Tuesday, November 15, 2016

5,468 ಕೋಟಿ ಬ್ಲಾಕ್‍ಮನಿ ವಂಚಕ ಗೌತಮ್ ಆದಾನಿ ಬಚಾವಾದ ಕಥೆ..





ಅಧಿಕಾರಕ್ಕೆ ಬಂದ ಕೂಡಲೇ ಮೋದಿ ದೇಶದಲ್ಲಿರುವ ಕಪ್ಪುಹಣದ ತನಿಖೆಗಾಗಿ “ಸ್ಪೆಷಲ್ ಇನ್ವೆಸ್ಟಿಗೇಷನ್ ಟೀಂ” ಒಂದನ್ನು ಆಚರಣೆಗೆ ತಂದರು. ಈ ತನಿಖಾ ಸಂಸ್ಥೆಯ ಮುಂದೆ ಬಂದ ಪ್ರಕರಣಗಳಲ್ಲಿ ಅತಿಹೆಚ್ಚಿನ ಕಪ್ಪುಹಣದ ವಂಚನೆ ಮೋದಿಯ ಪರಮಾಪ್ತ ಗೌತಮ್ ಆದಾನಿಯ “ಆದಾನಿ ಗ್ರೂಪ್” ಕಂಪನಿಯದ್ದು. ಜಾರಿ ನಿರ್ದೇಶನಾಲಯ ಮತ್ತು ಈ ಟೀಂ ಜಂಟಿಯಾಗಿ ಆದಾನಿ ವಂಚನೆಯ ಕೇಸ್ ಬೆನ್ನು ಬೀಳುತ್ತವೆ. 5,468 ಕೋಟಿಯಷ್ಟು ಕಪ್ಪುಹಣವನ್ನು ದುಬೈ ಮೂಲಕ ಮಾರಿಷಸ್ ಬ್ಯಾಂಕ್‍ಗಳಿಗೆ ಕದ್ದು ಸಾಗಿಸಿದ ಗೌತಮ್ ಆದಾನಿಯ ವಂಚನೆಯ ಕೇಸ್ ಅದು. ಈ ಕೇಸ್ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ಇವೆರಡೂ ತನಿಖಾ ಸಂಸ್ಥೆಗಳ ಇಬ್ಬರು ಖಡಕ್ ಅಧಿಕಾರಿಗಳು ಆದಾನಿಯ ಮೇಲೆ ಅಹ್ಮದಾಬಾದ್‍ನಲ್ಲಿ  ಪ್ರಿಲಿಮಿನರಿ ಕೇಸ್ ಒಂದನ್ನು ದಾಖಲು ಮಾಡುತ್ತಾರೆ. ಕಪ್ಪುಹಣ ಸಂಗ್ರಹಣೆ ಮತ್ತು ವಿದೇಶಿ ಬ್ಯಾಂಕುಗಳಿಗೆ ಅದನ್ನು ಸಾಗಿಸಿದ ಕೇಸಿನಲ್ಲಿ ಆದಾನಿಗೆ 15 ಸಾವಿರಕ್ಕೂ ಹೆಚ್ಚಿನ ಮೊತ್ತದ ದಂಡ ಮತ್ತು ಶಿಕ್ಷೆಗೆ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸುತ್ತಾರೆ. ಇಷ್ಟರಲ್ಲಿ.. ಆದಾನಿಯ ವಿರುದ್ದ ಕೇಸು ದಾಖಲು ಮಾಡಿದ ಅಧಿಕಾರಿಗಳ ಮೇಲೆ ಇದ್ದಕ್ಕಿದ್ದಂತೆ “ಸಿಬಿಐ” ಅಕ್ರಮ ಆಸ್ತಿ ಸಂಪಾದನೆಯ ಹೆಸರಿನಲ್ಲಿ ರೈಡ್ ನಡೆಸುತ್ತದೆ. ನಂತರ ಸಿಬಿಐ ಆರೋಪ ಸುಳ್ಳೆಂದು ಸಾಬೀತಾಗುತ್ತದೆ. ತದ ನಂತರದಲ್ಲಿ ಈ ಅಧಿಕಾರಿಯ ಜೊತೆಯಲ್ಲಿ ಆದಾನಿ ವಂಚನೆ ಬಯಲಿಗೆಳೆಯಲು ಶ್ರಮಿಸುತ್ತಿದ್ದ ಮುಂಬೈನ ಇಬ್ಬರು ಸೀನಿಯರ್ ಮೋಸ್ಟ್ ಅಧಿಕಾರಿಗಳನ್ನು ಕೆಲಸದಿಂದಲೇ ತೆಗೆಯಲಾಗುತ್ತದೆ. ಜಾರಿ ನಿರ್ದೇಶನಾಲಯದಲ್ಲಿ ಗೌತಮ್ ಆದಾನಿಯ ಈ ಕಪ್ಪುಹಣದ ವಂಚನೆ ಕೇಸನ್ನು ಮುನ್ನಡೆಸುತ್ತಿದ್ದ ರಾಜನ್ ಎಸ್. ಕಟೋಚ್ ಎಂಬ ಅಧಿಕಾರಿ ಇದ್ದಕ್ಕಿದ್ದಂತೆ ಆದಾನಿಯ ವಂಚನೆಯ ಕೇಸನ್ನೇ ಸ್ಥಗಿತಗೊಳಿಸುತ್ತಾರೆ. 

ಜೋಸಿ ಜೋಸೆಫ್  - ಎ ಫೀಸ್ಟ್ ಆಫ್ ವಲ್ಚರ್ಸ್ ( ದಿ ಹಿಡನ್ ಬ್ಯುಸಿನೆಸ್ ಆಫ್ ಡೆಮೋಕ್ರಸಿ ಇನ್ ಇಂಡಿಯ) ಕೃತಿಯ ಲೇಖಕ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...