Monday, June 27, 2016

ಉರಿಯ ಪದವು : ಓದುಗರ ಒಂದು ಝಲಕ್




ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ




ಉರಿಯ ಪದವು
ನಾಮದೇವ ಢಸಾಳ್ ಕವಿತೆಗಳು
ಬೆಲೆ : 150
ಲಡಾಯಿ ಪ್ರಕಾಶನ ಗದಗ
ಸಂಪರ್ಕ :9480286844



ಕನ್ನಡಕ್ಕೆ ಇಂಥಹ ಒಳ್ಳೆಯ ಸಾಹಿತ್ಯವನ್ನು ತರ್ಜುಮೆ ಮಾಡಿದ ಅನುಪಮಾ ಮೆಡನ್ ಅವರ ಕಾವ್ಯ ಶಕ್ತಿಗೆ ನನ್ನದೊಂದು ಸಲಾಂ. ಅವರು ಬಳಸಿದ ಪದಗಳ ಲಾಲಿತ್ಯ, ಗಂಭೀರತೆ, ಮತ್ತು ಸ್ಪಷ್ಟವಾದ ಅರ್ಥಬರುವಂತೆ ಉಣಬಡಿಸಿದ್ದಾರೆ.
ನಾಮದೇವ ಡಸಾಳ್
ಮರಾಠಿ ಕವಿಯ ಈ ಕವಿತೆಗಳು ಕವಿತೆಯ ಎಲ್ಲ ದಿಕ್ಕುಗಳಲ್ಲಿ ಎದೆಗೆ ತಿವಿದು ತಿವಿದು ಬುದ್ದಿಹೇಳುವ ರೀತಿಯಲಿವೆ. ಜೊತೆಗೆ ಮಾಡುವ ಎಲ್ಲ ಕೆಲಸಗಳಿಗೂ ಕೂಡಾ ನಿಸರ್ಗ ಸಹಾಯ ಮಾಡ್ತಿದೆ ಇದು ಸರಿಯಲ್ಲ ಎನ್ನುತ್ತಾರೆ ಕವಿ. ಹೂಟ್ಟೋ ಸೂರ್ಯ ಹುಟ್ಟದೇ ಇದ್ದರೇ ಕಣ್ಣಿಂದ ಕಣ್ಮುಂದಿರುವ ಕಷ್ಟಗಳನ್ನಾದರೂ ಕತ್ತಲಲ್ಲಿಟ್ಟು ಕೂಡಬಹುದು ಎನ್ನುತ್ತಾರೆ.
ಹೋರಾಟಮಯ ಬದುಕಿನ ಕವಿತೆಗಳು ಮನಸಿಗಿಳಿದು ರೊಚ್ಚಿಗೆಬ್ಬಿಸುತ್ತವೆ. ವರ್ಣಿಸಲಸಾದ್ಯವಾದ ಬರಹ....
ಪುಸ್ತಕವನ್ನು ಲಡಾಯಿ ಪ್ರಕಾಶನ ಪ್ರಕಟಿಸಿದ್ದು. ಸಂಪರ್ಕಿಸಿ ಓದಿ.

ಓದಿದವರಿಗೆ ಕವಿತೆಯ ಒಂದು ಗಟ್ಟಿಯಾದ ಆಯಾಮ ದೊರಕುವದಂತು ಕಂಡಿತ.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...