Monday, July 25, 2016

ನಕ್ಸಲ್ ಪೀಡಿತ ಯೋಜನೆಯಡಿಯಲ್ಲಿ ನಿರ್ಮಾಣವಾದ ಬಸ್ ನಿಲ್ದಾಣ


          -ಶರಣ್ M ಗುಡದನಾಳ


ಅದು 1994 ಮತ್ತು 95 ರ ಮಾತು ನನಗಿನ್ನು ಆಗ 5 , 6 ವರ್ಷ ವಯಸ್ಸು ಅನಿಸುತ್ತೆ ನಮ್ಮೂರಾದ ಗುಡದನಾಳಿಗೆ ಯಾರೋ ಇಬ್ಬರು ಯುವಕರು ಬಂದಿದ್ದರು .ಅವರನ್ನು "ಸಂಘದವರು " ಅಂಥ ಮಾತ್ರ ಕರೆಯುತ್ತಿದ್ದರು ,ಅದು ಯಾವ ಸಂಘ  ಅಂಥ ಈಗ ನನಗೆ  ನೆನಪಿಲ್ಲ . ಆ ಯುವಕರ ವಯಸ್ಸು ಸರಿ ಸುಮಾರು 30 ರ ಆಸುಪಾಸು , ಅದರಲ್ಲಿ ಒಬ್ಬ ಕೆಂಪಗೆ , ಗುಂಗುರು ಕುದಲು , ಕಟ್ಟು ಮಸ್ತಾದ ದೇಹ . ಇನ್ನೊಬ್ಬರು ಕಪ್ಪಗೆ , ಕುಳ್ಳನೆಯ ದೇಹ ವಂದಿದ್ದರು .

  ಸಂಜೆಯ ಸಮಯದಲ್ಲಿ ಊರಿನ ಎಲ್ಲ  ಜನರನ್ನು ಸೇರಿಸಿ ಸಮಸ್ಯಗಳನ್ನು ಆಲಿಸುತ್ತಿದ್ದರು , ಅವರು ಮಾತನಾಡಿದ ಸಂಭಾಷಣೆಗಳು ನನಗೆ  ಈಗ  ಅಸ್ಪಷ್ಟ . ಆದರೆ ಅವರು ತಮಟೆ  ಬಾರಿಸಿಕೊಂಡು ಹಾಡುಗಳನ್ನು ಹಾಡುತ್ತಿದ್ದರು ಅದು ಮಾತ್ರ ನನಗೆ  ನೆನಪಿದೆ . ಆ ಹಾಡಿನಲ್ಲಿ ಕಿಚ್ಚಿತ್ತು , ನೋವಿತ್ತು , ಭೂಮಾಲಿಕರ ವಿರುದ್ದ ಆಕ್ರೋಶವಿತ್ತು , ಸಮಾನತೆಯ ಪರ ಪಂಜು ದಗ  ದಗ ಉರಿಯುತಿತ್ತು .

ನಮ್ಮ ಊರಿನಲ್ಲಿ ಶಿಕ್ಷಣ ಪಡೆದವರು ಯಾರು ಇರಲಿಲ್ಲ ,
ನಮ್ಮೂರಿನಲ್ಲಿ ಅನೇಕ ಸಮಸ್ಯಗಳಿದ್ದವು  - ಕುಡಿಯುವ ನೀರಿಗಾಗಿ ಕೆರೆಯ ನೀರನ್ನು ಉಪಯೋಗಿಸುತ್ತಿದ್ದರು , ಬೇಸಿಗೆ ಕಾಲದಲ್ಲಿ 6 ಕಿ.ಮೀ ದೂರದ ಹಟ್ಟಿ ಚಿನ್ನದ ಗಣಿಗೆ ನಡೆದು ಕೊಂಡು  ಹೋಗಿ ನೀರನ್ನು ತರಬೇಕಿತ್ತು .
ಊರಿಗೆ ಸರಿಯಾದ  ರೋಡ್ ಇರಲಿಲ್ಲ .
ಬಸ್ಸಿನ ಸೌಲಭ್ಯಕೂಡ ಇರಲಿಲ್ಲ .
6 , 7 ಕಿ.ಮೀ ನಡದೆ ಹೋಗಬೇಕಾಗಿತ್ತು , ಮತ್ತು ಊರ ಧಣಿಯ ಏಕ ಚಕ್ರಾಧಿಪತ್ಯ,  ಇತ್ಯಾದಿ .

ಅವರು ಮೊದ  ಮೊದಲು ಜನರನ್ನು ಸಂಘಟಿಸಿದರು , ಊರ ಯುವ ಜನರ ಮನ  ಗೆದ್ದರು , ಜನರಿಗೆ ಪ್ರಶ್ನಿಸುವುದನ್ನು ಕಲಿಸಿದರು . ಅವರ ಹಾಡಿನ ಮೂಲಕ ತಿಳುವಳಿಕೆ ಕಲಿಸಿದರು .

ಮೊದಲ ಬಾರಿ ಎಲ್ಲ ಜನರನ್ನು ಕರೆದುಕೊಂಡು ಹೋಗಿ ತಾಲೂಕು ಆಫಿಸಿನ ಮುಂದೆ ಧರಣಿ ಕೂತು , ಬಸ್ಸನ್ನು ಬಿಡಿಸಿಕೊಂಡು ಬಂದರು . ಬರುವಾಗ ಹಾಗೆ ಬರಲಿಲ್ಲ ಬಣ್ಣ ಹಾಕಿಕೊಂಡು ಹೋಕುಳಿ ಹಾಡುತ್ತಾ ಬಂದರು . ಅದು ಊರ ಮತ್ತು ಸಂಘದವರ ಮೊದಲ ಜಯವಾಗಿತ್ತು .

ಆ ಜಯ ನಮ್ಮೂರಿನ ಜನರಿಗೆ ಸಂತೋಶ ತಂದರೆ , ನಮ್ಮೂರಿನ ಧಣಿಗೆ ನಡುಕ ಹುಟ್ಟಿಸಿತ್ತು . ಆತನ ಏಕ ಚಕ್ರಾಧಿಪತ್ಯ ಮೊದಲ ಬಾರಿ ಸೋಲಿನ ರುಚಿ ನೋಡಿತ್ತು.

ಕೆಲವು ದಿನಗಳ ನಂತರ ವೇದಿಕೆ ಇನ್ನೊಂದು ಹೋರಾಟಕ್ಕೆ ಸಜ್ಜಾಯಿತು , ಅದೆ  ನೀರಿನ ಸಮಸ್ಯ ...!  ಕುಡಿಯುವ ನೀರಿಗಾಗಿ ಕಿ.ಮೀ ಗಟ್ಟಲೆ ನಡೆದು ಹೋಗಬೇಕಾಗಿತ್ತು . ಇದನ್ನು ಮನಗಂಡ ಸಂಘದವರು ಮತ್ತೆ ಜನರೊಂದಿಗೆ ತಾಲೂಕು ಆಫಿಸಿನ ಮುಂದೆ ಧರಣಿ ನಡೆದವು . ಕೆಲವು ದಿನಗಳ ಹೋರಾಟದ ನಂತರ ಟ್ರ್ಯಾಕ್ಟರ್ ಮೂಲಕ ನೀರು ಸರಭರಾಜು ಮಾಡುವುದಾಗಿ ಒಪ್ಪಿದರು , ಅಂತೂ ನಮ್ಮೂರಿಗೆ ಕುಡಿಯುವ ಬಂತು ಇದು ಹೋರಾಟಕ್ಕೆ ಎರಡನೆಯ ಜಯವಾಗಿತ್ತು ಊರ ಜನರ ಸಂತೋಷಕ್ಕೆ ಪಾರವೇ ಇರಲಿಲ್ಲ . ಊರ ಜನರ ಮನಸ್ಸಿನಲ್ಲಿ ಸಂಘದವರು " ಆಧುನಿಕ ಭಗಿರಥ " ರಂತೆ ಕಂಡರು . ಊರ ಜನರು  ಧಣಿಯನ್ನು ಕಡೆಗಣಿಸಿ ಸಂಘದವರನ್ನು ಕೊಂಡಾಡ ತೊಡಗಿದರು . ಇದು ಸಂಘದವರಿಗೂ ಮತ್ತು ಧಣಿಯ ನಡುವೆ ಸಂಘರ್ಷಕ್ಕೆ ಕಾರಣವಾಯಿತು . ಊರ  ಕೆಳ ಜಾತಿಯವರು ಪ್ರಶ್ನಿಸಿದ್ದು ಆತನ ಕೋಪ ಇಮ್ಮಡಿ ಆಯಿತು . ಧಣಿಯು ಪ್ರತಿ ತಂತ್ರ  ರೂಪಿಸ ತೊಡಗಿದನು .

ಇದರ ನಡುವೆಯೇ ಊರಿನ  ಯುವಕರು ಸಂಘದವರಿಗೆ ತುಂಬಾ ಹತ್ತಿರವಾದರು . ಅವರು ಮಾಡುತ್ತಿದ್ದ ವ್ಯಾಯಮ , ಕರಾಟೆ  , ಇನ್ನು ಮುಂತಾದ ವಿಧ್ಯಗಳನ್ನು ಕಲಿತರು . 10 - 12 ಜನರ ಯುವ ಪಡೆ  ರಚನೆಯಾಯಿತು . ಅದರಲ್ಲಿ ಓದುವ ಕಾಲೇಜಿನ ಹುಡುಗರು , ರೈತರು , ಕುರಿ ಕಾಯುವರು ಇದ್ದರು .

ವೇದಿಕೆ ಮಗದೊಂದು ಹೋರಾಟಕ್ಕೆ ಸಜ್ಜಾಯಿತು , ಅದು ಊರಿನ  ಡಾಂಬರು ರಸ್ತಗಾಗಿ . ಅದು ದೊಡ್ಡ ರೂಪ ಪಡೆಯುತ್ತಲೆ ನಮ್ಮೂರಿನ ಧಣಿಗೆ ನಡುಕ ಶುರುವಾಯಿತು . ತನ್ನ ರಾಜಕಿಯ ಶಕ್ತಿ  ಎಲ್ಲಿ ಕುಂದಿ ಹೊಗುತ್ತದೆಯೋ ಎಂದು ಈ ಸಾರಿ  ನೆರವಾಗೆ ತಾನೂ ಕೆಲವು ಜನರೊಂದಿಗೆ ಸಂಘರ್ಷಕ್ಕೆ ಇಳಿದನು . ಅದು ತಿವ್ರ ಸ್ವರೂಪ ಪಡೆಯಿತು . ದೊಡ್ಡ ಜಗಳವೇ ನಡೆಯಿತು .

ಆ ಜಗಳದ ವಿಷಯವಾಗಿ ಸಂಘದವರ ವಿರುದ್ದವಾಗಿ ಪೋಲಿಸ್  ಇಲಾಖೆಯಲ್ಲಿ ಪ್ರಕರಣ ಧಾಖಲಾಯಿತು . ಧಣಿಯ ಕೊಲೆಗೆ ಪ್ರಯತ್ನ , ಕಳ್ಳತನ ,  ಅಕ್ರಮವಾಗಿ ರೈಫಲ್ ಹೋಂದಿದ್ದರು ಎಂಬುದಾಗಿ , ಹೀಗೆ  ನಾ ನಾ ಕೇಸುಗಳು ಧಾಖಲಾದವು . ಆ ದಿನದ ದೋಡ್ಡ ಜಗಳವೇ ಕೊನೆ  ಆ ಸಂಘದ  ಇಬ್ಬರು ಯುವಕರು ಕಣ್ಮರೆಯಾದರು ಪೋಲಿಸರು ಬಂಧಿಸುವ ಮುಂಚೆ ...!
ಆಧರೆ  ಪೋಲಿಸರ ಕೈಗೆ ನಮ್ಮೂರಿನ ಯುವಕರು ಸಿಕ್ಕಾಕಿಕೊಂಡರು . ಅವರನ್ನು ಸ್ವಲ್ಪ ದಿನಗಳ ನಂತರ ಅಮಾಯಕರು ಎಂದು ಬಿಡುಗಡೆ ಮಾಡಿದರು . ಮತ್ತು  ಆ ಸಂಘದವರು ಸಾಮಾನ್ಯ ಜನರಲ್ಲ ಅವರು " ನಕ್ಸಲ್ " ಜನರು ಎಂದು ಹಾಗೂ ಅವರ ಹತ್ತಿರ ಯಾರು ಮಾತನಾಡಬಾರದು , ವ್ಯವಹಾರ ಇಟ್ಟುಕೊಳ್ಳಬಾರದು , ಒಂದು ವೇಳೆ ಸಂಭಂದ ಇಟ್ಟು ಕೊಂಡರೆ ಬಂಧಿಸುವುದಾಗಿ ಎಂದು ಪೋಲಿಸಿನವರು ಊರಿನಲ್ಲಿ ದರ್ಪ  ಮೇರೆದು ಹೋದರು . ಇತ್ತ  ಊರ ಧಣಿ  ನಿಟ್ಟುಸಿರು ಬಿಟ್ಟನು .

ಸಂಘದರು ಊರು ಬಿಟ್ಟ ನಂತರ ಅವರ ಪ್ರಭಾವ ದಿಂದಾಗಿ ಹೋಸ  ಶಾಲಾ ಕಟ್ಟಡ ನಿರ್ಮಾಣವಾಯಿತು , ಶೌಚಾಲಯಗಳು , ಊರಿಗೆ ಡಾಂಬರು ಹೀಗೆ  ನಾ ನಾ ಕೆಲಗಳು ಆದವು

ಸಂಘದ ಜೊತೆ ಗುರುತಿಸಿಕೊಂಡಿದ್ದ ನಮ್ಮೂರಿನ ಕೆಲ  ಯುವಕರು , ಸ್ವಲ್ಪ ದಿನಗಳ ಕಾಲ ಅವರ ಒಗ್ಗಟ್ಟು ಹಾಗೆ ಇತ್ತು . ಗಣಪತಿ ಹಬ್ಬ , ಊರ ಜಾತ್ರೆ ಎಲ್ಲರು ಒಗ್ಗಟ್ಟಿನಿಂದಲೆ ಬಾಗವಹಿಸುತಿದ್ದರು.  ನಂತರ ಸಂಸಾರಕ್ಕೆ ಬಂಧಿಯಾದರು , ಇಬ್ಬರು ವ್ಯವಸಾಯ ಮಾಡುತಿದ್ದಾರೆ , ಇಬ್ಬರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತಿದ್ದರೆ , ಒಬ್ಬರು  ಬಸ್  ಡ್ರೈವರ್ ಆಗಿದ್ದಾರೆ ಮತ್ತು ಈಗಿನ ಬದಲಾದ ರಾಜಕಿಯದಲ್ಲಿ ಇಬ್ಬರು ವ್ಯಕ್ತಿಗಳು ಈ ಹಿಂದೆ ಧಣಿಯ ವಿರುದ್ದ ಹೋರಾಡಿದ್ದವರ ಜೊತೆಯಲ್ಲೆ ಇದ್ದಾರೆ . ನಮ್ಮೂರಿನ ಧಣಿಗೆ ಈಗ  ವಯಸ್ಸು 65 ದಾಟಿರಬಹುದು , ಅಳೆದನ್ನು ಈಗ ಮೆಲಕು ಆಕುತ್ತಾ ಕುತಿದ್ದಾರೆ .


ಮೊನ್ನೆ ನಾನು ಊರಿಗೆ ಹೋದಾದ ಬಸ್  ನಿಲ್ದಾಣ ನೋಡಿದೆ , ಅದರ ಬರಹ ಹಿಗಿತ್ತು " ನಕ್ಸಲ್ ಪಿಡಿತ ಯೋಜನೆಯಲ್ಲಿ ನಿರ್ಮಾಣವಾದ ಬಸ್  ನಿಲ್ದಾಣ " ಎಂದು ನಾನು ಅದನ್ನು ಹೀಗೆ  ಒದಿಕೊಂಡೆನು , " ಸಂಘದವರ ಹೋರಾಟದ ಸವಿ ನೆನಪಿನಲ್ಲಿ ನಿರ್ಮಾಣವಾದ ಬಸ್  ನಿಲ್ದಾಣ .

ಈಗ  ಅವರು ಎಲ್ಲಿದ್ದಾರೋ ತಿಳಿಯದು , ಅವರಿಗೆ 50 ರ ಆಸುಪಾಸಿನ ವಯಸ್ಸಾಗಿರಬಹುದು , ಮುಂದೆ ಬಂದು ನಿಂತರು ಅವರನ್ನು ಗುರುತಿಸಲಾಗುದಿಲ್ಲ  . ಆದರು  ಯಾರಾದರು ನಕ್ಸಲ್ ವ್ಯಕ್ತಿ  ಶರಣಾಗಿದ್ದಾನೆ  , ಕೋರ್ಟಗೆ ಹಾಜರು ಪಡಿಸುತಿದ್ದಾರೆ , ಪೋಲಿಸರ ಗುಂಡಿಗೆ ಬಲಿಯಾಗಿದ್ದಾನೆ ಎಂದೆಲ್ಲ ಸುದ್ಧಿಗಳು ಪತ್ರಿಕೆಯಲ್ಲಿ ಬಂದಾಗ ಮನಸ್ಸು  ಮಮ್ಮಲ  ಮರುಗುತ್ತದೆ , ಹೋರಾಟಗಾರಿಗೆ ಯಾಕೆ ಈ ನಕ್ಸಲ್ ಪಟ್ಟ ?  ದೌರ್ಜನ್ಯ ಮಾಡುವವರಿಗೆಕೆ ದೇಶ ಪ್ರೇಮಿಗಳ ಪಟ್ಟ  ...!


ಇನ್ನೂ ಉತ್ತರ ಸಿಗದ ಪ್ರಶ್ನೆಗಳಿವೆ , ಆ ಸಂಘದವರು ನಮ್ಮೂರಿಂದ ಹೋದ  ಮೇಲೆ ಸಂಸಾರಿಯಾಗಿ ಅವರವರ ಊರಿನಲ್ಲಿ ಇದ್ದಾರೆಯೇ ?
ಬೇರೆ ಊರಿನಲ್ಲಿ ಹೋರಾಟ ಮಾಡುತ್ತಿರಬಹುದೆ ? ಜೈಲಿನಲ್ಲಿ  ಇರಬಹುದೆ ? ಮಲೆನಾಡ , ಆಂದ್ರ , ಒರಿಸ್ಸಾದ ದಟ್ಟ ಕಾಡಿನಲ್ಲಿ ಅವಿತು ಕೂತಿರಬಹುದೆ ?

ನನಗೆ  ಅವರಾಡಿದ ಮಾತು ನೆನಪಿಲ್ಲ , ಅವರ ಮುಖದ ಚಿತ್ರ ನೆನಪಿಲ್ಲ , ಅವರ ವಿಳಾಸ ತಿಳಿದಿಲ್ಲ . ಆಧರೆ  ಅವರು ಬಾರಿಸಿದ ತಮಟೆಯ ಶಬ್ಧ ನನ್ನ ಕಿವಿಯಲ್ಲಿ
ಇನ್ನೂ  ಮಾರ್ಧನಿಸುತ್ತಿದೆ  .

       


             - ಶರಣ್ M  ಗುಡದನಾಳ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...