Tuesday, June 07, 2016

SC/ST ಸಂಶೋಧಕರಿಗೆ/ಅಧ್ಯಯನಕಾರರಿಗೆ ಅಕಾಡೆಮಿ ಫೆಲೋಶಿಪ್





ಕರ್ನಾಟಕ ಸಾಹಿತ್ಯ ಅಕಾಡೆಮಿಯು 2016-17ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿಯಲ್ಲಿ 4 ಜನರಿಗೆ ತಲಾ ರೂ. 1.00 ಲಕ್ಷದಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದೆ. ಫೆಲೋಶಿಪ್ ಗೆ ಈ ಕೆಳಕಂಡ ಅರ್ಹತೆಯುಳ್ಳವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

• ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕತಕ್ಕದ್ದು (ಸಂಬಂಧಪಟ್ಟ ಜಾತಿಪ್ರಮಾಣದ ದೃಢೀಕೃತ ಪ್ರತಿಯನ್ನು ಲಗತ್ತಿಸಿರಬೇಕು)

• ಯಾವುದೇ ಪದವಿ ಪಡೆದವರು ಅರ್ಜಿ ಹಾಕಬಹುದು (ಪ್ರಮಾಣಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು)

• ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು, ಪದವಿ ಪಡೆಯದಿದ್ದರೂ ಅರ್ಜಿ ಹಾಕಬಹುದು.

• 20-50 ವಯೋಮಾನದ ಒಳಗಿನವರು ಅರ್ಜಿ ಹಾಕಬಹುದು (ಸಂಬಂಧಿಸಿದ ಎಸ್.ಎಸ್.ಎಲ್.ಸಿ. ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು)

• ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಸಾರಲೇಖವನ್ನು (Synopsis) 4-6 ಪುಟಗಳವರೆಗೆ ಸಿದ್ಧಪಡಿಸಿ 2016 ಜೂನ್ 25ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು.

ಆಯ್ಕೆಯಾದಲ್ಲಿ ವಿಷಯದ ಬದಲಾವಣೆಯನ್ನು ಮಾಡುವ ಹಕ್ಕು ಅಕಾಡೆಮಿಗೆ ಇರುತ್ತದೆ.


ವಿಷಯಗಳು:
1. ಅಲೆಮಾರಿ ಸಮುದಾಯಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಸಮಸ್ಯೆಗಳು
2. ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಲಿಂಗವ್ಯವಸ್ಥೆ
3. ಬುಡಕಟ್ಟುಗಳಲ್ಲಿ ಸ್ತ್ರೀಸಂಸ್ಕೃತಿಯ ಸ್ವರೂಪ
4. ಬುಡಕಟ್ಟು ಸಮುದಾಯಗಳು ಮತ್ತು ಪರಿಸರ ಚಳುವಳಿ (ಕರ್ನಾಟಕಕ್ಕೆ ಸಂಬಂಧಿಸಿದಂತೆ)
5. ಗಿರಿಜನ ಸಮುದಾಯಗಳ ಮನರಂಜನಾ ಪರಿಕಲ್ಪನೆ
6. ಕೆಲವು ಬುಡಕಟ್ಟು ಸಮುದಾಯಗಳ ಸಾಮಾಜಿಕ ಸ್ಥಿತ್ಯಂತರ : ಸರ್ಕಾರೇತರ ಸಂಸ್ಥೆಗಳ ಮಧ್ಯಸ್ಥಿಕೆ
7. ಕೆಲವು ಬುಡಕಟ್ಟು ಸಮುದಾಯದ ವಿಧಿ ಮತ್ತು ಆಚರಣೆಗಳ ಸಾಂಸ್ಕೃತಿಕ ಅಧ್ಯಯನ
8. ಆದಿವಾಸಿ ಸಮುದಾಯಗಳ ಭಾಷಿಕ ಅಸ್ಮಿತೆ
9. ಕೆಲವು ಗಿರಿಜನ ಮಹಿಳೆಯರ ಅನುಭವ ಕಥನ : ಒಂದು ಅಧ್ಯಯನ
10. ಕೆಲವು ಗಿರಿಜನ ಸಮುದಾಯಗಳಲ್ಲಿನ ಜನಪದ ಕಥೆಗಳ ಅಧ್ಯಯನ
11. ಕೆಲವು ಗಿರಿಜನರ ಆರಾಧ್ಯ ದೈವಗಳ ಕುರಿತ ಸಾಂಸ್ಕೃತಿಕ ಅಧ್ಯಯನ
ಅರ್ಜಿಯನ್ನು ಸಾರಲೇಖದೊಂದಿಗೆ ಅಕಾಡೆಮಿಗೆ ಸಲ್ಲಿಸಲು ಕೊನೆಯ
ದಿನಾಂಕ: 2016ರ ಜೂನ್ 25
ಸಿ.ಎಚ್.ಭಾಗ್ಯ
ರಿಜಿಸ್ಟ್ರಾರ್

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...