Sunday, June 12, 2016

’ತ್ರಿಜ್ಯ’ ಪತ್ರಿಕಾ ಸಂವಾದ’ತ್ರಿಜ್ಯ’ ಪತ್ರಿಕಾ ಸಂವಾದ ಮುಂದೂಡಿಕೆ

ಚಿಂತನಾಸಕ್ತರೆ, ಆತ್ಮೀಯರೆ,
    ನಮಸ್ಕಾರ. ನಮ್ಮ ಧಾರವಾಡದಲ್ಲಿ ಈ ವರ್ಷ ಮೇ ಹೂವುಗಳೊಟ್ಟಿಗೆ ಚಿಂತನೆಯ ಹೊಸ ಕನಸೊಂದು ಮೊಳೆತಿದೆ. ಈ ಕನಸಿನ ಬೀಜವನ್ನು ದೂರದ ಬರೋಡಾದಿಂದ ಎದೆಯ ಮಣ್ಣಿನಲ್ಲಿಟ್ಟು ತಂದು ಇಲ್ಲಿ ಬಿತ್ತಿದವರು ಡಾ. ಗಣೇಶ ಎನ್. ದೇವಿಯವರು. ಇದುವರೆಗಿನ ನಮ್ಮ ಚಿಂತನಾ ಕ್ರಮದಲ್ಲಿ ಕೇಂದ್ರ ಮತ್ತು ಪರಿಧಿಗಳೆಂಬ ಪೂರ್ವನಿಶ್ಚಿತ ದೃಷ್ಟಿಕೋನ ಮಾತ್ರ ರೂಢಿಯಾಗಿದೆ. ಈ ಎರಡನ್ನೂ ಹೊರತುಪಡಿಸಿದ, ಇವುಗಳನ್ನು ಸಮತೋಲಿಸಿದ ಸಂವಹನದ ದಿಕ್ಸೂಚಿ ರೇಖೆಯೊಂದು ಆರೋಗ್ಯವಂತ ಸಮಾಜದಲ್ಲಿ ಇರುತ್ತದೆ., ಇರಬೇಕಾಗುತ್ತದೆ. ಅದು ತ್ರಿಜ್ಯ. ತ್ರಿಜ್ಯವು ಪ್ರಭುತ್ವ ಮತ್ತು ಜನಬದುಕಿನ ಕೊಂಡಿಯಾಗಿರುವ ಆಗಬೇಕಿರುವ ಚಿಂತನಾ ವರ್ಗದ ಸೂಚಿಯೂ ಆಗಿದೆ. ಇದು ಯಾವುದೇ ನಿರ್ದಿಷ್ಟ ’ಐಡಿಯಾಲಜಿ’ ಯ ಪ್ರಸರಣ ಸಂಘಟನೆಯಲ್ಲ.

    ತ್ರಿಜ್ಯ ಬಳಗವು ಜೂನ್ ೧೧, ೧೨ ರಂದು ಹಮ್ಮಿಕೊಂಡಿದ್ದ ಕನ್ನಡದ ಪತ್ರಿಕೆಗಳ ಸಂವಾದ ಸಂಕಿರಣವನ್ನು ಕಾರಣಾಂತರಗಳಿಂದ ಬರುವ ಜುಲೈ ೨, ೩ಕ್ಕೆ ಮುಮದೂಡಲಾಗಿದೆ. ಮಾಧ್ಯಮಗಳನ್ನು ಓದುವುದೆಂದರೆ, ಸಮಕಾಲೀನ ಸಮಾಜದ ಸೂಕ್ಷ್ಮವನ್ನು ಅರಿಯುವ ದಾರಿಯಾಗಿರುತ್ತದೆ. ಪ್ರಜಾಪ್ರಭುತ್ವದ ಎಥಿಕ್‌ನ್ನು ಕಾಪಾಡಬೇಕಾದ ಮಾಧ್ಯಮಗಳು ಬಂಡವಾಳವಾದದ ಸರಕಾಗಿ ಅಧಿಕಾರ ರಾಜಕಾರಣಕ್ಕೆ ಎಲೆಹಾಸಿಕೊಳ್ಳುತ್ತಿರುವ ಕಾಲವಿದು. ಮಾಧ್ಯಮಗಳ ವಿಮರ್ಶಾತ್ಮಕ ಓದು ಇಂದಿನ ತುರ್ತು ಅಗತ್ಯ. ಆ ಕಾರಣಕ್ಕಾಗಿ ಈ ಸಂವಾದ.

    ವಿಷಯ ಮಂಡನೆಗೆ ಕೆಲವು ಪ್ರವೇಶಿಕೆಗಳು :-

೧.    ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಆಸಕ್ತರು ವಿಷಯ ಮಂಡನೆ ಮಾಡಬಹುದು. ವಿಷಯ ಮಂಡನೆಗೆ ೨೦ ನಿಮಿಷ ಕಾಲಾವಧಿ. ಒಂದೊಂದು ಗೋಷ್ಠಿಗಳ ನಂತರ ೨೦ ನಿಮಿಷ ಚರ್ಚೆ.

೨.    ನೀವು ಕನ್ನಡದ ದೈನಿಕ, ವಾರ, ಪಾಕ್ಷಿಕ, ಮಾಸಿಕ ಯಾವುದೇ ಪತ್ರಿಕೆಯನ್ನು ಆಯ್ದುಕೊಳ್ಳಬಹುದು. ಆಯ್ದ ಪತ್ರಿಕೆಯು ಸಾಹಿತ್ಯಿಕ, ವೈಚಾರಿಕ, ಜನಪ್ರಿಯ, ಕ್ರೀಡೆ, ಮಕ್ಕಳಲೋಕ ಹೀಗೆ ಯಾವ ಕ್ಷೇತ್ರವನ್ನಾದರೂ ಕೇಂದ್ರೀಕರಿಸಬಹುದು.

೩.    ಆಯ್ದುಕೊಂಡ ಪತ್ರಿಕೆಯ ಹುಟ್ಟಿನ ಕಾರಣಗಳು, ಪ್ರಸಾರದ ಸಂಖ್ಯೆ, ಪ್ರಸಾರದ ಕ್ರಮ, ಸಂಪಾದಕ ಮಂಡಳಿಗಳ ಬಗ್ಗೆ ಮಾಹಿತಿ ಪಡೆಯುವುದು.

೪.    ಪತ್ರಿಕೆಯ ಯಾವ ಬರಹ, ಯಾವ ನಿಲುವು ಇಷ್ಟವಾಗಿದೆ / ಇಷ್ಟವಾಗಿಲ್ಲ, ನೀವು ಬಯಸುವ ಬದಲಾವಣೆಗಳೇನು? - ವಿಶ್ಲೇಷಣೆ.

ಇವು ಪ್ರವೇಶಿಕೆಗಳು ಮಾತ್ರ. ನಿರ್ದಿಷ್ಟ ಚೌಕಟ್ಟಲ್ಲ. ನೀವು ವಿಸ್ತರಿಸಿಕೊಳ್ಳಬಹುದು.   

ವಿಷಯ ಮಂಡಕರು ಗಮನಿಸಬೇಕಾದ ಸೂಚನೆಗಳು:

೧.    ಪ್ರಬಂಧ ಮಂಡನೆಯ ಆಸಕ್ತರು ಕಡ್ಡಾಯವಾಗಿ ೧೫-೦೬-೨೦೧೬ರೊಳಗೆ ತಾವು ಅಧ್ಯಯನಕ್ಕೆ ಆಯ್ದುಕೊಂಡ ಪತ್ರಿಕೆಯ ಹೆಸರನ್ನು ತಿಳಿಸಬೇಕು (ಒಂದು ಪತ್ರಿಕೆಯು ಒಮ್ಮೆ ಮಾತ್ರ ಚರ್ಚೆಗೆ ಒಳಪಡಲಿ ಎಂಬುದು ಉದ್ದೇಶ)

೨.    ಪ್ರಬಂಧ ಮಂಡಕರು ತಮ್ಮ ಆಯ್ಕೆಯ ಪತ್ರಿಕೆಯ ಸಂಪಾದಕ ಮಂಡಳಿಯನ್ನು ಸಂಪರ್ಕಿಸಿ, ಮಾಹಿತಿ/ಸಹಕಾರ ಪಡೆದುಕೊಳ್ಳಬಹುದು.

೩.    ದಯವಿಟ್ಟು ತಾವು ಸ್ವಂತ ಖರ್ಚಿನಲ್ಲಿ ಧಾರವಾಡಕ್ಕೆ ಬಂದು ಹೋಗಬೇಕಿದೆ. ಊಟ-ವಸತಿಯ  ವ್ಯವಸ್ಥೆ ಮಾಡಲಾಗುವುದು. ಸರ್ಟಿಫಿಕೇಟ ನೀಡಲಾಗುವುದು.


ಸಂಪರ್ಕ ವಿಳಾಸ:
1) ಸುರೇಖಾ ದೇವಿ 9427301790  surekha-devi@yahoo.com

2) ರಜನಿ ಗರುಡ  8277026286  rajanigarud@gmail.com   

3) ವಿನಯಾ  8762173258                        vinayaokkund@gmail.com

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...