Monday, November 14, 2016

ಪತ್ರ





Image result for ಮೋದಿ



ಆದರಣೀಯ ಮೋದಿ ಅಣ್ಣಾ,,,
ಜಪಾನ್ ಗೆ ಕ್ಷೇಮವಾಗಿ ತಲುಪಿದ್ದೀರಿ ಎಂದು ತಿಳಿಯಿತು,,,
ಅಲ್ಲಿ ಎಲ್ಲರೂ ಕ್ಷೇಮದಲ್ಲಿದ್ದಾರೆಂದು ಭಾವಿಸುತ್ತೇನೆ,,,
ಪರಿಚಯವಿಲ್ಲದ ಊರಾದ್ದರಿಂದ ಓಬ್ಬಂಟಿಯಾಗಿ ಹೊರಗೆ ಓಡಾಡಬೇಡಿ,,,ರಾತ್ರಿ ತಿಂದುಂಡು ಬೇಗ ಮಲಗಿ,,,ಇಲ್ದಿದ್ರೆ ಜ್ವರ ಶೀತ ಭಾದಿಸಬಹುದು,,,ಇಲ್ಲಿ ನಾವೆಲ್ಲ ಸುಖವಾಗಿದ್ದೇವೆ,,,ನಿಮ್ಮನ್ನು ಬೀಳ್ಕೊಡಲು ಬರಲು ಸಾಧ್ಯವಾಗಿಲ್ಲ,,,ನೀವು ಹೊರಡುವ ಮುನ್ನಾ ದಿನ ನಾವೆಲ್ಲ Q ನಲ್ಲಿದ್ದೆವು,,,ಈವರೆಗೆ ಮನೆಗೆ ಹೋಗಿಲ್ಲ,,,ಈ ತಿಂಗಳಲ್ಲಿ ಹೋಗಲು ಸಾಧ್ಯ ಎಂದು ಬ್ಯಾಂಕ್ ಮೆನೇಜರ್ ಹೇಳಿದ್ದಾರೆ,,,ಕಕ್ಕೂಸು ಬಾತ್ ರೂಮನ್ನು ನ್ಯಾಷನಲ್ ಹೈವೆಯಲ್ಲಿಯೇ ಉಪಯೋಗಿಸುತ್ತಿದ್ದೇವೆ,,,ಸೂರ್ಯೋದಯ ಸೂರ್ಯಾಸ್ತಮಾನ ಈಗ ಡೈರೆಕ್ಟಾಗಿ ನೋಡಲಿಕ್ಕೆ ಸಾಧ್ಯವಾಗುತ್ತಿದೆ,,,ಈ 2000 ದ ನೋಟು ಸಿಕ್ಕಿದ ಬಳಿಕ ಚಿಲ್ಲರೆ ಮಾಡಲು ಬೇರೆ ಕಡೆ ಹೋಗಲಿಕ್ಕೆ ಇದೆ,,,ಆದುದರಿಂದ ತಾವು ವಾಪಸ್ ಬರಲು ಅರ್ಜೆಂಟ್ ಎನೂ ಮಾಡಬೇಡಿ,,,ಬೇರೆ ಯಾವುದಾದರೂ ದೇಶಕ್ಕೆ ಭೇಟಿ ನೀಡುವ ಆಸೆ ಇದ್ದರೆ ಅಲ್ಲಿಂದಲೇ ಹೋಗುವುದು ಒಳ್ಳೆಯದು,,,ಮನೆಯಲ್ಲಿ ಈಗ ಅಡುಗೆ ಏನೂ ಮಾಡದಿರುವ ಕಾರಣ ಖರ್ಚಿಗೆ ತೊಂದರೆ ಆಗಿಲ್ಲ ,,,
ನಾವೆಲ್ಲ ತುಂಬಾ ಹ್ಯಾಪಿಯಾಗಿದ್ದೇವೆ,,, ಜಪಾನ್ ನಲ್ಲಿ ತುಂಬಾ ಪೀಪೀ ಮತ್ತು ಚೆಂಡೆ ಸಿಗುತ್ತದೆ, ಬರುವಾಗ ಸಾಧ್ಯವಾದರೆ ಒಂದು ಪೀಪೀ ತನ್ನಿ,,,Q ನಲ್ಲಿ ನಿಂತಿರುವಾಗ ಊದಲಿಕ್ಕೆ,,,
ಪತ್ರ ಕಿರಿದುಗೊಳಿಸುತ್ತೇನೆ,,,ಬಾಕಿ ವಿಶೇಷ ತಾವು ಬಂದ ನಂತರ,,,
100 50 20 10 5 ರ ನೋಟನ್ನು ಕೂಡಲೇ ಎತ್ತಿ ಬಿಸಾಕಿ ನಮಗೆ ಸಹಾಯ ಮಾಡಬೇಕಾಗಿ ವಿನಂತಿ,,,
ಇತೀ ನಿಮ್ಮ ಸ್ವಂತ Q ನಲ್ಲಿ ಬಾಕಿಯಾದವ.........

ಹೆಸರು ಬೇಡದವ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...