Monday, November 14, 2016

ನೋಟು ರದ್ದು : ನರೇಂದ್ರ ಮೋದಿ ಅವರಿಗೊಂದು ಬಹಿರಂಗ ಪತ್ರ


Image result for ನರೇಂದ್ರ ಮೋದಿ


ಮೋದಿಯವರೆ ನಿಮಗೆ ನಮಸ್ಕಾರಗಳು. .

ನನ್ನ ಹೆಸರು ಪ್ರಸಾದ್, ನಾನು ಹೈದರಾಬಾದಿನ ಬಾಲ ನಗರದಲ್ಲಿ ಸಣ್ಣ ವ್ಯವಹಾರ ಮಾಡುತ್ತೇನೆ. ವರ್ಷಕ್ಕೆ ಏನಿಲ್ಲವೆಂದರು ಸುಮಾರು 24 ಲಕ್ಷ ಗಳಿಸುತ್ತೇನೆ. ಅಂದರೆ, ತಿಂಗಳಿಗೆ ಎರಡು ಲಕ್ಷ ಹಾಗೆ ನೋಡಿದರೆ ನಾನು ವರ್ಷಕ್ಕೆ 3 ಲಕ್ಷ ತೆರಿಗೆ ಕಟ್ಟಬೇಕು ಆದರೆ ನಾನು 30 ಸಾವಿರ ಕಟ್ಟುತ್ತೇನೆ. ಯಾಕೆಂದರೆ ನಾನು ಸಾಮಾನ್ಯ ಮಧ್ಯಮ ವರ್ಗದಲ್ಲಿ ಹುಟ್ಟಿ ಕಷ್ಷಪಟ್ಟು ಓದಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ ಪೈಸಾ ಪೈಸಾ ಕೂಡಿಟ್ಟು ಇಂದು ಸ್ವಂತ ಉದ್ಯೋಗ ಮಾಡುವ ಹಂತಕ್ಕೆ ತಲುಪಿದ್ದೇನೆ.

ನನ್ನ ಸಂಪಾದನೆಯ ಎರಡು ಲಕ್ಷಗಳಲ್ಲಿ ಒಂದು ಲಕ್ಷ ನನ್ನ ಕಟುಂಬದ ಖರ್ಚಿಗೆ ಹೋಗುತ್ತದೆ ಉಳಿದ ಒಂದು ಲಕ್ಷ ಭೂಮಿ ಮತ್ತು ಬಂಗಾರಗಳ ಮೇಲೆ ಹೂಡಿಕೆ ಮಾಡುತ್ತೇನೆ. ನಾನು ಮಾಸಿಕ ಖರ್ಚು ಮಾಡುವ ಒಂದು ಲಕ್ಷ ರೂಪಾಯಿಯಲ್ಲಿ ಸರ್ಕಾರ  30 ಸಾವಿರ ತೆರಿಗೆ ರೂಪದಲ್ಲಿ ಕಟ್ಟಿಸಿಕೊಳ್ಳುತ್ತದೆ.  ಮನೆಗೆ ತರುವ ಆಹಾರ ಸಾಮಾಗ್ರಿಗಳಿಂದ ಹಿಡಿದು ಮೊಬೈಲ್ ಪೋನ್ ವರೆಗೆ ಏನು ಕೊಂಡರು 29 ರಿಂದ 30 ಶೇಕಡಾ ತೆರಿಗೆ ಬಿಳುತ್ತದೆ.  ಇನ್ನು ಸ್ನೇಹಿತರೊಂದಿಗೆ ಸೇರಿ ಪಾರ್ಟಿ ಮಾಡಿಕೊಂಡರೆ 30 ಸಾವಿರ ಖಾಲಿ ಹತ್ತಿರ ಹತ್ತಿರ ಶೇಕಡಾ 60 ರಷ್ಟು ತೆರಿಗೆ ರೂಪದಲ್ಲಿ ಹೋಗಿರುತ್ತದೆ.

ಕಾರಿಗೆ ಪೆಟ್ರೋಲ್ ಹಾಕಿಸಿದರೆ ಲೀಟರ್ ಗೆ 30 ರೂಪಾಯಿ ತೆರಿಗೆ, ಕಾರು ಕೊಂಡಾಗ ಎಲ್ಲಾ ಸೇರಿ ಪ್ರಭುತ್ವಕ್ಕೆ 1.5 ಲಕ್ಷ ತೆರಿಗೆ ಕಟ್ಟಿದ್ದೇನೆ.  ಮನೆಯ ಸೈಟು ಕೊಂಡಾಗ ನೊಂದಣೆ ವೆಚ್ಚ ಎಂದು ಒಂದು ಲಕ್ಷ ತೆರಿಗೆ ಕಟ್ಟಿದ್ದೇನೆ. ಕನಿಷ್ಟ ಮಣ್ಣಿನ ರಸ್ತೆಯೂ ಇಲ್ಲದ ನನ್ನ ಏರಿಯಾಗೆ ಅಭಿವೃದ್ದಿ ವೆಚ್ಚ ಎಂದು 50 ಸಾವಿರ ಕಟ್ಟಿಸಿಕೊಂಡಿದ್ದಾರೆ. . .

ಸರ್ಕಾರಿ ಅಸ್ಪತ್ರೆಗಳು ಎಷ್ಟು ಧಾರುಣವಾಗಿವೆ ಎಂಬುದನ್ನು, ಖಾಸಗಿ ಆಸ್ಪತ್ರೆಗಳು ದೊಚುವ ರೀತಿಯನ್ನು ನೋಡಿ ನಡುಗಿ ಹೋಗಿ ಆರೋಗ್ಯ ವಿಮೆ ಮಾಡಿಸಿದರೆ ಸರ್ಕಾರ ನಾಚಿಕೆ ಬಿಟ್ಟು ಅದಕ್ಕೂ ಸೇವಾ ತೆರಿಗೆ ವಸೂಲು ಮಾಡಿದೆ ದಾರಿಗಳ್ಳರು ದೋಚುವಂತೆ ಎಲ್ಲದರಲ್ಲೂ ಕೊನೆಗೆ ಸ್ಮಾಶಾನದಲ್ಲಿ ಶವ ಹೂಳಲು ತೆರಿಗೆ ವಿಧಿಸುತ್ತಿರುವ ಸರ್ಕಾರ ನಮಗೆ ಏನನ್ನು ಕೋಡುತ್ತಿದೆ ಎಂಬ ಪ್ರಶ್ನೆ ಹಾಗೆ ಉಳಿಯುತ್ತದೆ. .

ಸರ್ಕಾರಿ ಶಾಲೆಗಳಲ್ಲಿ ನಮ್ಮ ಮಕ್ಕಳನ್ನು ಸೇರಿಸಿದರೆ ಅವರಿಗೆ ಸಮರ್ಥ ಶಿಕ್ಷಣ ದೊರೆಯುತ್ತದೆ ಎಂಬ ನಂಬಿಕೆ ಕೊಡುತ್ತಿರಾ? ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಆರೋಗ್ಯದಿಂದ ಮನೆಗೆ ತಿರುಗಿ ಬರುತ್ತೇವೆ ಎಂಬ ನಂಬಿಕೆ ಪ್ರಜೆಗಳಿಗೆ ನೀಡುವ ಹಂತದಲ್ಲಿ ತಾವಿದ್ದೀರಾ? ದೇಶ ರಕ್ಷಣೆ ಮತ್ತು ರಸ್ತೆಗಳನ್ನು ಹಾಕಿಸುವುದು ಬಿಟ್ಟರೆ ನೀವು ಮಾಡುತ್ತಿರುವ ಅಭಿವೃದ್ದಿ ಕೆಲಸಗಳು ಏನು ಎಂಬುದು ನಮಗೆ ಅರ್ಥವಾಗುತ್ತಿಲ್ಲ. . .

ಕಾರು ಕೊಂಡರೆ ರಸ್ತೆ ತೆರಿಗೆ, ಅದನ್ನು ರಸ್ತೆಗೆ ಹತ್ತಿಸಿದರೆ ಟೋಲ್ ತೆರಿಗೆ ಅಂತ ಹೇಳಿ ದೂಚುತ್ತಿದ್ದಾರಲ್ಲ ಸಾರ್ ನಾವು ಇವಕ್ಕೆಂದೆ ಕಟ್ಟಿದ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ. ನನ್ನ ಉದ್ದಿಮೆಯಲ್ಲಿ ಕೆಲಸ ಮಾಡುವ ನೌಕರರಿಗೆ ಸಂಬಳ ಹೆಚ್ಚಿಸಬೇಕು ಎಂದರೆ ಅವರು ಎಷ್ಟು ಕೆಲಸ ಮಾಡುತ್ತಾರೆ? ಹೇಗೆ ಕೆಲಸ ಮಾಡುತ್ತಾರೆ? ಎಂಬುದನ್ನು ನೋಡಿ ಹೆಚ್ಚಿಸುತ್ತೇವೆ ಆದರೆ ಸರ್ಕಾರಗಳು ಏನು ಮಾಡುತ್ತಿವೆ ಉದ್ಯೋಗಿ ಕೆಲಸ ಮಾಡಲಿ-ಬಿಡಲಿ ಅಥವಾ ಕೆಲಸ ಹಾಳು ಮಾಡಲಿ ಎಲ್ಲರಿಗೂ ಒಂದೆ ಸಂಬಳ ಒಂದೆ ಸವಲತ್ತು ನಮ್ಮ ತೆರಿಗೆ ಅಂದರೆ ಅಷ್ಟು ಬೇಜಾವಾಬ್ದಾರಿಯಾ ಸಾರ್, ನಮ್ಮ ತೆರಿಗೆ ಹಣದಲ್ಲಿ ಸಂಬಳ ಪಡೆದು ನಮ್ಮ ಕೆಲಸ ಮಾಡಲು ಪೋಸ್ ಬೇರೆ ಕೋಡುತ್ತಾರೆ ಹತ್ತು ಗಂಟೆಗೆ ಆಫೀಸು ಅಂದರೆ ಹನ್ನೊಂದಕ್ಕ ಬರುತ್ತಾರೆ ಲಂಚ ಇಲ್ಲದೆ ಒಂದೇ ಒಂದು ಕೆಲಸವನ್ನೂ ಮಾಡುವುದಿಲ್ಲ ಮತ್ಯಾಕೆ ಸಾರ್ ಪ್ರಭುತ್ವಕ್ಕೆ ತೆರಿಗೆ ಕಟ್ಟಬೇಕು? ನನ್ನ ಉದ್ದಿಮೆ ನಡೆಯಬೇಕು ಅಂದರೆ ಕರೆಂಟಿನವನಿಂದ ಹಿಡಿದು ಎಲ್ಲರಿಗೂ ಲಂಚ ಕೊಡಬೇಕು ಎಲ್ಲಾ ಸೇರಿ ನಾನು ತಿಂಗಳಿಗೆ ಹತ್ತು ಸಾವಿರ ಲಂಚ ಕೋಡುತ್ತಿದ್ದೇನೆ ಸಾರ್!  ಆ ಲಂಚದ ಹಣವನ್ನು ಬಿಳಿಯಾಗಿ ಹೇಗೆ ತೋರಿಸಲಿ ಸಾರ್? ಅದಕ್ಕೆ ಸಾರ್ ನಮಗೆ ಪ್ರಭುತ್ವಕ್ಕೆ ತೆರಿಗೆ ಕಟ್ಟಬೇಕು ಅಂದರೆ ಹೊಟ್ಟೆ ಉರಿಯುತ್ತದೆ ಹಾಗಾಂತ ನಾನು ಸಾಮಾಜಿಕ ಜವಾಬ್ದಾರಿ ಇಲ್ಲದ ಪ್ರಜೆ ಅಲ್ಲ ಸಾರ್! ನೀವು ಸೈನಿಕ ನಿಧಿಗೆ ದೇಣಿಗೆ ನೀಡಿ ಎಂದಾಗ 10 ಸಾವಿರ ಕೊಟ್ಟೆ ನಮ್ಮ ಏರಿಯಾದ ಅನಾಥಶ್ರಮಕ್ಕೆ ವರ್ಷ 20 ಸಾವಿರ ಕೊಡುತ್ತೇನೆ ನಮ್ಮೂರಿನ ಸರ್ಕಾರಿ ಶಾಲೆ ಸರಿಮಾಡಿಸುತ್ತೇವೆ ಎಂದಾಗ ನನ್ನ ತಂದೆಯ ಹೆಸರಿನಲ್ಲಿ ಒಂದು ಲಕ್ಷ ದೇಣಿಗೆ ನೀಡಿದ್ದೇನೆ ಆದರೆ ಪ್ರಭುತ್ವಕ್ಕೆ ತೆರಿಗೆ ಕಟ್ಟಬೇಕು ಎಂದರೆ ನನಗೆ ಮನಸ್ಸು ಬರುತ್ತಿಲ್ಲಾ ಸಾರ್. . .

ಓಕೆ ಇದೆಲ್ಲಾ ಇತಿಹಾಸ, ಈಗ ಎಲ್ಲವೂ ವೈಟ್ ಹಣದಲ್ಲೆ ವ್ಯವಹಾರ ಮಾಡೋಣ ನೀವು ನಿರ್ಧರಿಸುವುದರಿಂದ ನಾನು ನನ್ನ ಬಳಿ ಇರುವ 10 ಲಕ್ಷ ರೂಪಾಯಿಯನ್ನು ಬ್ಯಾಂಕಿಗೆ ಕಟ್ಟಿ 3 ಲಕ್ಷ ತೆರಿಗೆ ಕಟ್ಟಿ ವೈಟ್ ಮಾಡಿಕೊಳ್ಳುತ್ತೇನೆ. ಆದರೆ ನಾಳೆಯಿಂದ ನಾನು ತಿಂಗಳಿಗೆ ಹತ್ತು ಸಾವಿರ ಲಂಚ ನೀಡದೆ ಕೆಲಸ ಆಗುತ್ತವೆ ಎಂಬುದಕ್ಕೆ ಗ್ಯಾರೆಂಟಿ ನೀವು ಕೊಡುತ್ತಿರಾ? ಅಥವಾ ಲಂಚದ ಹಣವನ್ನು ಚೆಕ್ನಲ್ಲಿ ತಗೋಳಿ ಎಂದು ನೌಕರರಿಗೆ ಸೂಚನೆ ನೀಡುತ್ತಿರಾ ನೀವೇ ಹೇಳಿ? ಇನ್ನು ರಾಜಕೀಯ ನಾಕರುಗಳ ಬಗ್ಗೆ ಹೇಳಲಿಲ್ಲ ಅಲ್ಲವೆ (!) ನಮ್ಮ ಏರಿಯಾ ಪುಡಿ ರಾಜಕಾರಣಿಯಿಂದ ಶಾಸಕನ ವರೆಗೆ ಎಲ್ಲರಿಗೂ ಚುನಾವಣಾ ಚಂದ ಕೋಡಬೇಕು ಇಲ್ಲವಾದರೆ ತೊಂದರೆ ಕೋಡುತ್ತಾರೆ ಇವರಿಗೆ ಚಂದಾವನ್ನು ಚೆಕ್ಕಿನ ರೂಪದಲ್ಲಿ ತೆಗೆದುಕೊಳ್ಳುವಂತೆ ತಾವು ಸೂಚಿಸುತ್ತಿರಾ? ರಾಜಕೀಯ ಪಕ್ಷಗಳ ಹಣಕಾಸಿನ ಮೂಲಗಳನ್ನು ಮುಚ್ಚುಮರೆ ಇಲ್ಲದೆ ಬಹಿರಂಗವಾಗಿ ಹೇಳುತ್ತಿರಾ? ಇಲ್ಲಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ರೂಪದಲ್ಲಿ ಸಾಕಷ್ಟು ತೆರಿಗೆ ಕಟ್ಟುತ್ತಿದ್ದೇವೆ ಅದಕ್ಕೆ ಪರ್ಯಾಯವಾಗಿ ಪ್ರಭುತ್ವ ನಮ್ಮನ್ನು ಗೌರವಿಸುತ್ತಿದೆಯಾ? ಎದೆ ಮುಟ್ಟಿಕೊಂಡು ಹೇಳಿ ಸಾರ್? ನಾಯಕರ ಶೋಕಿಗೆ, ಉದ್ಯೋಗಿಗಳ ಸಂಬಳಕ್ಕಾದರೆ ನಾವು ತೆರೆಗೆ ಕಟ್ಟವುದಿಲ್ಲ ಸಾರ್ ಸಾಧ್ಯವಾದಷ್ಟು ಎಗರಿಸುತ್ತೇವೆ ಹತ್ತು ವರ್ಷದೊಳಗೆ ದೇಶದಲ್ಲಿ ಮತ್ತೆ ಕಪ್ಪು ಹಣ ಹೆಚ್ಚಾಗಿ ಹೋಗುತ್ತದೆ ಆಗ ಮತ್ತೆ ನೋಟುಗಳ ಮೇಲೆ ನಿಷೇದ ಹೇರುತ್ತಿರಾ ಇದಕ್ಕಲ್ಲಾ ಸಾರ್ ನಾವು ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದು ನಿಮ್ಮ ನಿರ್ಣಯದಿಂದ ಕೈಯಲ್ಲಿ ಹಣ ಇಲ್ಲದ ನನ್ನ ನೌಕರರು ಕೂಡಾ ನಿಮ್ಮ ಮೇಲಿನ ನಂಬಿಕೆಗಾಗಿ ಈ ಸ್ಥಿತಿಯನ್ನು ಸಹಿಸಿಕೊಳ್ಳುತ್ತಿದ್ದಾರೆ ಮೊದಲು ಆ ನಂಬಿಕೆಯನ್ನು ಉಳಿಸಿಕೊಳ್ಳಿ ನಾವು ಈಗಾಗಲೇ ಕಟ್ಟುತ್ತಿರುವ ತೆರಿಗೆಗೆ ನ್ಯಾಯವಾಗಿ ಕೆಲಸ ಮಾಡಿ ಆಗ ನಾವು ಕೂಡಾ ನ್ಯಾಯವಾಗಿ ತೆರಿಗೆ ಕಟ್ಟುತ್ತೇವೆ ಎರಡು ಕೈ ಸೇರಿದರೆನೇ ಚಪ್ಪಾಳೆ ಸಾರ್, ನಮ್ಮ ಕೈ ರೆಡಿ ನಿಮ್ಮ ಕೈಗಾಗಿ ಎದುರು ನೋಡುತ್ತಿರುತ್ತೇವೆ. . . . .

ತೆಲುಗು ಮೂಲ: ಪ್ರಸಾದ್  ಹೈದರಾಬಾದ್ ಬಾಲಾ ನಗರ ನಿವಾಸಿ
ಕನ್ನಡಕ್ಕೆ: ಕಿರಣ್ ಎಂ ಗಾಜನೂರು

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...