Wednesday, August 03, 2016

ಮಹದಾಯಿ ಜಲಾಂದೋಲನ : ಧಾರವಾಡದಲ್ಲಿ ರಾಜ್ಯ ಮಟ್ಟದ ಸಂಘ ಸಂಸ್ಥೆಗಳ ಆ 6 ರಂದು ಸಭೆಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾದ ಮಹದಾಯಿ ನ್ಯಾಯ ಮಂಡಳಿಯ ಮಧ್ಯಂತರ ತೀರ್ಪು  ಸಹಜವಾಗಿಯೇ ಎಲ್ಲರಿಗೂ ನಿರಾಶೆಯನ್ನು ಉಂಟುಮಾಡಿದೆ. ಆಕ್ರೋಶಗೊಂಡ ಜನ ಬೀದಿಗಿಳಿದು ತಮ್ಮ ಸಿಟ್ಟನ್ನು ಅಭಿವ್ಯಕ್ತಪಡಿಸುತ್ತಿದ್ಧಾರೆ.  ನಮ್ಮ ಹಕ್ಕಾಗಿರುವ ಮಹದಾಯಿ, ಕಳಸಾ-ಬಂಡೂರಿ ನೀರಿಗಾಗಿ ರಾಜ್ಯದಾದ್ಯಂತ ಜನ ಚಳವಳಿ ನಡೆದಿದೆ. ಅನೇಕ ಸಂಘಟನೆಗಳು ಮಹದಾಯಿಗಾಗಿ ನಿರಂತರ ಬೀದಿ ಹೋರಾಟವನ್ನು ನಡೆಸುತ್ತಿವೆ. 

ಜನಸಂಘಟನೆಗಳು ನಡೆಸುತ್ತಿರುವ ಹೋರಾಟವನ್ನು ತೀವ್ರಗೊಳಿಸುವ ಮತ್ತು ಚಳವಳಿಯನ್ನು ವ್ಯವಸ್ಥಿತವಾಗಿ ರೂಪಿಸುವ ಅಗತ್ಯವಿದೆ. ಜನ ಚಳವಳಿ ಮಾತ್ರ ಸರಕಾರಗಳ ಅಸಡ್ಡೆ ಧೋರಣೆಗೆ ಉತ್ತರವಾಗಬಲ್ಲದು. ರಾಜಕೀಯ ಪಕ್ಷಗಳ ರಾಜಕೀಯ ಮತ್ತು ಕೆಸರೆರಚಾಟಕ್ಕೂ ಉತ್ತರವಾಗಬಲ್ಲದು.

ಮಹದಾಯಿ, ಕಳಸಾ ಬಂಡೂರಿ ನೀರಿಗಾಗಿ ರಾಜ್ಯದಾದ್ಯಂತ ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಳನ್ನು ಒಗ್ಗೂಡಿ ಹೋರಾಟದ ರೂಪು ರೇಷೆ ಚರ್ಚಿಸಲು ಮಹದಾಯಿ, ಕಳಸಾ ಬಂಡೂರಿ ಜನ ಮಹಾಂದೋಲನವು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಆಗಸ್ಟ್ 6 ರಂದು ಬೆಳಿಗ್ಗೆ 11 ಗಂಟೆಗೆ ಪ್ರಗತಿಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಸಂಘ ಸಂಸ್ಥೆ, ಹೋರಾಟಗಾರರ ರಾಜ್ಯ ಮಟ್ಟದ ಸಭೆಯನ್ನು ಕರೆದಿದ್ದು ರಾಜ್ಯದಾದ್ಯಂತ ಹೋರಾಟದಲ್ಲಿ ಕ್ರಿಯಾನಿರತವಾದ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲು ವಿನಂತಿಸಲಾಗಿದೆ.

ಬಂದಿತ ರೈತರ ಬಿಡುಗಡೆ, ಸಚಿವ ಸಂಪುಟವು ಕೂಡಲೆ ಕೇಸ್ ಗಳನ್ನು ಹಿಂಪಡೆವ ನಿರ್ಣಯ ತಗೆದುಕೊಳ್ಳುವ ಒತ್ತಾಯ, ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ತಿಕೆಗೆ ಆಗ್ರಹ, ರಾಜಕೀಯ ಮಾಡುವ ಪಕ್ಷಗಳಿಗೆ ನೀಡಬೇಕಾದ ಎಚ್ಚರಿಕೆ ಸಂದೇಶ ಈ ಸಂಗತಿಗಳ ಚರ್ಚೆಗೆ ಸಭೆಯಲ್ಲಿ ಆದ್ಯತೆ ನೀಡಲಾಗುವದು

ಬಸವರಾಜ ಸೂಳಿಭಾವಿ
ಶಂಕರ ಹಲಗತ್ತಿ

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...