Saturday, June 18, 2016

ಗೆಳೆಯನೊಬ್ಬನ ಫೋನ್ ಸಂವಾದದ ಬಳಿಕ




ನೀರ ಸೀಳಿ ಹೆದ್ದಾರಿ ಮಾಡುವ ಹಠ

 ದೂರ ದಡ ಕಾಣುವುದು
 ಅದೇ ಶಕ್ತಿ ತುಂಬುವುದು
ಪ್ರವಾದಿಯೊಬ್ಬ ನೀರ ಮೇಲೆ ನಡೆದಿದ್ದ
 ಇನ್ನೊಬ್ಬ ಕಾಪಾಡಿದ್ದ ನೆರೆ ನಂಬಿದ ಮಂದಿಯ
ಎಂಥಾ ಬಿರು ಬಿಸಿಲಿಗೂ 
ನೀರಲ್ಲಿ ಮೈ ಬೆವರದು
ತಂಪಾಗಿರಿಸುವುದು ಇಳಿದವರ
ಸೀಳಿ ಮುನ್ನುಗ್ಗುವವ ಮುಂದೊತ್ತಿದಂತೆಲ್ಲಾ
 ಮತ್ತೆ ನೀರು ಕಣಕಣ ತಬ್ಬಿ ಒಂದಾಗುವುದು

 ಬೆಂಡು ತೇಲುವುದು
 ಗುಂಡು ತಳಕ್ಕಿಳಿಯುವುದು 
 ನೀರು ಮರೆ ಮಾಡುವುದು 
ನೀರೆಂದರೆ ಕಣಕಣಗಳ ಗೌಜಿ
ಭಾರ ಮನುಜರನ್ನೂ ಮುಳುಗಿಸಿ
 ತೇಲಿಸುವುದು;
 ಅವರಷ್ಟು ಹಗುರಾದ ಮೇಲೆ.
ಉಸಿರ ಹಂಗು ತೊರೆದ ಮೇಲೆ.
ಅದಕ್ಕೇ ಪೂರ್ವಜನೊಬ್ಬ ದೋಣಿಯಲ್ಲಿ
 ಸಿಕ್ಕ ಮಾದರಿಗಳನ್ನಷ್ಟೇ ತುಂಬಿ ದಾಟಿದ್ದ
 ಮತ್ತೆ ವೃದ್ಧಿಯಾಗುವ ಭರವಸೆಯಲ್ಲಿ
ನೀರ ಸೀಳಿ ದಾರಿ ಮಾಡುವ ಕನಸು
 ಕಣ್ಣ ತುಂಬಾ
 ದಡದಲ್ಲಿ ಬಿಟ್ಟಗಣ್ಣಿನ ರಾಶಿ ಮೀನು
ನೀಲಿ ಬಾನ ದಿಟ್ಟಿಸುತ್ತಿವೆ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...