Thursday, June 09, 2016

ಒಂಟಿ ಕುದುರೆ ರಸ್ತೆ ದಾಟಿದ್ದು




ಸ್ಪೂರ್ತಿ ಗಿರೀಶ್



ತುಸು ತಡೆದು ಬೆಳಕಿಗೆ
ವೇಗಕ್ಕೆ
ಶಬ್ದಕ್ಕೆ ಬೆಚ್ಚಿ ಮುಂದಿಟ್ಟ ಹೆಜ್ಜೆ ಹಿಂತೆಗೆದು
ನಿರಾಳ
ನಿಂತು
ಮಿಕ ಮಿಕ ನೋಡಿ ರಸ್ತೆ ದಾಟುವಾಗ
ಯಾರೇನ್ನುವಿರಿ ನನ್ನ
ಸಾಮಾನ್ಯ ಕುದುರೆಯೆಂದು
ಬೆಳ್ಳಗೆ ಬೆಳ್ಳಕ್ಕಿ ನೋಡಿದರ ಕಣ್ಣು
ಚಿಮ್ಮಿ ಹಾರಿಸುವೆ ಊರಾಚೆ ಬೆಟ್ಟಗಳಿಗೂ ಆಚೆ
ಬೇಕೇಬೇಕೆಂದ ರಾಜಕುಮಾರನಿಗೆ
ತಾನು ಒದಗಿದ್ದು
ಮೈ ನೀರು ಅಲುಗದಂತೆ ಅವನ ಮೆರೆಸಿದ್ದು
ಮದುವೆ ದಿಬ್ಬಣ
ಪಿಸುಮಾತಿನ ಬಿಸಿ ಕೇಳಿ ಕೆರಳಿದ್ದು
ನನ್ನ ಯೌವನವೆಲ್ಲ ಅವನ ಕಾಲಡಿ ಕಳೆದುಬಿಟ್ಟಿದ್ದು
ಬಡಪಾಯಿ -ನಿರುಪಯುಕ್ತ ಬದುಕು
ಮಧ್ಯ ರಸ್ತೆಯಲ್ಲೇ ಎಲ್ಲಾ
ಎಲ್ಲಾ
ನೆನಪಾಗಿ ಬಿಕ್ಕುವಾಗ
ಕುರುಚಲು ಗಡ್ಡ
ತಿದ್ದಿ ತೀಡಿದ
ಚಾಟಿ ಬಾಲದ ಜುಟ್ಟು
ಕಣ್ಕಮಲ‌ ಮುಖಮಲ್ಲಿನ ನುಣುಪು
ಎಲ್ಲಿ ಈಗೇಲ್ಲಿ
ಬಾಡಿದ ಬಣ್ಣ ಇಳಿದ ತೊಗಲು
ಮುಕ್ಕು ರಥ ಹೊತ್ತ
ಸೋತಕಾಲು
ನಿರಾಸೆಯಲ್ಲಿ ತೀವ್ರಯೋಚಿಸುವಾಗ
ಜನಜಂಗುಳಿ ನಡುವೆ ಬೆಚ್ಚಿ
ತೆವಳುತ್ತಾ
ಕಾರು, ಬಸ್ಸು, ತರಾವರಿ
ಸವಾರರ ಸರದೂಗಿಸಿಕೊಂಡು
ಅಲ್ಲಲ್ಲಿ ನಿಂತು
ಮೇಲು ರಸ್ತೆ  ಕೊನೆಗೂ ದಾಟಿ
ಕಿರು ಒಣಿಯಲ ಕಸದ ರಾಶಿಯಲಿ
ಒಣಗಿದ್ದ ಹಳಸಿದ್ದ
ತರಗು ತರಕಾರಿ ಆಯ್ದು
ಮೇಯ್ದು ಅದನ್ನದನೆ ಮೆಲುಕಾಕಿ
ಜೀವನ ದೂಕುವ
ನನ್ನ
ಯಾರೇನ್ನುವಿರಿ  ಸಾಮಾನ್ಯ ಕುದುರೆಯೆಂದು
***

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...