Wednesday, June 08, 2016

ಉರಿದ ಉಲ್ಕೆ : ಎನ್ಕೆ ಹನುಮಂತಯ್ಯ ಕಾವ್ಯ


ಎಚ್. ಎಸ್. ರಾಮನಗೌಡರಲಡಾಯಿ ಪ್ರಕಾಶನ ,ಗದಗ
(9480286844)

ಬೆಲೆ 140
ವಿನ್ಯಾಸ ಅರೂಣ್ ಜಿ
ಪ್ರಕಟಣೆ : 2016


ಎನ್ಕೆ ಹನುಮಂತಯ್ಯನವರು ನಮ್ಮೊಂದಿಗಿಲ್ಲ ಆದರೆ ಅವರ 'ಅಳಿಸಲಾಗದ ಲಿಪಿ' ನಮ್ಮ ಮುಂದಿದೆ.
ಎನ್ಕೆಯವರು ನಮ್ಮನ್ನು ಅಗಲಿದಾಗ ನಾನು ರಾಮದುರ್ಗದಲ್ಲಿ ಬಿಕಾಂ ಮೊದಲ ವರ್ಷದಲ್ಲಿದ್ದೆ. ಗೌರಿ ಲಂಕೇಶ ಪತ್ರಿಕೆಯ ತುಂಬಾ ಎನ್ಕೆಯವರದೆ ಸುದ್ದಿ. ಪ್ರಜಾವಾಣಿಯು ಕೆಲ ಕವನಗಳನ್ನು ಪ್ರಕಟಸಿತ್ತು ಅವರ ಕವನಗಳನ್ನು ಓದಿದ್ದು ಅದೆ ಮೊದಲಬಾರಿ. ಆವತ್ತು ಲಂಕೇಶ ಪತ್ರಿಕೆಯಲ್ಲಿ 'ಅವ್ವ ನಿಂತೇಯಿದ್ದಾಳೆ' ಕವನ ಪ್ರಕಟವಾಗಿದ್ದ ನೆನಪು.
ಈ ಹಿಂದೆ ಲಂಕೇಶರ ವಿಶೇಷ ಸಂಚಿಕೆಯಾಗಿ 'ಮಯೂರ'ದವರು ಉರಿದ ಉಲ್ಕೆ ಅಂತಾ ಹೆಸರು ಕೊಟ್ಟು ಪ್ರಕಟಿಸಿದ್ರು ಎನ್ಕೆ ಕಾವ್ಯ ಓತ್ತಾ ಓತ್ತಾ ಎನ್ಕೆ ನನಗೆ ಉರಿದ ಉಲ್ಕೆಯ ತರಹ ಕಡ್ರು. 

ಎನ್ಕೆ ಕಾವ್ಯ ಅಂದ್ರೆ ನನಗಂತು 'ನಾಡಿಯೆ ನುಡಿದ ಕಾವ್ಯ'ದಂತೆ. ಹಿಮದ ಹೆಜ್ಜೆ ಸಂಕಲನದ ಸಹಜತೆ ಚಿತ್ರದ ಬೆನ್ನ ಸಂಕನಕ್ಕೆ ಬರುವಾಗ ಕೆಲ ಸಂಕೀರ್ಣವೆನಿಸುವ ಕವನಗಳೂ ಇವೆ ಇದು ಎಷ್ಟು ಸಹಜ ಕಾವ್ಯ ಅಂದ್ರೆ ಇಷ್ಟು ಸಹಜವಾಗಿ ಕಾವ್ಯನಾ ಬರಿಬಹುದಾ ಅನಿಸುವಷ್ಟು ಸಹಜವಾಗಿವೆ. ನಾನು ಅಡಿಗರ ರಚನೆಗಳನ್ನು ಓದುವಾಗ ಇಷ್ಟು ಸಂಕೀರ್ಣವಾಗಿ
ಬರಿಬಹುದೆ ಅನಿಸ್ತಿತ್ತು. ಬೇಂದ್ರೆ ಅಜ್ಜನ ಕವಿತಾ ಓದುವಾಗ ಇಷ್ಟು ಓಘಪೂರ್ಣವಾಗಿ ಬರಿಯಬಹುದೆ
ಅನಿಸ್ತಿತ್ತು. ಅಂದ್ರೆ ಸಹಜವಾಗಿದೆ ಅಂದ ಮಾತ್ರಕ್ಕೆ ತಪ್ಪಾಗುವುದು ಬೇಡ 'ಅದು ಹಾಗಲ್ಲ ಕಣ್ರೀ ಹೀಗೆ ಓದಿ' ಅನ್ನುತ್ತೆ ಎನ್ಕೆ ಕಾವ್ಯ. 


ಇಲ್ಲಿ ಅನೇಕ ನುಡಿಗಟ್ಟುಗಳು ಹೊಸ ಶಬ್ದಗಳು ಓದು ದಾರಿಯಲ್ಲಿ ತಡೆದು ನಿಲ್ಲಿಸುತ್ತವೆ. ಹಾಗೆ ನಿಲ್ಲಿಸಿ ಮಾತನಾಡುತ್ತವೆ. ನಮಗೆ ಅನುಭವವಕ್ಕೆ ಬಾರದೆ ಹೋಗುವ ಸಾಲುಗಳೂ ಇವೆ. 


ಪ್ರತಿ ಪದ ಪದಾರ್ಥಗಳನ್ನು ಎತ್ತಿ ಹೇಳುವುದು ಬಲು ಜಟಿಲ ನಿವೇ ಓದಿ ನೀವೆ ಅರಗಿಸಿಕೊಳ್ಳಬೇಕಾದ ಸಂಕಲನವಿದು.
ಕೆಲ ಕವನಗಳು ನನ್ನನ್ನು ಡಿಸ್ಟರ್ಬ್ ಮಾಡಿವೆ ಕಾಡಿವೆ. ಇನ್ನೂ ಒಮ್ಮೆ ಇನ್ನೂ ಒಮ್ಮೆ ಇನ್ನೂ ಒಮ್ಮೆ ..ಓದುವಂತೆ ಮಾಡಿವೆ ವಿಭಾರವರನ್ನು ನೆನಪಿಸುವ ಕವಿತೆಗಳೂ ಇವೆ. ಹಾಗೆ ನಮ್ಮನ್ನು ಡಿಸ್ಟರ್ಬ್ ಮಾಡಿದ, ಕಾಡಿದ, ಇನ್ನೂ ಒಮ್ಮೆ ಓದುವಂತೆ ಮಾಡಿದ ಆ ಅವನು ಬೌತಿಕವಾಗಿ ನಮ್ಮೊಡನಿಲ್ಲ. ಆ ಅವನು ನಮ್ಮವನಾಗಿ ಕಾವ್ಯದ ನಾಡಿಯೊಳಗೆ ಇಳಿದುಬಿಟ್ಟಿದ್ದಾನೆ. ಇನ್ನು ಎನ್ಕೆ ಅಳಿಸಲಾರದ ಕಾವ್ಯ ಅಳಿಸಲಾರದ ನೆನಪು ಅಂತಾ ಹೇಳಿದರೆ ಮುಗಿಯಿತೆ. ಇಲ್ಲ ಮತ್ತು
ಹೌದು ಎನ್ನುವ ಎರಡು ಉತ್ತರಗಳಿವೆ. ನಾನು ಇನ್ನು ಹೇಳಬೇಕು ಎನ್ನುವಾಗಲೆ ಏನನ್ನು ಹೇಳಲಾಗುತ್ತಿಲ್ಲ. ಇರಲಿ. ಇನ್ನೂ ಒಮ್ಮೆ ಓದುವ ಮತ್ತೆ ಹೇಳುವೆ.


ಹಾಗೆ ನಾಲ್ಕು ಒಳ್ಳೆಯ ಮುನ್ನುಡಿ ,ಹಿನ್ನುಡಿ ರೂಪದ ಬರಹಗಳಿವೆ. ಇಲ್ಲಿ ಒಂದು ತಕರಾರನ್ನು ಹೇಳಿ ಬಿಡುವೆ ರಹಮತ್ ಸಾರ್ ಕೆಲ ಕವನಗಳನ್ನು ಉಲ್ಲೇಖಿಸ್ತಾ 'ಅಲ್ಲಮನದೊ ಶಿವಪ್ರಕಾಶರದೊ ಸರಿಯಾಗಿ ಅರಗದ ಪ್ರಭಾವದ ಎಳೆಗಳಿವೆ ಎಂದಿದ್ದಾರೆ. ಆದರೆ ಆ ಕವನಗಳು ಭಿನ್ನವಾಗಿವೆ ಅನ್ನಿಸಿದೆ. ಅವರು ಉದಾಹರಿಸಬಹುದು.


ಇನ್ನು ಪುಸ್ತಕದ ವಿನ್ಯಾಸ ಮಾಡಿರುವ ಅರೂಣ್ ಜಿ ಅಚ್ಚಕಟ್ಟಾಗಿ ಮುದ್ರಿಸಿರುವ ಇಳಾ ಸಿಬ್ಬಂದಿ ಸಂಪಾದಸಲು ಶ್ರಮಿಸಿರುವ ಅಕ್ಕ ಅನುಪಮಾ ಹಾಗೆ ಬಸೂಸರ್ ಅಭಿನಂದನಾರ್ಹರು ನನ್ನ ಮಿತಿಯಲ್ಲಿ ಹೇಳುವುದಾದೆ ಕಾವ್ಯಾಸಕ್ತರು ಓದಲೇ ಬೇಕಾದ ಪುಸ್ತಕ.


ಒಂದು ಹೈಯ್ಕು

ನಿನ್ನ ಮೌನದಲ್ಲಿ
ಕೋಟಿ ಕವಿತೆ ಅಡಗಿವೆ
ಅಲ್ಲಿ
ನನ್ನದೊಂದು ಕವಿತೆಯಿದೆ

ಒಂದು ಕವಿತೆ

'ಹೆಜ್ಜೆಯ ಹಿಂದೆ'
ಬಾ ಗೆಳತಿ
ಚೂರಾದ ಮುಖಗಳನು ಆಯೋಣ
ಎಲ್ಲಾದರೂ
ನಗು ಮೆತ್ತಿಕೊಂಡಿದ್ದರೆ
ನಮ್ಮ ತುಟಿಗಳಿಗೆ ತುಂಬಿಕೊಳ್ಳೋಣ..
ಎಲ್ಲಾದರೂ
ಅಳು ಅಂಟಿಕೊಂಡಿದ್ದರೆ
ನಮ್ಮ ಕಣ್ಣುಗಳಿಗೆ ಬಸಿದುಕೊಳ್ಳೋಣ..
ಬಾ ಗೆಳತಿ
ಚೂರಾದ ಎದೆಗಳನು ಆಯೋಣ
ಎಲ್ಲಾದರೂ ಹದವಿದ್ದರೆ
ಅಲ್ಲಿ ಬೀಜಗಳಾಗಿ ಮೊಳೆಯೋಣ
***

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...