Thursday, November 10, 2016

ಕವಿ ಮಹಾಂತೇಶ ಪಾಟೀಲರಿಗೆ 2016 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ
ವಿಭಾ


ಮಹಾಂತೇಶ ಪಾಟೀಲ
ಜೀವ ಮಿಡಿತದ ಸದ್ದಿನ ಕವಯಿತ್ರಿ ವಿಭಾ ನೆನಪಿನಲ್ಲಿ ಲಡಾಯಿ ಪ್ರಕಾಶನ ಕೊಡುವ ೨೦೧೬ ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿ ಮಹಾಂತೇಶ ಪಾಟೀಲ ಅವರ ’ಒಡೆದ ಬಣ್ಣದ ಚಿತ್ರಗಳು’ ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ಖ್ಯಾತ ಕವಿಗಳು ಹಾಗೂ ವಿಮರ್ಶಕರುಗಳಾದ ಡಾ. ಕೆ. ಪಿ ಸುರೇಶ ಮತ್ತು ಡಾ. ಎಲ್ ಸಿ ಸುಮಿತ್ರಾ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು.

ಪ್ರಶಸ್ತಿ ವಿಜೇತ ಕೃತಿಯನ್ನು ಗದುಗಿನ ಲಡಾಯಿ ಪ್ರಕಾಶನ ಪ್ರಕಟಿಸುತ್ತಿದ್ದು, ಈ ಪುರಸ್ಕಾರವು ಐದು ಸಾವಿರ ನಗದು ಹಾಗೂ ಪ್ರಶಸ್ತಿ ಪಲಕವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಡಿಸೆಂಬರ ತಿಂಗಳಲ್ಲಿ ನೆರವೇರುವುದು.

ಕವಿ ಪರಿಚಯ:

ವಿಭಾ ಸಾಹಿತ್ಯ ಪ್ರಶಸ್ತಿ -೨೦೧೬ ಪಡೆದ ಡಾ. ಮಹಾಂತೇಶ ಪಾಟೀಲ ಅವರು ೧೯೮೬ ರಲ್ಲಿ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಜನಿಸಿದರು. ಕರ್ನಾಟಕ ವಿ.ವಿ ಯಲ್ಲಿ ಕನ್ನಡ ಎಂ.ಎ ಪದವಿ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ (ಗುಲಬರ್ಗಾ) ದಲ್ಲಿ ’ದಶಕದ ಕತೆಗಳಲ್ಲಿ ಪರಂಪರೆ ಮತ್ತು ಆಧುನಿಕತೆಯ ಸ್ವರೂಪ’ ಎಂಬ ವಿಷಯವನ್ನು ಕುರಿತು ಡಾ. ವಿಕ್ರಮ ವಿಸಾಜಿ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದಾರೆ. ಮಹಾಂತೇಶ್ ಕಳೆದ ನಾಲ್ಕಾರು ವರ್ಷಗಳಿಂದ ಕಾವ್ಯ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ಸಂಕ್ರಮಣ ಕಾವ್ಯ ಬಹುಮಾನ,ಕ್ರೈಸ್ಟ್ ಕಾಲೇಜ್ ಬೇಂದ್ರೆ ಕಾವ್ಯ ಪುರಸ್ಕಾರ, ಅಂಕುರ ಕಾವ್ಯ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ ಹಾಗೂ ಪ್ರಜಾವಾಣಿ ದೀಪಾವಳಿ ಕಾವ್ಯ ಸ್ಪರ್ಧೆ ಮತ್ತು ಎರಡು ಸಾರಿ ವಿದ್ಯಾರ್ಥಿ ವಿಭಾಗದ ಕವಿತೆಗೆ ಬಹುಮಾನ ಪಡೆದಿದ್ದಾರೆ. ಕತೆ, ಕಾದಂಬರಿ ಓದಿನಲ್ಲಿ ಮತ್ತು ವಿಮರ್ಶಾ ಬರವಣಿಗೆಯಲ್ಲಿ ಆಸಕ್ತಿಯಿದೆ. ಸಧ್ಯ ಮಂಗಳೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ (ಕೊಡಗು) ಇಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...