Tuesday, June 07, 2016

ಮೇ ಸಾಹಿತ್ಯ ಮೇಳದ ಬಗ್ಗೆ ಸಂಗಮೇಶ ಮೆಣಸಿನಕಾಯಿ




ಈ ಬಾರಿಯ ಸಾಹಿತ್ಯ ಮೇಳ ಬೊಗಸೆಯಷ್ಟಲ್ಲ, ಸಾಕಷ್ಟು ಭರವಸೆಯ ಆಶಾ ಭಾವವನ್ನು ಹುಟ್ಟುಹಾಕಿದೆ. ದ್ವೀಪದಂತಿದ್ದ ಸಮಾನ ಮನಸ್ಕ ಒಂಟಿ ಮನಸ್ಸುಗಳನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಹಾಗೆ ನೋಡಿದರೆ ಈ ತರಹದ ಮೇಳಗಳು ಕರ್ನಾಟಕದ ಮಟ್ಟಿಗೆ, ಕರುನಾಡಿನ ಚಿಂತಕರ ಮಟ್ಟಿಗೆ ಹೊಸತೇನಲ್ಲ. ಆದರೆ ಸಮಾನ ಮನಸ್ಕ ಲೇಖಕರು ವಿಭಿನ್ನ ರಾಜ್ಯ-ಭಾಷೆಗಳಿಂದ ಭಾಗವಹಿಸಿದ್ದು ಧಾರವಾಡದ ಮಟ್ಟಿಗೆ ಒಂದು ಸಾಧನೆಯೇ ಸರಿ.

ವೃತ್ತಿಯ ಅನಿವಾರ್ಯತೆಯಿಂದ ನನಗೆ ಎರಡನೆಯ ದಿನ ಭಾಗವಹಿಸಲು ಸಾಧ್ಯವಾಗಲಿಲ್ಲ. ಅದು ನನಗೆ ವೈಯಕ್ತಿಕವಾಗಿ ದೊಡ್ಡ ಹಾನಿಯೇ ಸರಿ.

ಬಹುಶಃ ಈ ಮೇಳ ಬೆಂಗಳೂರಿನಂಥ ನಗರದಲ್ಲಿ ನಡೆದಿದ್ದರೆ ರಾಷ್ಟ್ರವ್ಯಾಪಿ ಪ್ರಚಾರ ಪಡೆಯುತ್ತಿತ್ತೇನೊ. ಇರಲಿ, ನಮಗೆ ಪ್ರಚಾರ ಮುಖ್ಯವಲ್ಲ.

ಚಮನ್ ಲಾಲ್, ರಹಮಾನ್ ಅಬ್ಬಾಸ್, ಮೇಘನಾ ಪನ್ಸಾರೆ, ರಾನಿ ಸಿವಸಂಕರ ಸರ್ಮಾ, ಶೆಹ್ಲಾರಂಥ ಜೀವಪರ ನಿಲುವಿನ ಲೇಖಕರು, ಹೋರಾಟಗಾರರು ಇಲ್ಲಿಗೆ ಭೇಟಿ ನೀಡಿ ಈ ಭಾಗದ ಬೌದ್ಧಿಕ ಲೋಕಕ್ಕೆ ಹೊಸ ಉತ್ಸಾಹ ತುಂಬಿದ್ದಾರೆ.
ಆದರೆ ಈ ಮೇಳದಿಂದ ಧಾರವಾಡದ ಕೆಲವು ಹಿರಿಯ ಸಾಹಿತಿಗಳು, ಹೋರಾಟಗಾರರು ಅಂತರ ಕಾಯ್ದುಕೊಂಡಿದ್ದಕ್ಕೆ ಕಾರಣ ಏನೆಂಬುದು ನನ್ನಂಥ ಅನೇಕರಿಗೆ ತಿಳಿದಿಲ್ಲ.

ಇರಲಿ, ಒಂದು ಪ್ರಜಾಸತ್ತಾತ್ಮಕ ಚಳವಳಿಯಲ್ಲಿ ಇವೆಲ್ಲವನ್ನೂ ಮೀರಿ ಮುನ್ನಡೆಯುವುದು ಮುಖ್ಯ. ಈ ಆಶಯದ ಹಿನ್ನೆಲೆಯಲ್ಲಿ ಮೇಳ ಸಂಪೂರ್ಣ ಯಶಸ್ಸನ್ನೇ ಕಂಡಿದೆ ಎಂಬುದು ನನ್ನ ಅಭಿಪ್ರಾಯ.
ಧನ್ಯವಾದಗಳು.

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...