Saturday, June 18, 2016

ಪ್ರಜ್ಞಾರವರ ಕಾವ್ಯ"ಛಕ್ಕನೆ ಮೂಡುವ ಬೆಳಕಿನ ಕೋಲು"ಗಳು


ಎಚ್. ಎಸ್. ರಾಮನಗೌಡ್ರಕಾಲನ ಕಾಲಂದುಗೆ
ಕವನ ಸಂಕಲನ
ಪ್ರಜ್ಞಾ ಮತ್ತಿಹಳ್ಳಿ
ಬೆಲೆ : ರೂ 70
ಲಡಾಯಿ ಪ್ರಕಾಶನ ಗದಗ


ಮೊದಲಿಗೆ ನನಗೆ ಹೇಳಲು ಸರಳವಾಗುಂತೆ ದಾರಿಕೊಟ್ಟಿರುವ, ಮುನ್ನುಡಿ ಬರೆದಿರುವ ರಾಜೇಂದ್ರ ಚೆನ್ನಿಯವರ ಮಾತುಗಳು ಹೀಗಿವೆ : "ಈ ಸಂಕಲನದ ಕವಿತೆಗಳು ಮಹತ್ವಾಕಾಂಕ್ಷೆಯ ಕವಿತೆಗಳಲ್ಲ. ಪ್ರಾಯಶಃ ಆ ಕಾರಣದಿಂದ ವಾಚಾಳಿಗಳೂ ಅಲ್ಲ; ಅಥವಾ ಓದುಗನಿಗೆ ಗೊತ್ತಿಲ್ಲದ ಪ್ರವಾದಿ ಸತ್ಯವನ್ನು ಹೇಳಲೇಬೇಕೆಂಬ ಹಟಮಾರಿಗಳೂ ಅಲ್ಲ. ತಮ್ಮ ಬರಹದಿಂದ ಕನ್ನಡ ಸಂವೇದನೆಯು ಬದಲಾಗಬಹುದು ಎನ್ನುವ ಹುಸಿ ನಿರೀಕ್ಷೆಯಲ್ಲಿ ಅವು ನಿಂತಿಲ್ಲ... ಸರಳ ಹಾಗೂ ನಿಧಾನ ಗತಿಯ ಪದ್ಯಗಳಾಗಿದ್ದರಿಂದ ಅವುಗಳಿಗೆ ನನಗೆ ಇಷ್ಟವಾಗುವ ಒಂದು ಹಗುರಾದ Meditative Quality ಇದೆ" ಎಂದಿದ್ದಾರೆ.

ನಾನು ಓದಿದಂತೆಲ್ಲ ಈ Meditative Quality ಸಲ್ಪ ಓಘದ ದಾಟಿಯಲ್ಲಿದೆ ಅನಿಸ್ತು ಅದನ್ನ ತಾರಿಣಿ ಅಕ್ಕಾ "Extravagance ಕೊಂಚ ಮರೆಯಾದರೆ ಎಂಬ ಭಾವನೆ ಹುಟ್ಟಿತು" ಎಂದಿದ್ದಾರೆ. ಅಂದ್ರೆ ಈ Extravaganceನ ಗುಣ ಅವರ ಎಲ್ಲ ಕವಿತೆಗಳಲ್ಲೂ ಇದ್ದೆ ಇದೆ (ಕೆಲವನ್ನು ಬಿಟ್ಟು) ಅದು ಎಲ್ಲವನ್ನು ಹೇಳಿಬಿಡುವ ಕಲೆಗಾರಿಕೆ ಅದು. ಅದು ಮರೆಯಾದ್ರೆ ಅನ್ನುವ ಆತಂಕ ಮಾತ್ರ. ಹೀಗೆ ಕಟ್ತಾ ಕಟ್ತಾ ಸೂಕ್ಷ್ಮತೆ ಮರೆಯಾಗಿದೆ ಎನ್ನುವಂತಿಲ್ಲ. ಸೂಕ್ಷ್ಮತೆಯ ಎಚ್ಚರವೂ ಕವಿಗಿದೆ. ಪ್ರಜ್ಞಾರವರ ಕಾವ್ಯ"ಛಕ್ಕನೆ ಮೂಡಿದ ಬೆಳಕಿನ ಕೋಲು"ಗಳನ್ನು ಹುಟ್ಟಿಸಿ ಮತ್ತೆ ಓದುವಂತೆ ಮಾಡುತ್ತವೆ.


'ಹೊಳಯ ದಂಡೆಯಲ್ಲಿ " ಕವಿತೆ ನನಗೆ ಬಹಳ ಹೊಸದಾಗಿ ಕಂಡ್ತು ಅಲ್ಲಿ -
'ಹುಡುಕುತ್ತಿದ್ದೇನೆ ಕಳಚಿಟ್ಟ ಹೃದಯವನ್ನು
ಮೊಸಳೆಯ ಬೆನ್ನೇರಿ ಹೊಳೆ ದಾಟುವಾಗ
ಜತನವಾಗಿ ತೆಗೆದಿಟ್ಟ ನೇರಳೆ ಮರವನ್ನು
ಗುರುತಿಸಲಾಗದೇ ಕಂಗೆಟ್ಟಿದ್ದೇನೆ'...

'ಅಸಲಿ ನಕಲಿ ಪತ್ತೆ ಸಿಗದ ನೇರಳೆಗಳು
ಎಲ್ಲಿ ಹುಡುಕಲಿ ಹೃದಯವನ್ನು' (25)

ಇದೇ ದಾಟಿಯ "ಹೀಗೊಂದು ನಾಟಕ"ಕವನ  ಕೂಡ ಗಮನ ಸೆಳಯುತ್ತೆ. "ಕಲ್ಲಿನಾಟ" "ಐ ಸಿ ಯು ಪದ್ಯಗಳು" ಹೇಗೆ ವಿವರಿಸ್ತಾ ತನ್ನೊಳಗೆ ಶಬ್ದಗಳನ್ನು ಕಟ್ತಾ ಕವಿತೆಗಳಾಗಿವೆ ಅಂದ್ರೆ ಬರೀ ಶಬ್ದಗಳೆ ಕವಿತೆ ಕೊಡಾ ಆಗಲಾರವೂ ಅಂತಾ ನಾವು ನೋಡುವ ಹೊತ್ತಲ್ಲಿ ಇವು ಗೆದ್ದಿವೆ ಅಂತಾ ನನಗೆ ಅನಿಸ್ತು.
'ಹದ ಬೆಂಕಿಗೆ ಒಡ್ಡಿಕೊಳ್ಳುತ್ತ
ಕಣಕಣವೂ ಕಾದು ಕೆನ್ನಾಲಿಗೆಯ ಹಿತಕ್ಕೆ'(55)
ಅಮೂರ್ತ ನೋವೊಂದು ಜಿಲ್ಲನೆ ಹನಿವೊಡೆದ ಹಾಗೆ(46)
'ನೋವುಗಳಿಗೆ ಉಗುರುಗಳಿಲ್ಲ'
'ಬೆರಳು ಚುರುಕಾಗಲು ಕೈಅದ್ದಿ
ಕೂತಿದ್ದಾನೆ ಮೊಲದ ಕಣ್ಣಲ್ಲಿ'(35)
"ಜೊಕೆ" "ಎಷ್ಟೊಂದು ಚಂದಿರ" ಕವಿತೆಯ ಕೆಲಸಾಲುಗಳು ಮರೆಯುಲಾಗುವುದಿಲ್ಲ .

ನನಗೆ ಇಷ್ಟವಾದ ಕೆಲ ಪದ್ಯಗಳು 'ಅಪ್ಪ' 'ತಲೆಮಾರು' 'ಕಾಲನ ಕಾಲಂದುಗೆ' 'ನಂಬಿಕೆ' 'ಅಗೈವಾಸನೆ ಮತ್ತು ನೆನಪು' 'ಒಲೆ' 'ಆಯ್ಕೆ'. ಇನ್ನೂ ಹೇಳಬೇಕು,

ತನಗೆ ಕಂಡಿದನ್ನು ಭಾವಪೂರ್ಣವಾಗಿ ಒಂದು Extravagance ತನ್ನಲ್ಲಿ ಇಟ್ಟುಕೊಂಡ ಒಂದು ಕವಿತೆ ಯಾಗಿಸುವುದಿದೆಯಲ್ಲ ಅದು ನನಗೆ ಬಹಳ ಮುಖ್ಯ ಅನಿಸ್ತು. Pablo Nerudaನ ಕವಿತೆಯಿದೆ. (-You start dying slowly' - poem) "If you do not listen to the sounds of life," ಪ್ರಜ್ಞಾರವರು ತನಗೆ ಎಷ್ಟುಸಾಧ್ಯವೊ ಅಷ್ಟ ಶಬ್ದಗಳನ್ನು ಕೇಳಿದ್ದಾರೆ ನಮಗೂ ಕೇಳಿಸುತ್ತಿದ್ದಾರೆ ಇದು ಮುಖ್ಯ ಅಂತಾ. ಇನ್ನೂ ಒಂದು ವಿಷಯ ಇಲ್ಲಿಯೇ ಹೇಳಿಬಿಡುವೆ. ನನ್ನ ತಲೆಮಾರಿನ ಅನೇಕ ಕವಿಗಳಲ್ಲಿ ತೀರಾ ವಾಚ್ಯವಾಗಿ ಅಥವಾ ತೀರಾ ಗಂಭೀರತೆಯ ಅರ್ಥದಲ್ಲಿ ಬರಿತಿದಾರೆ. ರಕ್ತ ಕಂಡರಿಸಿದರೆ ಮಾತ್ರ ಕಾವ್ಯ ಅಂತ್ಲೂ ಬರೀ ಪ್ರೀತಿಯ ವ್ಯಸನವಾಗಿಸಿ ಬರಿಯುವುದಿದೆ ಅಲ್ಲಿ ಒಂದು ನಾಟಕೀಯತೆ ಇರಬೇಕು ಧ್ವನಿ ಇರಬೇಕು ಸೂಕ್ಷ್ಮತೆ ಬೇಕು ಅನಿಸುತ್ತೆ. ಹಾಗೆ ಬರೀ ಶಬ್ದಗಳೆ ಕವಿತೆ ಕೊಡಾ ಆಗಲಾರವೂ ಅಂತಾ. ಇದರಲ್ಲಿಯು ಬಹಳ ಚನ್ನಾಗಿ ಬರೆದವರೂ ಇದ್ದಾರೆ ನಾವು ಓದಬೇಕಷ್ಟೆ.

ಈ ಕವನ ಸಂಕಲನಕ್ಕೆ ಎರಡು ಅತೀ ಉಪಯುಕ್ತ ಮುನ್ನುಡಿಗಳಿವೆ ಎಲ್ಲ ಕಾವ್ಯಾಸಕ್ತರೂ ಓದಲೇ ಬೇಕು. ಓದುತ್ತಾರೆ ಅನ್ನುವುದು ನನ್ನ ನಂಬಿಕೆ. ಪ್ರಜ್ಞಾರವರಿಂದ ಇನ್ನಷ್ಟನ್ನು ನಿರೀಕ್ಷಿಸುತ್ತ. ಕವಿತೆಯ ನೆವದಲ್ಲಿ ಇಷ್ಟನ್ನು ಹೇಳಬೇಕಾಯಿತು ಇರಲಿ. ಪ್ರಜ್ಞಾರವರಿಗೆ, ಪುಸ್ತಕದ ವಿನ್ಯಾಸ ಮಾಡಿರುವ ಅರುಣ್ ಜಿ, ಅಷ್ಟೇ ಅಚ್ಚಕಟ್ಟಾಗಿ ಮುದ್ರಿಸಿರುವ ಇಳಾದ ಸಿಬ್ಬಂದಿಗೆ ಅಭಿನಂದನೆಗಳು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...