Tuesday, June 28, 2016

ಸೈರಾಟ್: ಹಲವು ಕಣ್ಣುಗಳ ಒಂದು ನೋಟ.




ಎಚ್ಚೆಸಾರ್ ಕೊಂಡಿಕೊಪ್ಪ


 ಎಚ್ ಎಸ್ ರಾಮನಗೌಡ's photo.



ನಾನು ಹಲವು ಕಾರಣಗಳಿಗಳಿಗಾಗಿ ಸೈರಾಟ್ ನೋಡಬಾರದು ಅಂತಾ ಮಾಡಿದ್ದೆ ಆದ್ರೆ ನನ್ನ ಹಲವು ಗೆಳೆಯರಿಂದ ಹೇಳಿಸಿಕೊಂಡೂ ಸುಮ್ಮನಿದ್ದೆ. ಹಿರಿಯ ಗೆಳೆಯರಾದ ಶಾಂತಕುಮಾರರ ಪ್ರೀತಿಯ ಒತ್ತಾಯಕ್ಕೆ ಹೋಗದೆ ಇರಲಾಗಲಿಲ್ಲ. ಹೋದೆ ಮೊದಲರ್ಧದ ಸನ್ನಿವೇಶಗಳಿಗೆ ತೇಲಾಡಿದೆ. ಉಳಿದರ್ಧ ಸನ್ನಿವೇಶಕ್ಕೆ ಕುಳಿತ ಕುರ್ಚಿಯ ಬಿಗಿಯಾಗಿ ಹಿಡಿದು ಕುಳಿತೆ. ನನ್ನ ಎದುರಿಗೆ ಕುಳಿತಿದ್ದ ಹುಡುಗ ಹುಡುಗಿಯರು ಚಡಪಡಿಸುತ್ತಿದ್ದರು. ನಾನಾಗಲೆ ಹೊರಬಂದಿದ್ದೆ.

ಅಲ್ಲಿ ಬಂದಿದ್ದ ನನ್ನ ವಯೋಮಾನದ ಹುಡುಗರಲ್ಲಿ ಮೌನವಿತ್ತು. ಹುಡುಗಿಯರಲ್ಲಿ ದುಃಖ ಮಡುಗಟ್ಟಿತ್ತು. ಇನ್ನೂ ಹಲವರು ಲೊಚಗುಡುತ್ತಿದ್ದರು. ಇನ್ನೊಂದು ಗುಂಪು ಏನೂ ಆಗಲಿಲ್ಲ ಎಂಬಂತೆ ನೆಡೆದು ಹೋದರು. ನನ್ನನ್ನು ಹಲವರು ಕೇಳಿದರು. ನೀವೇ ನೋಡಿ ಅಂದೆ. ನನ್ನ ಆಳದಲ್ಲಿ ಉಳಿದಿದ್ದು ರಕ್ತದ ಮಡುವಿನಲ್ಲಿ ಮಲಗಿದ್ದ ಆ ಪ್ರೇಮಿಗಳು. ರಕ್ತದ ಹೆಜ್ಜೆಗಳನ್ನು ಮೂಡಿಸುತ್ತಾ ಹೋದ ಆ ಮಗು. ದುಃಖ ಮಡುಗಟ್ಟಿಸಿಕೊಂಡಿದ್ದ ಹುಡುಗಿಯರು. ಆ ಹುಡುಗರು ಮಾತ್ರ.
ನಾನು ಸುಮ್ಮನೆ ಚಡಪಡಿಸುವುದು ಬೇಡ ಎನಿಸಿ ಕುಳಿತೆ. ಆ ಚಿತ್ರಗಳು ಸುಮ್ಮನೆ ಬಿಡಲಿಲ್ಲ. ನಮ್ಮನ್ನು ಹಿಂಸೆ ಕಾಡಿದಷ್ಟು ಸಂತೋಷ ಕಾಡಲಾರದೆನೋ ಅನಿಸ್ತದೆ. ಯಾಕಂದ್ರೆ ನೋಡಿ ನಮ್ಮ ನಡುವೆ ಇಂತಹವುಗಳಲ್ಲ ಮರ್ಯಾದೆಯ ಹೆಸರಲ್ಲಿ ಎಷ್ಟೊಂದು ನೆಡಿತಿವೆ. ನಮಗೆ ಇವೆಲ್ಲಾ ಸಹಜ ಬಿಡಿ ಅನಿಸ್ತಿದೆಯಲ್ಲ. ನಮ್ಮ ಒಳಗಿನ ಸಂವೇದನೆ ಕಳೆದು ಹೋಗಿದೆಯೇ? ನಮ್ಮನ್ನು ನಾವೇ ನೋಡಿಕೊಳ್ಳುವ ಕಾಲ ಇದಲ್ಲದೆ?.


ಈ ಸೈರಾಟ್ ನ್ನು ಪ್ರತಿಒಬ್ಬ ಪ್ರೇಮಿಗಳು, ಹುಡುಗ- ಹುಡುಗಿಯರು, ಪ್ರತಿಒಬ್ಬ ಅಪ್ಪ- ಅವ್ವಂದಿರು ನೋಡಬೇಕಿದೆ. ಪ್ರೀತಿಸೋರು ಅಂದ್ರೆ ಮುಗುಮರಿಯುವ ಗುಂಪು ನೋಡಬೇಕಿದೆ. ಪ್ರೀತಿಸಿದ ಅದೂ ಬರೊಂದು ಜಾತಿ ಧರ್ಮದ ಹುಡುಗ - ಹುಡುಗಿಯರು ಅರ್ಥಪೂರ್ಣವಾಗಿ ಬದುಕಬೇಕಿದೆ ನಾವುಗಳು ಅವರನ್ನು ಬದುಕಲು ಬಿಡಬೇಕಿದೆ.
ಇನ್ನೂ ಈ ಚಿತ್ರದ ಭಾಷೆ ನನಗೆ ಅರ್ಥವಾಗಲಿಲ್ಲ


ಆದ್ರೆ ಅಲ್ಲಿಯ ಭಾವನೆಗಳು ಅವರು ಏನನ್ನು ಹೇಳಬೇಕು ಅಂತಿದ್ರೊ ಅದು ತರಂಗ ತರಂಗವಾಗಿ ಬಂದು ತಲುಪಿದೆ. ಆ ಹುಡುಗಿಯ ಅಭಿನಯಕ್ಕೆ ನಾನು ಮಾರುಹೊದೆ. ಅವಳ ಉಢಾಪೆಯ ಮಾತುಗಳು, ನಗು, ನೋವುಗಳಿಗೆಲ್ಲ ಜೀವಕೊಟ್ಟಿದ್ದಾಳೆ. ಈ ಚಿತ್ರವೇ ಒಂದು ಸಹಜನೆಲೆಯದು. ಆ ಹುಡುಗ ಅವನ ತಾಯಿ ಗೆಳೆಯರು ಎಲ್ಲರದು ಉತ್ತಮ ಅಭಿನಯ. ಯಾವ ಆಡಂಬರವೂ ಇಲ್ಲದ ಈ ಚಿತ್ರದಿಂದ ಈಗಿನ ಹಲವು ನಿರ್ದೇಶಕರು ಏನು ಕಲಿಯುತ್ತಾರೊ?. ನೋಡಬೇಕು.
ಇನ್ನು , ಏನೆಲ್ಲಾ ಹೇಳಬೇಕು ಅಂತಿದ್ರೊ ಬೇಡ ಅನಿಸಿದೆ. ನನ್ನನ್ನು ಡಿಸ್ಟರ್ಬ್ ಮಾಡಿಸಿದ ಶಾಂತಕುಮಾರರಿಗೂ, ಚಿತ್ರ ನಿರ್ಮಿಸಿದ ಮಂಜುಳೆಯವರ ಟೀಮ್ಗೂ ಏನು ಹೇಳಬೇಕು ತಿಳಿಯುತ್ತಿಲ್ಲ . ಇರಲಿ. ನೋಡದವರು ನೋಡಿ. ನೋಡಿದವರು ಇನ್ನೊಬ್ಬರಿಗೆ ನೋಡಲು ಹೇಳಿ.



2 comments:

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...