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಭಾರತದೊಂದಿಗೆ ಮೈತ್ರಿ ಬೆಳೆಸುವ ಹಂಬಲ ಹೊಂದಿದ್ದಾರೆ. ಆದರೆ, ಅಲ್ಲಿನ ಸ್ಥಳೀಯ ಕಾರಣಗಳು ಹಾಗೂ ಒತ್ತಡಕ್ಕೆ ಮಣಿದು ಭಾರತಕ್ಕೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ದೇಶದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪಾಕಿಸ್ತಾನ ಹಾಗೂ ಭಾರತದ ನಡುವೆ ಉತ್ತಮ ಬಾಂಧವ್ಯ ವೃದ್ಧಿಯಾಗಿದೆ. ವಾಜಪೇಯಿ ಅವರನ್ನು ಪಾಕಿಸ್ತಾನ ಪ್ರೀತಿಪೂರ್ವಕವಾಗಿ ಸ್ವಾಗತ ಮಾಡಿತ್ತು. ಹಾಗೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದೊಂದಿಗೆ ಸ್ನೇಹ, ಸಂಬಂಧವನ್ನು ಕಾಯ್ದುಕೊಂಡು ಹೋಗುತ್ತಿದ್ದಾರೆ’ ಎಂದು ಹೇಳಿದರು.

ಕೃತಿಗಳನ್ನು ಬಿಡುಗಡೆ ಮಾಡಿದ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಮಾತನಾಡಿ, ‘ಪಾಕಿಸ್ತಾನದ ಹೆಸರು ಕೇಳಿದಾಕ್ಷಣ ಧರ್ಮದ ಕಟ್ಟಡವನ್ನು ನಿರ್ಮಿಸಿಕೊಳ್ಳುತ್ತೇವೆ. ಭಾರತಕ್ಕೂ ಒಂದು ಧರ್ಮದ ಕಟ್ಟಡವನ್ನು ಕಟ್ಟಿಕೊಂಡಿದ್ದೇವೆ.  ಇದಕ್ಕೆ ಅನುಗುಣವಾಗಿ ಸಾಹಿತ್ಯ ರಚನೆಯಾಗುತ್ತಿದೆ’ ಎಂದರು.

‘ಶೂದ್ರ ಶ್ರೀನಿವಾಸ್‌ ಅವರು ರಾಜಕೀಯ ತಾತ್ವಿಕ ವಿಚಾರಗಳನ್ನೂ ಸಾಹಿತ್ಯದ ಮೂಲಕ ಚರ್ಚಿಸುತ್ತಾರೆ. ಸಾಹಿತ್ಯದ ಮೂಲಕ ಸಂಗತಿಗಳನ್ನು ವಿವರಿಸುವ ವಿಶಿಷ್ಟ ಕಲೆ ಇವರಿಗೆ ಸಿದ್ಧಿಸಿದೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖಕ  ಶೂದ್ರ ಶ್ರೀನಿವಾಸ್‌, ‘ಯು.ಆರ್‌. ಅನಂತಮೂರ್ತಿ ಅವರು ನಿಧನ ಹೊಂದಿದಾಗ ಕೆಲವರು ಅವರ ಬಗ್ಗೆ ಕೀಳಾಗಿ ಮಾತನಾಡಿದರು. ಒಬ್ಬ ಲೇಖಕನ ಬರವಣಿಗೆ, ಸಾಧನೆ ಬಗ್ಗೆ ಮಾತನಾಡಬೇಕು. ಆದರೆ ಕೆಲವರು ತಮ್ಮ ವೈಯಕ್ತಿಕ ತೆವಲುಗಳಿಗಾಗಿ ಅನಂತಮೂರ್ತಿ ಅವರ ಬಗ್ಗೆ ಮಾತನಾಡಿದರು’ ಎಂದು ಬೇಸರ ವ್ಯಕ್ತಪಡಿಸಿದರು.

ಲೇಖಕ ಎಚ್‌. ದಂಡಪ್ಪ ‘ಪಾಕಿಸ್ತಾನದ ನೆಲದಲ್ಲಿ...’ ಕೃತಿ ಬಗ್ಗೆ ಮಾತನಾಡಿ, ‘ಶೂದ್ರ ಶ್ರೀನಿವಾಸ್‌ ಅವರು 1995ರಲ್ಲಿ ಪಾಕಿಸ್ತಾನದ ಲಾಹೋರ್‌ನಲ್ಲಿ ಆಯೋಜಿಸಿದ್ದ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಲ್ಲಿನ ಅನುಭವಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಪಾಕಿಸ್ತಾನದ ಜನರಲ್ಲೂ ಮನುಷ್ಯ ಸಂಬಂಧಗಳು ಹೇಗಿವೆ ಎಂಬುದನ್ನು ವಿವರಿಸಿದ್ದಾರೆ’ ಎಂದು ಹೇಳಿದರು.

‘ಯು.ಆರ್‌. ಎಂಬ ನೀವು’ ಕೃತಿ ಕುರಿತು ಮಾತನಾಡಿದ ಲೇಖಕಿ ಡಾ. ತಾರಿಣಿ ಶುಭದಾಯಿನಿ, ‘ಯು.ಆರ್‌.ಅನಂತಮೂರ್ತಿ ಅವರ ವ್ಯಕ್ತಿತ್ವ, ಬದುಕಿನ ಬಹುಮುಖ ಆಯಾಮಗಳು, ಅವರೊಂದಿಗಿನ ಒಡನಾಟವನ್ನು ಇಲ್ಲಿ ದಾಖಲಿಸಿದ್ದಾರೆ’ ಎಂದರು.|

‘ಅವಳು ನಡೆದಂತೆ’ ಕೃತಿ ಕುರಿತು ಲೇಖಕಿ ಜಯಶ್ರೀ ಕಂಬಾರ ಮಾತನಾಡಿ, ‘ಉರ್ದು ಭಾಷೆಯ ಗಜಲ್‌ಗಳಲ್ಲಿ ಶೃಂಗಾರ ರಸ, ಪ್ರೇಮ ನಿವೇದನೆಯ ಅಂಶಗಳು ಪ್ರಧಾನವಾಗಿರುತ್ತವೆ. ಇದಕ್ಕೆ ಭಿನ್ನವಾದ, ಬದುಕಿನ ಘರ್ಷಣೆಗಳ ಬಗ್ಗೆ ಶೂದ್ರ ಶ್ರೀನಿವಾಸ್‌ ಅವರು ತಮ್ಮ ಗಜಲ್‌ಗಳಲ್ಲಿ ಹಿಡಿದಿಟ್ಟಿದ್ದಾರೆ’ ಎಂದು ಹೇಳಿದರು.
 


ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...