Sunday, June 12, 2016

ಬೀದಿಗೆ ಬಿದ್ದ ರಾತ್ರಿ - ಗಜಲ್‌




ಕಿರೆಸೂರ ಗಿರಿಯಪ್ಪ




   

ನಿನ್ನ ಚಲುವಿನ ನೋಟದಲಿ ಮೋಡಿಯಾದ ಬೆಳಕು ಹೌಹಾರಿದೆ ಸಾರಾ*
ಬೆದಿಗೆ ಬಿದ್ದ ಕತ್ತಲ ಇರಿತ ಮತ್ತಷ್ಟು ಅಬ್ಬರ!

ಅವಳ ಕಡಲ ಕುಕ್ಕಿಸುವ ನಗು ನುಂಗಲು ಕಚ್ಚೆ ನಿಲ್ಲದ ಚಂಚಲತೆಯ ಮೀಸೆಗಳು
ಕಟ್ಟುಪಾಡುಗಳ ಗುಡ್ಡೆ ಏರಿಸಿ ಹೀನ ಬರೆಗಳ ಕೆರೆತ ಮತ್ತಷ್ಟು ಅಬ್ಬರ!

ಒಮ್ಮೆಯೂ ದನಿಗೂಡಿ ಆಲಿಸದ ನೆರಳು ಮೈತೆವಲಿನ ತೆಕ್ಕೆಯಲಿ ನೆಗೆದಾಟ
ರಂಬಿಸಿ ನಂಬಿಸಿ ಮನಸ ಘಾಸಿಮಾಡಿದ ಕೊರೆತ  ಮತ್ತಷ್ಚು ಅಬ್ಬರ!

ಸೀರೆ ಸೆರಗಿನ ಚಿತ್ರದಗುಂಟ ಹುಸಿ ನುಡಿವ ವಕ್ರ ಕಣ್ಣುಗಳು
ಹ್ರದಯ ನೇಯ್ಗೆಯ ನೆಪದಲಿ ಎದೆಯ  ಕರಳು ಬಗೆವ ಒರತೆ ಮತ್ತಷ್ಟು ಅಬ್ಬರ!

ಎದೆಯ ನಾಟಿಮ್ಯಾಲೆ ಪೋಷಣೆಯಾಗದ ಹುಸಿ ಸಂಪ್ರದಾಯಗಳ ಆರ್ಭಟ
ಅವಳ ನೆನಪುಗಳ ಮೈದಾನಕ್ಕೆ ಮುಳ್ಳಿನ ಹಾಸು ಹೊದಿಸುವ ನೆಗೆತ ಮತ್ತಷ್ಟು ಅಬ್ಬರ!

ಕಾಲ್ಗೆಜ್ಜೆ ಸದ್ದಲಿ ಮೋಡಿಯಾದ ಬಾಯಿಹರುಕ ಕುಹಕ ಬೀದಿಗಳು ನನ್ನನ್ನೂ ಬಿಡಲಿಲ್ಲ 'ಗಿರಿ'ಯಾ
ಅವಳ ಹೆಜ್ಜೆಗಳ ಚಪ್ಪರಿಕೆಯಲಿ ನರನಾಡಿ ತಿಂದ ಹರಿತ ಮತ್ತಷ್ಟು ಅಬ್ಬರ!
***

* ಸಾರಾ= ಪಾಕಿಸ್ತಾನದ ಪ್ರಸಿದ್ಧ ಕವಿಯಿತ್ರೀ
(ಸಾರಾ ಶಗುಪ್ತಾಳ ಅಪಾರ ನೋವು ಸಹನೆಗಳ ಮಿಡಿತಕ್ಕೆ ಈ ಗಜಲ್....)


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...