Saturday, June 25, 2016

ಮಾಂಸದಂಗಡಿಯ ನವಿಲು : ಓದುಗರ ಒಂದು ಝಲಕ್



ಎನ್ಕೆಯಂಥವರನ್ನು ಇಡಿಯಾಗಿ ಓದಬೇಕು. ಅವರಿಲ್ಲಿ ಹೇಳೋದು ಒಂದು ಕವಿತೆಯಲ್ಲಿ ಮುಗಿಯುವುಂಥದ್ದನ್ನಲ್ಲ, ಬದಲಿಗೆ ಪ್ರತೀ ಕವಿತೆಯಲ್ಲೂ ಮತ್ತೆ ಮತ್ತೆ ಕಾಣಿಸಿಕೊಂಡು ಒಂದು ಗಾಢವಾದ ಪ್ರಭಾವವನ್ನು ಕೊನೆಯಲ್ಲಿ ಉಳಿಸುವಂಥದ್ದನ್ನ.
ಗರಿಗಳ ರಮ್ಯತೆಯನ್ನೇ ಉಡುಪಾಗಿ ತೊಟ್ಟ ನವಿಲನ್ನು ಕಣ್ತುಂಬಿಕೊಂಡು ಖುಷಿಪಡುವ ನಮಗೆ ಇಲ್ಲಿ ಮಾಂಸದಂಗಡಿ, ಗರಿ ಕಿತ್ತು ನೇತು ಹಾಕಿದ ಅದೇ ನವಿಲು ಭಿನ್ನವಾಗಿ ಕಾಣಿಸಿಕೊಂಡು ತನ್ನ ನೋವನ್ನು ಕವಿತೆಗಳ ಮೂಲಕ ನಮ್ಮೊಳಗೆ ಹರಿಸುತ್ತದೆ. ನವಿಲನ್ನು ಹಿಡಿದವರು ಯಾರು ಯಾಕೆ ಎಲ್ಲಿ ಹೇಗೆ...ಇವೆಲ್ಲ ಈಗ ನಮ್ಮ ತರ್ಕವಷ್ಟೆ. ಭೂತ ಮತ್ತು ಭವಿಷ್ಯದ ವಿಮರ್ಶೆ ನವಿಲಿಗೆ ಕೊಡುವಂಥದ್ದು ಏನನ್ನೂ ಇರಲಿಲ್ಲವೇನೋ... ಅದು ನವಿಲಾಗದೆ ಮತ್ತೇನೋ ಆಗಿದ್ದರೆ ಕಥೆ,ಕವಿತೆ ಬೇರೆಯೇ ಆಗುತ್ತಿತ್ತೇನೋ....

ಕಾವ್ಯ ವ್ಯಸನಿಗಳು ಮತ್ತೆ ಮತ್ತೆ ಓದಲೇಬೇಕಾದದ್ದು ಮಾತ್ರ ಇಲ್ಲಿದೆಯೆಂಬುದು ಸ್ಪಷ್ಟವಾಗಿ ಅನ್ನಿಸುತ್ತಿದೆ...

ಮಾಂಸದಂಗಡಿಯ ನವಿಲು
ಎನ್ಕೆ ಕವಿತೆಗಳು
ಲಡಾಯಿ ಪ್ರಕಾಶನ
ಬೆಲೆ : 140 ರೂ

-ಚಿನ್ಮಯಿ ಹೆಗಡೆ

1 comment:

  1. ಕಳೆದ ಹದಿನೈದು ದಿನಗಳಿಂದ ನವಿಲನ್ನು ಹಿಡಿದವನು ಇನ್ನು ಬಿಟ್ಟೆ ಇಲ್ಲ. ಬಿಡುವ ಮನಸು ಆಗುತ್ತಿಲ್ಲ.

    ReplyDelete

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...