Monday, April 25, 2016

ಸಂಶೋಧನ ವಿದ್ಯಾರ್ಥಿಗಳ ಸಮಾಲೋಚನಾ ಸಭೆಗೆ ಆಹ್ವಾನ
ಪ್ರಿಯ ಸಂಶೋಧನ ವಿದ್ಯಾರ್ಥಿ ಮಿತ್ರರೆ,
ಕೆಲವು ದಿನಗಳ ಹಿಂದೆ ನಾನು ಧಾರವಾಡಕ್ಕೆ ವಾಸವಾಗಲು ಬಂದಿದ್ದೇನೆ. ಧಾರವಾಡದಲ್ಲಿ ಬಹಳಷ್ಟು ಜನ ವಿದ್ವಾಂಸರಾಗಿದ್ದಾರೆ, ಸಾಹಿತಿಗಳಾಗಿದ್ದಾರೆ, ಸತತ ಓದುವ ಹವ್ಯಾಸವುಳ್ಳಂತವರೂ, ವಿಚಾರಶೀಲರೂ ಮತ್ತು ಸಾಹಿತ್ಯಿಕ ಆಸಕ್ತಿಯುಳ್ಳವರಾಗಿದ್ದಾರೆಂದು ಕೇಳಿದ್ದೇನೆ.

ಸಾಹಿತ್ಯ ಮತ್ತು ಸಾಮಾಜಿಕ ಜೀವನದ ಬಗ್ಗೆ ಅಧ್ಯಯನ ಮಾಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬನಾಗಿದ್ದೇನೆ. ನಾನು ಮತ್ತು ನನ್ನಂತೆಯೇ ಆಸಕ್ತಿಯುಳ್ಳ, ವಿಚಾರವುಳ್ಳ, ಅಧ್ಯಯನಶೀಲ ವ್ಯಕ್ತಿಗಳೊಂದಿಗೆ ಕೆಲವು ಚರ್ಚೆಗಳನ್ನು ಮತ್ತು ಸಂವಾದಗಳನ್ನು ಮಾಡುವ ಮೂಲಕ ವಿಷಯ-ವಿಚಾರ ವಿನಿಮಯಮಾಡಿಕೊಳ್ಳುವುದು ನನಗೆ ತುಂಬಾ ಆಸಕ್ತಿಯ ವಿಷಯವಾಗಿದೆ.

ಈ ಚರ್ಚೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಷಯಕ್ಕೆ ತ್ರಿಜ್ಯಾ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡಿದ್ದೇನೆ: ತ್ರಿಜ್ಯಾ ಇದು ಕೇಂದ್ರ ಬಿಂದುವೂ ಅಲ್ಲ ಮತ್ತು ಹೊರಗಿನ ಪರಿಧಿಯೂ ಅಲ್ಲ. ಇದೊಂದು ಕೇಂದ್ರ ಮತ್ತು ಪರಿಧಿಯ ಮಧ್ಯವರ್ತಿ ಹಾಗೂ ಅವೆರಡನ್ನೂ ಜೋಡಿಸುವ ಸಂಪರ್ಕ ಸಾಧನವಾಗಿದೆ. ತ್ರಿಜ್ಯಾ ಈ ಚರ್ಚೆಯಲ್ಲಿ ನಾನು ಮತ್ತು ನೀವು ಭಾರತೀಯ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳ ಕುರಿತು ನಿರಂತರ ಚರ್ಚೆ ಮತ್ತು ಸಂವಾದಗಳನ್ನು ಯಾವಾಗಲೂ ಮಾಡುತ್ತಾ ಇರೋಣ. ಈ ಸಭೆಯಲ್ಲಿ ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು ಮೊದಲಾದ ಭಾಷಾ ವಿಭಾಗಗಳ, ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಮನೋವಿಜ್ಞಾನ, ಪತ್ರಿಕೋದ್ಯಮ ಮೊದಲಾದ ಮಾನವಿಕ ವಿಭಾಗಗಳ ಹಾಗೂ ಸಂಗೀತ, ಚಿತ್ರಕಲೆ, ರಂಗಭೂಮಿ ಮೊದಲಾದ ಕಲಾ ವಿಭಾಗಗಳ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಆಸಕ್ತರು ಭಾಗವಹಿಸಬಹುದು.
೦೧ ಮೇ, ೨೦೧೬ ರಂದು ತ್ರಿಜ್ಯಾ ವಿಷಯದ ಕುರಿತು ಪ್ರಥಮವಾಗಿ ಒಂದು ಸಭೆಯನ್ನು ಹಮ್ಮಿಕೊಂಡಿದ್ದು ಮತ್ತು ಅದನ್ನು ’ಪರಿಚಯ ಸಭೆ’ ಎಂದು ಕರೆಯೋಣ. ಈ ಸಭೆಯನ್ನು ಬೆಳಗ್ಗೆ ೧೦.೩೦ ಗಂಟೆಗೆ ಧಾರವಾಡ ರಂಗಾಯಣದ ಆವರಣದಲ್ಲಿ ಪ್ರಾರಂಭಿಸೋಣ. ತಾವು ಈ ಸಭೆಗೆ ಭಾಗವಹಿಸುತ್ತೀರೆಂದು ಮತ್ತು ಇದರ ಯಶಸ್ವಿಗೆ ಕಾರಣೀಭೂತರಾಗುವಿರೆಂದು ತಿಳಿದಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಲಿಚ್ಛಿಸುತ್ತೇನೆ.

ಈ ಕೋರಿಕೆಯನ್ನು ಒಪ್ಪಿದಲ್ಲಿ ಮತ್ತು ಈ ವಿಷಯದ ಕುರಿತು ತಮಗೆ ಆಸಕ್ತಿ ಇದ್ದಲ್ಲಿ, ನನ್ನ ಯುವ ಮಿತ್ರನಾದ ಚಿದಾನಂದ ಮಾಸನಕಟ್ಟಿ (cimasanakatti@gmail.com) ಅವರಿಗೆ ಮೇಲ್ ಮಾಡುವ ಮೂಲಕ ಅಥವಾ ಇತರ ಸಂಪರ್ಕ ಮಾಧ್ಯಮಗಳ ಮೂಲಕ (೯೮೮೬೯೫೦೭೨೩) ತಮ್ಮ ಒಪ್ಪಿಗೆಯನ್ನು ತಿಳಿಸಲು ನಮ್ರವಾಗಿ ವಿನಂತಿಸುತ್ತೇನೆ.
ಡಾ. ಎಂ.ಡಿ. ಒಕ್ಕುಂದ ಅವರನ್ನು ಕೂಡಾ ಸಂಪರ್ಕಿಸಬಹುದಾಗಿದೆ (೯೪೪೮೫೫೬೧೨೭). ನೀವು ನಿಮ್ಮ ಸ್ನೇಹಿತರನ್ನು ನಿಮ್ಮ ಜೊತೆ ಕರೆತರುವದಾದರೆ ಜರೂರಾಗಿ ಅವರೂ ಸಹ ತಮ್ಮ ಒಪ್ಪಿಗೆಯನ್ನು ತಿಳಿಸಬೇಕು. ಇದನ್ನು ಕಡ್ಡಾಯವಾಗಿ ಮಾಡಬೇಕು. ಏಕೆಂದರೆ ನಿಮ್ಮ ಬರುವಿಕೆ ನಮಗೆ ಖಚಿತವಾಗುತ್ತದೆ.

ತಮ್ಮ ಆತ್ಮೀಯ
ಪ್ರೊ. ಜಿ.ಎನ್. ದೇವಿ
(prof G N Devy)
MA (leeds)phd

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...