Wednesday, November 09, 2016

ದಲಿತ ಕಾವ್ಯ ಕಮ್ಮಟ



karnataka-sahitya-academy-logo


ಕರ್ನಾಟಕ ಸಾಹಿತ್ಯ ಅಕಾಡೆಮಿಯು 2016ರ ಡಿಸೆಂಬರ್ 12-13 ಮತ್ತು 14ರಂದು ಸಂದೇಶ ಪ್ರತಿಷ್ಠಾನ, ಪ್ರೇಮ ನಗರ್, ಮಂಗಳೂರು ಇಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟಜಾತಿಯ ಅಭ್ಯರ್ಥಿಗಳಿಗಾಗಿ ವಸತಿಸಹಿತ ಮೂರು ದಿನಗಳ ಮೈಸೂರು ವಿಭಾಗ ಮಟ್ಟದ “ ದಲಿತ ಕಾವ್ಯ ಮೀಮಾಂಸೆ ” ಕುರಿತ ಕಮ್ಮಟವನ್ನು ಡಾ. ಅಪ್ಪಗೆರೆ ಸೋಮಶೇಖರ್ ಅವರ ನಿರ್ದೇಶನದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದೆ.
ಮೈಸೂರು ವಿಭಾಗದ ಯಾವುದೇ ಜಿಲ್ಲೆಗೆ (ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು)
ಮೇಲ್ಕಂಡ ಜಿಲ್ಲೆಗಳಿಗೆ ಸೇರಿರುವ ಪರಿಶಿಷ್ಟ ಜಾತಿಯ 20 ರಿಂದ 40  ವಯೋಮಿತಿಯಲ್ಲಿರುವ ವಿದ್ಯಾರ್ಥಿಗಳು , ಶಿಕ್ಷಕರು-ಉಪನ್ಯಾಸಕರು, ದಲಿತ ಕಾವ್ಯ ಮೀಮಾಂಸೆಯ ಬಗ್ಗೆ ಆಸಕ್ತಿವುಳ್ಳವರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ದಲಿತ ಕಾವ್ಯ ಮೀಮಾಂಸೆಯ ಬಗ್ಗೆ ತಮಗಿರುವ ತಿಳುವಳಿಕೆಯನ್ನು ಅರ್ಜಿಯೊಂದಿಗೆ ಬರೆದು ಸಲ್ಲಿಸಬೇಕು.
ವಯಸ್ಸಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪಟ್ಟಿಯನ್ನು ಲಗತ್ತಿಸಬೇಕು.
ಜಾತಿಗೆ ಸಂಬಂಧಿಸಿದಂತೆ ಪರಿಶಿಷ್ಟಜಾತಿಯ ದೃಢೀಕೃತ ಪ್ರಮಾಣಪತ್ರದ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಮೂರು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು.
ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ ದಲಿತ ಕಾವ್ಯ ಮೀಮಾಂಸೆ ಕಮ್ಮಟ”  ಕ್ಕೆ ಅರ್ಜಿ ಎಂದು ನಮೂದಿಸಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದು ಹೋಗಲು ರಾಜಹಂಸ ಬಸ್ ದರ / ಸಾಮಾನ್ಯ ರೈಲ್ವೆ ದರವನ್ನು ನೀಡಲಾಗುವುದು.  ಹಾಗೂ ಮೂರು ದಿನಗಳು ಊಟ, ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್http://karnatakasahithyaacademy.org ನಿಂದ ಪಡೆದುಕೊಳ್ಳಬಹುದು.
ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ನವೆಂಬರ್ 25 ರ ವೇಳೆಗೆ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  19-11-2016
ಕಡ್ಡಾಯವಾಗಿ ಅರ್ಜಿಯಲ್ಲಿ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ. ಇ-ಮೇಲ್ ವಿಳಾಸ ನಮೂದಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಅರ್ಜಿಯನ್ನುಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಡಾ. ಅಪ್ಪಗೆರೆ ಸೋಮಶೇಖರ್
ದಲಿತ ಕಾವ್ಯ ಮೀಮಾಂಸೆ – ಕಮ್ಮಟದ ನಿರ್ದೇಶಕರು
ಕೇರಾಫ್/ ಕರ್ನಾಟಕ ಸಾಹಿತ್ಯ ಅಕಾಡೆಮಿ
ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- 560 002
(080- 22211730/ 22106460)

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...