Monday, November 14, 2016

ನೋಟು ರದ್ದು ಪ್ರಧಾನಿಗೊಂದು ಶುಭಾಶಯ!


Image may contain: 1 person

ನೋಟು ಬದಲಾವಣೆಯಿಂದಾಗಿ ಎದೆಯೊಡೆದು ಸತ್ತವರ ಪಟ್ಟಿಯಲ್ಲಿ ಈ ಕೆಳಗಿನ ಕಾರ್ಪೊರೇಟ್ ಖದೀಮರ ಹೆಸರಿಲ್ಲ. ಸರ್ಕಾರಿ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ತೆಗೆದು, ಒಂದು ಪೈಸೆಯನ್ನೂ ವಾಪಸ್ಸು ಕೊಡದೆ ರಾಜಾರೋಷವಾಗಿ ತಿರುಗುತ್ತಿರುವ ಈ ಹಗಲು ದರೋಡೆಕೋರರನ್ನು ಮುಟ್ಟುವ ಧೈರ್ಯ ದೇಶದ ಪ್ರಧಾನಮಂತ್ರಿಗಿನ್ನೂ ಬಂದಿಲ್ಲ, ಬರುವುದೂ ಇಲ್ಲ. ಪ್ರಧಾನಮಂತ್ರಿಯ ಲೆಕ್ಕದಲ್ಲಿ ಈ ಕಳ್ಳಕಾಕರೆಲ್ಲ ಕಡುಬಡತನದಲ್ಲಿ ನರಳುತ್ತಿರುವ ಬಡಪಾಯಿಗಳು. ಅದಕ್ಕಾಗಿ, ಮಲ್ಟಿ ಮಿಲಿಯನೇರ್ ಜನಸಾಮಾನ್ಯರು ಅವರಲ್ಲಿರೋ ಸಾವಿರಾರು ಕೋಟಿಗಳ ಲೆಕ್ಕ ಕೊಡಬೇಕಿದೆ.
1) ಅನಿಲ್ ಅಂಬಾನಿ ( ರಿಲಯನ್ಸ್ ಗ್ರೂಪ್) 1,25,000 ಕೋಟಿ.
2) ಅನಿಲ್ ಅಗರ್ವಾಲ್ (ದ ವೇದಾಂತ ಗ್ರೂಪ್) 1,03,000 ಕೋಟಿ
3) ಶಶಿ ರೂಯಿಯಾ ಮತ್ತು ರವಿ ರೂಯಿಯಾ ( ಎಸ್ಸಾರ್ ಗ್ರೂಪ್) 1,01,000 ಕೋಟಿ
4) ಗೌತಮ್ ಅದಾನಿ (ಅದಾನಿ ಗ್ರೂಪ್) 96,031 ಕೋಟಿ
5) ಮನೋಜ್ ಗೌರ್ ( ಜೈಪೀ ಗ್ರೂಪ್) 75,163 ಕೋಟಿ
6) ಸಜ್ಜನ್ ಜಿಂದಾಲ್ (ಜೆ ಯಸ್ ಡಬ್ಲಿಯು ಗ್ರೂಪ್) 58,171 ಕೋಟಿ
7) ಜಿ ಯಮ್ ರಾವ್ ( ಜಿ ಯಮ್ ಆರ್ ಗ್ರೂಪ್) 47,976 ಕೋಟಿ
8) ಮಧು ಸೂಧನ್ ರಾವ್ ( ಲ್ಯಾನ್ಕೋ ಗ್ರೂಪ್) 47,102 ಕೋಟಿ
9) ವೇಣುಗೋಪಾಲ್ ಧೂತ್ (ವೀಡಿಯೋಕಾನ್ ಗ್ರೂಪ್) 45,405 ಕೋಟಿ
10) ಜಿ ವಿ ಕೆ ರೆಡ್ಡಿ ಗ್ರೂಪ್ 33,933 ಕೋಟಿ.
ಈ ಕಡುಬಡವ ಕಂಪನಿ ಮಾಲೀಕರ ಕುಟುಂಬಗಳ ಜೊತೆಯಲ್ಲಿ ನಿಂತಿರುವ ಪ್ರಧಾನಿಗೆ ಕೋಟಿಗಟ್ಟಲೆ ಸಂಪತ್ತು ಬಚ್ಚಿಟ್ಟುಕೊಂಡಿರುವ ಜನಸಾಮಾನ್ಯರ ಶುಭಾಶಯಗಳು.

-T K ದಯಾನಂದ್

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...